ಭಾರತದ ಭೂಗೋಳ (Indian Geography)

 

ಪರಿಚಯ


ಭಾರತವು ಒಂದು ವೈವಿದ್ಯತೆಯಿಂದ ಕೂಡಿದ ದೇಶವಾಗಿದೆ. ಇಲ್ಲಿಯ ವಿವಿಧ ರೀತಿಯ ಮೇಲ್ಮೈ ಲಕ್ಷಣಗಳು, ವಾಯುಗುಣ, ಸ್ವಾಭಾವಿಕ ಸಸ್ಯವರ್ಗಗಳು ಹಾಗೂ ಜನರಲ್ಲಿನ ವೈವಿಧ್ಯತೆಗಳನ್ನು ಗಮನಿಸಿದಾಗ ಭಾರತವನ್ನು ಒಂದು ’ಉಪಖಂಡ’ ಎಂದು ಕರೆಯಬಹುದಾಗಿದೆ.

ಭಾರತ ದೇಶವು ಏಷ್ಯಾಖಂಡದ ದಕ್ಷಿಣ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ.

ಭಾರತ ಎಂಬ ಹೆಸರು ’ಭರತ’ ಎಂಬ ಚಕ್ರವರ್ತಿಯ ಹೆಸರಿನಿಂದ ಬಂದಿದೆ.

ಭಾರತವು ಸಂಪೂರ್ಣವಾಗಿ ಉತ್ತರಾರ್ಧಗೋಳದಲ್ಲಿದ್ದು, ಇದು ಉತ್ತರದಲ್ಲಿ ಅಗಲವಾಗಿದ್ದು ದಕ್ಷಿಣದ ಕಡೆಗೆ ಕಿರಿದಾಗಿ ತ್ರಿಕೋನಾಕೃತಿಯಲ್ಲಿ ಹಿಂದೂ ಮಹಾಸಾಗರದಲ್ಲಿ ಚಾಚಿಕೊಂಡಿದೆ.

ಭಾರತವು 32,87,263 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಭೂಕ್ಷೇತ್ರದ ದೃಷ್ಟಿಯಿಂದ ಇದು ಪ್ರಪಂಚದ ಏಳನೇಯ ಅತಿ ದೊಡ್ಡ ರಾಷ್ಟ್ರವಾಗಿದ್ದು, ಪ್ರಪಂಚದ ಭೂಕ್ಷೇತ್ರದ ಶೇ 2.4 ರಷ್ಟನ್ನು ಒಳಗೊಂಡಿದೆ.

ನಮ್ಮ ಭಾರತ ದೇಶದಲ್ಲಿ ಪ್ರಸ್ತುತ ಒಟ್ಟು 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ. "ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶ" (NCT - National Capital Territory) ಎಂದು ಕರೆಯಲಾಗಿದೆ.

ಭಾರತವು 2011 ರ ಜನಗಣತಿಯ ಪ್ರಕಾರ 121 ಕೋಟಿ ಜನಸಂಖ್ಯೆಯನ್ನು ಒಳಗೊಂಡಿದೆ. ಇದು ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ 17.5 ರಷ್ಟಿರುವುದು. ಪ್ರಪಂಚದಲ್ಲಿ ಭಾರತವು ಚೈನಾ ದೇಶದ ನಂತರ ಎರಡನೆಯ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವಾಗಿದೆ.

ಭಾರತವು 80 4 ಉತ್ತರ ಅಕ್ಷಾಂಶದಿಂದ 370 6 ಉತ್ತರ ಅಕ್ಷಾಂಶದವರೆಗೆ ಹರಡಿದೆ. ದಕ್ಷಿಣದ ಕನ್ಯಾಕುಮಾರಿ ಭೂಶಿರದಿಂದ ಉತ್ತರದ ಕಾಶ್ಮೀರದವೆರೆಗೆ 3,214 ಕಿ.ಮೀ ಉದ್ದವಾಗಿದೆ. ದ್ವೀಪಗಳನ್ನು ಪರಿಗಣಿಸಿದಾಗ ಗ್ರೇಟ್ ನಿಕೋಬಾರ್ ದ್ವೀಪದ "ಇಂದಿರಾ ಪಾಯಿಂಟ್" 60 45 ಉತ್ತರ ಅಕ್ಷಾಂಶದಲ್ಲಿದ್ದು ಭಾರತದ ಅತ್ಯಂತ ದಕ್ಷಿಣದ ಭಾಗವಾಗಿದೆ. 23 1⁄20 ಉತ್ತರ ಅಕ್ಷಾಂಶ (ಕರ್ಕಾಟಕ ಸಂಕ್ರಾಂತಿ ವೃತ್ತ) ಭಾರತದ ಮಧ್ಯಭಾಗದಲ್ಲಿ ಹಾಯ್ದು ಹೋಗುತ್ತದೆ.

ರೇಖಾಂಶದ ವಿಸ್ತರಣೆಯ ಪ್ರಕಾರ ಭಾರತವು 680 7 ಪೂರ್ವ ರೇಖಾಂಶದಿಂದ 970 25 ಪೂರ್ವ ರೇಖಾಂಶಗಳವರೆಗೆ ಹಬ್ಬಿದೆ. ಇದು 2933 ಕಿ.ಮೀ ಗಳಷ್ಟು ಪೂರ್ವ ಪಶ್ಚಿಮವಾಗಿ ಹಬ್ಬಿದೆ. ಅಲಹಾಬಾದ್ ನ ಹತ್ತಿರ ಹಾದುಹೋಗುವ 82 1⁄20 ಪೂರ್ವ ರೇಖಾಂಶವನ್ನು ಆಧರಿಸಿ ಭಾರತದ ವೇಳೆಯನ್ನು ನಿರ್ಧರಿಸಲಾಗುತ್ತಿದೆ. ಇದು ಗ್ರೀನ್ ವಿಚ್ ಕಾಲಮಾನಕ್ಕಿಂತ 5 ಗಂಟೆ 30 ನಿಮಿಷ ಮುಂದೆ ಇರುವುದು.

ಭಾರತವು ಒಂದು ಪರ್ಯಾಯ ದ್ವೀಪವಾಗಿದ್ದು ಭೂ ಮತ್ತು ಜಲ ಮೇರೆಗಳೆರಡನ್ನೂ ಒಳಗೊಂಡಿದೆ. ಇದು 1500 ಕಿ.ಮೀ ಭೂಗಡಿ ಹಾಗೂ 6100 ಕಿ.ಮೀ ಕರಾವಳಿಯನ್ನು ಹೊಂದಿದೆ.

ಭಾರತವು ಏಳು ರಾಷ್ಟ್ರಗಳೊಂದಿಗೆ ಭೂಗಡಿರೇಖೆಯನ್ನು ಹಂಚಿಕೊಂಡಿದೆ. ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ, ಉತ್ತರದಲ್ಲಿ ಚೈನಾ, ನೇಪಾಳ ಮತ್ತು ಭೂತಾನ, ಹಾಗೂ ಪೂರ್ವದಲ್ಲಿ ಮಯನ್ಮಾರ್ (ಬರ್ಮಾ) ಹಾಗೂ ಬಾಂಗ್ಲಾ ದೇಶಗಳೊಡನೆ ಭೂಗಡಿಯನ್ನು ಹೊಂದಿದೆ. ಜೊತೆಗೆ ಭಾರತದ ದಕ್ಷಿಣದಲ್ಲಿಯ ಶ್ರೀಲಂಕಾ ಹಾಗೂ ನೈರುತ್ಯದಲ್ಲಿರುವ ಮಾಲ್ಡೀವ್ಸ್ ದ್ವೀಪಗಳು ಭಾರತದ ನೆರೆಯ ರಾಷ್ಟ್ರಗಳಾಗಿವೆ.

ಜಗತ್ತಿನಲ್ಲಿ ಭಾರತದ ಸ್ಥಾನ


ಜಗತ್ತಿನ ದೇಶಗಳಲ್ಲಿ ಭಾರತವು ವಿಸ್ತೀರ್ಣದ ದೃಷ್ಟಿಯಿಂದ 7 ನೇ ಸ್ಥಾನದಲ್ಲಿದೆ.
1.ರಷ್ಯಾ
2.ಕೆನಡಾ
3.ಚೀನಾ
4.ಅಮೇರಿಕಾ
5.ಬ್ರೆಜಿಲ್
6.ಆಸ್ಟ್ರೇಲಿಯಾ
7.ಭಾರತ.

ಭಾರತವು ಉತ್ತರ - ದಕ್ಷಿಣವಾಗಿ 3214 ಕಿ.ಮೀ. ಉದ್ದವಿದೆ.

ಭಾರತ ದೇಶವು ಪೂರ್ವ - ಪಶ್ಚಿಮವಾಗಿ 2933 ಕಿ.ಮೀ ಅಗಲವಿದೆ.

ಭಾರತದ ಗಡಿ ಉದ್ದವು 15,200 ಕಿ.ಮೀಗಳು.

ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,514 ಕಿ.ಮೀ ಇದೆ.

ಭಾರತವು 12 ನಾಟಿಕಲ್ ಮೈಲಿ ಉದ್ದದ ಸಮುದ್ರವನ್ನು ಒಳಗೊಂಡಿದೆ.

ಭಾರತದ ತುತ್ತತುದಿಗಳು


ಭಾರತದ ಪೂರ್ವತುದಿ-ಅರುಣಾಚಲ ಪ್ರದೇಶ
ಪಶ್ಚಿಮ ತುದಿ-ಗುಜರಾತಿನ ಕಛ್
ಉತ್ತರದ ತುದಿ-ಜಮ್ಮು ಕಾಶ್ಮೀರದ ಸಿಯಾಚಿನ್
ದಕ್ಷಿಣದ ತುದಿ-ಕನ್ಯಾಕುಮಾರಿ(ಇಂದಿರಾಪಾಯಿಂಟ್)

ಭಾರತವನ್ನು ಸುತ್ತುವರೆದಿರುವ ಜಲ ಮತ್ತು ಭೂಪ್ರದೇಶಗಳು


ಭಾರತದ ಪೂರ್ವಕ್ಕೆ ಹಾಗೂ ಆಗ್ನೇಯಕ್ಕೆ - ಬಂಗಾಳಕೊಲ್ಲಿ
ಭಾರತದ ಪಶ್ಚಿಮಕ್ಕೆ ಹಾಗೂ ನೈರುತ್ಯಕ್ಕೆ - ಅರಬ್ಬೀ ಸಮುದ್ರ
ಭಾರತದ ದಕ್ಷಿಣಕ್ಕೆ - ಹಿಂದೂ ಮಹಾಸಾಗರ
ಭಾರತದ ಉತ್ತರಕ್ಕೆ - ಹಿಮಾಲಾಯ ಪರ್ವತ

ಪ್ರಮುಖ ಗಡಿ ರೇಖೆಗಳು ಮತ್ತು ರಾಷ್ಟ್ರಗಳ ನಡುವಿನ ಗಡಿ ರೇಖೆಯ ಉದ್ದ (ಕಿ.ಮೀ, ಗಳಲ್ಲಿ)


ಭಾರತ ಮತ್ತು ಪಾಕಿಸ್ತಾನ - ರಾಡ್ ಕ್ಲಿಪ್ ರೇಖೆ
ಭಾರತ ಮತ್ತು ಚೀನಾ - ಮ್ಯಾಕ್ ಮೋಹನ್ ರೇಖೆ
ಭಾರತ ಮತ್ತು ಶ್ರೀಲಂಕಾ - ಪಾಕ್ ಜಲಸಂಧಿ

ಪಾಕಿಸ್ತಾನ 3310
ಅಫಘಾನಿಸ್ತಾನ 80
ಚೀನಾ 3917
ನೇಪಾಳ 1752
ಭೂತಾನ್ 587
ಮಯನ್ಮಾರ್ 1458
ಬಾಂಗ್ಲಾದೇಶ 4096
ಒಟ್ಟು 15200

ಭಾರತದ ನೆರೆಹೊರೆಯ ರಾಷ್ಟ್ರಗಳು


ಪೂರ್ವಕ್ಕೆ ಬಾಂಗ್ಲಾದೇಶ ಮತ್ತು ಭೂತಾನ
ಈಶಾನ್ಯದಲ್ಲಿ ನೇಪಾಳ ಮತ್ತು ಟಿಬೇಟ್
ಉತ್ತರದಲ್ಲಿ ಚೀನಾ
ವಾಯುವ್ಯದಲ್ಲಿ ಪಾಕಿಸ್ತಾನ
ದಕ್ಷಿಣದಲ್ಲಿ ಶ್ರೀಲಂಕಾ
ನೈರುತ್ಯದಲ್ಲಿ ಮಾಲ್ಡೀವ್ಸ್