ಕೇಂದ್ರ ಮತ್ತು ಅದರ ಭೂಪ್ರದೇಶ
 
* ಒಂದರಿಂದ ನಾಲ್ಕನೇ ವಿಧಿಗಳು ಒಕ್ಕೂಟ ಮತ್ತು ಭೂಪ್ರದೇಶಗಳ ಬಗ್ಗೆ ಪ್ರಸ್ತಾಪಿಸುತ್ತವೆ.
* ಅಂಬೇಡ್ಕರ ರವರು ಒಕ್ಕೂಟ ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ “ಭಾರತದ ಸಂಯುಕ್ತ ವ್ಯವಸ್ಥೆಯನ್ನು ನಾಶಪಡಿಸಲು ಸಾಧ್ಯವಿಲ್ಲದ ಕಾರಣ’ ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆದಿದ್ದಾರೆ.
* ಭಾರತ ವಿವಿಧ ಜಾತಿ, ಧರ್ಮ, ಜನಾಂಗ, ಸಂಸ್ಕøತಿಯ ಜನರನ್ನು ಹೊಂದಿರುವ ಪರಿಣಾಮ ಆಡಳಿತದ ದೃಷ್ಟಿಯಿಂದ ಭಾರತದ ಸಮಗ್ರ ಭೂಪ್ರದೇಶವನ್ನು ವಿವಿಧ ರಾಜ್ಯಗಳಾಗಿ ವಿಭಜಿಸಲಾಗಿದೆ.
* ಭಾರತದ ಒಕ್ಕೂಟವನ್ನು 3 ಭಾಗಗಳಾಗಿ ವರ್ಗೀಕರಿಸಿದೆ (ಸಂವಿಧಾನದ ಒಂದನೇ ವಿಧಿ)
1] ರಾಜ್ಯಗಳು
2] ಕೇಂದ್ರಾಡಳಿತ ಪ್ರದೇಶಗಳು
3] ಯಾವುದೇ ಸಂದರ್ಭದಲ್ಲಿ ಭಾರತ ಸರ್ಕಾರ ವಶಪಡಿಸಿಕೊಳ್ಳಬಹುದಾದ ಭೂಪ್ರದೇಶಗಳು.
ರಾಜ್ಯಗಳು :-
1. ಆಂಧ್ರಪ್ರದೇಶ
2. ಆಸ್ಸಾಂ
3. ಬಿಹಾರ
4. ಗುಜರಾತ್
5. ಕೇರಳ
6. ಮಧ್ಯಪ್ರದೇಶ
7. ತಮಿಳುನಾಡು
8. ಮಹಾರಾಷ್ಟ್ರ
9. ಕರ್ನಾಟಕ
10. ಒಡಿಶಾ
11. ಪಂಜಾಬ್
12. ರಾಜಸ್ತಾನ್
13. ಉತ್ತರ ಪ್ರದೇಶ
14. ಪಶ್ಚಿಮ ಬಂಗಾಳ
15. ಜಮ್ಮು ಮತ್ತು ಕಾಶ್ಮೀರ
16. ನಾಗಲ್ಯಾಂಡ್
17. ಹರಿಯಾಣ
18. ಹಿಮಾಚಲ ಪ್ರದೇಶ
19. ಮಣಿಪುರ
20. ತ್ರಿಪುರ
21. ಮೇಘಾಲಯ
22. ಸಿಕ್ಕಿಂ
23. ಮಿಜೊರಾಂ
24. ಅರುಣಾಚಲ ಪ್ರದೇಶ
25. ಗೋವಾ
26. ಛತ್ತೀಸಗಡ್
27. ಉತ್ತರಾಂಚಲ
28. ಜಾರ್ಖಂಡ್
29. ತೆಲಂಗಾಣ
ಕೇಂದ್ರಾಡಳಿತ ಪ್ರದೇಶಗಳು :-
1. ಅಂಡಮಾನ್ ಮತ್ತು ನಿಕೋಬಾರ್
2. ಚಂಡೀಗಢ
3. ದಾದ್ರ ಮತ್ತು ನಗರ ಹವೇಲಿ
4. ದಾಮನ್ ಮತ್ತು ದಿಯು
5. ದೆಹಲಿ (ರಾಷ್ಟ್ರೀಯ ರಾಜಧಾನಿ)
6. ಲಕ್ಷದ್ವೀಪ್
7. ಪಾಂಡಿಚೇರಿ
* 1950 ರಲ್ಲಿ ಭಾರತದ ಒಕ್ಕೂಟ ರಾಜ್ಯಗಳನ್ನು 4 ಭಾಗ ಮಾಡಲಾಯಿತು.
1. ಎ. ವರ್ಗ :- ಬಿಹಾರ್, ಆಸ್ಸಾಂ, ಮಧ್ಯಪ್ರದೇಶ, ಬಾಂಬೆ, ಒರಿಸ್ಸಾ, ಮದ್ರಾಸ್, ಪಂಜಾಬ್, ಕೇಂದ್ರೀಯ ಪ್ರಾಂತ್ಯಗಳು, ಪ. ಬಂಗಾಳ, ಇವುಗಳ ಆಡಳಿತದ ಮುಖ್ಯಸ್ಥರು ರಾಜ್ಯಪಾಲರು.
2. ಬಿ. ವರ್ಗ :- ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಮಧ್ಯಭಾರತ, ಮೈಸೂರು, ಪಾಟಿಯಾಲ ಮತ್ತು ಪೂರ್ವ ಪಂಜಾಬ್ ಇಲ್ಲಿಯ ಆಡಳಿತದ ಮುಖ್ಯಸ್ಥ – ರಾಜ್ಯ ಪ್ರಮುಖರಾಗಿರುತ್ತೀದ್ದರು,
3. ಸಿ. ವರ್ಗ :- ಭೂಪಾಲ್, ಅಜ್ಮೀರ್, ಬಲ್ಲಾಪುರ, ಬಿಹಾರ್, ಕೂರ್ಗ- ರಾಷ್ಟ್ರಪತಿ- ಕಮಿಷನರ್ ಮೂಲಕ ಆಡಳಿತ ನಡೆಸುತ್ತಿದ್ದರು.
4. ಡಿ. ವರ್ಗ :- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇತರರೆ –ರಾಷ್ಟ್ರಪತಿ -ಚೀಪ್ ಕಮಿಷನರ್ ಮೂಲಕ ಆಡಳಿತ ನಡೆಸುತ್ತಿದ್ದರು.
ಭಾಷಾವಾರು ರಾಜ್ಯಗಳ ವಿಂಗಡಣೆ
* ಭಾರತ ಸರ್ಕಾರ ಭಾಷಾವಾರು ರಾಜ್ಯಗಳ ರಚನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸಮಿತಿಗಳನ್ನು (ಭಾಷಾವಾರು ರಾಜ್ಯಗಳ ವಿಂಗಡನೆಗೆ) ನೇಮಿಸಿತು.
1. ಎನ್.ಕೆ. ಧಾರ್ ಆಯೋಗ : 1946 (ಸದಸ್ಯರು ಜೆ.ಎನ್. ಲಾಲ್. ಪನ್ನಾಲಾಲ್) ಈ ಆಯೋಗವು ರಾಜ್ಯಗಳನ್ನು ಆಡಳಿತ ಅನುಕೂಲಕ್ಕೆ ತಕ್ಕಂತೆ ಪುನರ್ರಚಿಸಬೇಕು. ಭಾಷೆಗಳ ಆಧಾರದ ಮೇಲಲ್ಲಿ ಎಂದು ತಿಳಿಸಿತು.
2. ಜೆ.ವಿ.ಸಿ. ಸಮಿತಿ : 1948 ನೇಮಕ 1949 ವರದಿ ಸಲ್ಲಿಕೆ ರಾಜ್ಯಗಳ ಪುನರ್ರಚನೆಗೆ ಸೂಚನೆ, ಭಾಷೆಗಳ ಆಧಾರದ ಮೇಲೆ ಪುನರ್ರಚಿಸಲು ಸಕಾಲವಲ್ಲ ಎಂದು ಹೇಳಿತು.
3. ಡಾ. ಫಜಲ್ ಅಲಿ ಆಯೋಗ : (ಕೆ.ಎಂ.ಫಣಿಕರ್, ಕುಂಜ್ರು ಸದಸ್ಯರು) – 1953- 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳ ರಚನೆಗೆ ಸೂಚನೆ.