ಭಾರತದಲ್ಲಿ ಬಾಹ್ಯಾಕಾಶ ಸಂಶೋಧನೆ (Space Research in India)
 
ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO - Indian Space Research Organisation).
• ಇಸ್ರೋ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO - Indian Space Research Organisation). ಇದು ಬೆಂಗಳೂರಿನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ.
• 1972 ರಲ್ಲಿ ಭಾರತ ಸರಕಾರ ಬಾಹ್ಯಾಕಾಶ ಆಯೋಗ ಹಾಗೂ ಬಾಹ್ಯಾಕಾಶ ಇಲಾಖೆ ಸ್ಥಾಪಿಸಿತು. ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಇಸ್ರೋ (ISRO) ಸ್ಥಾಪಿಸಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸುತ್ತದೆ.
• ಇಸ್ರೋದ ಮುಖ್ಯ ಕೇಂದ್ರಗಳು ಬೆಂಗಳೂರು, ತಿರುವನಂತಪುರ (ಕೇರಳ), ಅಹಮದಾಬಾದ್ (ಗುಜರಾತ್), ಮಹೇಂದ್ರಗಿರಿ(ತ.ನಾ), ಹಾಸನ(ಕರ್ನಾಟಕ) ಮತ್ತು ಶ್ರಿಹರಿಕೋಟ (ಆಂಧ್ರ ಪ್ರದೇಶ) ಗಳಲ್ಲಿ ಇವೆ. ಇಸ್ರೋ ದ ಮುಖ್ಯ ಉದ್ದೇಶ ಅಂತರಿಕ್ಷ ತಂತ್ರಜ್ಞಾನದ ಸಂಶೋಧನೆ ಮತ್ತು ಭಾರತಕ್ಕೆ ಉಪಯೋಗವಾಗುವಂತೆ ಅವುಗಳ ಅಭಿವೃದ್ಧಿ. ಇಸ್ರೋ ಸಂಸ್ಥೆ ಉಪಗ್ರಹಗಳನ್ನಲ್ಲದೇ ಉಪಗ್ರಹ ವಾಹಕಗಳನ್ನೂ ತಯಾರಿಸುತ್ತದೆ.
• ಇಸ್ರೋದ ಪ್ರಸ್ತುತ ಅಧ್ಯಕ್ಷರು ಎ.ಎಸ್.ಕಿರಣ್ ಕುಮಾರ್.
ಇಸ್ರೋ ಬಾಹ್ಯಾಕಾಶ ಸಂಶೋಧನೆ ಸಂಬಂಧಿಸಿದಂತೆ ಎರಡು ಪ್ರಮುಖ ಉಪಗ್ರಹ ವ್ಯವಸ್ಥೆಯನ್ನು ಹಮ್ಮಿಕೊಂಡಿದೆ.
1) ಇನ್ಟಾಟ್ (INSAT) ಸರಣಿ.
2) ಐ.ಆರ್.ಎಸ್ (IRS) ಸರಣಿ
ಇದರೊಂದಿಗೆ ಎರಡು ಪ್ರಮುಖ ಉಡಾವಣಾ ವಾಹನಗಳ ಸಂಶೋಧನೆ ಮಾಡುತ್ತದೆ.
1) ಪಿ.ಎಸ್.ಎಲ್.ವಿ (PSLV)
2) ಜಿ.ಎಸ್.ಎಲ್.ವಿ (GSLV)
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹಾಗೂ ಅಂಗ ಸಂಸ್ಥೆಗಳು
* ಇಸ್ರೋ ಪ್ರಧಾನ ಕಛೇರಿ ಬೆಂಗಳೂರು
* ಉಡಾವಣಾ ವಾಹನ ಹಾಗೂ ರಾಕೆಟ್ ಸಂಶೋಧನೆ-ವಿಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ತಿರುವನಂತಪುರಂ
* ಉಪಗ್ರಹ ತಾಂತ್ರಿಕತೆಯ ಪ್ರಮುಖ ಕೇಂದ್ರ –ಐಸ್ಯಾಕ್ ಬೆಂಗಳೂರು
* ಉಪಗ್ರಹ ಉಡಾವಣಾ ಕೇಂದ್ರ- ಸತೀಶ ಧವನ್ ಬಾಹ್ಯಾಕಾಶ ಕೇಂದ್ರ (ಎಸ್.ಎಚ್.ಎ.ಆರ್)ಶ್ರಿಹರಿಕೋಟಾ
* ಉಡಾವಣಾ ನಂತರ ಉಪಗ್ರಹ ನಿಯಂತ್ರಣ –ಎಮ್.ಸಿ.ಎಫ್ ಹಾಸನ
* ಉಪಗ್ರಹ ವಾಣಿಜ್ಯ ಮಂಡಳಿ- ಅಂತ್ರಿಕ್ಷ ನಿಗಮ ನಿಯಮಿತ ಬೆಂಗಳೂರು.
ಭಾರತದ ಮೊದಲಿನ ಉಪಗ್ರಹಗಳು
1. ಆರ್ಯಭಟ : ಭಾರತದ ಪ್ರಥಮ ಉಪಗ್ರಹ 1975 ರಲ್ಲಿ ಉಡಾವಣೆ ಮಾಡಲಾಯಿತು.
2. ಭಾಸ್ಕರ್ 1&2 : ಪ್ರಾಯೋಗಾತ್ಮಕ ಉಪಗ್ರಹಗಳು ಕ್ರಮವಾಗಿ 1979 &1981 ರಲ್ಲಿ ಉಡಾವಣೆ ಮಾಡಲಾಯಿತು.
3. ರೋಹಿಣಿ : ಸ್ವದೇಶಿ ನಿರ್ಮಿತ ಉಡಾವಣಾ ವಾಹನದೊಂದಿಗೆ ಉಡಾವಣೆ ಮಾಡಿದ ಮೊದಲ ಉಪಗ್ರಹ.
4. ಆಪಲ್|(Apple) :Arian Passenger Pay Load Experiment ಎಂಬ ಉಪಗ್ರಹ 36000 ಎತ್ತರದ ಭೂ ಸ್ಥಿರ ಕಕ್ಷೆಯನ್ನು ತಲುಪಿದ ಭಾರತದ ಮೊದಲ ಭೂ ಸ್ಥಿರ ಉಪಗ್ರಹ.
ಭಾರತದಲ್ಲಿ ಉಡಾವಣಾ ವಾಹನಗಳ ಸಂಶೋಧನೆಯಲ್ಲಿ ನಡೆದು ಬಂದ ದಾರಿ
1) ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-Satellite Launching Vehicle) : ಎಸ್.ಎಲ್.ವಿ-3 ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಉಡಾವಣಾ ವಾಹನದಿಂದ 1980 ರಲ್ಲಿ ಶ್ರೀಹರಿಕೋಟಾದಿಂದ ರೋಹಿಣಿ ಉಪಗ್ರಹ ಉಡಾಯಿಸಲಾಯಿತು. ಈ ಉಪಗ್ರಹ ನಾಲ್ಕು ಹಂತವನ್ನು ಹೊಂದಿದ್ದು ಎಲ್ಲಾ ಹಂತಗಳಲ್ಲಿ ಘನ ಇಂಧನ ಬಳಸಲಾಗಿತ್ತು.
2) ಸುಧಾರಿತ ಉಪಗ್ರಹ ಉಡಾವಣಾ ವಾಹನ (ಎ.ಎಸ್.ಎಲ್.ವಿ-Augmented Satellite Launching Vehicle) : ಸುಮಾರು 40 ಕಿ.ಗ್ರಾಂ ಭಾರ ಹೊಂದಿರುವ ಈ ವಾಹನ ಐದು ಹಂತದಾಗಿದ್ದು ಎಲ್ಲಾ ಹಂತಗಳಲ್ಲಿ ಘನ ಇಂಧನ ಬಳಸಲಾಗಿತ್ತು. 1987 ರಲ್ಲಿ ಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಲಾಯಿತು.
3) ಧೃವೀಯ ಉಪಗ್ರಹ ಉಡಾವಣಾ ವಾಹನ (ಪಿ.ಎಸ್.ಎಲ್.ವಿ-Polar Satellite Launching Vehicle) : ಸುಮಾರು 40 ಕಿ.ಗ್ರಾಂ ಭಾರ ಹೊಂದಿ ಈ ವಾಹನ ನಾಲ್ಕು ಹಂತಗಳನ್ನು ಹೊಂದಿದ್ದು, ಘನ ಹಾಗೂ ದ್ರವ ಇಂಧನ ಬಳಸಲಾಯಿತು. 1993 ರಲ್ಲಿ ಪ್ರಥಮ ವಾಹನ ಉಡಾಯಿಸಲಾಗಿತ್ತು. ಆದರೆ 1994 ರಲ್ಲಿ ಪಿ.ಎಸ್.ಎಲ್.ವಿ.ಡಿ2 ಯಶಸ್ವಿಯಾಯಿತು. ಐ.ಆರ್.ಎಸ್ ಉಪಗ್ರಹ ಉಡಾವಣೆ ಮಾಡಲಾಗುತ್ತದೆ.
4) ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿ.ಎಸ್.ಎಲ್.ವಿ-Geostationary Satellite Launching Vehicle) : ಈ ಯೋಜನೆ 1990 ರಲ್ಲಿ ಪ್ರಾರಂಭಿಸಲಾಯಿತು. ಮೂರು ಹಂತದ ಈ ಉಡಾವಣಾ ವಾಹನದಲ್ಲಿ ಪ್ರಥಮ ಹಂತದಲ್ಲಿ ಘನ. ಎರಡನೇಯ ಹಂತದಲ್ಲಿ ದ್ರವ ಹಾಗೂ ಮೂರನೆಯ ಹಂತದಲ್ಲಿ ಕ್ರಾಯೋಜನಿಕ ಇಂಜಿನ್ ಬಳಸಲಾಗುತ್ತದೆ. ದೂರಸಂವೇದಿ(ಇನ್ಸಾಟ್) ಉಪಗ್ರಹ ಉಡಾಯಿಸಲಾಗುತ್ತದೆ. ಘನ ಇಂಧನ-ಹೈಡ್ರಾಕ್ಷಿಲ್ ಟರ್ಮಿನೆಟೆಡ್ ಪಾಲಿ ಬುಟ್ಯಡಿನ್ (ಎಚ್.ಟಿ.ಪಿ.ಬಿ) ದ್ರವ ಇಂಧನ-ಅನಸಿಮೆಟ್ರಿಕಲ್ ಡೈ ಮಿಥೈಲ್ ಹೈಡ್ರಜೈನ(ಯು.ಡಿ.ಎಮ್.ಎಚ್)