ಡಿಸೆಂಬರ್ 14th, 2017
 
1.ರೋಹಿತ್:3 ದ್ವಿಶತಕಗಳ ಸರದಾರ
• ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿ ವಿಶ್ವದಾಖಲೆ ಬರದಿದ್ದಾರೆ.
• ಈ ಸಾಧನೆ ಮಾಡಿದ ಏಕೈಕ ಬ್ಯಾಟ್ಸಮನ್ ಶ್ರೀಲಂಕಾ ವಿರುಧ್ಹದ 2ನೇ ಏಕದಿನ ಪಂದ್ಯದಲ್ಲಿ ಈ ಮೈಲಿಗಲ್ಲು
• 1.2013 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ದ್ವಿಶತಕ -> 209
2.2014 ರಲ್ಲಿ ಶ್ರೀಲಂಕಾ ವಿರುದ್ಧ ಎರಡನೇ ದ್ವಿಶತಕ 264
3.2017ರಲ್ಲಿ ಶ್ರೀಲಂಕಾ ವಿರುದ್ಧ ಮೂರನೇ ದ್ವಿಶತಕ ->208*
• ಏಕದಿನ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಭಾರತದ ಪ್ರಥಮ ನಾಯಕ ಸೆಹ್ವಾಗ್
ಏಕದಿನ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಭಾರತದ ಎರಡನೇ ನಾಯಕ ರೋಹಿತ್
• 153 ಎಸೆತಗಳಲ್ಲಿ 208, 13 ಬೌಂಡರಿ, 12 ಸಿಕ್ಸರ್ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ.
• ಏಕದಿನ ಮಾದರಿಯಲ್ಲಿ ದ್ವಿಶತಕ ಗಳಿಸಿದವರು.
1 ಸಚಿನ್ ತೆಂಡೂಲ್ಕರ್
2010
200* ರನ್
ದ.ಆಫ್ರಿಕಾ ವಿರುದ್ಧ
2 ವೀರೇಂದ್ರ ಸೆಹ್ವಾಗ್
2011 219 ರನ್ ವೆಸ್ಟ್ ಇಂಡೀಸ್ ವಿರುದ್ಧ
3 ರೋಹಿತ್ ಶರ್ಮಾ
2013 209 ರನ್ ಆಸ್ಟ್ರೇಲಿಯಾ ವಿರುದ್ಧ
4 ರೋಹಿತ್ ಶರ್ಮಾ
2014 264 ರನ್ ಶ್ರೀಲಂಕಾ ವಿರುದ್ಧ
5 ಕ್ರಿಸ್ ಗೇಲ್
2015 215 ರನ್ ಆಸ್ಟ್ರೇಲಿಯಾ ವಿರುದ್ಧ
6 ಮಾರ್ಟಿನ್ ಗುಪ್ಟಿಲ್
2015 237* ರನ್ ವೆಸ್ಟ್ ಇಂಡೀಸ್ ವಿರುದ್ಧ
7 ರೋಹಿತ್ ಶರ್ಮಾ 2017 208* ರನ್ ಶ್ರೀಲಂಕಾ ವಿರುದ್ಧ
2. ಅತ್ಯುತ್ತಮ ಉಕ್ಕಿನ ಘಟಕ ಪ್ರಶಸ್ತಿ: jsw ಗೆ
• Jsw ಸ್ಟೀಲ್ ಸಂಸ್ಥೆ 2014-15 & 2015-16 ನೇ ಸಾಲಿನಲ್ಲಿ ದೇಶದ ಅತ್ಯುತ್ತಮ ಉಕ್ಕಿನ ಘಟಕ ಪ್ರಶಸ್ತಿಗೆ ಪಾತ್ರವಾಯಿತು 2013-14 ರಲ್ಲಿಯೂ ಕೂಡ ಸಂಸ್ಥೆ ಪ್ರಶಸ್ತಿಯಿನ್ನು ಪಡೆದಿದ್ದು ಈ ಮೂಲಕ ಸತತ ಮೂರನೇ ಬಾರಿಗೆ ಪ್ರಶಸ್ತಿ ಆಯ್ಕೆ ಆಗಿರುವುದು ವಿಶೇಷ.
• ಹೈದರಾಬಾದಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ & md. ಡಾ.ವಿನೋದ್ ನಾವಲ್ ಪ್ರಶಸ್ತಿ ನೀಡಿದರು.
• ಸಂಸ್ಥೆಯು ವಾರ್ಷಿಕ 1.20 ಕೋಟಿ ಟನ್ ಉಕ್ಕು ಉತ್ಪಾದನಾ ಸಾಮರ್ಥ್ಯ ಹೊಂದಿದೆ.
• ರಾಜ್ಯದಲ್ಲಿ 55000 ಕೋಟಿ ಬಂಡವಾಳ ಹೂಡಿದೆ.
• ಭಾರತೀಯ ರೈಲ್ವೆಗೆ ವಾರ್ಷಿಕ ಅತ್ಯಧಿಕ ತೆರಿಗೆ ಪಾವತಿಸುತ್ತಿರುವ ಖಾಸಗಿ ಸಂಸ್ಥೆಗಳಲ್ಲಿ JSW ಪ್ರಥಮ ಸ್ಥಾನದಲ್ಲಿದೆ.
3.ಗುಹಾ ದೇಗುಲ ನಿಶ್ಯಬ್ದ ವಲಯ: NGT
• ಹಿಮಾಲಯದ ಅಮರನಾಥ ಗುಹಾ ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು “ನಿಶ್ಯಬ್ದ ವಲಯ” ಎಂದು ಘೋಷಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ december 13 ರಂದು ಆದೇಶಿಸಿದೆ.
• ಈ ಮೂಲಕ ಅಮರನಾಥ ಗುಹಾ ದೇವಾಲಯದಲ್ಲಿ ಇನ್ನು ಮುಂದೆ ಗಂಟೆ,ಜಾಗಟೆ ಬಾರಿಸುವಂತಿಲ್ಲ & ಜಯಘೋಷ, ಮಂತ್ರ ಪಠಿಸುವಂತಿಲ್ಲ.
• ಯಾತ್ರಿಕರ ಅನುಕೂಲಕ್ಕಾಗಿ ಮೂಲ ಸೌಕರ್ಯ ಒದಗಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
• ಶಿವ ಲಿಂಗದ ಸುತ್ತಲೂ ಇರುವ ಕಬ್ಬಿಣದ ಸರಳುಗಳನ್ನು ತೆಗೆಯಲು ಸೂಚಿಸಿದೆ.
4.ಮಿಥೇನ್ ನಿಂದ ಜಲಜನಕ ಇಂಧನ
• ಮಿಥೇನ್ ಮತ್ತು ವಿದ್ಯುತನ್ನು ಒಂದು ಹಂತದಲ್ಲಿ ಜಲಜನಕ ಇಂಧನವಾಗಿ ಮಾರ್ಪಡಿಸುವ ವಿಧಾನವನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ.
• ಸಂಶೋಧನೆ: ಸ್ಪೇನ್ ನ ವೇಲೆನ್ಸಿಯಾ ಪಾಲಿಟೆಕ್ನಿಕ್ ವಿವಿಯ ಸಂಶೋಧಕರು
• ಸಂಶೋಧಕರ ವರದಿ:
1. ಜಲಜನಕ ಉತ್ತಮ ಇಂಧನವಾಗಿದ್ದು, ಶಕ್ತಿಯುತ ಗರಿಷ್ಠ ಸಾಂದ್ರತೆ ಹೊಂದಿದೆ.
2. ಹಸಿರು ಮನೆ ಅನಿಲ ಹೊರ ಸೂಸುವ ಪ್ರಮಾಣ ‘0’ ಮಟ್ಟದಲ್ಲಿದೆ ಹೀಗಾಗಿ ಕೈಗಾರಿಕೆಗಳಲ್ಲಿ ಇದು ಹೆಚ್ಚು ಬಳಕೆಯಲ್ಲಿದೆ.
3. ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿಕೊಂಡು ಇಂಧನ ಉತ್ಪಾದನೆ ಇದರಿಂದ ಸಾರಿಗೆ ಕ್ಷೇತ್ರದಲ್ಲಿ ಪರ್ಯಾಯವಾಗಿ (ಇಂಧನವಾಗಿ) ಬಳಕೆ.
4. ಜಲಜನಕ ಇಂಧನ ಕೋಶಗಳು, ವಾಹನಗಳು ಮತ್ತು ರಾಸಾಯನಿಕ ಕೈಗಾರಿಕೆಗಳಿಂದ ಹೊಂದುತ್ತೇವೆ.
5. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮತ್ತು ಮಾರುಕಟ್ಟೆ ಪ್ರವೇಶ ಪ್ರವೇಶದಿಂದ ಸಾರಿಗೆ ಕ್ಷೇತ್ರದಲ್ಲಿನ CO2 ಪ್ರಮಾಣ ಕಡಿಮೆಯಾಗಲಿದೆ.
Contributed by: Mallikajan.Korbu