ಡಿಸೆಂಬರ್ 7th, 2017

 

1.ಕಾನೂನು ಆಯೋಗ: ಏಕರೂಪ ಸಂಹಿತೆ ಅಸಾಧ್ಯ


• ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿ ಅಸಾಧ್ಯ ಎಂದು ಕಾನೂನು ಆಯೋಗದ ಅಧ್ಯಕ್ಷ ಬಿ.ಎಸ್.ಚೌಹಾಣ್ ಹೇಳಿದ್ದಾರೆ.
• ವಿವಿಧ ಧರ್ಮ, ಸಮುದಾಯ & ಪ್ರದೇಶಗಳಿಗೆ ಸಂವಿಧಾನ ಕೆಲವು ವಿಶೇಷ ಅವಕಾಶಗಳನ್ನು ನೀಡಿದೆ ಈ ಅವಕಾಶಗಳನ್ನು ಉಲ್ಲಂಘಿಸಿ ನಾಗರಿಕ ಸಂಹಿತೆ ರೂಪಿಸುವುದು ಅಸಾಧ್ಯ.
• ಎಲ್ಲ ಧರ್ಮಗಳ ವ್ಯಯಕ್ತಿಕ ಕಾನೂನುಗಳನ್ನು ರದ್ಧು ಪಡಿಸಿ, ದೇಶದ ಎಲ್ಲ ಜನರಿಗೂ ಒಂದೇ ರೀತಿಯ ನಿಯಮಗಳನ್ನು ಜಾರಿಗೆ ತರುವುದೇ ಏಕರೂಪ ನಾಗರೀಕ ಸಂಹಿತೆ.
• ಈಶಾನ್ಯ ಭಾರತದ ಒಂದು ಬುಡಕಟ್ಟಿನಲ್ಲಿ ಕಿರಿಯ ಮಗಳಿಗೆ ಮಾತ್ರ ಕುಟುಂಬದ ಆಸ್ತಿಯಲ್ಲಿ ಹಕ್ಕು ದೊರೆಯುತ್ತದೆ. ಇದಕ್ಕೆ ಸಂವಿಧಾನದ ರಕ್ಷಣೆಯೂ ಇದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಸಂವಿಧಾನ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಕಾನೂನು ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

2. RBI: 5ನೇ ದ್ವೈಮಾಸಿಕ ಪರಾಮರ್ಶೆ:


• ಗೌರ್ನರ್ ಉರ್ಜಿತ್ ಪಟೇಲ್ ನಾಯಕತ್ವದಲ್ಲಿನ 6 ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿ [MPC] ತನ್ನ 5ನೇ ದ್ವೈಮಾಸಿಕ ಪರಾಮರ್ಶೆ ಮಾಡಿತು.
• ರೆಪೋದರ 6%, ರಿಸರ್ವ್ ರೆಪೋದರ 5.75% ಯಾವುದೇ ಬದಲಾವಣೆ ಮಾಡಿಲ್ಲ.
• ಇದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಗದುತನದ ಹರಿವು ಹೆಚ್ಚುವುದಿಲ್ಲ ಜೊತೆಗೆ ಗ್ರಹ, ವಾಹನ ಖರೀದಿ ಮತ್ತು ಸಾಲಗಳ ಬಡ್ಡಿ ದರಗಳು ಕಡಿಮೆಯಾಗುವ ಸಾಧ್ಯತೆಗಳು ಇರುವುದಿಲ್ಲ.
• ಆರ್ಥಿಕ ಬೆಳವಣಿಗೆಗೆ ಉತ್ತೇಜನ, CPi 4%ರ ಮಿತಿಯಲ್ಲಿ ಇರಿಸುವ ಮಧ್ಯಂತರ ಗುರಿ ಸಾಧಿಸಲು,
ಈ 2 ಕಾರಣಕ್ಕಾಗಿ ಬಡ್ಡಿದರ ಬದಲಿಸಿಲ್ಲ.
• ನಗದುರಹಿತ ವಹಿವಾಟು ಉತ್ತೇಜಿಸಲು Debit & Credit Card ಬಳಕೆಗೆ ವಿಧಿಸುವ ಶುಲ್ಕ ಕಡಿಮೆ ಮಾಡಲು ಆರ್ಬಿಐ ಉದ್ದೇಶಿಸಿದೆ.
• ಬ್ಯಾಂಕಗಳು ವರ್ತಕರಿಗೆ ಒದಗಿಸುವ ಸೇವೆಗೆ ವಿಧಿಸುವ ಶುಲ್ಕದಲ್ಲಿ MDR [MARCHANT DISCOUNT RATE] ಸುಧಾರಣೆ ತರಲಾಗುವುದು.
• 4.3% ರಿಂದ 4.7 %-> ಹಣದುಬ್ಬರ ಹೆಚ್ಚಳ ನಿರೀಕ್ಷೆ
• 6.7 %-> ಪ್ರಸ್ತಕ ಹಣಕಾಸು ವರ್ಷದ GDP ಅಂದಾಜು.

3. ತಾಜಮಹಲ್ -> 2ನೇ ಉತ್ತಮ ಪಾರಂಪರಿಕ ತಾಣ:


• ಯುನೆಸ್ಕೊದ ಉತ್ತಮ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತಾಜಮಹಲ್ ಗೆ 2ನೇ ಸ್ಥಾನ
1ನೇ ಸ್ಥಾನ ->ಕಾಂಬೋಡಿಯ ->ಅಂಕುರ್ ವಾಟ್ ದೇವಾಲಯ
2ನೇ ಸ್ಥಾನ ->ಭಾರತ-> ತಾಜಮಹಲ್
3ನೇ ಸ್ಥಾನ ->ಚೀನಾ ->ಮಹಾಗೋಡೆ
• ಪ್ರಯಾಣ ಸೌಲಭ್ಯ ಒದಗಿಸುವ ಟ್ರಾವೆಲ್ ಪೋರ್ಟಲ್ –Trip Adviser ಸಮೀಕ್ಷೆ ನಡೆಸಿದೆ.
• ವಿಶ್ವದಾದ್ಯಂತ ಪ್ರವಾಸಿಗರ ಅಭಿಪ್ರಾಯವನ್ನಾಧರಿಸಿ ಈ ರ್ಯಾಂಕಿಂಗ್ ನೀಡಿದೆ.
• ಪ್ರವಾಸಿಗರಿಗಿರುವ ವ್ಯವಸ್ಥೆಗಳು
1. ವಾಹನ ವ್ಯವಸ್ಥೆ
2. ವಸತಿ ವ್ಯವಸ್ಥೆ
ಆಧರಿಸಿ ಆಯ್ಕೆ ಮಾಡಲಾಗಿದೆ.
• ಪೆರುವಿನ ಮಾಚು ಪಿಚು
ಬ್ರೆಜಿಲ್ - ಇಗ್ವಾಜು N.P
ಇಟಲಿ - ಸಾನ್ಸಿ ಆಫ್ ಮಟೇರ
ಪೋಲೆಂಡ್ -> ಆಶುವಿಟ್ಸ್ ಬಿರ್ಕೆನಾದ್, ನಂತರದ ಸ್ಥಾನದಲ್ಲಿವೆ.

4. ಸೆಲ್ಫಿ ಮಂಗ->Person of the year


• 2011ರಲ್ಲಿ ಬ್ರಿಟನ್ ನ ಛಾಯಾಗ್ರಹಕ ಡೇವಿಡ್ ಸ್ಲೇಟರ್ ಕ್ಯಾಮೆರಾ ದ ಸೆಲ್ಫಿಯಲ್ಲಿ ಸೆರೆಯಾಗಿದ್ದ, ಇಂಡೋನೇಷ್ಯಾದ ಕಪ್ಪು ಕೋತಿ "ನರುಟೋ" ನನ್ನು ವರ್ಷದ ವ್ಯಕ್ತಿ ಎಂದು ಪ್ರಾಣಿ ದಯಾ ಸಂಘಟನೆ Peta ಘೋಷಿಸಿದೆ.
• ನಗೆ ಬೀರಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ನರುಟೋನನ್ನು ಯಾವುದೊ ಪ್ರಾಣಿಯಲ್ಲ ವ್ಯಕ್ತಿ ಎಂದು ಗುರುತಿಸಿ ಈ ಮೂಲಕ ಗೌರವಿಸದೆ.
• ಸೆಲ್ಫಿ ಜಾಗತಿಕವಾಗಿ ಚರ್ಚೆಯಾಗಿದ್ದು, ಸೆಲ್ಫಿ ಚಿತ್ರದ ಹಕ್ಕುಸ್ವಾಮ್ಯ ಕುರಿತು ಅಮೆರಿಕದಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು.
• ಹೀಗಾಗಿ ಕೋತಿಗೆ ಸೂಕ್ತ ಮಾನ್ಯತೆ ನೀಡಲು ಅದನ್ನು ಪ್ರಾಣಿ ಎಂದು ಗುರುತಿಸುವ ಬದಲು ವ್ಯಕ್ತಿ ಸಮಾನ ಎಂದು ತೋರ್ಪಡಿಸಲು ಈ Person of the year
• ಆದರೆ ಡೇವಿಡ್ ಸ್ಲೇಟರ್ ಚಿತ್ರಕ್ಕಾಗಿ ತನ್ನ ಕ್ಯಾಮೆರಾ ಬಳಸಿದ್ದು ಹೀಗಾಗಿ ಹಕ್ಕುಸ್ವಾಮ್ಯ [Copy right] ತನಗೆ ಸೇರಬೇಕು ಎಂದಿದ್ದರು.
• ಪ್ರಕರಣ ಸೆಪ್ಟೆಂಬರ್ 2017 ರಲ್ಲಿ ಅಂತ್ಯಗೊಂಡು selfie ಚಿತ್ರದಿಂದ ಗಳಿಸುವ ಆದಾಯದಲ್ಲಿ 25% ಇಂಡೋನೇಷ್ಯಾದ ಕೋತಿಗಳ ರಕ್ಷಣೆ ನೀಡಲು ಸೂಚಿಸಿದೆ.

5:ಅಕ್ಷಯ್: ಕೃಷಿ ರಾಯಭಾರಿ


• ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಪ್ರಚಾರ ರಾಯಭಾರಿಯಾಗಿ ನಟ ಅಕ್ಷಯ್ ಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.
1. ಮಣ್ಣಿನ ಫಲವತ್ತತೆ ಪರೀಕ್ಷೆ
2. ಬೆಲೆ ವಿಮೆ ಯೋಜನೆ ಬಗ್ಗೆ ಅರಿವು
3. ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ
4. ಕೃಷಿ ವಿಕಾಸ್ ಯೋಜನೆ
ಇವುಗಳಿಗೂ ಇವರೇ ಪ್ರಚಾರ ರಾಯಭಾರಿಯಾಗಿರಲಿದ್ದಾರೆ.

Contributed by: Mallikajan.Korbu