Loading [Contrib]/a11y/accessibility-menu.js

ಕಾನೂನು ಸುವ್ಯಸ್ಥೆಯನ್ನು ಕಾಪಾಡಲು ಪೋಲೀಸರ ಪಾತ್ರ

 

ಒಂದು ನಾಗರಿಕ ಸಮಾಜದ ಉಳಿವಿಗಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡವುದು ಅತ್ಯವಶ್ಯಕವಾಗಿದೆ.ಹೀಗಾಗಿದ್ದಾರೆ ಅಲ್ಲಿ ಅರಾಜಕತೆ ಪ್ರಾರಂಭವಾಗುತ್ತದೆ.ಈ ಒಂದು ಸುವ್ಯವಸ್ಥೆಯನ್ನು ಕಾಪಾಡುವ ಸಲಕರಣಿಯೇಪೋಲೀಸ್ ಆಗಿದೆ. ಪೋಲಿಸರ ಸಾಂಪ್ರಾದಾಯಿಕ ವ್ಯವಸ್ಥೆಯನ್ನು ನೋಡಿದಾಗ ಕಾನೂನು ಸುವ್ಯವಸ್ಥೆಕಾಪಾಡುವುದಾಗಿದೆ. ಆಧುನಿಕ ಯುಗದಲ್ಲಿ ಪ್ರಪಂಚದ ಎಲ್ಲಾ ದೇಶಗಳ ಕಲ್ಯಾಣ ರಾಜ್ಯ ತತ್ವವನ್ನುಅಳವಡಿಸಿಕೊಂಡಿದ್ದರಿಂದ ಪೋಲಿಸರ ಪಾತ್ರದಲ್ಲಿ ಬದಲಾವಣೆಯಾಗಿದೆ. ಒಂದು ಕಲ್ಯಾಣ ರಾಜ್ಯದಲ್ಲಿ ಜನರ ಮೂಲಭೂತ ಕರ್ತವ್ಯಗಳನ್ನು ಪೂರೈಸುವ ಜವಾಬ್ದಾರಿ ಪೋಲೀಸರಾಗಿದೆ. ಆದ್ದರಿಂದ ಪೋಲಿಸರು ಕಾನೂನುಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಸಮಾಜ ಸುಧಾರಣೆ ಮಾಡುವದಾಗಿದೆ.
ಪೋಲೀಸ್ ಎಂಬ ಶಬ್ಧ ವಿದೇಶಿ ಪದದ ಅರ್ಥ. ಆದರೆ ಇಲ್ಲಿ “ನಗರ ರಕ್ಷಕ ” ಎಂದು ಆಗುತ್ತದೆ. ಪೋಲೀಸ್ &ಸಾರ್ವಜನಿಕರ ಬಾಂಧವ್ಯದ ವಿಚಾರವೂ ಬಹಳ ಪ್ರಾಮುಖ್ಯರೆ ಪಡೆಯುತ್ತದೆ. ಈಗ ಜನಜಾಗೃತಿ ಆಗುತ್ತಿದೆ ಎಂದರೂತಪ್ಪಿಲ್ಲ. (ಪೋಲೀಸರ ನಡತೆ, ಆಚಾರ ವಿಚಾರಗಳ ಮೇಲೂ ಪಾರ್ಟಿಗಳು ಗೋಷ್ಟಿಗಳು, ಚರ್ಚಾಕೂಟಗಳುನಡೆಯುತ್ತವೆ. ಅನೇಕ ಜನರು ಪೋಲೀಸರನ್ನು ತೆಗಳುತ್ತಾರೆ, ಕಾರಣವೆಂದರೆ ಆಧುನಿಕ ಸಮಾಜದಲ್ಲಿ ಪೋಲೀಸರಮೇಲಿನ ಒತ್ತಡ ಅತಿ ಹೆಚ್ಚಾಗಿದೆ. ಈ ರೀತಿಯ ಒತ್ತಡ ಹೆಚ್ಚಾಗಲು ಕಾರಣಗಳೆಂದರೆ – ಆರ್ಥಿಕ ಕಾರಣಗಳು,ಸಾಮಾಜಿಕ ಕಾರಣಗಳು, ರಾಜಕೀಯ ಕಾರಣಗಳು.

ಆರ್ಥಿಕ ಕಾರಣಗಳು:


• ತೀರ್ವವಾದ ಬಡತನ ಅದರೊಂದಿಗೆ ಆರ್ಥಿಕ ಶೋಷಣೆಯಿಂದ ಸಮಾಜದಲ್ಲಿ ಅಸಮೋತಲನ (ಬಡವ ಬಲ್ಲಿದ), ನಿರುದ್ಯೋಗ ಹಣದುಬ್ಬರ, ಸಂಪತ್ತಿನ ಹಂಚಿಕೆಯಲ್ಲಿ ಅಸಮತೋಲನಕೊಂಡುಕೊಳ್ಳುವ ಶಕ್ತಿ ಕುಂದುತ್ತಾ ಹೋಗುತ್ತದೆ. ಇವೆಲ್ಲಾ ಕಾರಣಗಳಿಂದ ಸಮಾಜದಲ್ಲಿ ಅಶಾಂತಿ ನೆಲೆಸಿ ಅರಾಜಕತೆ ಉಂಟಾಗಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ.ಸಹಜವಾಗಿ ಪೋಲೀಸರ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಸಾಮಾಜಿಕ ಕಾರಣಗಳು:


• ರಾಜಕಾರಣಿಗಳು ಪೋಲೀಸ್ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡುವುದರಿಂದಾಗಿ,ಪೋಲೀಸರು ವೃತ್ತಿಯ ಬಡ್ತಿಯಲ್ಲಿ ತಮ್ಮ ಕಾರ್ಯನಿರ್ವಹಣಾ ಸಾಮಥ್ರ್ಯವನ್ನು ಆಧರಿಸುವ ಬದಲು,ರಾಜಕಾರಣಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಬೆಂಬಲಗಳಿಕೊಳ್ಳುವುದರಲ್ಲಿದೆ ಎಂದು ಭಾವಿಸಿಬಿಡುತ್ತಾರೆ. ಇದರಿಂದಾಗಿ ಪೋಲೀಸರು ತಮ್ಮ ಕಾನೂನುಬದ್ಧ ಕೆಲಸದ ಬದಲು, ರಾಜಕಾರಣಿಗಳನ್ನು ಓಲೈಸುವಲ್ಲಿ ಕಾಲ ಕಳೆದುಬಿಡುತ್ತಾರೆ.

ಅಸ್ಥಿರ ಸರ್ಕಾರಗಳು ಇದ್ದಾಗ ಉಳಿದ ಅಂಗಗಳು ಸರಿಯಾಗಿ ಕೆಲಸ ಮಾಡುವುದಿಲ್ಲ.
ಭಯೋತ್ಪಾದನೆ, ದಂಗೆಗಗಳು ಇದ್ದಾಗ ಪೋಲೀಸರ ಮೇಲಿನ ಒತ್ತಡ ಹೆಚ್ಚಾಗುತ್ತದೆ.

ಪೋಲೀಸರ ಬಗ್ಗೆ ಅಧ್ಯಯನ:


ಭಾರತೀಯ ಸಾರ್ವಜನಿಕರ ಅಭಿಪ್ರಾಯ ಸಂಸ್ಥೆ ಗೃಹ ಮಂತ್ರಾಲಯಕ್ಕಾಗಿಪೋಲೀಸರ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಡೆಸಿದ ಅಧ್ಯಯನದ ಪ್ರಕಾರ, ರಾಜಕೀಯಹಸ್ತಕ್ಷೇಪದಿಂದಾಗಿ ಪೋಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಾರೆ. ಕಾನೂನನ್ನು ಉಲ್ಲಂಘಿಸುತ್ತಾರೆ.ರಾಜಕೀಯ ಹಸ್ತಕ್ಷೇಪವು ಭ್ರಷ್ಟಾಚಾರಕ್ಕಿಂತಲೂ ದೊಡ್ಡ ಶತ್ರು. ರಾಜಕೀಯ ಹಸ್ತಕ್ಷೇಪದ ಪ್ರಮಾಣ ನಗರಗಳಿಗಿಂತ ಅನುಸರಿಸುತ್ತಾರೆ, ಮಾನವನ ಹಕ್ಕುಗಳ ಉಲ್ಲಂಘನೆ ಮಾಡುತ್ತಾರೆ.
ಪೋಲೀಸರ ಮೇಲಿನ ಒತ್ತಡ ಹೆಚ್ಚಾಗಿರುವುದರಿಂದ & ಸಾರ್ವಜನಿಕ ಸಹಕಾರ ಇಲ್ಲದಿದ್ದರಿಂದ ಪೋಲೀಸರಕಾರ್ಯಾಚರಣೆಯ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಕಾರಣದಿಂದ ಪೋಲೀಸರು ತಮ್ಮ ಕರ್ತವ್ಯವನ್ನುಪರಿಣಾಮಕಾರಿಯಾಗಿ ಮಾಡಲು ಆಗುತ್ತಿಲ್ಲ.
criminal studies buareau 2001ರ ಸಮೀಕ್ಷೆಯ ಪ್ರಕಾರ 100 ಅಪರಾಧಗಳಾದರೆ 50ರಷ್ಟು ಮಾತ್ರ ವರದಿಯಾಗುವುದರಲ್ಲಿ 25ರಷ್ಟು ತನಿಖೆ ಮಾಡುತ್ತಾರೆ. ಅದರಲ್ಲಿ ಕೇವಲ 15ರಷ್ಟು ಕಾನೂನಿಗೆ ತೆಗೆದುಕೊಂಡು ಹೋಗುತ್ತಾರೆ. 8-10 ರಷ್ಟು ಸಾಕ್ಷಿಗಳ ಕೊರತೆಯಿಂದ ಕೇಸನ್ನು ಕೈ ಬಿಡುತ್ತಾರೆ. ಕೊನೆಗೆ 5-7 ರಷ್ಟು ಮಾತ್ರ ನ್ಯಾಯದೊರಕಬಹುದು.

ಈ ಮೇಲಿನ ಚಿತ್ರವನ್ನು ನೋಡಿದಾಗ ಪೋಲೀಸ್ ವ್ಯವಸ್ಥೆ ಬಹಳಷ್ಟು ಸುಧಾರಣೆಯಾಗಬೇಕಾಗಿದೆ ಎಂಬುದು &ಈ ರೀತಿಯಾಗಲು ಕಾರಣಗಳೇನು ಎಂಬ ಪ್ರಶ್ನೆ ಉದ್ಭವಿಸಿದಾಗ ಕೆಳಗಿನ ಕಾರಣಗಳನ್ನು ನೀಡಬಹುದು.

ರಾಜಕೀಯ ಕಾರಣಗಳು:


• ಅತೀ ಮುಖ್ಯ ಸಮಸ್ಯೆಯಾಗಿದೆ, ಹಸ್ತಕ್ಷೇಪವು ವರ್ಗಾವಣೆ, ಬಡ್ತಿ &(ಎಫ್.ಐ.ಆರ್) ಮಾಡಲು ಕೂಡ ಹಸ್ತಕ್ಷೇಪವಿದೆ. ರಾಜಕೀಯ ಅಪರಾಧೀಕರಣ – ಅಪರಾಧಿಗಳೇರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಈ ಬೆಳವಣಿಗೆ ಪೋಲೀಸರ ನೈತಿಕತೆಯನ್ನು ಹಾಳು ಮಾಡುತ್ತಿದೆ.ಶತಮಾನಗಳ ಹಳೆಯದಾದ ಕಾನೂನುಗಳು ಭಾರತದ ಪೋಲೀಸ್ ತಡೆ ಬ್ರಿಟಿಷರಿಂದ ಭಾರತೀಯರಪಳೆಯುಳಿಕೆ ಅಂದು ರೂಪಿಸಿದ ವ್ಯವಸ್ಥೆಯನ್ನೇ ಇಂದೂ ಮುಂದುವರಿಸುತ್ತಿರುವುದೇ ಈ ದೇಶದ ಒಂದುದೊಡ್ಡ ದುರಂತ. ವೃತ್ತಿಪರ ತರಬೇತಿಯ ಕೊರತೆ – ಮಾನವ ಹಕ್ಕುಗಳ ಸಂರಕ್ಷಣೆ ಮಾಡುವುದರ ಬಗ್ಗೆ &ಲಿಂಗ ತಾರತಮ್ಯ ಮಾಡದೆ ಇರುವುದರ ಬಗ್ಗೆ ತರಬೇತಿಯಲ್ಲಿ ಪ್ರಾಮುಖ್ಯತೆ ನೀಡುವುದಿಲ್ಲ. 1973ರಲ್ಲಿ ಕೇಂದ್ರಸರ್ಕಾಋ ರಚಿಸಿದ ಸಮಿತಿ ವರದಿ ಹೀಗಿದೆ. ಪೋಲೀಸರ ತರಬೇತಿ ವ್ಯವಸ್ಥೆ ಸರಿಯಿಲ್ಲ. ಪೋಲೀಸರಿಗೆಸರಿಯಾದ ರೀತಿಯ ಸಲಕರಣೆಗಳ ಕೊರತೆ ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಇದೆ.

ಈ ಎಲ್ಲಾ ಕಾರಣಗಳಿಂದ ಪೋಲೀಸರ ದಕ್ಷತೆ ಕಡಿಮೆಯಾಗಿದೆ. ಇದಕ್ಕೆ ಪೋಲೀಸರ ಎಷ್ಟೇ ಹೊಣೆ ಅಲ್ಲ ಸಾರ್ವಜನಿಕರು & ಸರ್ಕಾರವು ಹೊಣೆಯಾಗಿದೆ. ಈ ವ್ಯವಸ್ಥೆಯಲ್ಲಿ ದಕ್ಷತೆ ತರುವ ನಿಟ್ಟಿನಲ್ಲಿ ಸರ್ಕಾರವು 1977ರಲ್ಲಿಧರ್ಮವೀರ ಸಮಿತಿ ನೇಮಕ ಮಾಡಿತು ಧರ್ಮವೀರ ನೇತೃತ್ವದ ಪ್ರಥಮ ಪೋಲೀಸ್ ಕಾನೂನಿನಚಲಾವಣೆಯಲ್ಲಿನ ಅಡೆತಡೆಯಿಂದಾಗಿ ಜನರ ನಿರೀಕ್ಷೆ ಮಟ್ಟುವಲ್ಲಿ ಪೋಲೀಸರು ವಿಫಲವಾಗಿತ್ತು ಬ್ರಿಟಿಷರಕಾಲದಲ್ಲಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದವರನ್ನು ಹತ್ತಿಕ್ಕಲು ಪೋಲೀಸ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಪೋಲೀಸರುವ್ಯವಸ್ಥೆ ಅಧಿಕಾರದಲ್ಲಿರುವವರ ಉದ್ದೇಶಗಳನ್ನು ಈಡೇರಿಸುವ ಅಂಗ, ಕಾನೂನು ಸುವ್ಯವಸ್ಥೆ ಸ್ವತಂತ್ರ ಅಂಗವಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಪ್ರಸ್ತುತ ವ್ಯವಸ್ಥೆಯನ್ನು ಸಾರ್ವಜನಿಕ ಸೇವೆ, ಸಂವಿಧಾನಾತ್ಮ ಹಕ್ಕು, ಸ್ವಾತಂತ್ರ್ಯಗಳನ್ನು ಎತ್ತಿ ಹಿಡಿಯುವ ಅಂಗವನ್ನಾಗಿ ಬದಲಿಸಬೇಕಾದ ಅಗತ್ಯವಿದೆ. ಈ ಸಮಿತಿಯ ಸಲಹೆಯನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತಂದರೆ ಜಗತ್ತಿನಲ್ಲಿ ಅತ್ಯಂತ ದಕ್ಷ ಪೋಲೀಸ್ ವ್ಯವಸ್ಥೆ ಆಗುವ ಸಾಧ್ಯತೆ ಇದೆ. ಏಕೆಂದರೆ ಭಾರತದ ಮುಂಬಯಿಪೋಲೀಸ ಪಡೆ ಜಗತ್ತಿನಲ್ಲಿ ಎರಡನೇಯ ಅತಿ ದಕ್ಷ ಪೋಲೀಸ್ ಪಡೆಯಾಗಿದೆ. ಮೊದಲನೇಯದು ಪ್ಯಾಟ್ಲ್ಯಾಂಡ್ ವ್ಯವಸ್ಥೆ.
ಪೋಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂಬ ವಿಚಾರ ಮಾಡಿದಾಗಸಂಪೂರ್ಣವಾಗಿ ರಾಜಕೀಯ ಹಸ್ತಕ್ಷೇಪ ತಡೆಯಬೇಕು. ಪೋಲೀಸ್ರಿಗೆ ನೀಡುವ ಸೇವಾ ಸೌಲಭ್ಯಗಳನ್ನು ನಿರ್ಧಾರಮಾಡುವ ಅಧಿಕಾರವನ್ನು ಮೇಲಾಧಿಕಾರಿಗೆ ನೀಡಬೇಕು. ಅದೇ ರೀತಿ ವರ್ಗಾವಣೆ ಬಡ್ತಿ & ಇತರ ಸೇವೆಗಳನ್ನುರಾಜಕೀಯ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳಬೇಕು.

• ರಾಜಕೀಯ ಅಪರಾಧೀಕರಣವನ್ನು ಕಡಿಮೆ ಮಾಡುವುದು ಅಂದರೆ ಅಪರಾಧಿಗಳು ರಾಜಕೀಯದಲ್ಲಿಭಾಗವಹಿಸಿದಂತೆ – (Electoral Reform)
• ಕಾನೂನು ವ್ಯವಸ್ಥೆಯನ್ನು ಬಲಪಡಿಸುವುದು ಉದಾ: Cyber crime act– 2000 ಅಂತರ್ ಜಾಲಅಪರಾಧಿಗಳ ಕಾನೂನು DOTA
• ವೃತ್ತಿಪರ ತರಬೇತಿ ನೀಡುವುದು ಜನರ ಹೃದಯ & ಸಹಕಾರವನ್ನು ಜಯಿಸುವುದು ಹೇಗೆ ಎಂಬುದಾಗಿತರಬೇತಿ ನೀಡುವುದು.
• ಮಾನವ ಹಕ್ಕುಗಳ ರಕ್ಷಣೆ ಮಾಡುವುದು
• ಆಧುನಿಕ ಸಲಕರಣೆಗಳನ್ನು ನೀಡುವುದು-ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡುವುದು
• ಸಂಪರ್ಕ ವ್ಯವಸ್ಥೆ ಮಾಡುವುದು.

ಡಾ. ಹಾ.ಮಾ. ನಾಯಕ ಸಂಸ್ಕೃತಿ ವಿಭಾಗ ಪ್ರಜಾವಾಣಿ ಕೃಪೆ ಪೋಲೀಸರಿಗೆ ಶುಭವಾಗಲಿ ಎಂದು ಲೇಖನದಲ್ಲಿನೂರು ವರ್ಷ ತುಂಬಿದ ಪೋಲೋಸರಿಗೆ ಶುಭ ಕೋರುತ್ತ ಪೋಲೀಸ್ ಇಲಾಖೆಯ ಕೆಲಸದಲ್ಲಿಉಪಯುಕ್ತವಾಗಬೇಕಾದರೆ ಪರಿಣಾಮಕಾರಿಯಾಗಬೇಕಾದರೆ ಮೂರು ಮುಖ್ಯ ಕಿವಿ ಮಾತನ್ನು ಹೇಳುತ್ತಾರೆ.
1. ನೋಡುವ ದೃಷ್ಟಿಯಲ್ಲಿ ಬದಲಾವಣೆಯಾಗಬೇಕು
2. ಅವರು ರಾಜಕೀಯ ಒತ್ತಡಗಳಿಂದ ಸಂಪೂರ್ಣವಾಗಿ ಮುಕ್ತರಾಗಬೇಕು,
3. ಈ ಇಲಾಖೆಯಲ್ಲಿಯೇ ಒಂದು ಹೊಸ ದೃಷ್ಟಿ ಮಾಡಬೇಕು.
ಇದು ಈ ಹೊತ್ತು ನಾವೆಲ್ಲರೂ ಪರಿಪಾಲಿಸಬೇಕಾದ ಸಂಗತಿಯೆಂದು ವಿನಂತಿಸಿದ್ದಾರೆ.
ಕೇಂದ್ರ ಗೃಹ ಮಂತ್ರಿ ಸಚಿವಾಲಯವು (Central home ministry) – 1000 ಕೋಟಿ ರೂಪಾಯಿಯೋಜನೆ ಹಾಕಿಕೊಂಡಿದೆ. ಇದರ ಮುಖ್ಯ ಗುರಿ - ಪೋಲೀಸ್ ವ್ಯವಸ್ಥೆಯನ್ನು ಭದ್ರಗೊಳಿಸುವುದು.
POLNET – ಅಪರಾಧಿಯ ಅಪರಾಧತನ ಅಂತರ್ಜಾಲದಲ್ಲಿ ನೀಡುವುದು. Dna finger frinting ವ್ಯಕ್ತಿಯನಿರ್ಧಿಷ್ಟ ಗುರುತು.
ಸಾರ್ವಜನಿಕ ಸಂಶಯದಿಂದ ಪೋಲಿಸರನ್ನು ಕಂಡು ಅವರೇ ಅಪರಾಧ ಎಸಗಿದರ ಜೊತೆ ಶಾಮೀಲಾಗಿದ್ದರುಎನ್ನುವ ಸಂಶಯ ಬಿಡಬೇಕು, ಹಾಗೆಯೇ ಪೋಲೀಸರು ನಾವು ಸಾರ್ವಜನಿಕ ಸೇವೆಗಾಗಿಯೇ ಇದ್ದೇವೆ ಅವರನ್ನುಅವರ ಸ್ನೇಹಿತರಾಗಿ ಮಾರ್ಗದರ್ಶಿಯಾಗಿ ಅವರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಕಷ್ಟಗಳನ್ನು ನಿವಾರಣೆ ಮಾಡತಕ್ಕಂತರಕ್ಷಕರಾಗಬೇಕು ಎಂದು ಕಿವಿಮಾತನ್ನು ನೀಡಿದ್ದಾರೆ.

ಉಪಸಂಹಾರ:


ಇಷ್ಟೆಲ್ಲಾ ಅಡೆತಡೆಯ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ವ್ಯವಸ್ಥೆಯೂಭಾರತದಲ್ಲಿ ಇಂದಿಗೂ ಕೂಡ ಪರಿಣಾಮಕಾರಿಯಾದ ಪಡೆಯಾಗಿದೆ. ದೇಶದಲ್ಲಿ ಅರಾಜಕತೆ ಉಂಟಾಗದಿರಲುಪೋಲಿಸ್ ವ್ಯವಸ್ಥೆಯು ಮುಖ್ಯ ಕಾರಣವಾಗಿದೆ, ಹಲವಾರು ಪೋಲೀಸ್ ಅಧಿಕಾರಿಗಳು ಸಾರ್ವಜನಿಕರ ಪ್ರಾಣ &ಆಸ್ತಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಸಂಸತ್ತಿನ ಮೇಲೆ ದಾಳಿ ಮಾಡಿದಾಗ ನಮ್ಮ ಪೋಲೀಸರು (ಮಹಿಳೆಸಹಿತ) ತಮ್ಮ ಪ್ರಾಣ ನೀಡಿ ರಕ್ಷಣೆ ಮಾಡಿದ್ದಾರೆ. ಪೋಲೀಸ್ ವ್ಯವಸ್ಥೆಯಲ್ಲಿ ಹಲವಾರು ಕುಂದುಕೊರತೆಗಳು ಇದ್ದರೂಗಣನೀಯ ಕೊಡುಗೆ ನೀಡಿದ್ದಾರೆ. ಆದ್ದರಿಂದ ಪೋಲಿಸ್ ಪಡೆಯ ಕಾರ್ಯದಕ್ಷತೆಯನ್ನು ಅವರ ಕೆಲವು ವಿಫಲತೆಯನ್ನುಗಣನೆಗೆ ತೆಗೆದುಕೊಳ್ಳದೆ ಅವರು ಸಾಧಿಸಿದ ಹಲವಾರು ಯಶಸ್ಸುಗಳನ್ನು ಪರಿಗಣಿಸಿ ನಿರ್ಧರಿಸಬೇಕು, ಜವಾಬ್ಧಾರಿಯುತ& ಸ್ಪಂದಿಸಬಲ್ಲ ಪೋಲಿಸ್ ಬಲಕ್ಕೆ ಬೇರೆ ಪರ್ಯಾಯಗಳಿಲ್ಲ. ಪೋಲೀಸರಿಗೆ ಆತ್ಮವಿಶ್ವಾಸ ತುಂಬಲಿಲ್ಲ ಅವರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬಲ್ಲದು.