ಪೌರತ್ವ(Citizenship)
 
*ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನ ನಿರ್ವಹಿಸುವುದಕ್ಕೆ ಪೂರಕವಾಗಿರುವ ಸಂಘಟನೆಯನ್ನು ರಾಷ್ಟ್ರವೆಂದು ಕರೆಯಲಾಗುತ್ತದೆ.ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ.ವ್ಯಕ್ತಿ ಹೊಂದಿರುವ ರಾಷ್ಟ್ದದ ಸದಸ್ಯತ್ವವನ್ನು ಪೌರತ್ವ ಎಂದು ಕರೆಯಲಾಗುತ್ತದೆ.
*ಹೆಚ್.ಜೆ. ಲಾಸ್ಕಿ ಹೀಗೆ ಹೇಳಿದ್ದಾರೆ “ಒಬ್ಬ ವ್ಯಕ್ತಿಯು ತನ್ನ ವಿವೇಚಿತ ಜ್ಞಾನವನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಉಪಯೋಗಿಸುವುದೇ ಪೌರತ್ವ".
*ಪೌರತ್ವದ ಮೂಲವನ್ನು ಪ್ರಾಚೀನ ಗ್ರೀಕ್ ರೋಮ್, ಮಧ್ಯಯುಗದಲ್ಲಿ ಕಾಣಬಹುದು.
*ಇಂಗ್ಲೀಷನ ಸಿಟಿಜನ್ ಪದ ಸಿಟಿ ಎಂಬ ಪದದಿಂದ ಬಂದಿದೆ ಸಿಟಿ ಎಂಬುದು ಲ್ಯಾಟಿನ್ ಪದವಾದ ಸಿವಿಸ್ ಪದದಿಂದ ಬಂದಿದೆ. ಸಿಟಿ ಎಂದರೆ ನಗರ ಅಥವಾ ಪಟ್ಟಣ ಎಂದರ್ಥ. ಪೌರ ಎಂದರೆ ‘ನಗರವಾಸಿ’ ಎಂದಾಗುತ್ತದೆ.
*ಭಾರತ ಸಂವಿಧಾನವು ಕೇವಲ ಒಬ್ಬ ವ್ಯಕ್ತಿಗೆ ಏಕಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಂದರೆ ಭಾರತದಲ್ಲಿ ಒಬ್ಬ ವ್ಯಕ್ತಿಗೆ ಕೇವಲ ರಾಷ್ಟ್ರೀಯ ಪೌರತ್ವವನ್ನು ಮಾತ್ರ ಕೊಡಲಾಗಿದೆ. ದ್ವಿ ಪೌರತ್ವವನ್ನು ಹೊಂದಿದ ರಾಷ್ಟ್ರವೆ0ದರೆ – ಅಮೇರಿಕ
*ಭಾರತ ಸಂವಿಧಾನದ 2ನೇ ಭಾಗದಲ್ಲಿ ಕಂಡು ಬರುವ 5 ರಿ0ದ 11ನೇ ವಿಧಿಗಳು ಪೌರತ್ವಕ್ಕೆ ಸಂಬಂಧಿಸಿವೆ.
*1955 ರಲ್ಲಿ ಪೌರತ್ವ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
*ಪೌರತ್ವವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡಾ ಆ ರಾಷ್ಟ್ರ ಒದಗಿಸುವ ಹಕ್ಕುಗಳನ್ನು ಪಡೆದಿರುತ್ತಾರೆ.
ಯಾವುದೇ ವ್ಯಕ್ತಿ ತಾನು ಯಾವ ದೇಶದಲ್ಲಿ ಜನಿಸುತ್ತಾನೊ ಅಥವಾ ಜನಿಸುತ್ತಾಳೊ ಅವರು ತಾನು ಜನಿಸಿದ ದೇಶದ ಪೌರತ್ವವನ್ನು ಪಡೆಯುತ್ತಾರೆ. ಅಂತಹವರಿಗೆ ತಂದೆ ತಾಯಿ ಯಾವ ರಾಷ್ಟ್ರದವರೆಂದು ಪರಿಗಣಿಸದೆ ಪೌರತ್ವ ನೀಡಲಾಗುತ್ತದೆ. ಹಾಗಾಗಿ ಒಂದು ದೇಶದ ಪೌರತ್ವ ಪಡೆಯಲು ಜನನವು ಮುಖ್ಯ ಆಧಾರವಾಗಿದೆ. ಉದಾಹರಣೆಗೆ- ಜನವರಿ 26, 1950 ರಂದು ಅಥವಾ ನಂತರ ಭಾರತದಲ್ಲಿ ಜನಿಸಿದವರು ಭಾರತದ ಪೌರರಾಗಿರುತ್ತಾರೆ. ಏಕೆಂದರೆ ಈ ದಿನದಂದು ಸ್ವತಂತ್ರ ಭಾರತವು ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿತು.
ಈ ವಿಧಾನದ ಪ್ರಕಾರ ಒಬ್ಬ ವ್ಯಕ್ತಿಯ ತಂದೆ ತಾಯಿಯು ಯಾವ ದೇಶಕ್ಕೆ ಸೇರಿದವರು ಎನ್ನುವ ಆಧಾರದ ಮೇಲೆ ಪೌರತ್ವ ಪಡೆಯುತ್ತಾರೆ. ಉದಾಹರಣೆಗೆ ಜನವರಿ 26, 1950 ರಂದು ಅಥವಾ ನಂತರ ಭಾರತದ ಹೊರಗೆ ಭಾರತ ದೇಶದವರಾದ ಕುಟುಂಬಗಳಲ್ಲಿ ಜನಿಸಿದವರಿಗೆ ಭಾರತದ ಪೌರತ್ವ ದೊರೆಯುತ್ತದೆ.
ಭಾರತದ ನಾಗರೀಕರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದಿಷ್ಟ ಅರ್ಜಿಯನ್ನು ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದರ ಮೂಲಕ ಪೌರತ್ವವನ್ನು ಪಡೆದುಕೊಳ್ಳಬಹುದು.
• ಭಾರತೀಯರನ್ನು ವಿವಾಹವಾದ ಸ್ತ್ರೀಯರು
• ಭಾರತದಲ್ಲಿ ಪೌರತ್ವವನ್ನು ಪಡೆದ ವ್ಯಕ್ತಿಯ ಮಕ್ಕಳು. ಕಾಮನ್ ವೆಲ್ತ್ ದೇಶಗಳ ಪೌರತ್ವ ಹೊಂದಿರುವ ವ್ಯಕ್ತಿಗಳು, ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಆ ವ್ಯಕ್ತಿ 5 ವರ್ಷಗಳ ಕಾಲ ಭಾರತದಲ್ಲಿರಬೇಕು.
ಭಾರತದ ಪೌರತ್ವವನ್ನು ಸ್ವೀಕಾರದಿಂದ ಪಡೆಯುವ ವ್ಯಕ್ತಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಬೇಕು.
* ಬೇರೆ ರಾಷ್ಟ್ರದ ಪೌರತ್ವವನ್ನು ಹೊಂದಿದ್ದರೆ ಆ ರಾಷ್ಟ್ರದ ಪೌರತ್ವವನ್ನು ತ್ಯಜಿಸುವುದು.
* ಭಾರತದ ಯಾವೊಬ್ಬ ವ್ಯಕ್ತಿ ಪೌರತ್ವವನ್ನು ಪಡೆಯುವುದಕ್ಕೆ ಅನರ್ಹ ಎಂದು ನಿರ್ಬಂಧವನ್ನು ವಿಧಿಸಿರುವ ರಾಷ್ಟ್ರದ ನಾಗರೀಕನಾಗಿರಬಾರದು.
* ಪೌರತ್ವವನ್ನು ಕೋರಿ ಅರ್ಜಿ ಹಾಕುವುದಕ್ಕಿಂತ ಮುಂಚೆ ಅವನು ಒಂದು ವರ್ಷ ಕಾಲ ಭಾರತದಲ್ಲಿ ವಾಸ ಮಾಡುತ್ತಿರಬೇಕು.
* ಉತ್ತಮ ನಡವಳಿಕೆಯುಳ್ಳವನಾಗಿರಬೇಕು.
ಬೇರೆ ದೇಶಕ್ಕೆ ಸೇರಿದ ಯಾವುದೇ ಒಂದು ಭೂಪ್ರದೇಶ ಭಾರತಕ್ಕೆ ಸೇರ್ಪಡೆಯಾದಾಗ ಉದಾ: ಪಾಂಡಿಚೇರಿ, ಗೋವಾ, ಸಿಕ್ಕಿಂ.
ಒಂದು ದೇಶದ ಪೌರತ್ವವನ್ನು ಕೆಳಕಂಡ ವಿಧಾನಗಳ ಮೂಲಕ ಕಳೆದುಕೊಳ್ಳುತ್ತಾರೆ.
1) ಪರಿತ್ಯಾಗ (Renunciation): ಯಾವುದೇ ಭಾರತೀಯ ಪೌರ, ಮತ್ತೊಂದು ರಾಷ್ಟ್ರದ ಪೌರತ್ವ ಪಡೆದರೆ ಸ್ವ-ಇಚ್ಛೆಯಿಂದ ನೋಂದಣಿಯ ಮೂಲಕ ಪ್ರಕಟಿಸಿ ಭಾರತದ ಪೌರತ್ವವನ್ನು ತ್ಯಾಗಮಾಡಬಹುದು.
2) ಅಂತ್ಯಗೊಳ್ಳುವಿಕೆ (Termination): ಭಾರತದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೆ ಕಾನೂನು ಬದ್ದವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ.
3) ಪದಚ್ಯುತಿ (By Deprivation):: ಯಾರಾದರು ವ್ಯಕ್ತಿಯೊಬ್ಬ ವಂಚನೆಯ ಮೂಲಕ ಭಾರತದ ಪೌರತ್ವವನ್ನು ಹೊಂದಿದ್ದರೆ ಅಥವಾ ಅವನು/ ಅವಳು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ಭಾರತದ ಸಂವಿಧಾನಕ್ಕೆ ಅವಿಧೇಯನಾಗಿ ನಡೆದುಕೊಂಡರೆ ಅಂತವರನ್ನು ಭಾರತ ಸರ್ಕಾರವು ಪೌರತ್ವದಿಂದ ರದ್ದುಗೊಳಿಸಬಹುದು.