ಪ್ರಧಾನಮಂತ್ರಿ ಮಾತೃತ್ವ ವಂದನ ಯೋಜನೆ (PMMVY)
ಪ್ರಧಾನಿ ಮಂತ್ರಿ ಮಾತೃತ್ವ ವಂದನ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ 6000 ರೂಪಾಯಿಗಳ ಸಹಾಯ ಯೋಜನೆಯಾಗಿದೆ. ಈ ಯೋಜನೆಯು ಯುಪಿಎ ಸರ್ಕಾರದ ಅವದಿಯಲ್ಲಿ ಪ್ರಾರಂಭವಾಗಿದ್ದು ಇಂದಿರಾಗಾಂಧೀ ಮಾತೃತ್ವ ಸಹಯೋಗ್ ಯೋಜನೇಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಮಾತೃತ್ವ ಸಹಯೋಗ ಯೋಜನೆಯ ಹೆಸರಿನಲ್ಲಿ ಮೋದಿ ಸರ್ಕಾರ ಜಾರಿಗೆ ತಂದಿತ್ತು ಪ್ರಸ್ತುತ ಯೋಜನೆಗೆ ಪ್ರಧಾನ ಮಂತ್ರಿ ಮಾತೃತ್ವ ವಂದನ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ . ಈ ಯೋಜನೆಯಡಿಯಲ್ಲಿ ಗರ್ಬಿಣಿ ಮತ್ತು ಹಾಲುಣಿಸುವ ಬಾಣಂತಿ ಮಹಿಳೆಯರಿಗೆ 6000ರೂಪಾಯಿಗಳವರೆಗೆ ಸಹಾಯಧನವನ್ನು 3 ಕಂತುಗಳಲ್ಲಿ ಫಲಾನು ಭಾವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತದೆ.
ಮೊದಲನೇ ಹಂತ:
ಗರ್ಭಧರಿಸಿದ ೬ ತಿಂಗಳ ನಂತರ 2000 ರೂಪಾಯಿ ವರ್ಗಾವಣೆ ಮಾಡಲಾಗುತ್ತದೆ.
2 ನೇ ಹಂತ :
ಉಳಿದ 3000 ರೂಪಾಯಿಯಗಳನ್ನು ಮಗುವಿನ ಜನನ ನಂತರ ವರ್ಗಾವಣೆ ಮಾಡಲಾಗುತ್ತದೆ.
ನಿಧಿ:-
2017 ರಿಂದ 2020 ವರೆಗಿನ 3 ವರ್ಷಗಳ ಅವಧಿಗೆ ರಾಜ್ಯಗಳ ಪಾಲು ಸೇರಿದಂತೆ ಕೇಂದ್ರ ಸರ್ಕಾರವು 12661 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದೆ ಇದರಲ್ಲಿ 7932 ಕೋಟಿ ಕೇಂದ್ರದ ಪಾಲಾದರೆ ಉಳಿದದ್ದು ರಾಜ್ಯಗಳ ಪಾಲು.