ನೀರಾವರಿ (Irrigation)

 

• ಭಾರತದಲ್ಲಿ ಮಳೆಯ ಹಂಚಿಕೆ ಅಸಮಾನತೆಯಿಂದ ಕೂಡಿದೆ.ಹಾಗಾಗಿ ನೀರಾವರಿಯು ಅತ್ಯವಶ್ಯಕವಾಗಿದೆ.
• ನೀರಾವರಿ ಎಂದರೆ “ವ್ಯವಸಾಯದ ಭೂಮಿಗೆ ಕೃತಕವಾಗಿ ಕಾಲುವೆ, ಬಾವಿ ಮತ್ತು ಕೆರೆಗಳಿಂದ ನೀರು ಸರಬರಾಜು ಮಾಡುವುದು.” ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮತ್ತು ವ್ಯವಸಾಯವು ಅತ್ಯಂತ ಪ್ರಧಾನವಾಗಿರುವ ಕಡೆಗಳಲ್ಲಿ ನೀರಾವರಿಬಹಳ ಅವಶ್ಯಕವಾಗಿದೆ.
• ದೇಶದಲ್ಲಿ ಬಳಕೆಗೆ ದೊರೆಯುವ ಒಟ್ಟು ಜಲಸಂಪತ್ತಿನ ಪ್ರಮಾಣದ ಅನುಸಾರ ಗರಿಷ್ಠ 140 ದಶಲಕ್ಷ ಹೆಕ್ಟರ್ ಪ್ರದೇಶಕ್ಕೆ ನೀರಾವರಿಯನ್ನು ಒದಗಿಸಬಹುದು.
• ಭಾರತವು ಇಂದು ಪ್ರಪಂಚದಲ್ಲಿ ಅತಿ ಹೆಚ್ಚು ನೀರಾವರಿಯ ಕ್ಷೇತ್ರವನ್ನು ಹೊಂದಿದೆ.

ನೀರಾವರಿಯ ವಿಧಗಳು


ವಿವಿಧ ಪ್ರದೇಶಗಳಲ್ಲಿ ವಿವಿಧ ಬಗೆಯ ನೀರಾವರಿ ಪದ್ಧತಿಗಳು ದೇಶದಾದ್ಯಂತ ರೂಢಿಯಲ್ಲಿವೆ. ಇವುಗಳನ್ನು
ನೀರಾವರಿಯ ಮೂಲದ ಆಧಾರದ ಮೇಲೆ ಬಾವಿ ನೀರಾವರಿ, ಕಾಲುವೆ ನೀರಾವರಿ, ಕೆರೆ ನೀರಾವರಿ
ಎಂದು ವಿಂಗಡಿಸಬಹುದು.

(1) ಬಾವಿ ನೀರಾವರಿ


ಭಾರತದ ಪ್ರಮುಖ ನೀರಾವರಿ ಮೂಲಗಳಲ್ಲಿ ಬಾವಿ ನೀರಾವರಿಯು ಅತಿ ಮುಖ್ಯವಾದುದು. ಇದು ದೇಶದಲ್ಲಿ ಇಂದು ಅತಿ ಹೆಚ್ಚು ಕೃಷಿ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ವಿಧಾನವಾಗಿದೆ. ಬಾವಿಗಳನ್ನು ತೋಡಿ ತನ್ಮೂಲಕ ಭೂ ಅಂತರ್ಜಲವನ್ನು ಹೊರತೆಗೆದು ಕೃಷಿಗೆ ಬಳಸುವದೇ ಬಾವಿ ನೀರಾವರಿ. ಬಾವಿ ನೀರಾವರಿಯನ್ನು ಕಡಿಮೆ ಮಳೆ ಬೀಳುವ ಭಾಗಗಳಲ್ಲಿ ಹೆಚ್ಚು ಉಪಯುಕ್ತವಾಗಿವೆ.
ಬಾವಿಗಳಲ್ಲಿ ಎರಡು ಪ್ರಕಾರವಾಗಿ ವಿಂಗಡಿಸಲಾಗಿದೆ.
(1) ತೆರೆದ ಬಾವಿ : ಇಂತಹ ಬಾವಿಗಳನ್ನು ಕೃಷಿ ಭೂಮಿಯ ಸೂಕ್ತವಾದ ಸ್ಥಳದಲ್ಲಿ ತೋಡಲಾಗುವುದು. ಅವುಗಳಿಂದ ನೀರನ್ನು ಮಾನವನ ದೈಹಿಕ ಬಲ, ಪ್ರಾಣಿಗಳಿಂದ ಅಥವಾ ಯಂತ್ರಗಳ ಸಹಾಯದಿಂದ ಮೇಲೆತ್ತಿ ಜಮೀನಿಗೆ ಒದಗಿಸಲಾಗುವುದು. ಇತ್ತೀಚೆಗೆ ಡೀಸೆಲ್ ಮತ್ತು ವಿದ್ಯುತ್ ಚಾಲಿತ ಯಂತ್ರ ಇತ್ಯಾದಿ ವಿಧಾನಗಳಿಂದ ನೀರನ್ನು ಹೊರತೆಗೆಯಲಾಗುವುದು. ದೇಶದಲ್ಲಿ ರಾಜಸ್ತಾನ,ಮಧ್ಯ ಪ್ರದೇಶ,ಗುಜರಾತ,ತಮಿಳನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯ ತೆರೆದ ಬಾವಿಗಳನ್ನು ಕಾಣಬಹುದು.
2) ಕೊಳವೆ ಬಾವಿ : ಭಾರತದ ಬಾವಿ ನೀರಾವರಿಯಲ್ಲಿ ಇಂದು ಕೊಳವೆ ಬಾವಿಗಳ ಪಾತ್ರ ಅತಿ ಪ್ರಧಾನ. ಒಟ್ಟು ಬಾವಿ ನೀರಾವರಿ ಕ್ಷೇತ್ರದ ಶೇ. 73.1 ರಷ್ಟು ಹಾಗೂ ದೇಶದ ಒಟ್ಟು ನೀರಾವರಿ ಕ್ಷೇತ್ರ ಶೇ. 44.9 ರಷ್ಟು ಕೊಳವೆ ಬಾವಿ ನೀರಾವರಿಗೊಳಪಟ್ಟಿದೆ. ಉತ್ತರ ಪ್ರದೇಶವು ಅತಿ ಹೆಚ್ಚು ಬಾವಿ ನೀರಾವರಿಯ ಕ್ಷೇತ್ರವನ್ನು ಹೊಂದಿದೆ.ಒಟ್ಟು ಭಾವಿ ನೀರಾವರಿಯ ಕ್ಷೇತ್ರದ ಶೇ ೨೭.೭ ರೇಷನ್ನು ಹೊಂದಿದೆ.

2) ಕಾಲುವೆ ನೀರಾವರಿ


• ಭಾರತದಲ್ಲಿ ರೂಢಿಯಲ್ಲಿರುವ ನೀರಾವರಿ ಪದ್ಧತಿಗಳಲ್ಲಿ ಕಾಲುವೆ ನೀರಾವರಿಯು ಪ್ರಮುಖವಾದುದು. ಭಾರತವು ಸುಮಾರು 16.5
• ದಶಲಕ್ಷ ಹೆಕ್ಟೇರ್ ಪ್ರದೇಶವು ಕಾಲುವೆ ನೀರಾವರಿ ಕ್ಷೇತ್ರವನ್ನು ಹೊಂದಿದೆ. ಇದು ದೇಶದಲ್ಲಿ ಬಾವಿಯ ನಂತರ ಎರಡನೆಯ ಮುಖ್ಯ ನೀರಾವರಿಯ ಮೂಲವಾಗಿದೆ.
• ಇದರಲ್ಲಿ ಎರಡು ಪ್ರಕಾರಗಳಿವೆ.
1. ಪ್ರವಾಹ ಕಾಲುವೆಗಳು : ಯಾವುದೇ ರೀತಿಯ ಅಣೆಕಟ್ಟೆಗಳನ್ನು ಕಟ್ಟದೆ ನದಿಗಳಿಂದ ನೇರವಾಗಿ ಕಾಲುವೆಗಳನ್ನು ತೋಡಲಾಗುವುದು. ನದಿಗಳು ತುಂಬಿ ಹರಿಯುವಾಗ ಈ ಕಾಲುವೆಗಳ ಮೂಲಕ ನೀರು ಹರಿಯುವುದು. ಇವುಗಳಿಗೆ ಪ್ರವಾಹ ಕಾಲುವೆಗಳು ಎಂದು ಕರೆಯುವರು.
2. ಸಾರ್ವಕಾಲಿಕ ಕಾಲುವೆ : ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸಿ, ಕೃಷಿ ಭೂಮಿಗೆ ನೀರನ್ನೊದಗಿಸಲು ತೋಡುವ ಕಾಲುವೆಗಳಿಗೆ ‘ಸರ್ವ ಕಾಲಿಕ ಕಾಲುವೆ’ ಗಳೆಂದು ಕರೆಯುವರು. ಭಾರತದಲ್ಲಿ ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ಪಂಜಾಬ್, ರಾಜಸ್ತಾನ, ಹರಿಯಾಣ ಮತ್ತು ಬಿಹಾರ ಗಳಲ್ಲಿ ಈ ಕಾಲುವೆಗಳು ಹೆಚ್ಚಾಗಿ ಕಂಡುಬರುತ್ತವೆ.

3) ಕೆರೆ ನೀರಾವರಿ


ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ, ಕರ್ನಾಟಕಗಳಲ್ಲಿ ಕೆರೆ ನೀರಾವರಿಯು ಹೆಚ್ಚಾಗಿ ಕಂಡುಬರುವುದು. ಇದಲ್ಲದೆ ಮಧ್ಯಪ್ರದೇಶ, ರಾಜಸ್ತಾನ, ಜಾರ್ಖಂಡ, ಉತ್ತರ ಪ್ರದೇಶಗಳಲ್ಲಿಯೂ ಸಹ ಕೆರೆ ನೀರಾವರಿಯನ್ನು ಕಾಣಬಹುದು. ಮಹಾರಾಷ್ಟ್ರ ರಾಜ್ಯದ ಫೀಫೆ ದೇಶದ ಅತಿ ದೊಡ್ಡ ಕೆರೆಯಾಗಿದೆ.