ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:
 
• ಕೇಂದ್ರ ಬಜೆಟ್ ನ ಕುರಿತು ಸಂಕ್ಷಿಪ್ತ ವಿವರಣೆ:
* ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್ನ bougette ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ 'ಚರ್ಮದ ಬ್ಯಾಗ್'.
* ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ.
* ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ, ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.
* ಬಜೆಟ್ ಪೇಪರ್ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.
* ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.
* ಕೇಂದ್ರ ಬಜೆಟ್ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ
* ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು.ಈಸ್ಟ್ ಇಂಡಿಯಾ ಕಂಪನಿಯಿಂದ.
* ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.
* ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.
* ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್.
* ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.
* ಸ್ವತಂತ್ರ ಭಾರತದ ಮೊದಲ ಬಜೆಟ್ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.
* 'ಮಧ್ಯಂತರ ಬಜೆಟ್' ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).
* ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)
* 1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು
* 1955-56ರಿಂದ ಬಜೆಟ್ ಪೇಪರ್ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು
* ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್ಲಾಲ್ ನೆಹರೂ.1958-59ರಲ್ಲಿ ಅವರು ಕೇಂದ್ರವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
* ಅತ್ಯಧಿಕ ಬಜೆಟ್ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.
* 1973-74ರ ಬಜೆಟ್ ಅನ್ನು 'ಬ್ಲ್ಯಾಕ್ ಬಜೆಟ್' ಎನ್ನಲಾಗುತ್ತದೆ. ಏಕೆಂದರೆ,ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು.
* ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.
* 2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು.
* 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.
Contributed By : Spardhaloka