ಆರೋಗ್ಯ(Health)
 
• ಒಂದು ಜೀವಿಯ ದೇಹ-ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಬಹುದು.
• ಆರೋಗ್ಯವೆಂದರೆ ಕೇವಲ ರೋಗಗಳಿಂದ ಮುಕ್ತರಾಗುವುದಲ್ಲ. ಭೌತಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಸುಸ್ಥಿರರಿರುವುದೇ ಆರೋಗ್ಯ – WHO – ವಿಶ್ವ ಆರೋಗ್ಯ ಸಂಸ್ಥೆ
• ಭಾರತದಲ್ಲಿಯೂ ಕೂಡ ಅನೇಕ ಆರೋಗ್ಯ ಸಮಸ್ಯೆಗಳಿವೆ. ಇವತ್ತಿಗೂ ಕೂಡ ಏಡ್ಸ್, ಕ್ಯಾನ್ಸರ್, ಸಕ್ಕರೆ ಕಾಯಿಲೆ ಮುಂತಾದ ರೋಗಗಳ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದೇವೆ.
ಸುಸ್ಥಿರ ಆರೋಗ್ಯಕ್ಕಾಗಿ ಭಾರತ ಸರ್ಕಾರ ಈ ಕೆಳಗಿನ ಆರೋಗ್ಯ ನೀತಿಗಳನ್ನು ಕಾಲಕಾಲಕ್ಕೆ ಜಾರಿಗೆ ತಂದಿರುತ್ತದೆ.
1) ರಾಷ್ಟ್ರೀಯ ಆರೋಗ್ಯ ನೀತಿ -1983
2) ರಾಷ್ಟ್ರೀಯ ಆರೋಗ್ಯ ನೀತಿ – 2002
3) ರಾಷ್ಟ್ರೀಯ ಆರೋಗ್ಯ ನೀತಿ (ಕರಡು) – 2015
4) ರಾಷ್ಟ್ರೀಯ ಆರೋಗ್ಯ ನೀತಿ – 2017
ರಾಷ್ಟ್ರೀಯ ಆರೋಗ್ಯ ನೀತಿ 2015 ರ ಮುಖ್ಯಾಂಶಗಳು
• ಆರೋಗ್ಯ ಕ್ಷೇತ್ರದಲ್ಲಿ ಪ್ರಸ್ತುತ ಮಾಡಲಾಗುತ್ತಿರುವ ಜೆಡಿಪಿಯ ಖಚಿತ ಪ್ರಮಾಣ 1.2% ರಿಂದ 2.5% ಏರಿಕೆ
• ಆರೋಗ್ಯ ಒಂದು ಮೂಲಭೂತ ಹಕ್ಕು
• ರಾಷ್ಟ್ರೀಯ ಆರೋಗ್ಯ ಹಕ್ಕುಗಳ ಅಧಿನಿಯಮ
• ಆರೋಗ್ಯ ಸೆಸ್
• ತಂಬಾಕು ಮತ್ತು ಮದ್ಯದ ಮೇಲೆ ಭಾರಿ ತೆರಿಗೆ
• ಅಂಬುಲೆನ್ಸ್, ಡಯಾಗ್ನೋಸ್ಟಿಕ್ಸ್ ಸೇವೆಗಳನ್ನು ಹೊರಗುತ್ತಿಗೆ ನೀಡುವುದು.
• ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಮತ್ತು ರೋಗಪತ್ತೆ
• ಎಮ್.ಎಮ್.ಆರ್. ಮತ್ತು ಎ.ಎಮ್. ಆರ್. ಗಳಲ್ಲಿ ಸುಧಾರಣೆ
ರಾಷ್ಟ್ರೀಯ ಆರೋಗ್ಯ ನೀತಿ -2017
• ಈ ನೀತಿಯು ಸಾಮಾಜಿಕ ಆರೋಗ್ಯ ಸೇವೆಗಳ ಮೇಲೆ ಜೆಡಿಪಿಯು ಶೇ 2.5 ರಷ್ಟು ವೆಚ್ಚ ಮಾಡಲು ಉದ್ದೇಶಿಸಿದೆ.
• 1000 ಜನಸಂಖ್ಯೆಗೆ ಕನಿಷ್ಠ 2 ಹಾಸಿಗೆಗಳು ಲಭ್ಯವಿರುವ ಹಾಗೆ ಗುರಿ ಹೊಂದಿದೆ.
• ಎಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಉಚಿತ ಔಷಧ, ರೋಗಪತ್ತೆಹಚ್ಚುವಿಕೆ, ತುರ್ತು ಸೇವೆ ಹಾಗೂ ಆರೋಗ್ಯ ಸೇವೆ.
• 2025 ರ ಹೊತ್ತಿಗೆ ಜೀವಿತಾವಧಿ 67.5 ರಿಂದ 70 ವರ್ಷಗಳವರೆಗೆ ಹೆಚ್ಚಿಸುವ ಗುರಿ.
• 2025 ರ ವೇಳೆಗೆ ಶಿಶು ಮರಣ 23 (1000) ಕ್ಕೆ ಇಳಿಕೆ ಗುರಿ
• 2025 ರ ವರೆಗೆ ತಾಯಿ ಮರಣ - 100 ಕ್ಕೆ(1 ಲಕ್ಷದಲ್ಲಿ) ಇಳಿಕೆ
• ಔಷಧಿ ತಯಾರಿಕೆಗೆ “ಮೇಕ್ ಇನ್ ಇಂಡಿಯಾ” ಒತ್ತು
• ಆಯುಷ್ ಪದ್ಧತಿಗೆ ಹಾಗೂ ಶಾಲೆಗಳಲ್ಲಿ ಯೋಗ ಶಿಕ್ಷಣಕ್ಕೆ ಒತ್ತು
• ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆ