ಆಹಾರ
 
• ಅಗತ್ಯವಿರುವ ಪೋಷಕ ಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಹೊಂದಿರುವ ಆಹಾರವನ್ನು ಸಂತುಲಿತ ಆಹಾರ (balanced diet) ಎನ್ನುವರು.
• ಆರೋಗ್ಯಕರ ಆಹಾರವು ಕಾರ್ಬೋ ಹೈಡ್ರೇಟಗಳು, ಪ್ರೋಟ್ರೀನ್ಗಳು, ಜೀವಸತ್ವಗಳು,ನೀರು, ಲಿಪಿಡ್ಗಳು, ವಿಟಮಿನ್ಗಳು, ಖನಿಜಗಳು ಮತ್ತು ನಾರು ಪದಾರ್ಥಗಳನ್ನು ಒಳಗೊಂಡಿರುತ್ತದೆ.
1) ಕಾರ್ಬೋಹೈಡ್ರೇಟಗಳು
• ಇವುಗಳನ್ನು ಶರ್ಕರ ಪಿಷ್ಟಗಳು,ಪಿಷ್ಟಗಳು, ಸಕ್ಕರೆಗಳು ಎಂದು ಸಹ ಕರೆಯಲಾಗುತ್ತದೆ.
• ಇವು ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ಗಳಿಂದ ಕೂಡಿವೆ.
• ದೇಹದಲ್ಲಿ ಬಿಡುಗಡೆಯಾಗುವ ಬಹುಪಾಲು ಶಕ್ತಿಯು ಕಾರ್ಬೋಹೈಡ್ರೇಟ್ಗಳಿಂದ ಬರುತ್ತದೆ.
ವಿಧಗಳು
ಕಾರ್ಬೋಹೈಡ್ರೇಟಗಳಲ್ಲಿ 3 ವಿಧಗಳಿವೆ.
1. ಮೋನೊಸ್ಯಾಕರೈಡ್ ಗಳು
2. ಒಲಿಗೋ ಸ್ಯಾಕರೈಡ್ ಗಳು
3. ಪಾಲಿ ಸ್ಯಾಕರೈಡ್ ಗಳು
1. ಮೋನೊಸ್ಯಾಕರೈಡ್ ಗಳು
• ಗ್ಲೂಕೋಸ್ ಅತ್ಯಂತ ಸರಳವಾದ ಸಕ್ಕರೆಯ ಅಣು ಆಗಿದೆ.
• ಇವುಗಳಲ್ಲಿ ಇಂಗಾಲದ ಪರಮಾಣುಗಳು 3 ಅಥವಾ ಮೂರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.. ಗ್ಲೂಕೋಸ್ ಮತ್ತು ಫ್ರಕ್ಟೋಸ್ಗಳನ್ನು ಮೋನೋಸಾಕರೈಡ್ಗಳು ಎನ್ನುವರು.
• ಸರಳ ಸಕ್ಕರೆಯ ಒಂದೇ ಅಣುವನ್ನು ಹೊಂದಿರುವ ಕಾರ್ಬೋಹೈಡ್ರೇಟ್ಗಳನ್ನು ಮೋನೋಸಾಕರೈಡ್ಗಳು ಎಂದು ಕರೆಯಲಾಗುತ್ತದೆ. ಅವುಗಳು ರುಚಿಯಲ್ಲಿ ಸಿಹಿಯಾಗಿದ್ದು ನೀರಿನಲ್ಲಿ ಸುಲಭವಾಗಿ ಬೆರಕೆಯಾಗುತ್ತವೆ.
• ಉದಾ:ರೈಬೋಸ್,ಗ್ಲುಕೋಸ್,ಗ್ಯಾಲಕ್ಟೋಸ್, ಇತ್ಯಾದಿ.
2. ಒಲಿಗೋ ಸ್ಯಾಕರೈಡ್ ಗಳು
• ಸಾಮಾನ್ಯವಾಗಿ ಎರಡರಿಂದ ಹತ್ತು ಮೊನೋಸಾಕರೈಡ್ ಘಟಕಗಳಿಂದ ಕೂಡಿ ಒಲಿಗೋ ಸಾಕರೈಡ್ಗಳು ಆಗಿರುತ್ತವೆ.
• ಲ್ಯಾಕ್ಟೋಸ್,ಸುಕ್ರೋಸ್ ಮತ್ತು ಮಾಲ್ಟೋಸ್ ಒಲಿಗೋ ಸಾಕರೈಡ್ಗಳಿಗೆ ಉದಾಹರಣೆಗಳಾಗಿವೆ.
3. ಪಾಲಿ ಸ್ಯಾಕರೈಡ್ ಗಳು
• ಪಾಲಿ ಸ್ಯಾಕರೈಡ್ ಗಳು ಅನೇಕ ಮೋನೋಸಾಕರೈಡ್ ಘಟಕಗಳಿಂದ(ಹತ್ತಕ್ಕಿಂತ ಹೆಚ್ಚು) ಆಗಿರುತ್ತದೆ.
• ಕೋಶಭಿತ್ತಿಯು ಸೆಲ್ಯುಲೋಸ್ ನಿಂದ ರಚಿಸಲ್ಪಟ್ಟಿರುತ್ತದೆ. ಆದ್ದರಿಂದ ಇದನ್ನು ಪಾಲಿ ಸ್ಯಾಕರೈಡ್ ಗಳು ಎನ್ನುವರು.
• ಮಾನವರೂ ಸೇರಿದಂತೆ ಪ್ರಾಣಿಗಳಲ್ಲಿ ಗ್ಲೈಕೋಜನ್ ಎಂಬ ಪಾಲಿಸಾಕರೈಡ್ ಕಂಡುಬರುತ್ತದೆ. ನಮ್ಮ ದೇಹದಲ್ಲಿ ಗ್ಲೂಕೋಸ್ನ ಪ್ರಮಾಣ ಅಧಿಕವಾದಾಗ, ಅದರ ಸ್ವಲ್ಪ ಭಾಗವು ಗ್ಲೈಕೋಜನ್ ಆಗಿ ಪರಿವರ್ತನೆಗೊಳ್ಳುತ್ತದೆ.
• ಉದಾ:ಪಿಷ್ಟ,ಗ್ಲೈಕೋಜನ್,ಸೆಲ್ಲುಲೋಸ್
ಕಾರ್ಬೋಹೈಡ್ರೇಟ್‍ಗಳ ಪ್ರಾಮುಖ್ಯತೆ
1. ನಮ್ಮ ಎಲ್ಲಾ ಚಟುವಟಿಕೆಗಳಿಗೂ ಗ್ಲೂಕೋಸ್ ಶಕ್ತಿಯ ಪ್ರಧಾನ ಮೂಲವಾಗಿದೆ.
2. ಪಿಷ್ಟ ಮತ್ತು ಗ್ಲೈಕೋಜನ್ಗಳು ಶಕ್ತಿ ಸಂಗ್ರಾಹಕಗಳಾಗಿ ಕೆಲಸ ಮಾಡುತ್ತವೆ.
4. ಸೆಲ್ಯುಲೋಸ್, ಲಿಗ್ನಿನ್ ಮತ್ತು ಪೆಕ್ಟಿನ್ನಂತಹ ಪಾಲಿಸಾಕರೈಡ್ಗಳು ಸಸ್ಯಗಳಲ್ಲಿದ್ದು ನಮ್ಮ ಆಹಾರದಲ್ಲಿ ನಾರು ಪದಾರ್ಥಗಳಾಗಿ ಅವಶ್ಯಕವಾಗಿವೆ.
2) ಪ್ರೋಟಿನ್ಗಳು
• ಪ್ರೊಟೀನ್ ಗಳು ಸಾವಯವ ಸಂಯುಕ್ತಗಳಾಗಿದ್ದು, ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿವೆ. ಅಮೈನೋ ಆಮ್ಲಗಳು ಕಾರ್ಬನ್, ಹೈಡ್ರೊಜನ್, ಆಕ್ಸಿಜನ್ ಮತ್ತು ನೈಟ್ರೊಜನ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ.
• ಅಮೈನೋ ಆಮ್ಲಗಳ ವಿಂಗಡಣೆ
1. ಅವಶ್ಯಕ ಅಮೈನೋ ಆಮ್ಲಗಳು
• ಇವು ದೇಹದಲ್ಲಿ ಉತ್ಪಾದನೆಗೊಳ್ಳುವುದಿಲ್ಲ.
• ಆದರೆ ಇವು ದೇಹದ ಬೆಳವಣಿಗೆ ಮತ್ತು ಕಾರ್ಯ ನಿರ್ವಹಣೆಗೆ ಅಗತ್ಯವಾಗಿವೆ
• ಆದ್ದರಿಂದ ಇವುಗಳನ್ನು ನಮ್ಮ ಆಹಾರದ ಭಾಗವಾಗಿ ಸೇವಿಸಬೇಕಾಗುತ್ತದೆ.
• ಸೋಯಾಬೀನ್, ಬೇಳೆಕಾಳುಗಳು, ಮಾಂಸ, ಮತ್ತು ಹಾಲು ಇತ್ಯಾದಿಗಳಲ್ಲಿ ಅವಶ್ಯಕ ಅಮೈನೋ ಆಮ್ಲಗಳು ಇರುತ್ತವೆ.
2. ಅಗತ್ಯವಿಲ್ಲದ ಅಮೈನೋ ಆಮ್ಲಗಳು
• ಇವು ನಮ್ಮ ದೇಹದಲ್ಲಿಯೇ ಉತ್ಪತ್ತಿಯಾಗುತ್ತವೆ.
• ಉದಾಹರಣೆಗೆ: ಗ್ಲೈಸಿನ್,ಥೈರೋಸಿನ್,ಅಲನೈನ್ ಮತ್ತು ಸೆರಿನ್.
ಪ್ರೊಟೀನ್ ಗಳ ಪ್ರಾಮುಖ್ಯತೆ
1. ಕೋಶಪೊರೆ,ಉಗುರು, ಮೂಳೆಗಳು , ಸ್ನಾಯುರಜ್ಜು(tendons) ಮತ್ತು ಸ್ನಾಯುಗಳು ಇತ್ಯಾದಿಗಳಲ್ಲಿ ಇರುತ್ತವೆ.
2. ಜೈವಿಕ ಕ್ರಿಯೆಗಳನ್ನು ನಿಯಂತ್ರಿಸುತ್ತವೆ.
3. ದೇಹದಲ್ಲಿನ ರಾಸಾಯನಿಕ ಕ್ರಿಯೆಗಳ ವೇಗವನ್ನು ಹೆಚ್ಚಿಸುತ್ತವೆ.
4. ಇವು ವಸ್ತುಗಳ ಸಾಗಾಣಿಕೆಗೆ ಸಹಾಯ ಮಾಡುತ್ತವೆ. ಉದಾಹರಣೆಗೆ, ಹಿಮೋಗ್ಲೋಬಿನ್ ಆಕ್ಸಿಜನ್ಅನ್ನು ಸಾಗಾಣಿಕೆ ಮಾಡುತ್ತದೆ.
5. ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತವೆ.
3) ಲಿಪಿಡ್‍ಗಳು
• ಲಿಪಿಡ್ಗಳು ಕಾರ್ಬನ್, ಹೈಡ್ರೊಜನ್ ಮತ್ತು ಆಕ್ಸಿಜನ್ಗಳಿಂದಾಗಿರುತ್ತವೆ. ಆದರೆ, ಇವು ಕಾರ್ಬೋಹೈಡ್ರೇಟ್ಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಹೊಂದಿರುತ್ತವೆ.
• ಕೊಬ್ಬಿನ ಆಮ್ಲಗಳು ಅಣುರಚನೆಯಲ್ಲಿ ಯಾವುದೇ ದ್ವಿಬಂಧಗಳನ್ನು ಹೊಂದಿಲ್ಲದೆ ಸಂತೃಪ್ತ (saturated)ವಾಗಿರಬಹುದು ಅಥವಾ ಒಂದು ಅಥವಾ ಹೆಚ್ಚು ದ್ವಿಬಂಧಗಳನ್ನು ಹೊಂದಿದ್ದು ಅಸಂತೃಪ್ತ(unsaturated)ವಾಗಿರಬಹುದು.
• ಕೊಬ್ಬು ಮತ್ತು ಎಣ್ಣೆಗಳು, ಕೊಬ್ಬಿನ ಆಮ್ಲಗಳು ಮತ್ತು ಗ್ಲಿಸರಾಲ್ಗಳಿಂದ ರಚಿತಗೊಂಡು ಸರಳ ಲಿಪಿಡ್ಗಳಾಗಿವೆ. ಲಿಪಿಡ್ಗಳು, ಗ್ಲೂಕೋಸ್ ಮತ್ತು ಪ್ರೊಟೀನ್ ನಂತಹ ಬೇರೆ ವರ್ಗಗಳೊಂದಿಗೆ ಸಂಯೋಜನೆಗೊಂಡಾಗ ಸಂಯುಕ್ತ ಲಿಪಿಡ್ಗಳು ಉಂಟಾಗುತ್ತವೆ.
ಲಿಪಿಡ್‍ಗಳ ಪ್ರಾಮುಖ್ಯತೆ
1. ದೇಹಕ್ಕೆ ಶಕ್ತಿಯನ್ನು ನೀಡುತ್ತವೆ.
2. ದೇಹದ ತಾಪವನ್ನು ಸಮಸ್ಥಿತಿಯಲ್ಲಿಡುತ್ತವೆ.
3. ಕೋಶ ಪೊರೆಯ ಭಾಗವಾಗಿರುತ್ತವೆ.
4) ನಾರಿನಂಶ
• ಆಹಾರದಲ್ಲಿ ನಾರಿನಂಶವು ಇರುವುದು ಬಹಳ ಮುಖ್ಯ. ಯಾಕೆಂದರೆ ಆಹಾರವು ಪಚನವಾದಾಗ ಆಹಾರದಲ್ಲಿರುವ ನಾರಿನಂಶವು ಮಲಬದ್ಧತೆಯನ್ನು ತಡೆಯುತ್ತದೆ.
• ಸಿರಿಧಾನ್ಯಗಳಾದ ರಾಗಿ, ಸಜ್ಜೆ, ನವಣೆ,ಬಾಳೆಹಣ್ಣು ಮತ್ತು ಹಸಿರು ತರಕಾರಿಗಳಲ್ಲಿ ನಾರಿನಂಶವು ಹೆಚ್ಚಿದ್ದು, ಪಚನ ಕ್ರಿಯೆಗೆ ಸಹಕರಿಯಾಗಿ ಮಲಬದ್ಧತೆಯನ್ನು ನಿವಾರಿಸುತ್ತವೆ.
5) ಖನಿಜಾಂಶಗಳು
1. ಕ್ಯಾಲ್ಸಿಯಂ.
• ಮೂಳೆ ಹಾಗೂ ಹಲ್ಲುಗಳ ಬೆಳವಣಿಗೆಗೆ ಸ್ನಾಯುಗಳ ಕಾರ್ಯನಿರ್ವಹಣೆಗೆ ಹೃದಯ ಹಾಗೂ ನರಗಳಿಗೆ, ರಕ್ತ ಹೆಪ್ಪುಗಟ್ಟುವ ಕ್ರಿಯೆಗೆ ಹಾಗೂ ನೋವುಗಳನ್ನು ಕಡಿಮೆ ಮಾಡಲು ಇದು ಅವಶ್ಯಕ.
2. ಸೋಡಿಯಂ
• ರಕ್ತದ ಒತ್ತಡದ ನಿಯಂತ್ರಣ, ಮಾಂಸಖಂಡಗಳು ಮತ್ತು ನರಗಳ ಕಾರ್ಯವನ್ನು ಹತೋಟಿಯಲ್ಲಿಡುತ್ತದೆ
3. ಅಯೋಡಿನ್
• ಥೈರಾಯ್ಡ್ ಗ್ರಂಥಿಯು ಥೈರಾಕ್ಸಿನ್ ಸ್ರವಿಸಲು ಸಹಾಯಕವಾಗಿದೆ. ಇದು ಗಾಯಿಟರ್ ರೋಗವನ್ನು ತಡೆಗಟ್ಟುತ್ತದೆ.
4. ಪೊಟ್ಯಾಸಿಯಂ
• ಎಂಬ ಖನಿಜಾಂಶವು ದೇಹದ ದ್ರವವನ್ನು ಸಮತೋಲನದಲ್ಲಿ ಇಡುತ್ತದೆ. ನರಗಳ ಹಾಗೂ ಸ್ನಾಯುಗಳ ಕಾರ್ಯಚಟುವಟಿಕೆಗಳಿಗೆ ಇದು ಅತ್ಯವಶ್ಯಕ.