AGEY-ಅಜೀವಿಕ ಗ್ರಾಮೀಣ ಎಕ್ಸ್‍ಪ್ರೆಸ್ ಯೋಜನೆ
ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್( NRLM - NATIONAL RURAL LIVLYHOOD MISSION) ಮತ್ತು ದೀನ ದಯಾಳ್ ಅಂತ್ಯೋದಯ ಯೋಜನೆಯ ಅಡಿಯಲ್ಲಿ ಜಾರಿಗೆ ತಂದಿರುವ ಹೊಸ ಉಪಯೋಜನೆ ಈ ಯೋಜನೆಯ ಮೂಲಕ ಹಿಂದುಳಿದ, ಗ್ರಾಮೀಣ ಭಾಗದ ಮಹಿಳೆಯರಿಗೆ ಪರ್ಯಾಯ ಆದಾಯದ ಮೂಲ ಸೃಷ್ಟಿಸುವ ಮತ್ತು ಗ್ರಾಮೀಣ ಭಾಗದ ಸಾರಿಗೆ ಜಾಲವನ್ನು ಹೆಚ್ಚಿಸಲು ಸ್ವ ಸಹಾಯ ಸಂಘಗಳ(SHG) ಮೂಲಕ 3 ಚಕ್ರ ಮತ್ತು 4 ಚಕ್ರವಾಹನಗಳ ಸಾರಿಗೆಯನ್ನು ನಿರ್ವಹಿಸಲು ಅನುಕೂಲಮಾಡಿಕೊಡಲು ಆರ್ಥಿಕ ಸಹಾಯ ನೀಡಲಾಗುತ್ತದೆ. ಕೇಂದ್ರ ಸರ್ಕಾರವು 3 ವರ್ಷಗಳ ಅವಧಿಗೆ ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ (ದೆಹಲಿ ಮತ್ತು ಛಂಡಿಗಡ್ ಹೊರತು ಪಡಿಸಿ) 250 ಬ್ಲಾಕ್ ಗಳಲ್ಲಿ ಇದನ್ನು ಆರಂಭದಲ್ಲಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ .