ಭಾರತವನ್ನು ತಿಳಿ ಕಾರ್ಯಕ್ರಮ(Know India Programme):
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ವ್ಯಕ್ತಿಗಳಿಗೆ (PIO-PERSONS OF INDIA ORIGIN) ಭಾರತದ ಸಂಸ್ಕೃತಿ ಕಲೆ ಮತ್ತು ಜೀವನ ಶೈಲಿಯನ್ನು ಪರಿಚಯ ಮಾಡಿಕೊಡಲು ಆರಂಭಿಸಿದ್ದ ಒಂದು ಯೋಜನೆ. ಈ ಯೋಜನೆಯನ್ನು 2004 ರಲ್ಲಿ ಆರಂಭಿಸಲಾಗಿದ್ದು 21 ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು . 2016 ರಲ್ಲಿ 21 ದಿನಗಳಿಂದ ಇದನ್ನು 25 ದಿನಗಳಿಗೆ ಹೆಚ್ಚಿಸಲಾಯಿತು. ಕೆ ಐ ಪಿ (WEB PORTAL ) ಅನ್ನು ಅನಾವರಣ ಗೊಳಿಸಲಾಯಿತು.