ಗ್ರಾಮ ಪಂಚಾಯತ ವ್ಯವಸ್ಥೆ
 
ಜಿಲ್ಲಾ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು
●.ಜಿಲ್ಲಾ ಪಂಚಾಯಿತಿ
1. ರಚನೆ: ಪ್ರತಿ ಜಿಲ್ಲೆಗೊಂದು ಜಿಲ್ಲಾ ಪಂಚಾಯಿತಿ.
2. ಸದಸ್ಯರು: 35,000-45,000ದ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು.ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ = 30,000,ಬೆಂಗಳೂರು ನಗರ ಜಿಲ್ಲೆ = 20,000, ಕೊಡಗು ಜಿಲ್ಲೆ =18,000ಕ್ಕೆ ಒಬ್ಬ ಸದಸ್ಯನಿರಬೇಕು.
● ಪ್ರತಿ ಜಿಲ್ಲಾ ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ಜಿಲ್ಲೆಯ ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿರುತ್ತಾರೆ.
● ಜಿಲ್ಲೆಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು ಸಹ ಸದಸ್ಯರಾಗಿರುತ್ತಾರೆ.
3. ಸದಸ್ಯರ ಮೀಸಲಾತಿ ಸ್ಥಾನಗಳು:
● ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).
● ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)
● ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.
● ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಕ್ಕಿಂತ ಕಡಿಮೆ ಇರಬಾರದು.
● ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.
4. ಮತದಾರರ ಪಟ್ಟಿಯನ್ನು ತಯಾರಿಸುವವರು:
ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಅಸಿಸ್ಟೆಂಟ್ ಕಮೀಷನರ್. ಮತ್ತು ರಾಜ್ಯ ವಿಧಾನ ಸಭೆಯ ಚುನಾವಣೆಗಾಗಿ ತಯಾರಿಸಲಾದ ಮತದಾರರ ಪಟ್ಟಿಯನ್ನೇ ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾರರ ಪಟ್ಟಿ ಎಂದು ಭಾವಿಸತಕ್ಕದ್ದು.
5. ಸದಸ್ಯನಾಗಲು ಅವಶ್ಯಕ ವಯಸ್ಸು: 21 ವರ್ಷ
ತಾಲ್ಲೂಕು ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು
●.ತಾಲ್ಲೂಕು ಪಂಚಾಯಿತಿ
1. ರಚನೆ: ಪ್ರತಿ ತಾಲ್ಲೂಕಿಗೊಂದು ತಾಲ್ಲೂಕು ಪಂಚಾಯಿತಿ.
2. ಸದಸ್ಯರು: 12,500-15,000ರ ನಡುವಿನ ಜನಸಂಖ್ಯೆಗೆ ಒಬ್ಬ ಸದಸ್ಯನಿರಬೇಕು. (1,00,000ಕ್ಕಿಂತ ಕಡಿಮೆ ಜನಸಂಖ್ಯೆಗೆ ಕನಿಷ್ಠ 11 ಜನ ಸದಸ್ಯರಿರಬೇಕು.)
● ಪ್ರತಿ ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಮಾತ್ರವಲ್ಲದೆ, ತಾಲ್ಲೂಕನ್ನು ಪ್ರತಿನಿಧಿಸುವ ಸಂಸತ್ತು (ಲೋಕಸಭೆ & ರಾಜ್ಯಸಭೆ), ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ತಾಲ್ಲೂಕು ಪಂಚಾಯಿತಿಯ ಸದಸ್ಯರಾಗಿರುತ್ತಾರೆ.
● ಒಂದು ವರ್ಷದ ಅವಧಿಗೆ, ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಯ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ. ( ಈ ಪೈಕಿ ಒಬ್ಬರು ಮಹಿಳೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಂದ ಒಬ್ಬೊಬ್ಬರಂತೆ)
3. ಸದಸ್ಯರ ಮೀಸಲಾತಿ ಸ್ಥಾನಗಳು:
● ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).
● ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)
● ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.
● ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.
● ರಾಜ್ಯ ಚುನಾವಣಾ ಆಯೋಗ ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.
4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ಮತ್ತು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.
5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ
ಗ್ರಾಮ ಪಂಚಾಯಿತಿ ರಚನೆ ಮತ್ತು ಇತರೆ ಮಹತ್ವದ ಅಂಶಗಳು
●. ಗ್ರಾಮ ಪಂಚಾಯಿತಿ :
1. ರಚನೆ: 5000-7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ. ಮಲೆನಾಡು ಹಾಗೂ ಗುಡ್ಡಾಗಾಡು ಪ್ರದೇಶಗಳಲ್ಲಿ, ಅಂದರೆ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಶಿವಮೊಗ್ಗ, ಉಡುಪಿ, ಹಾವೇರಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 2500 ಜನಸಂಖ್ಯೆಗೆ ಕಡಿಮೆಯಿಲ್ಲದಂತೆ ಒಂದು ಗ್ರಾಮ ಪಂಚಾಯಿತಿಯ ರಚಿಸಬಹುದು.
2. ಸದಸ್ಯರು: ಪ್ರತಿ 400 ಜನಸಂಖ್ಯೆಗೆ ಒಬ್ಬ ಸದಸ್ಯನು.
3. ಸದಸ್ಯರ ಮೀಸಲಾತಿ ಸ್ಥಾನಗಳು:
● ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಅದೇ ಅನುಪಾತದಲ್ಲಿರಬೇಕು. (ಕನಿಷ್ಠ ಅ,ಜಾತಿ ಮತ್ತು ಅ.ಪಂಗಡದವರಿಗೆ ಒಂದೊಂದು ಸ್ಥಾನ ಮೀಸಲಿರಬೇಕು).
● ಹಿಂದುಳಿದ ವರ್ಗದವರಿಗೆ 1/3 ಸ್ಥಾನಗಳು. (80% A ಪ್ರವರ್ಗ ಮತ್ತು 20% B ಪ್ರವರ್ಗ)
● ಅನುಸೂಚಿತ ಜಾತಿ + ಅನುಸೂಚಿತ ಪಂಗಡ + ಹಿಂದುಳಿದ ವರ್ಗ = 50% ಮೀರುವಂತಿಲ್ಲ.
● ಮೀಸಲಿಟ್ಟಿರುವ ಸ್ಥಾನಗಳಲ್ಲಿ ಮಹಿಳೆಯರ ಸ್ಥಾನಗಳ ಪ್ರಮಾಣ 50% ಗಿಂತ ಕಡಿಮೆ ಇರಬಾರದು.
● ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಡೆಪ್ಯಟಿ ಕಮೀಷನರ್ರವರು ಮೀಸಲಾತಿಗಳನ್ನು ಮೀಸಲಿರಿಸತಕ್ಕದ್ದು.
4. ಮತದಾರರ ಪಟ್ಟಿಯನ್ನು ತಯಾರಿಸುವವರು: ಸಂಬಂಧಪಟ್ಟ ತಹಶೀಲ್ದಾರನು ತಯಾರಿಸುತ್ತಾರೆ ಮತ್ತು ಮತದಾರ ಪಟ್ಟಿಯ ಒಂದು ಪ್ರತಿಯನ್ನು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಇಟ್ಟುಕೊಳ್ಳತಕ್ಕದ್ದು.
5. ಸದಸ್ಯನಾಗಲು ಅವಶ್ಯಕ ವಯಸ್ಸು : 21 ವರ್ಷ
Contributed By : Spardhaloka