ಸಾಗರ ಪ್ರವಾಹಗಳು

 

ಒಂದು ನಿಶ್ಚಿತವಾದ ದಿಕ್ಕಿನಲ್ಲಿ ಅಪಾರ ಪ್ರಮಾಣದಲ್ಲಿ ಸಾಗರಗಳಲ್ಲಿ ಚಲಿಸುವ ನೀರಿಗೆ ಪ್ರವಾಹ ಎನ್ನುವರು. ಸಾಗರಗಳ ವಿವಿಧ ಭಾಗಗಳಲ್ಲಿ ನೀರಿನ ಉಷ್ಣಾಂಶ ಮತ್ತು ಲವಣಗಳ ವ್ಯತ್ಯಾಸವಿರುವುದರಿಂದಾಗಿ ಸಾಗರಗಳ ಮೇಲ್ಭಾಗದ ನೀರು ಉಷ್ಣ ಪ್ರದೇಶದಿಂದ ಶೀತ ಪ್ರದೇಶಗಳ ಕಡೆಗೆ ನದಿಗಳೋಪಾದಿಯಲ್ಲಿ ಹರಿಯುವುದು. ಶೀತ ಪ್ರದೇಶದಲ್ಲಿ ನೀರು ಕೆಳಮುಖವಾಗಿ ಪ್ರವಹಿಸಿ ಆಳವಾದ ಭಾಗಗಳಲ್ಲಿ ಉಷ್ಣವಲಯದ ಕಡೆಗೆ ಹರಿದು ಅಲ್ಲಿ ಮೇಲ್ಮುಖವಾಗಿ ಹರಿಯುತ್ತದೆ. ಒಂದು ನಿಶ್ಚಿತವಾದ ದಿಕ್ಕಿನಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಸಾಗರಗಳಲ್ಲಿ ಉಷ್ಣೋದಕ (warm) & ಶೀತೋದಕ (cold) ಪ್ರವಾಹಗಳು ಕಂಡು ಬರುತ್ತದೆ. ಉಷ್ಣೋದಕ ಪ್ರವಾಹಗಳು ಸಮಭಾಜಕ ವೃತ್ತದಿಂದ ಧ್ರುವ ಪ್ರದೇಶದ ಕಡೆಗೂ, ಶೀತೋದಕ ಪ್ರವಾಹಗಳು ಧ್ರುವ ಪ್ರದೇಶದಿಂದ ಸಮಭಾಜಕ ವೃತ್ತದ ಕಡೆಗೆ ಚಲಿಸುತ್ತವೆ.

ಪ್ರವಾಹಗಳ ಉತ್ಪತ್ತಿಗೆ ಕಾರಣಗಳು :


(1) ಉಷ್ಣಾಂಶ
(2) ಲವಣತೆ
(3) ನಿತ್ಯ ಮಾರುತಗಳು
(4) ಹಿಮ ಕರಗುವಿಕೆ
(5) ತೀರಗಳ ವಿನ್ಯಾಸ
(6) ದೈನಂದಿನ ಚಲನೆಗಳು

ಉದಾಹರಣೆ:
1. ಫೆಸಿಫಿಕ್ ಸಾಗರ ಪ್ರವಾಹಗಳು
2. ಅಟ್ಲಾಂಟಿಕ್ ಮಹಾಸಾಗರದ ಪ್ರವಾಹಗಳು