ಟೆಲಿ-ಲಾ ಯೋಜನೆ: (TELE – LAW ಯೋಜನಾ )
ಕೇಂದ್ರ¸ ಸರ್ಕಾರ ಕಾನೂನು ¸ ಸಚಿವಾಲಯ ಹಾಗೂ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವಾಲಯ ಗ್ರಾಮೀಣ ಭಾಗದ ನಾಗರಿಕರಿಗೆ ಮತ್ತು ದೌರ್ಜನ್ಯಕ್ಕೆ ಒಳಗಾದ ಸಮುದಾಯಕ್ಕೆ ಉಚಿತವಾಗಿ ಕಾನೂನು ಸಲಹೆ ನೀಡಲು ಈ ಉಪ ಕ್ರಮವನ್ನು ಆರಂಭಿಸಲಾಗಿದೆ. ಈ ಉಪಕ್ರಮವನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 500 ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಜಾರಿಗೆ ತರಲಾಗುತ್ತಿದೆ ಮುಂದಿನ ದಿನಗಳಲ್ಲಿ ಇದನ್ನು ದೇಶದಾದ್ಯಂತ ಜಾರಿಗೆ ತರಲಾಗುತ್ತದೆ. ಕಾನೂನು ಅವಶ್ಯಕತೆ ಇರುವವರಿಗಾಗಿ ಸಿ.ಎಸ್.ಸಿ. ಕೇಂದ್ರಗಳಲ್ಲಿ ಕಾನ್ಫರೆನ್ಸ್‍ನ ಮೂಲಕ ಉಚಿತವಾಗಿ ಸಲಹೆಯನ್ನು ನೀಡಲಾಗುತ್ತದೆ. ವೀಡಿಯೋ ಕಾನ್ಫರೆನ್ಸ್‍ನಲ್ಲಿ ಭಾಗವಹಿಸುವ ಕಾನೂನು ತಜ್ಞರನ್ನು ರಾಸ್ತ್ರೀಯ ಕಾನೂನು ಸೇವಾ ಪ್ರಾದಿಕಾರವು ಒದಗಿಸುತ್ತದೆ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಒಬ್ಬ ಪ್ಯಾರಾ ಲೀಗಲ್ ವಾಲೆಂಟಿಯರ್(ಸ್ವಯಂ ಸೇವಕ) ಸಿ.ಪಿ.ಎಲ್.ವಿ. ಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.