ಹಸಿರು ಮನೆ ಪರಿಣಾಮ(Green House Effect)

 

• ಶೀತವಲಯ ಪ್ರದೇಶಗಳಲ್ಲಿ ವಿಶೇಷವಾಗಿ ಶೀತ ಕಾಲದಲ್ಲಿ, ಸೌರವಿಕಿರಣದ ಅಭಾವದಿಂದ ಸಸ್ಯ (ಹೂವು ಮತ್ತು ತರಕಾರಿ) ಗಳನ್ನು ಬೆಳೆಯಲು ಗಾಜಿನ ಹಸಿರು ಮನೆಯನ್ನು ಉಪಯೋಗಿಸುತ್ತಾರೆ.
• ಸೂರ್ಯನ ಕಿರಣಗಳು ಕಿರು ಅಲೆರೂಪದಲ್ಲಿ ಗಾಜಿನ ಮನೆ ಒಳ ಹೊಕ್ಕು ನೆಲವನ್ನು ಮುಟ್ಟುತ್ತವೆ ಮತ್ತು ಅಲ್ಲಿಯ ನೆಲದ ಉಷ್ಣವು ಹೆಚ್ಚಾಗಿ ದೀರ್ಘ ಅಲೆರೂಪವಾಗಿ ಹೊರಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಗಾಜು ಕಿರು ಅಲೆಗಳನ್ನು ಪ್ರವೇಶಿಸಲು ಬಿಟ್ಟು ದೀರ್ಘ ಅಲೆಗಳನ್ನು ಪಡೆಯುತ್ತದೆ. ಇದರಿಂದ ವಾಯುಮಂಡಲದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿರುತ್ತದೆ.
• ಉದಾ: ನ್ಯೂಯೋರ್ಕ್ ನಗರದಲ್ಲಿ ಹಸಿರು ಗಾಜಿನ ಮನೆಯಲ್ಲಿ ಮರಗಳನ್ನು ಬೆಳೆಯುತ್ತಾರೆ.

ಹಸಿರು ಮನೆ ಅನಿಲಗಳು ಮತ್ತು ಅವುಗಳ ಪರಿಣಾಮಗಳು


1. ಸಾರಜನಕದ ಆಕ್ಸೈಡ್ : ಈ ಅನಿಲವು ಮೋಟಾರು, ವಾಹನ, ವಿದ್ಯುತ್ ಸ್ಥಾವರ, ಭಟ್ಟಿಗಳಲ್ಲಿ ಇಂಧನ ಉರಿಯುವುದರಿಂದ ಹಾಗೂ ಕಾಡ್ಗಿಚ್ಚುಗಳಿಂದ ಉತ್ಪನ್ನವಾಗುತ್ತದೆ. ಇದರ ಪ್ರಮಾಣ ವಾತಾವರಣದಲ್ಲಿ 5 ಪಿ.ಪಿ.ಎಂ(parts per million). ನಷ್ಟಿದ್ದರೆ ಮನುಷ್ಯನು ತಡೆದುಕೊಳ್ಳುತ್ತಾನೆ. ಆದರೆ ಅದಕ್ಕಿಂತ ಹೆಚ್ಚಿಗಿದ್ದರೆ ಶ್ವಾಸಕೋಶದ ರೋಗಗಳುಂಟಾಗುತ್ತವೆ.
2. ಇಂಗಾಲ ಡೈ ಆಕ್ಸೈಡ್ : ಮನುಷ್ಯನು ಉಸಿರಾಡುವುದರಿಂದಲೂ ಹಿಡಿದು ಪಳೆಯುಳಿಕೆ, ಇಂಧನ ಮತ್ತು ಸಸ್ಯಗಳನಾಶದಿಂದ ಇದರ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗಿ ಉಷ್ಣತೆ ಹೆಚ್ಚಿ ಧ್ರುವ ಪ್ರದೇಶಗಳಲ್ಲಿ ಹಿಮಕರಗಿ ಆ ನೀರು ಸಮುದ್ರ ಮಟ್ಟವನ್ನು ಹೆಚ್ಚಿಸುತ್ತದೆ.
3. ಇಂಗಾಲದ ಮೊನಾಕ್ಸೈಡ್ : ಇಂಗಾಲವು ವಾತಾವರಣದಲ್ಲಿ ಆಮ್ಲಜನಕದ ಕೊರತೆಯಿಂದ ದಹಿಸಿದಾಗ ಇಂಗಾಲದ ಮೊನಾಸೈಡ್ ಉಂಟಾಗುತ್ತದೆ. ಇದು ರಕ್ತದ ಹಿಮೊಗ್ಲೋಬಿನ್ (ಕೆಂಪುರಕ್ತ ಕಣಗಳಲ್ಲಿನ ವರ್ಣ ದ್ರವ್ಯ) ನೊಂದಿಗೆ ಸೇರಿ ಆಮ್ಲಜನಕವನ್ನು ಸಾಗಿಸುವ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದ ತಲೆನೋವು, ವಾಕರಿಕೆ ದಮ್ಮು ಕೆಮ್ಮು, ಇತ್ಯಾದಿ ರೋಗಗಳು ಬರುತ್ತದೆ.
4. ಓಜೋನ್ ಅನಿಲ : ವಾಯುಮಂಡಲದಲ್ಲಿನ ವಿವಿಧ ಅನಿಲಗಳ ರಾಸಾಯನಿಕ ಪ್ರಕ್ರಿಯೆಗಳಿಂದ ಓಜೋನ್ ಅನಿಲ ಉತ್ಪತ್ತಿಯಾಗುತ್ತದೆ. ಇದರಿಂದ ಉಬ್ಬಸ, ಕಣ್ಣುರಿ, ರಕ್ತಸ್ರಾವ ಉಂಟಾಗುತ್ತದೆ.
5. ಗಂಧಕದ ಡೈ ಆಕ್ಸೈಡ್ : ಇದು ಗಂಧಕಯುಕ್ತ ಇಂಧನಗಳ ದಹನದಿಂದ, ಜ್ವಾಲಾಮುಖಿ ಅನಿಲ, ಕೈಗಾರಿಕೆಗಳ ಹೊಗೆ ಕೊಳವೆ ಅನಿಲ, ಲೋಹಕರಗಿಸುವ ಕಾರ್ಖಾನೆ (ಕಬ್ಬಿಣ, ತಾಮ್ರ, ಸತುವಿನ ಸಲ್ಛೈಡ್) ಗಳಂದ ಗಂಧಕದ ಡೈ ಆಕ್ಸೈಡ್ ಬಿಡುಗಡೆ ಆಗುತ್ತದೆ. ಶ್ವಾಸಕೋಶದ ತೊಂದರೆ, ತಾಜಮಹಲ್ ನಂತರ ವಿಗ್ರಹಗಳು ತನ್ನ ಹೊಳಪನ್ನು ಕಳೆದುಕೊಳ್ಳುತ್ತಿವೆ.
6. ಜಲಜನಕದ ಸಲ್ಛೈಟ್ : ಇದು ವಿಷಕಾರಿ ಅನಿಲ, ವನಸ್ಪತಿ, ಪ್ರಾಣಿ ಜ್ವಾಲಾಮುಖಿ ಹೊಸ ಚಿಮ್ಮುವಿಕೆಯಿಂದ ಉತ್ಪತ್ತಿಯಾಗುತ್ತದೆ. ಇದರಿಂದ ಮಾನವನಿಗೆ ಶ್ವಾಸಕೋಶದ ತೊಂದರೆ, ಅತಿಸಾರ, ನ್ಯುಮೋನಿಯಾ, ನಿದ್ರೆ ಬಾರದಿರುವುದು,
7. ಕ್ಲೊರೊಫ್ಲೋರೋ ಕಾರ್ಬನ್ಗಳು : ಇದು ಕ್ಲೋರಿನ್ಫ್ಲೋರಿನ್ ಮತ್ತು ಕಾರ್ಬನಗಳಿಂದ ಕೂಡಿದೆ. ನಾವು ರೆಫ್ರಿಜರೇಟರ್, ವ್ಯಾಕ್ಯೂಮ್ ಕ್ಲೀನರ್ ಹವಾನಿಯಂತ್ರಕಗಳನ್ನು ಉಪಯೋಗಿಸುವುದರಿಂದ ಇದು ಬಿಡುಗಡೆ ಆಗುತ್ತದೆ. ಇದು ಮನುಷ್ಯನ ಶ್ವಾಸಕೋಶದ ತೊಂದರೆ ಜೊತೆಗೆ ಓಜೋನ್ ರಂಧ್ರವಾಗಲು ಕಾರಣವಾಗಿದೆ.
8. ಮಿಥೇನ್ : ಇದು ಜೌಗುಭೂಮಿ, ಭತ್ತದ ಗದ್ದೆ, ಸಾಕು ಪ್ರಾಣಿಗಳು, ಮಿಥೇನ್ನ ಮೂಲಗಳಾಗಿವೆ. ಇದರಲ್ಲಿ ಜೀವರಾಶಿ ದಹನ, ಕಲ್ಲಿದ್ದಲು, ಗಣಿಗಾರಿಕೆಯಿಂದ ಬಿಡುಗಡೆ ಆಗುತ್ತದೆ. ಇದು ಭೂಮಂಡಲ ಶೇ 38 ರಷ್ಟು ತಾಪಮಾನಕ್ಕೆ ಕಾರಣವಾಗಿದೆ. ಮುಂದಿನ ಯುಗಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತದೆ.