Loading [MathJax]/extensions/MathML/mml3.js

“ಸಾಥ್” ಉಪಕ್ರಮ

 

ಶಿಕ್ಷಣ & ಆರೋಗ್ಯ ಕ್ಷೇತ್ರಗಳ ಅಭಿವೃದ್ದಿಗೆ ತಾಂತ್ರಿಕ ಸಹಾಯ ನೀಡುವ ಮೂಲಕ ಆ ಎರಡು ಕೇತ್ರಗಳಲ್ಲಿ ಆಯ್ದ ತಲಾ 3 ರಾಜ್ಯಗಳನ್ನು ಮಾದರಿ ರಾಜ್ಯಗಳನ್ನಾಗಿ ಪರಿವರ್ತಿಸುವ ನೀತಿಆಯೋಗದ ಮಹತ್ವಕಾಂಕ್ಷೆಯ ಯೋಜನೆಯಾದ ಸಾಥ್ (SATH) SATH-SUSTAINABLE ACTION FOR TRANSFORMING HUMAN CAPITAL ಆರೋಗ್ಯಕ್ಷೇತ್ರದ ಪರಿವರ್ತನೆಗಾಗಿ ಉತ್ತರ ಪ್ರದೇಶ, ಅಸ್ಸಾಂ, ಕರ್ನಾಟಕ ರಾಜ್ಯಗಳಲ್ಲಿ ಹಾಗೂ ಶಿಕ್ಷಣ ಕ್ಷೇತ್ರದ ಪರಿವರ್ತನೆಗಾಗಿ ಮಧ್ಯಪ್ರದೇಶ,ಜಾರ್ಖಂಡ್ & ಒಡಿಸ್ಸಾ ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ ನೀತಿಆಯೋಗವು ಈ ಉಪಕ್ರಮದಡಿಯಲ್ಲಿ 3 ಮಾದರಿ ರಾಜ್ಯಗಳ ಅಭಿವೃದ್ದಿಗೆ ಎಲ್ಲಾ ರಾಜ್ಯಗಳ & ಕೇಂದ್ರಾಡಳಿತ ಪ್ರದೇಶಗಳಿಂದ ಅರ್ಜಿಯನ್ನು ಅಹ್ವಾನಿಸಿತ್ತು, ರಾಜ್ಯಗಳು ಸಲ್ಲಿಸಿದ್ದ ಕ್ರಿಯಾ ಯೋಜನೆಗಳ ಆಧಾರದ ಮೇಲೆ ರಾಜ್ಯಗಳನ್ನು ಆಯ್ಕೆಮಾಡಲಾಗಿದೆ, ಆಯ್ಕೆಯಾಗಿರುವ ರಾಜ್ಯಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿನ ಪರಿವರ್ತನೆಗಾಗಿ ನೀತಿಆಯೋಗವು ಮುಂದಿನ 3 ವರ್ಷಗಳಿಗೆ ಮಾರ್ಗದರ್ಶನ ನೀಡಲಿದೆ.