ರಾಜ್ಯ ಮಂತ್ರಿಮಂಡಲ

 

* ಕೇಂದ್ರದ ಮಾದರಿಯಂತೆ ದೇಶದ ಎಲ್ಲಾ ರಾಜ್ಯಗಳಿಗೆ ಮಂತ್ರಿಮಂಡಲ ಹೊಂದುವ ಅವಕಾಶ ನೀಡಲಾಗಿದೆ.
* 163 ನೇ ವಿಧಿಯು ರಾಜ್ಯಪಾಲರಿಗೆ ತಮ್ಮ ಕೆಲಸ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ನಾಯಕತ್ವದ ಮಂತ್ರಿಮಂಡಲ ಸಹಾಯ ಮತ್ತು ಸಲಹೆ ನೀಡಬೇಕೆಂದು ತಿಳಿಸುತ್ತದೆ.
* ರಾಜ್ಯ ಸರ್ಕಾರದ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಗಳು ರಾಜ್ಯಪಾಲರ ಹೆಸರಿನಲ್ಲಿ ನಡೆಯುತ್ತವೆ.
* ರಾಜ್ಯ ಮಂತ್ರಿ ಮಂಡಲವು ನೈಜ ಕಾರ್ಯಾಂಗವಾಗಿದೆ.
* ರಾಜ್ಯ ಮಂತ್ರಿಮಂಡಲದ ಗಾತ್ರ ವಿಧಾನಸಭೆಯ ಸದಸ್ಯರ ಒಟ್ಟು ಸಂಖ್ಯೆಯ ಶೇ. 15 ರಷ್ಟು ಮೀರುವಂತಿಲ್ಲ. ಸಂವಿಧಾನಕ್ಕೆ 91ನೇ ತಿದ್ದುಪಡಿ ತಂದು ಈ ನಿಯಮ ರಚಿಸಲಾಗಿದೆ.
* ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಇವರ ಸಲಹೆ ಮೇರೆಗೆ ಇತರೆ ಮಂತ್ರಿಗಳನ್ನು ನೇಮಿಸುತ್ತಾರೆ. ಜೊತೆಗೆ ಪ್ರಮಾಣ ವಚನ ಬೋಧಿಸುತ್ತಾರೆ.

ಮಂತ್ರಿಮಂಡಲದಲ್ಲಿ 3 ರೀತಿಯ ಸಚಿವರಿರುತ್ತಾರೆ


1. ಕ್ಯಾಬಿನೆಟ್ ಸಚಿವರು :-ಇವರು ರಾಜ್ಯದ ಪ್ರಮುಖ ಇಲಾಖೆಗಳ ಮುಖ್ಯಸ್ಥರಾಗಿರುತ್ತಾರೆ. ಸ್ವತಂತ್ರ ಖಾತೆಗಳನ್ನು ಹೊಂದಿರುತ್ತಾರೆ. ಉದಾ: ಹಣಕಾಸು, ಗೃಹ ಇಲಾಖೆ, ಶಿಕ್ಷಣ, ಲೋಕೋಪಯೋಗಿ, ನೀರಾವರಿ, ಅರಣ್ಯ, ಸಹಕಾರ ಮೊದಲಾದವುಗಳು.
2. ರಾಜ್ಯ ಸಚಿವರು :- ಇವರು ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಸಹಾಯಕ ಸಚಿವರಾಗಿ ಕೆಲಸ ನಿರ್ವಹಿಸುತ್ತಾರೆ.
3. ಸಹಾಯಕ ಸಚಿವರು :- ಇವರು ಕ್ಯಾಬಿನೆಟ್ ಮತ್ತು ರಾಜ್ಯ ಸಚಿವರ ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ.

ಅಧಿಕಾರ ಮತ್ತು ಕಾರ್ಯಗಳು


1. ಶಾಸನೀಯ ಕಾರ್ಯಗಳು :- ಶಾಸನಗಳನ್ನು ರೂಪಿಸಿ ವಿಧಾನ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುವುದು ಮಂತ್ರಿಮಂಡಲದ ಪ್ರಮುಖ ಕಾರ್ಯವಾಗಿದೆ.
2. ಕಾರ್ಯಾಂಗೀಯ ಕಾರ್ಯಗಳು :- ಮಂತ್ರಿ ಮಂಡಲವು ರಾಜ್ಯಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳು, ಸರ್ಕಾರದ ಕಾರ್ಯಕ್ರಮಗಳು, ನೀತಿಗಳನ್ನು ನಾಗರೀಕ ಸೇವಾ ವರ್ಗದ ಮೂಲಕ ಜಾರಿಗೆ ತಂದು ಆಡಳಿತದಲ್ಲಿ ದಕ್ಷತೆ ಮೂಡಿಸಿ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತದೆ.
3. ಹಣಕಾಸಿನ ಕಾರ್ಯಗಳು :- ಮಂತ್ರಿಮಂಡಲವು ರಾಜ್ಯದ ಹಣಕಾಸು ನೀತಿಯನ್ನು ರೂಪಿಸಿ, ನಿಯಂತ್ರಿಸಿ, ವಾರ್ಷಿಕ ಆಯ-ವ್ಯಯ ಪಟ್ಟಿಯನ್ನು ಸಿದ್ದಪಡಿಸಿ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯುತ್ತದೆ. ಅಂದರೆ ರಾಜ್ಯದ ಹಣಕಾಸಿಗೆ ಸಂಬಂಧಿಸಿದ ಸಂಪೂರ್ಣ ಅಧಿಕಾರವಿರುತ್ತದೆ.
4. ನೇಮಕಾತಿ ಅಧಿಕಾರಗಳು:- ರಾಜ್ಯ ಮಂತ್ರಿಮಂಡಲವು ಉನ್ನತ ಹುದ್ದೆಗಳಾದ ರಾಜ್ಯ ಲೋಕಸೇವಾ ಆಯೋಗ, ಯೋಜನಾ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಅಲ್ಪಸಂಖ್ಯಾತರ ಆಯೋಗ, ಮೊದಲಾದ ಆಯೋಗಗಳ ಅಧ್ಯಕ್ಷ ಮತ್ತು ಸದಸ್ಯರುಗಳ ನೇಮಕ, ಅಡ್ವೋಕೇಟ್ ಜನರಲ್. ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ನೇಮಿಸಲು ರಾಜ್ಯಪಾಲರಿಗೆ ಸಲಹೆ ನೀಡುವ ಅಧಿಕಾರವಿರುತ್ತದೆ.