“ಕಪ್ಪು ಹಣ”
ದೇಶದಲ್ಲಿ ಕಪ್ಪುಹಣದ ಸಮಸ್ಯೆಯು ಒಂದು ಭಾಗ. ತೀರ ಸಮಸ್ಯೆಯಾಗಿ ಕಾಡುತ್ತಿರುವುದು. ಇದು ಒಂದು ರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದರೇ ಅಂತರಾಷ್ಟ್ರೀಯ ಮುಂದುವರೆದ ದೇಶಗಳಾದ ಅಮೇರಿಕ, ಇಂಗ್ಲೇಡ್, ಜಪಾನ್, ಜರ್ಮನಿಯಂತಹ ರಾಷ್ಟ್ರಗಳಲ್ಲಿ ಕೂಡಾ ಇದರ ಹಾವಳಿಯು ಆ ದೇಶಗಳ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗುತ್ತದೆ._x000D_
ಇದು ಆರ್ಥಿಕ ವ್ಯವಸ್ಥೆಯಲ್ಲಿನ ಸಾಮಾನ್ಯ ಆರ್ಥಿಕತೆ ಸೃಷ್ಟಿಯ ಬದಲಿಗೆ ಅಸಾಮಾನ್ಯ ಆರ್ಥಿಕತೆಯು ಸೃಷ್ಟಿಯಾಗುತ್ತದೆ. ಇದರಿಂದ ದೇಶದಲ್ಲಿನ ಸಾಂಪ್ರಾದಾಯಿಕ ಅರ್ಥವ್ಯವಸ್ಥೆಯನ್ನು ಅಲುಗಾಡಿಸುತ್ತದೆ._x000D_
ಭಾರತ ದೇಶದಲ್ಲಿ ‘ಕಪ್ಪುಹಣ’ ಸಮಸ್ಯೆಯು ಇತ್ತೀಚೆಗೆ ತೀವ್ರವಾಗಿ ಚರ್ಚಿತವಾಗುತ್ತಿರುವ ವಿಷಯವಾಗಿದ್ದು, ಭಾರತ ದೇಶದ ಒಟ್ಟು ಕಪ್ಪು ಹಣದ ಸೃಷ್ಟಿಯು ನಮ್ಮ ದೇಶದ ಜಿ.ಡಿ.ಪಿ.ಯ ಶೇಕಡಾ 6 ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ._x000D_
ವಿದೇಶಗಳಲ್ಲಿ ಭಾರತದ ಕಪ್ಪುಹಣದಲ್ಲಿ 12ನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೇರಿಕ ದೇಶವಿದ್ದು, ಎರಡನೇ ಸ್ಥಾನದಲ್ಲಿ ಇಂಗ್ಲೇಡ್ ರಾಷ್ಟ್ರಗಳಿವೆ ಈ ಮುಂದುವರಿದ ದೇಶಗಳಲ್ಲಿ ಕೂಡಾ ಕಪ್ಪು ಹಣದ ಸೃಷ್ಟಿಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ._x000D_1400 ಭಾರತದ ಕಪ್ಪು ಹಣವು ಸ್ವಿಸ್ವ್ ಬ್ಯಾಂಕ್ ಮಾಹಿತಿ ಬಹಿರಂಗ ಹೊರಡಿಸಿರುವ ಪ್ರಕಾರ 2013-14 ಸಾಲಿನಲ್ಲಿ ದಶಲಕ್ಷ ಕೋಟಿ ಇದೆ ಎಂದು ಹೇಳಿತ್ತು, ಅದೇ ರೀತಿ 2012-13 ಸಾಲಿನಲ್ಲಿ 1547 ದಶಲಕ್ಷ ಕೋಟಿ ಇದೆ ಎಂದು ಹೇಳಿತ್ತು. ಅದರೆ ಭಾರತದ ಕಪ್ಪು ಹಣವು ವಿದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿರುವುದು ಸಂತಸದ ಸಂಗತಿ._x000D_
ಸಾಮಾನ್ಯವಾಗಿ ‘ಕಪ್ಪುಹಣ’ ಎಂದರೆ ಸರ್ಕಾರದ ತೆರಿಗೆ ಇಲ್ಲದೆ ತಪ್ಪಿಸಿಕೊಂಡ ಹಣ ಎಂದು ಭಾವಿಸಲಾಗುತ್ತದೆ._x000D_
ಭಾರತದ ಪ್ರಸಿದ್ಧ ಆರ್ಥಿಕ ತಜ್ಞ ಪಾರ್ಥನಾಥ ಸೋಮಯವರ ಪ್ರಕಾರ ಕಪ್ಪು ಹಣ ಎಂದರೆ “ದೇಶದ ಶ್ರೀಮಂತ ವರ್ಗದವರು ತಮ್ಮ ಗಳಿಕೆಯ ಹಣವನ್ನು ದೇಶದ ಆರ್ಥಿಕತೆ ಲೆಕ್ಕಕ್ಕೆ ಬಾರದ ರೀತಿಯಲ್ಲಿ ಹಣವನ್ನು ವಿದೇಶಗಳಲ್ಲಿ ಇಟ್ಟಿರುವುದನ್ನು” ಕಪ್ಪು ಹಣವೆಂದು ಕರೆಯಲಾಗುತ್ತದೆ. _x000D_
ಕಪ್ಪು ಹಣ ಸೃಷ್ಟಿಯಾಗುವುದರಿಂದ ದೇಶದಲ್ಲಿ ಎರಡು ರೀತಿಯ ಅರ್ಥವ್ಯವಸ್ಥೆಗಳು ಕಂಡುಬರುತ್ತವೆ, ಅಷ್ಟೇ ಅಲ್ಲದೆ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿಯು ತೆರಿಗೆಯಲ್ಲಿ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತದೆ,ಇದರಿಂದ ಆಡಳಿತ ಸರ್ಕಾರವು ಅಭಿವೃದ್ಧಿ ಕಾರ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುಲು ಹಿಂದೆಟಾಕುತ್ತದೆ. _x000D_
ದೇಶದಲ್ಲಿ ಆಡಳಿತಕ್ಕೆ ಬಂದ ನೂತನ ಕೇಂದ್ರ ಸರ್ಕಾರವು ಕಪ್ಪುಹಣ ನಿಯಂತ್ರಣಕ್ಕಾಗಿ ಹಲವಾರು ನೂತನ ಕಾರ್ಯತಂತ್ರಗಳನ್ನು ಬಳಸಿದೆ, ಅಷ್ಟೇ ಅಲ್ಲದೇ ದೇಶದ ಬ್ಯಾಂಕರ್ಗಳ ಬ್ಯಾಂಕ್ದ ‘ಆರ್.ಬಿ.ಐ’ ಕೂಡ ಕಪ್ಪು ಹಣದ ಚಲಾವಣೆಯನ್ನು ತಡೆಗಟ್ಟಲು ಹಲವಾರು ತಂತ್ರಗಳನ್ನು ಬಳಸಿದೆ. ಅಷ್ಟೇ ಅಲ್ಲದೆ ವಿದೇಶಗಳೊಡನೆ ಪ್ರಯಾಣಕ್ಕೆ ಹೋಗುವ ದೇಶೀಯರನ್ನು ‘ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆಯಲ್ಲಿ ಕೂಡಾ ಹೆಚ್ಚಿನ ಕ್ರಮಕೈಗೊಂಡಿದೆ. _x000D_
ಇಷ್ಟಾದರೂ ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಲಂಚಪ್ರಕರಣಗಳ ಹಲವಾರು ಕಾರಣಗಳು ಕಪ್ಪು ಹಣ ಸೃಷ್ಟಿಗೆ ಕಾರಣವಾಗುತ್ತಿವೆ._x000D_
ಕಪ್ಪು ಹಣ ಸೃಷ್ಟಿಯಾಗುವುದಕ್ಕೆ ಕಾರಣಗಳು:
ದೇಶದಲ್ಲಿ ಕಪ್ಪು ಹಣ ಸೃಷ್ಟಿಗೆ ಹಲವಾರು ಕಾರಣಗಳಿವೆ, ಅವು ಯಾವುವೆಂದರೆ ಈ ಕೆಳಗಿನಂತಿವೆ,
ಭ್ರಷ್ಟಾಚಾರ - ರಾಜಕಾರಣದಿಂದ - ಸರ್ಕಾರಿ ಅಧಿಕಾರಿಗಳ ದುರ್ಬಳಕೆಯಿಂದ
ಲಂಚಗೂಳಿತನ - ಶ್ರೀಮಂತ ವರ್ಗದ ಸಾಮ್ರಾಜ್ಯ - ಕಂಪನಿಗಳಿಂದ
ಭ್ರಷ್ಟಾಚಾರ :
ದೇಶದಲ್ಲಿ ಕಪ್ಪು ಹಣ ಸೃಷ್ಟಿಯಾಗಲು ಮೂಲ ಕಾರಣ ಭ್ರಷ್ಟಾಚಾರ ವಾಗಿದ್ದು, ಹಲವಾರು ರಾಜಕಾರಣಿ ವರ್ಗದವರು, ಸಾರ್ವಜನಿಕ ಆಡಳಿತಾಧಿಕಾರಿಗಳು ತಮ್ಮ ಭೋಗದ ವಿಶಾಲವಾದ ಜೀವನಕ್ಕೆ ಹಣದ ಅವಶ್ಯಕತೆಯನ್ನು ಪೊರೈಸಿಕೊಳ್ಳಲು ರಾಜಕಾರಣಿಗಳು, ಸಾರ್ವಜನಿಕ ಅಧಿಕಾರ ವೃಂದದವರು ಬೇಗ ಶ್ರೀಮಂತರಾಗಬೇಕು ಎಂಬ ಆಶೆಯಿಂದ ಹಲವಾರು ಅಧಿಕಾರಿಗಳು ಭ್ರಷ್ಟಾಚಾರ ವಿಷಯದತ್ತ ಮೊರೆಹೋಗುತ್ತಾರೆ.
ಒಂದು ಅಂದಾಜಿನ ಪ್ರಕಾರ ದೇಶದಲ್ಲಿನ ಕಪ್ಪು ಹಣದ ಸೃಷ್ಟಿಯಾಗುದು ‘ಸಾರ್ವಜನಿಕ ಸೇವಾ ವರ್ಗದವರಿಂದ’ ದೇಶದಲ್ಲಿ ಸೃಷ್ಟಿಯಾಗುವ ಕಪ್ಪುಹಣದ 1/3 ಭಾಗದಷ್ಟು ಇವರಿಂದ ಸೃಷ್ಟಿಯಾಗುತ್ತದೆ.
ದೇಶದಲ್ಲಿ ಇಂತಹ ಭ್ರಷ್ಟಾಚಾರ ನಿಯಂತ್ರಣಗಳು ದೇಶದಲ್ಲಿ ಹಲವಾರು ತನಿಖಾ ಸಂಸ್ಥೆಗಳು ಲೋಕ್ಪಾಲ್ & ಲೋಕಾಯುಕ್ತಗಳಂತ ಸಂಸ್ಥೆಗಳು ಇದ್ದರು ಕೂಡಾ ಈ ಭ್ರಷ್ಟಾಚಾರ ಕ್ಕೆ ಕಡಿವಾಣವಾಗುತ್ತಿಲ್ಲ.
ರಾಜಕಾರಣದಿಂದ:
ಇಂದಿನ ದೇಶದಲ್ಲಿ ಅರ್ಧದಷ್ಟು ಕಪ್ಪುಹಣವು ರಾಜಕಾರಣಿಗಳಿಂದ ಸೃಷ್ಟಿಯಾಗುತ್ತದೆ ತಮ್ಮ ರಾಜಕಾರಣದ ಅವಧಿಯಲ್ಲಿ ಹಣಗಳಿಕೆಯೇ ಅವರ ಆಸೆಯಾಗಿರುವುದರಿಂದ ದೇಶದ ಬೊಕ್ಕಸದ ಹಣವು ಹಲವಾರು ವ್ಯಕ್ತಿಗಳ ಪಾಲಾಗುತ್ತಿರುವುದು ಒಂದು ನೋವಿನ ಸಂಗತಿಯಾಗಿದೆ. ನಮ್ಮ ದೇಶದ ಪ್ರಸಿದ್ಧ ರಾಷ್ಟ್ರೀಯ ಪಕ್ಷಗಳು ಕೂಡಾ ವಿವಿಧ ಮೂಲಗಳಿಂದ ಪಕ್ಷ ದೇಣಿಗೆಯಾಗಿ ಬಂದ ಹಣವನ್ನು ವಾರ್ಷಿಕವಾಗಿ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ಕೂಡಾ ಸಲ್ಲಿಸಬೇಕು. ಆದರೆ ಈ ಪಕ್ಷಗಳು ಮಾಹಿತಿ ಸಲ್ಲಿಸಿದರೂ ಕೂಡಾ ಅವುಗಳನ್ನು ಸರಿಯಾದ ರೀತಿಯಲ್ಲಿ ಹೇಳಿರುವುದಿಲ್ಲ.
ಸರ್ಕಾರಿ ಅಧಿಕಾರಿಗಳಿಂದ:
ಇಂದು ಸಾರ್ವಜನಿಕ ಆಡಳಿತದಲ್ಲಿ ನಾಗರಿಕ ಸೇವಾ ವರ್ಗದವರೂ ಜನರಿಮದ ಹಲವಾರು ರೀತಿಯಲ್ಲಿ ಹಣವನ್ನು ಪಡೆದುಕೊಳ್ಳುತ್ತಿರುವ ಮೂಲಕ ಕೂಡ ಲಂಚದಂತಹ ಪ್ರಕರಣಗಳು ದೇಶದೆಲ್ಲೆಡೆ ಬಳಕೆಗೆ ಬರುತ್ತದೆ. ಸರ್ಕಾರಿ ಅಧಿಕಾರಿಗಳ ಭೋಗ ಜೀವನ ಕಪ್ಪು ಹಣದ ಸೃಷ್ಟಿಗೆ ಮುಖ್ಯ ಕಾರಣವಾಗಿದೆ.
ಶ್ರೀಮಂತ ಕುಟುಂಬ:
ಈ ವರ್ಗದ ಕುಟುಂಬದವರು ತಮ್ಮ ಸಂಪತ್ತಿನ ಮೂಲವನ್ನು ವಾರ್ಷಿಕವಾಗಿ ಆದಾಯ ತೆರಿಗೆ ಇಲಾಖೆ ಸಲ್ಲಿಸಬೇಕಾಗುತ್ತದೆ ಆದರೂ ಕೂಡ ಇವರು ಹೊಂದಿರುವ ಆಸ್ತಿಯ ಮೌಲ್ಯವನ್ನು ಆದಾಯ ತೆರಿಗೆ ಇಲಾಖೆಗೆ ತಪ್ಪು ಮಾಹಿತಿಯನ್ನು ನೀಡುವುದರ ಮುಖಾಂತರವು ಕಪ್ಪುಹಣ ಸೃಷ್ಟಿಯಾಗುತ್ತದೆ.
ಬಹುರಾಷ್ಟ್ರೀಯ ಕಂಪನಿ:
ದೇಶದಲ್ಲಿರುವ ದೊಡ್ಡ ದೊಡ್ಡ ಬಹು ರಾಷ್ಟ್ರೀಯ ಕಂಪನಿಗಳ ತಮ್ಮ ಲಾಭಗಳಿಕೆಯಲ್ಲಿ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಸರ್ಕಾರಕ್ಕೆ ಸಲ್ಲಿಸುವುದಿಲ್ಲ. ಈ ಕಂಪನಿಗಳಿಂದ ಕೂಡಾ ಕಪ್ಪು ಹಣ ಸೃಷ್ಟಿಯಾಗುತ್ತಿದೆ.
ಈ ಮೇಲೆ ಹೇಳಿದ ಕಾರಣಗಳು ಅಲ್ಲದೇ ಕಪ್ಪುಹಣ ಇನ್ನಿತರ ಅನೇಕ ಮೂಲಗಳಿಂದ ಸೃಷ್ಟಿಯಾಗುತ್ತಿದೆ.
ಕಪ್ಪು ಹಣ ಸೃಷ್ಟಿಯಿಂದಾಗುವ ಪರಿಣಾಮ:
ಕಪ್ಪು ಹಣ ಸೃಷ್ಟಿಯಿಂದ ಮುಖ್ಯವಾಗಿ ಹಲವಾರು ಪರಿಣಾಮಗಳನ್ನು ಕಾಣಬಹುದು ಅವು ಯಾವುದೆಂದರೆ,ಈ ಕೆಳಗಿನಂತಿವೆ.
• ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ
• ದೇಶದಲ್ಲಿ ಸಂಪತ್ತಿನ ಅಸಮತೋಲನೆ ಉಂಟಾಗುತ್ತದೆ
• ದೇಶದಲ್ಲಿ ಎರಡು ವರ್ಗಗಗಳ ಸೃಷ್ಟಿಯಾಗುತ್ತದೆ.
• ಸರ್ಕಾರದ ಬೊಕ್ಕಸಕ್ಕೆ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತದೆ.
• ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತದೆ.
ಕಪ್ಪುಹಣದ ಸೃಷ್ಟಿಯಂದಾಗುವ ಮೊದಲ ಪರಿಣಾಮವೆಂದರೆ, ದೇಶದ ಅರ್ಥವ್ಯವಸ್ಥೆಯ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ದೇಶದ ಮೂಲ ಆದಾಯದಲ್ಲಿ ಕಡಿಮೆಯಾಗುತ್ತದೆ. ದೇಶದ ಆಂತರಿಕ ಉತ್ಪನ್ನದ ಸಂಗ್ರಹಣ ಪ್ರಮಾಣ ಕಡಿಮೆಯಾಗುತ್ತದೆ. ಒಂದು ಅಂದಾಜಿನ ಪ್ರಕಾರ 2010-11ರಲ್ಲಿ ದೇಶದ ಒಟ್ಟು ಕಪ್ಪು ಹಣದ 1600 ದಶಲಕ್ಷ ಸ್ವಿಸ್ಬ್ಯಾಂಕ್ ಇದು ದೇಶದ ಒಟ್ಟು ಆಂತರಿಕ ಉತ್ಪನ್ನದ ಶೇಕಡಾ 8 ರಷ್ಟಿತ್ತು
ಕಪ್ಪುಹಣ ಸೃಷ್ಟಿಯಾಗುದರಿಂದ ಮತ್ತೊಂದು ಪರಿಣಾಮವೆಂದರೆ ದೇಶದಲ್ಲಿ ಸಂಪತ್ತು ಅಸಮತೋಲನ ಉಂಟಾಗುತ್ತದೆ. ಕಪ್ಪು ಹಣ ಇರುವವರು ಶ್ರೀಮಂತ ವರ್ಗದವರಾದರೆ ಹಣದ ಪ್ರಮಾಣ ಕಡಿಮೆಯಿರುವವರು ಬಡವರಾಗುತ್ತಾರೆ. ಇದರಿಂದ ಈ ಎರಡು ವರ್ಗಗಳ ನಡುವೆ ಅಸಮತೋಲನದ ಸಂಪತ್ತಿನ ಹಂಚಿಕೆಯು ಕೂಡಾ ಒಂದು ಗಂಭಿರ ಪರಿಣಾಮವನ್ನುಂಟು ಮಾಡುತ್ತಿದೆ. ಶ್ರೀಮಂತ ವರ್ಗದವರು ಭೋಗಜೀವನ ವಿಲಾಸ ಜೀವನವನ್ನು ಮಾಡಿದರೆ, ಇನ್ನೊಂದು ವರ್ಗವು ಸಮಾಜದಲ್ಲಿ ಕೆಟ್ಟ ಪರಿಸ್ಥಿತಿಯಲ್ಲಿ ಇರುತ್ತದೆ. ಇವುಗಳ ನಡುವೆ ವೈಷಮ್ಯ ಉಂಟಾಗಿ ಕೆಲವೊಂದು ಸಂದರ್ಭದಲ್ಲಿ ಘರ್ಷಣೆಯುಂಟಾಗುತ್ತದೆ. ಅದರಲ್ಲಿ ಭಾರತ ದೇಶವು ವಿಶ್ವದಲ್ಲಿಯೇ ಅತಿ ಹೆಚ್ಚು ಶ್ರೀಮಂತ ವರ್ಗವನ್ನು ಹೊಂದಿರುವ ದೇಶವಾಗಿದೆ.
ಈ ಕಪ್ಪು ಹಣದ ಸೃಷ್ಟಿಯಿಂದಾಗುವ ಮತ್ತೊಂದು ಪರಿಣಾಮವೆಂದರೆ, ಸರ್ಕಾರದ ತೆರಿಗೆ ಸಂಗ್ರಹಣ ಪ್ರಮಾಣ ತೀವ್ರಗತಿಯಲ್ಲಿ ಕುಸಿಯುತ್ತಿದೆ. ದೇಶದಲ್ಲಿ ಹಲವಾರು ಶ್ರೀಮಂತ ವರ್ಗದವರು ದೇಶಕ್ಕೆ ಕಟ್ಟ ಬೇಕಾದ ತೆರಿಗೆಯನ್ನು ನೈತಿಕವಾಗಿ ಅದನ್ನು ಸಂದಾಯ ಮಾಡುವುದಿಲ್ಲ ಆದಾಯ ತೆರಿಗೆ ಇಲಾಖೆ ತಪ್ಪು ಮಾಹಿತಿಗಳ ಮುಖಾಂತರ ಕೇಂದ್ರ ತೆರಿಗೆ ಇಳಿಕೆಯ ಮೇಲೆ ಪರಿಣಾಮ ಬೀರುತ್ತದೆ.
ಈ ಕಪ್ಪು ಹಣದ ಸೃಷ್ಟಿಯಿಂದಾಗುವ ಮತ್ತೊಂದು ಗಂಭೀರ ಪರಿಣಾಮವೆಂದರೆ ದೇಶದ ಅಭಿವೃದ್ಧಿಯಂತವು ಕುಂಠಿತವಾಗುತ್ತವೆ, ಏಕೆಂದರೆ ಸರ್ಕಾರದ ಬೊಕ್ಕಸಕ್ಕೆ ಹಣದ ಸಂದಾಯದಿಂದಾಗುವ ವರಮಾನದ ಪ್ರಮಾಣ ಕಡಿಮೆಯಾಗುವುದರಿಂದ ಆಡಳಿತ ಸರ್ಕಾರವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವುದಿಲ್ಲ.
ಈ ಮೇಲೆ ಹೇಳಿದ ಎಲ್ಲಾ ಪರಿಶ್ರಮಗಳು ಕಪ್ಪುಹಣದ ಸೃಷ್ಟಿಯಾಗುವುದರಿಂದ ಉಂಟಾಗುತ್ತದೆ ಆದರೆ ಇದನ್ನು ನಿಯಂತ್ರಿಸಲು ಇರುವ ಕಟ್ಟು ನಿಟ್ಟು ನಿಯಂತ್ರಣ ಕ್ರಮಗಳೇನು?
ಕಪ್ಪುಹಣ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳು
ಕಪ್ಪುಹಣದ ಸಮಸ್ಯೆಯು ಒಂದು ಜಾಗತಿಕ ಸಮಸ್ಯೆಯಾಗಿದ್ದರು ಅಭಿವೃದ್ದಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ದೇಶಗಳು ಇದನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅವು ಯಾವುದೆಂದರೆ ಈ ಕೆಳಗಿನಂತಿವೆ.
ನೂತನವಾಗಿ ಆಡಳಿತಕ್ಕೆ ಬಂದ ಕೇಂದ್ರ ಸರ್ಕಾರವು ಕಪ್ಪುಹಣದ ನಿಯಂತ್ರಣಕ್ಕಾಗಿ & ವಿದೇಶಗಲ್ಲಿರುವ ಭಾರತದ ಕಪ್ಪುಹಣದ ಕುರಿತು ಮಾಹಿತಿ ನೀಡಲು ನಿವೃತ್ತ ನ್ಯಾಯಮೂರ್ತಿ ಎಮ್.ಬಿ.ಷಾ ರವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಿದೆ. ಈ ತಂಡವು ವಿದೇಶಗಳಲ್ಲಿರುವ ಕಪ್ಪುಹಣದ ಕುರಿತು ಸಮಗ್ರವಾದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದೆ.
ಅಷ್ಟೇ ಅಲ್ಲದೇ ನಮ್ಮ ದೇಶದ ಉಚ್ಛ ನ್ಯಾಯಾಲದ ‘ಸುಪ್ರೀಂ ಕೋರ್ಟ್’ ಕೂಡಾ ಕಪ್ಪುಹಣ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಗಡುವನ್ನು ನೀಡಿತು. ಇದರಿಂದ ಕೇಂದ್ರ ಸರ್ಕಾರವು ಎಚ್ಚೆತ್ತುಕೊಂಡ ಕಪ್ಪುಹಣದ ಕುರಿತು ಅಂತರಾಷ್ಟ್ರೀಯ ದೇಶಗಳೊಡನೆ ಹಲವಾರು ರೀತಿಯಲ್ಲಿ ಒಪ್ಪಂದಗಳ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಂಡಿತು.
ಕೇಂದ್ರ ಆದಾಯ ತೆರಿಗೆ ಇಲಾಖೆಯು ಕಟ್ಟು ನಿಟ್ಟಾಗಿ ಆದಾಯ ತೆರಿಗೆಯ ಕಾಯ್ದೆಯನ್ನು ಸರಿಯಾಗಿ ಕಾರ್ಯರೂಪಕ್ಕೆ ತರಬೇಕು ಆದಾಯ ತೆರಿಗೆ ಮಾಹಿತಿಯನ್ನು ನೀಡುವವರ ವಿರುದ್ಧ ಕಟ್ಟು ನಿಟ್ಟು ಕ್ರಮಗಳನ್ನು ಕೈಗೊಳ್ಳಬೇಕು, ಅಷ್ಟೇ ಅಲ್ಲದೇ ಅಕ್ರಮ ಆಸ್ತಿ ಹೊಂದಿದವರ ವಿರುದ್ಧ ಸೂಕ್ತವಾದ ರೀತಿಯಲ್ಲಿ ಆದಾಯ ತೆರಿಗೆಯ ಅಧಿಕಾರಿಗಳ ಮೇಲೆಂದ ಮೇಲೆ ದಾಳಿ ಮಾಡಬೇಕು ಇದ್ದರಿಂದ ಅಕ್ರಮ ಸಂಪತ್ತು ಮಾಡಲು ಹಿಂದೆಟು ಹಾಕುತ್ತದೆ.
ಇತ್ತೀಚೆಗೆ ಭಾರತೀಯ ರಿಸರ್ವ ಬ್ಯಾಂಕ್ ಕಪ್ಪುಹಣದ ನಿಯಂತ್ರಣಕ್ಕಾಗಿ 2005ರ ಹಿಂದೆ ಇದ್ದಂತಹ ಹಳೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಲು ಕಟ್ಟು ನಿಟ್ಟಾದ ಆದೇಶವನ್ನು ಹೊರಡಿಸಿದೆ ಇದ್ದರಿಂದ ದೇಶದ ಶ್ರೀಮಂತ ವರ್ಗದವರು ಸಂಗ್ರಹಿಸಿರುವ ಹಣವು ದೇಶದ ಬ್ಯಾಂಕುಗಳತ್ತ ಸಂದಾಯವಾಗುತ್ತದೆ ಅಷ್ಟೇ ಅಲ್ಲದೇ ಅಂತಹ ವ್ಯಕ್ತಿಗಳು ಸಮಾಜಕ್ಕೆ ಗೊತ್ತಿದೆ.
ನಂತರ ಕೇಂದ್ರ ಸರ್ಕಾರವು ದೇಶದ ಅರ್ಧದಷ್ಟು ಕಪ್ಪುಹಣ ಇರುವುದು ಸ್ವಜ್ರ್ ಲ್ಯಾಂಡ್ನ ಸ್ವಿಸ್ಬ್ಯಾಂಕ್ನಲ್ಲಿ ಈ ಬ್ಯಾಂಕಿನ ಮಂಡಳಿಯೊಡನೆ ಮಾತುಕತೆ ಮುಖಾಂತರ ಬಹಿರಂಗ ಪಡಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ.
ಇತ್ತೀಚೆಗೆ ಈ ಕಪ್ಪುಹಣವು ಕಾಡುತ್ತಿರುವ ದೇಶದ ಬಹುದೊಡ್ಡ ಸಮಸ್ಯೆಯಾಗಿದ್ದು ಇದು ದೇಶದಲ್ಲಿ ಹಲವಾರು ರೀತಿಯಲ್ಲಿ ಪರಿಣಾಮವನ್ನು ಬೀರುತ್ತದೆ ಅಷ್ಟೇ ಅಲ್ಲದೇ ಆಡಳಿತ ಸರ್ಕಾರವು ಕೂಡ ಹಲವಾರು ನಿಯಂತ್ರಣ ಕ್ರಮಗೊಂಡಿದೆ ಇದು ಒಂದು ಸಂತೋಷದ ಸಂಗತಿ.
ಆದರೆ ದೇಶದಲ್ಲಿ ಸಮತೋಲನವಾದ ಪರಿಸ್ಥಿತಯು ಉಂಟಾಗುವುದು ತೀರಾ ಅವಶ್ಯವಾಗಿದೆ. ಅದೆ ಇಲ್ಲ. ವಿದೇಶದಲ್ಲಿರುವ ಭಾರತದ ಕಪ್ಪುಹಣವನ್ನು ದೇಶಕ್ಕೆ ತಂದು ದೇಶದಲ್ಲಿನ ಬಡವರು ಶ್ರೀಮಂತರು ಎಂಬ ವರ್ಗವನ್ನು ಅಸಮತೋಲನ ಹೋಗಲಾಡಿಸಿ ದೇಶವನ್ನು ಸುಸ್ಥಿರ ಅಭಿವೃದ್ಧಿಯನ್ನುಂಟು ಮಾಡಲು ಎಲ್ಲ ಇದರ ಕಾರ್ಯದ ಚಿಂತಿಸೋಣ.