ಉಜಾಲ(UJALA):-
UJALA: Unnat Jyothi by Affordable LED’s and Appliances for all

ಕೇಂದ್ರ ಸರ್ಕಾರದ ಇಂಧನ ಸಚಿವಾಲಯವು ಉಜಾಲ ಯೋಜನೆಯನ್ನ್ಲು ಇ.ಇ.ಎಸ್.ಎಲ್(EESL- ENERGY EFFICIENCY SIRVICEs LTD) ಮೂಲಕ ಅನುಷ್ಠಾನ ಗೊಳಿಸಿದೆ ಮನಮೋಹನ್ ಸಿಂಗ್ ಸರ್ಕಾರವು 2011ರಲ್ಲಿ “ಬಚತ್ ಲ್ಯಾಂಪ್” ಯೋಜನೆಯನ್ನು CFL(Compact Fluorescent Lamp) ವಿತರಿಸುವ ಸಲುವಾಗಿ 2011ರಲ್ಲಿ ಪ್ರಾರಂಭಿಸಲಾಗಿತ್ತು. ಇದನ್ನು ಉಜಾಲ ಯೋಜನೆಯ ಹೆಸರಿನಲ್ಲಿ ಮೆ 2015ರಂದು ಚಾಲನೆ ನೀಡಲಾಗಿದ್ದು ಇಲ್ಲಿ ಸಿ.ಎಫ್.ಎಲ್ ಬದಲಿಗೆ ಎಲ್.ಇ.ಡಿ ಬಲ್ಬ್‍ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಯೋಜನೆಯ ಮೂಲಕ 2019 ಒಳಗಾಗಿ 77 ಕೋಟಿ ಎಲ್.ಇ.ಡಿ. ಬಲ್ಬ್‍ಗಳನ್ನು ವಿತರಿಸುವ ಗುರಿಯನ್ನು ಹೊಂದಿದ್ದು ಇಲ್ಲಿಯ ತನಕ 26.52ಕೋಟಿ ಎಲ್.ಇ.ಡಿ. ಬಲ್ಬ್ ,25 ಲಕ್ಷ ಎಲ್‍ಇಡಿ ಟ್ಯೂಬ್‍ಗಳು, 8 ಲಕ್ಷ ಕಡಿಮೆ ವಿದ್ಯುತ್ ಬಳಸುವ ಫ್ಯಾನ್‍ಗಳನ್ನು ವಿತರಿಸಲಾಗಿದೆ ಈ ಯೋಜನೆಯ ಮೂಲಕ ವಾರ್ಷಿಕವಾಗಿ 34443 ಮೆಗಾವ್ಯಾಟ್ ವಿದ್ಯುತ್‍ನ್ನು ಉಳಿತಾಯ ಮಾಡುವ ಗುರಿಯನ್ನು ಹೊಂದಲಾಗಿದೆ ಈ ಯೋಜನೆಯನ್ನು ಕರ್ನಾಟಕ ಸರ್ಕಾರದ ‘ಹೊಸ ಬೆಳಕು’ ಹೆಸರಿನಲ್ಲಿ ಜಾರಿಗೆ ತಂದಿದೆ ಈ ಯೋಜನೆಯು ಜಗತ್ತಿನ ಅತಿದೊಡ್ಡ ಸಬ್ಸಿಡಿ ರಹಿತಯೋಜನೆಯಾಗಿದೆ ಉಜಾಲ ಯೋಜನೆಯಡಿಯಲ್ಲಿ ಅತಿ ಹೆಚ್ಚು ಬಲ್ಬ್‍ಗಳನ್ನು ವಿತರಿಸಿರುವ ಮುಂಚೂಣಿ ರಾಜ್ಯಗಳು 1) ಆಂಧ್ರಪ್ರದೇಶ (2,16,87,408) 2) ಮಹಾರಾಷ್ಟ್ರ (2,13,67,384) 3) ಕರ್ನಾಟಕ( 1,70,22,287) ಭಾರತ ಸರ್ಕಾರದ ಉಜಾಲ ಯೋಜನೆಯನ್ನು ಮಲೇಷಿಯಾದ ಮೆಲಕಾ ರಾಜ್ಯದಲ್ಲಿ ಸಹ ಪ್ರಾರಂಭಿಸಲಾಗಿದ್ದು ಅಲ್ಲಿ 1 ಮಿಲಿಯನ್ 9 ವ್ಯಾಟ್ ಎಲ್.ಇ.ಡಿ ದ್ವಿಪಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಮಲೇಷಿಯಾದಲ್ಲಿ ಸಹ ಇ.ಇ.ಎಸ್.ಎಲ್(EESL-ENERGY EFFICIENCY SIRVICEs LTD) ಮೂಲಕ ಅನುಷ್ಠಾನ ಗೊಳಿಸಲಾಗುತ್ತಿದೆ
