ಭೂ ಬಳಕೆ ಬದಲಾವಣೆಗಳು  (Land Changes)

 

* ಭಾರತವು ವ್ಯವಸಾಯ ಪ್ರಧಾನ ರಾಷ್ಟ್ರವಾಗಿದ್ದು, ಭೂ ಬಳಕೆಯ ವಿಧಾನಗಳು ವ್ಯವಸಾಯದ ಅಭಿವೃದ್ಧಿ ಹಾಗೂ ಬದಲಾವಣೆಯ ಸೂಚಕಗಳಾಗಿವೆ.

• ಭಾರತವು ವ್ಯವಸಾಯ ಪ್ರಧಾನ ರಾಷ್ಟ್ರವಾಗಿದ್ದು, ಭೂ ಬಳಕೆಯ ವಿಧಾನಗಳು ವ್ಯವಸಾಯದ ಅಭಿವೃದ್ಧಿ ಹಾಗೂ ಬದಲಾವಣೆಯ ಸೂಚಕಗಳಾಗಿವೆ.
• ಇದರಿಂದ ಭೂ ಬಳಕೆಯ ವಿಶ್ಲೇಷಣೆಯು ಆರ್ಥಿಕ ಅಭಿವೃದ್ಧಿಯ ಮಾರ್ಗಸೂಚಿಯಾಗಿರುವುದು.ಭಾರತದ ಭೂ ಬಳಕೆಯನ್ನು ಏಳು ಪ್ರಧಾನ ವಿಧಗಳಾಗಿ ವಿಂಗಡಿಸಬಹುದು.ಇವುಗಳೆಂದರೆ
1. ಸಾಗುವಳಿ ಪ್ರದೇಶ
2. ಅರಣ್ಯ
3. ವ್ಯವಸಾಯಕ್ಕೆ ದೊರೆಯದಿರುವ ಪ್ರದೇಶ
4. ಬೀಳುಭೂಮಿ
5. ಹುಲ್ಲುಗಾವಲು
6. ವೃಕ್ಷ ಬೇಸಾಯ
7. ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ

1. ಸಾಗುವಳಿ ಪ್ರದೇಶ


• ಇದು ಭಾರತದ ಭೂ ಬಳಕೆಯ ವಿಧಗಳಲ್ಲಿ ಅತ್ಯಂತ ಪ್ರಮುಖವಾಗಿದೆ.
• ಭಾರತದ ವ್ಯವಸಾಯ ಪ್ರಧಾನ ಆರ್ಥಿಕತೆಗೆ ಅನುಗುಣವಾಗಿ ಅತಿಹೆಚ್ಚು ಭೂಮಿಯನ್ನು ಸಾಗುವಳಿಗೆ ಬಳಸಲಾಗುತ್ತಿದೆ.
• ಭಾರತವು ಪ್ರಪಂಚದಲ್ಲಿ ಸಾಗುವಳಿ ಕ್ಷೇತ್ರದ ವಿಸ್ತೀರ್ಣದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ನಂತರ ಎರಡನೇ ಸ್ಥಾನದಲ್ಲಿದೆ.
• ಅತಿ ಹೆಚ್ಚು ಸಾಗುವಳಿ ಕ್ಷೇತ್ರವನ್ನು ಹೊಂದಿರುವ ರಾಜ್ಯಗಳು-ಪಂಜಾಬ್,ಹರಿಯಾಣ ಮತ್ತು ಉತ್ತರ ಪ್ರದೇಶ.

2. ಅರಣ್ಯ


• ಭಾರತದಲ್ಲಿ ಸಮೀಕ್ಷೆಗೊಳಪಟ್ಟ ಒಟ್ಟು ಭೂ ಪ್ರದೇಶ ಪ್ರತಿಶತ 21.3 ರಷ್ಟು ಮಾತ್ರ ಅರಣ್ಯಗಳಿಂದ ಕೂಡಿದೆ
• ಭಾರತದಲ್ಲಿ ಹರಿಯಾಣ ಹಾಗೂ ಪಂಜಾಬ್ ಅತಿ ಕಡಿಮೆ ಪ್ರಮಾಣದ ಅರಣ್ಯ ಕ್ಷೇತ್ರವನ್ನೊಳಗೊಂಡಿದೆ.
• ಭಾರತದಲ್ಲಿ ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ರಾಜ್ಯ ಮಧ್ಯ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಮಿಜೋರಾಂ
• ಅರಣ್ಯ ಯೋಜನೆ ಪ್ರಕಾರ ಪ್ರತಿಶತ 33 ರಷ್ಟು ಅರಣ್ಯವಿರಬೇಕು. ಆದ್ದರಿಂದ ಅರಣ್ಯ ಭೂಮಿಯನ್ನುಹೆಚ್ಚಿಸಲು ಸಾಕಷ್ಟು ಪ್ರಯತ್ನಿಸಲಾಗುತ್ತಿದೆ.

3. ವ್ಯವಸಾಯಕ್ಕೆ ದೊರೆಯದಿರುವ ಪ್ರದೇಶ


• ಸಾಗುವಳಿ ಹಾಗೂ ಅರಣ್ಯ ಕ್ಷೇತ್ರದ ವಿಸ್ತಾರವನ್ನು ಹೊರತುಪಡಿಸಿ ವ್ಯವಸಾಯೇತರ ಬಳಕೆಗಾಗಿ ಹೆಚ್ಚು ಭೂಮಿಯನ್ನು ಬಳಸಲಾಗಿದೆ. ಕಟ್ಟಡ ನಿರ್ಮಾಣ, ಜಲಾಶಯ, ಕೈಗಾರಿಕೆ, ರಸ್ತೆ ಮೊದಲಾದವುಗಳ ನಿರ್ಮಾಣಕ್ಕಾಗಿ ಹೆಚ್ಚು ಭೂಮಿಯನ್ನು ಬಳಸಲಾಗುತ್ತಿರುವುದರಿಂದ ಈ ಪ್ರಕಾರದ ಭೂ ಬಳಕೆಯು ಅಧಿಕಗೊಳ್ಳುತ್ತಿದೆ.
• ಪಶ್ಚಿಮ ಬಂಗಾಳ ಶೇ 18.8 ರಷ್ಟು ಗರಿಷ್ಟ ವ್ಯವಸಾಯೇತರ ಬಗೆಯ ಭೂಮಿಯನ್ನು ಹೊಂದಿದೆ.

4. ಬೀಳುಭೂಮಿ


• ಜನಸಂಖ್ಯೆ ಅಧಿಕಗೊಂಡಂತೆ ವ್ಯವಸಾಯೋತ್ಪನ್ನಗಳ ಮೇಲೆ ಹೆಚ್ಚು ಒತ್ತಡವಾಗಿದ್ದು, ಅದಕ್ಕೆ ಅನುಗುಣವಾಗಿ ಹೆಚ್ಚು ಕ್ಷೇತ್ರವನ್ನು ಸಾಗುವಳಿಗೆ ಬಳಸಲಾಗಿದೆ. ಅಲ್ಲದೆ ಬೀಳು ಬಿದ್ದಿದ್ದ ಹಾಗೂ ವ್ಯವಸಾಯ ಯೋಗ್ಯವಲ್ಲದ ಭೂ ಪ್ರದೇಶಗಳನ್ನು ಸಹ ತಾಂತ್ರಿಕತೆಯ ಅಳವಡಿಕೆಯೊಂದಿಗೆ ಇಂದು ವ್ಯವಸಾಯಕ್ಕೆ ಬಳಸಲಾಗಿದೆ.
• ಜಾರ್ಖಂಡ್ ಶೇ 9.8 ,ತಮಿಳುನಾಡು ಶೇ 11.5 ಮತ್ತು ರಾಜಸ್ತಾನ ಶೇ 6 .6 ರಷ್ಟು ಅಧಿಕ ಪ್ರಮಾಣದ ಬೀಳು ಭೂ ಪ್ರದೇಶಗಳನ್ನು ಒಳಗೊಂಡಿದೆ.

5. ಹುಲ್ಲುಗಾವಲು


ವ್ಯವಸಾಯ ಪ್ರದೇಶದ ವಿಸ್ತರಣೆಯೊಂದಿಗೆ ಹುಲ್ಲುಗಾವಲುಗಳ ಕ್ಷೇತ್ರ ನಿರಂತರವಾಗಿ ಕಡಿಮೆಯಾಗಿದೆ. ಹಿಮಾಚಲ ಪ್ರದೇಶ ರಾಜ್ಯವು ಹೆಚ್ಚು ಹುಲ್ಲುಗಾವಲು ಪ್ರದೇಶವನ್ನು ಹೊಂದಿದ್ದು, ಪಂಜಾಬ, ಹರಿಯಾಣ ರಾಜ್ಯಗಳು ಅತ್ಯಂತ ಕಡಿಮೆ ಹುಲ್ಲುಗಾವಲುಗಳನ್ನು ಹೊಂದಿವೆ.

6. ವೃಕ್ಷ ಬೇಸಾಯ


ಭಾರತದಲ್ಲಿ ಒಟ್ಟು ವರದಿಯಾದ ಪ್ರದೇಶದ ಶೇ 1.೦ ರಷ್ಟು ಮಾತ್ರ ವೃಕ್ಷ ಬೆಳೆಗಳು ಹಾಗೂ ಹಣ್ಣಿನ ತೋಟಗಳಿಗೆ ಒಳಪಟ್ಟಿರುವುದು.

7. ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ


ಭಾರತದ ವಿವಿಧ ಭಾಗಗಳಲ್ಲಿ ಹಿಂದೆ ಬೇಸಾಯಕ್ಕೆ ಬಳಸಲಾಗುತ್ತಿದ್ದ ಕೆಲವು ಭಾಗಗಳು ಇಂದು ಮಣ್ಣಿನ ರಾಸಾಯನಿಕ ಸಂಯೋಜನೆಯ ಬದಲಾವಣೆಗಳಿಂದಾಗಿ ಅನುಪಯುಕ್ತವಾಗಿ ಪರಿಣಮಿಸಿವೆ.