ಭೂಮಿಯ ಉಗಮ ಮತ್ತು ಆಕಾರ
 
ಪರಿಚಯ
ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ 3ನೇ ಗ್ರಹವಾಗಿದೆ. ಸೌರಮಂಡಲದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, ಮಾನವರಿಗೆ ಈಗ ತಿಳಿದಿರು ವಂತೆ, ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು. ಭೂಮಿಯ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರ ಪದರ,, ಸಿಲಿಕ-ಮೆಗ್ಮೀನಿಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ. ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಮೇಲ್ಮೈನ ಸುಮಾರು 71% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ; ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ.
ಭೂಮಿಯ ಉಗಮ
ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು 460 ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು solar nebula ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು.
ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು.
ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲು ಸಾಗರಗಳು ರೂಪುಗೊಂಡವು.ಸುಮಾರು 4೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು 5೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು. ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ ಆಮ್ಲಜನಕವು ವಾಯುಮಂಡಲದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು.
ಅಪಾಯಕಾರಿ ಅತಿನೇರಳೆ ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಆರಂಭಿಸಿದ ನಂತರ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ವಿಕಾಸವಾಗತೊಡಗಿದವು.. ಕೋಟ್ಯಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತ ಮತ್ತೆ ಛಿದ್ರಗೊಳ್ಳುತ್ತ ಬಂದಿವೆ.
ಭೂಮಿಯ ಆಕಾರ
ಭೂಮಿಯ ಅಕಾರವು ಸರಿಸುಮಾರು ಹ್ರಸ್ವಾಕ್ಷ ಗೋಳಕಲ್ಪಎನ್ನಬಹುದು. ಅಂದರೆ ಗೋಳಕಲ್ಪವು ಅದರ ಅಕ್ಷದ ದಿಶೆಯಲ್ಲಿ ಧ್ರುವದಿಂದ ಧ್ರುವಕ್ಕೆ ಚಪ್ಪಟೆಯಾಗಿದೆ. ಇದರ ಪರಿಣಾಮವಾಗಿ ಸಮಭಾಜಕ ವೃತ್ತದಲ್ಲಿ ಅದು ಉಬ್ಬಿದೆ. ಭೂಮಿಯ ಗಿರಕಿಯಿಂದಾಗಿ ಈ ಉಬ್ಬು ಮೈದಳೆದಿದೆ.