ಪ್ರಧಾನಮಂತ್ರಿ
 
* ಭಾರತದ ಪ್ರಧಾನಮಂತ್ರಿ ಸ್ಥಾನವನ್ನು ಬ್ರಿಟನ್ ಪ್ರಧಾನಮಂತ್ರಿಗೆ ಹೋಲಿಸಲಾಗಿದೆ.
* ಕೇಂದ್ರ ಕಾರ್ಯಾಂಗ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ನಾಮಮಾತ್ರ ಕಾರ್ಯಾಂಗದ ಮುಖ್ಯಸ್ಥರಾದರೆ, ಪ್ರಧಾನಿ ನೈಜ ಕಾರ್ಯಾಂಗದ ಮುಖ್ಯಸ್ಥರಾಗಿರುತ್ತಾರೆ.
* ವಿಶ್ವದಲ್ಲಿ ಪ್ರಥಮ ಬಾರಿಗೆ ಕ್ಯಾಬಿನೆಟ್ ವ್ಯವಸ್ಥೆ ಬ್ರಿಟನ್‍ನಲ್ಲಿ ಪ್ರಾರಂಭವಾಯಿತು.
* ಸಂವಿಧಾನದ 74 ಬಿ(1) ನೇ ವಿಧಿ ಪ್ರಧಾನಮಂತ್ರಿ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟಿದೆ.
* ರಾಷ್ಟ್ರಪತಿಯವರು ಪ್ರಧಾನಿಗೆ ಪ್ರಮಾಣ ವಚನ ಬೋಧಿಸುತ್ತಾರೆ.
* ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ ಹಲವು ಪಕ್ಷಗಳು ಸೇರಿಕೊಂಡು ಸಮ್ಮಿಶ್ರ ಸರ್ಕಾರವನ್ನು ರಚಿಸಿಕೊಳ್ಳವ ನಿಟ್ಟಿನಲ್ಲಿ ತಮ್ಮಲ್ಲಿಯೇ ಒಬ್ಬನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ನಂತರ ಆ ವ್ಯಕ್ತಿಯನ್ನು ರಾಷ್ಟ್ರಪತಿ ಯವರು ಪ್ರಧಾನಿಯಾಗಿ ನೇಮಿಸುತ್ತಾರೆ.
* ಪ್ರಧಾನಮಂತ್ರಿಯ ಅಧಿಕಾರಾವಧಿ 5 ವರ್ಷಗಳು
* ಪ್ರಧಾನಿಗೆ ಹಲವು ಸವಲತ್ತುಗಳು, ಮಾಸಿಕ ವೇತನ ಮೊದಲಾದವುಗಳು.
* ಪ್ರಧಾನಿಯಾಗಲು ಇರುವ ಪ್ರಮುಖ ಅರ್ಹತೆ ಎಂದರೆ ಯಾವುದಾದರೂ ಒಂದು ಸದನದ ಸದಸ್ಯರಾಗಿರಬೇಕು.
* ಸುಪ್ರೂಂಕೋರ್ಟನ 1997 ರ ತೀರ್ಪಿನ ಪ್ರಕಾರ ಯಾವುದೇ ಸದನದ ಸದಸ್ಯನಲ್ಲದಿದ್ದರೂ ಆರು ತಿಂಗಳು ಪ್ರಧಾನಿಯಾಗಬಹುದು. ಆರು ತಿಂಗಳೊಳಗೆ ಯಾವುದಾದರೂ ಒಂದು ಸದನದ ಸದಸ್ಯನಾಗಬೇಕಾಗುತ್ತದೆ. ಇಲ್ಲದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಾರೆ.
ಅಧಿಕಾರ ಮತ್ತು ಕಾರ್ಯಗಳು
1. ಮಂತ್ರಿಮಂಡಲದ ರಚನೆ :- ಪ್ರಧಾನಿಯು ಮಂತ್ರಿಮಂಡಲ ರಚನೆಯ ಸಂದರ್ಭದಲ್ಲಿ ಧರ್ಮ, ಜಾತಿ, ರಾಜ್ಯಗಳಿಗೆ ಪ್ರಾತಿನಿಧ್ಯತೆಯನ್ನು ನೀಡಿ ಮಂತ್ರಿಮಂಡಲ ರಚಿಸುವುದು ಇವರ ಮೊದಲ ಜವಾಬ್ದಾರಿಯಾಗಿರುತ್ತದೆ. ಅಭ್ಯರ್ಥಿಗಳ ಚಾರಿತ್ರ್ಯ, ಆಡಳಿತಾನುಭವ ಸಾಮಥ್ರ್ಯದ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.
2. ಮಂತ್ರಿಗಳ ನೇಮಕಾತಿ ಮತ್ತು ವಜಾ :- ಪ್ರಧಾನಿ ಮಂತ್ರಿ, ಮಂಡಲಕ್ಕೆ ಮಂತ್ರಿಗಳನ್ನು ನೇಮಿಸಿಕೊಳ್ಳುವ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಅವರನ್ನು ವಜಾ ಮಾಡುವ ಅಧಿಕಾರವಿರುತ್ತದೆ.
3. ಖಾತೆಗಳ ಹಂಚಿಕೆ :- ಪ್ರಧಾನಿ ತನ್ನ ಮಂತ್ರಿಮಂಡಲದ ಸದಸ್ಯರಿಗೆ ಪ್ರಮುಖ ಖಾತೆಯನ್ನು ಹಂಚಬೇಕಾಗುತ್ತದೆ. ಉದಾ: ರಕ್ಷಣೆ, ವಿದೇಶಾಂಗ, ಹಣಕಾಸು, ರೈಲ್ವೆ ಮೊದಲಾದವು. ಈ ಸಂದರ್ಭದಲ್ಲಿ ಮಂತ್ರಿಗಳ ಹಿನ್ನೆಲೆ, ಅನುಭವ, ಒಳ್ಳೆಯ ನಡವಳಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾರೆ.
4. ಸಚಿವ ಸಂಪುಟದ ಗಾತ್ರ ನಿರ್ಧಾರ :- ಪ್ರಧಾನಿ ಮಂತ್ರಿಮಂಡಲದ ಗಾತ್ರವನ್ನು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ. ಸಂವಿಧಾನಕ್ಕೆ 2004 ರಲ್ಲಿ 91ನೇ ತಿದ್ದಪಡಿ ತಂದು ಮಂತ್ರಿಮಂಡಳದ ಗಾತ್ರ ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆಯ ಶೇ.15ಕ್ಕಿಂತ ಹೆಚ್ಚಿರುವಂತಿಲ್ಲ.
5. ಮಂತ್ರಿಮಂಡಲದ ಪುನರ್ ರಚನೆ :- ಪ್ರಧಾನಿ ಆಡಳಿತದಲ್ಲಿ ದಕ್ಷತೆ ಹೊಸತನ ತರುವ ಸಲುವಾಗಿ ಸರಿಯಾಗಿ ಕಾರ್ಯನಿರ್ವಹಿಸದವರನ್ನು ವಜಾ ಮಾಡಿ, ಹೊಸಬರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದಕ್ಕೆ ಮಂತ್ರಿಮಂಡಲದ ಪುನರ್ ರಚನೆ ಎನ್ನಲಾಗುತ್ತದೆ.
6. ಪ್ರಧಾನ ಸಲಹೆಗಾರರು :- ರಾಷ್ಟ್ರದ ಉನ್ನತ ಸ್ಥಾನಗಳಿಗೆ ನೇಮಿಸುವ ಸಂದರ್ಭದಲ್ಲಿ ರಾಷ್ಟ್ರಪತಿಗೆ ಪ್ರಧಾನ ಸಲಹೆಗಾರರಾಗಿರುತ್ತಾರೆ. ಉದಾ: ರಾಜ್ಯಪಾಲರು, ಮುಖ್ಯ ಚುನಾವಣಾ ಆಯುಕ್ತರು, ಸುಪ್ರಿಂಕೋರ್ಟ, ಹೈಕೋರ್ಟ, ಮುಖ್ಯ ನ್ಯಾಯಾಧೀಶರ ನೇಮಕ ಮೊದಲಾದ ಸಂದರ್ಭಗಳಲ್ಲಿ
7. ಲೋಕಸಭೆ ವಿಸರ್ಜಿಸುವಂತೆ ಸಲಹೆ ನೀಡುವ :- ಪ್ರಧಾನಿ ಆಡಳಿತ ನಡೆಸಲು ವಿಫಲವಾದಾಗ ಅಥವಾ ಲೋಕಸಭೆಯಲ್ಲಿ ವಿಶ್ವಾಸಮತವನ್ನು ಕಳೆದುಕೊಂಡಾಗ ಅಥವಾ ಅಧಿಕಾರಾವಧಿ ಮುಗಿದಾಗ ಲೋಕಸಭೆಯನ್ನು ವಿಸರ್ಜಿಸುವಂತೆ ಪ್ರಧಾನಿ ರಾಷ್ಟ್ರಪತಿಗೆ ಸಲಹೆ ನೀಡುತ್ತಾರೆ.
8. ರಾಷ್ಟ್ರದ ನಾಯಕ :- ಪ್ರಧಾನಿ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ತಾಂತ್ರಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ರಾಷ್ಟ್ರವನ್ನು ಮುನ್ನಡೆಸುವುದಕ್ಕೆ ಇವರನ್ನು ರಾಷ್ಟ್ರದ ನಾಯಕ ಎಂದು ಕರೆಯಲಾಗುತ್ತದೆ.
9. ಸಂಪರ್ಕ ಸೇತುವೆ :- ಪ್ರಧಾನಿ ರಾಷ್ಟ್ರಪತಿ ಹಾಗೂ ಮಂತ್ರಿಮಂಡಲದ ನಡುವೆ ಸಂಪರ್ಕ ಸೇತುವೆಯಾಗಿದ್ದಾರೆ. ಅಂದರೆ ಮಂತ್ರಿಮಂಡಲದ ಎಲ್ಲಾ ಕಾರ್ಯಕ್ರಮಗಳು, ನಿರ್ಧಾರ ಗಳನ್ನು ರಾಷ್ಟ್ರಪತಿಗೆ ತಿಳಿಸುತ್ತಾರೆ.