ರಾಸಾಯನಿಕ ಕ್ರಿಯೆ (Chemical Reaction)

 

• ಯಾವುದೇ ವಸ್ತು ಬದಲಾವಣೆಗೆ ಒಳಗಾಗಿ ಹೊಸ ವಸ್ತುವನ್ನು ಉತ್ಪತ್ತಿ ಮಾಡುವ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ (chemical reaction) ಎನ್ನುವರು. • ರಾಸಾಯನಿಕ ಕ್ರಿಯೆಗಳು ಯಾವುದೇ ಬದಲಾವಣೆ ಇಲ್ಲದೆ, ಮಾತ್ರ ಪರಮಾಣುಗಳ ನಡುವಿನ ರಾಸಾಯನಿಕ ಬಂಧಗಳ ರೂಪಿಸಿ ಬ್ರೇಕಿಂಗ್ ಎಲೆಕ್ಟ್ರಾನ್ಗಳ ಸ್ಥಾನಗಳನ್ನು ಒಳಗೊಂಡ ಬದಲಾವಣೆಗಳನ್ನು ಒಳಗೊಂಡಿರುತ್ತದೆ
• ರಾಸಾಯನಿಕ ಕ್ರಿಯೆ ಒಂದು ನಿಗದಿತ ಉಷ್ಣತೆಯಲ್ಲಿ ಮತ್ತು ರಾಸಾಯನಿಕ ಸಾಂದ್ರತೆಯಲ್ಲಿ ಒಂದು ವಿಶಿಷ್ಟ ಪ್ರತಿಕ್ರಿಯೆ ದರ ಸಂಭವಿಸಬಲ್ಲವು.
• ಮುಖ್ಯವಾಗಿ ನಾಲ್ಕು ವಿಧದ ರಾಸಾಯನಿಕ ಕ್ರಿಯೆಗಳಿವೆ.

1. ರಾಸಾಯನಿಕ ಸಂಯೋಗ (Chemical combination):


• ಎರಡು ಅಥವಾ ಹೆಚ್ಚು ಪ್ರತಿವರ್ತಕಗಳಿಂದ ಕೇವಲ ಒಂದು ಉತ್ಪನ್ನವು ಉತ್ಪತ್ತಿಯಾಗುವ ಕ್ರಿಯೆಯನ್ನು ಸಂಯೋಗ ಕ್ರಿಯೆ ಎಂದು ಕರೆಯಲಾಗುವುದು.
• ಉದಾ: ಕಾರ್ಬನ್ + ಆಕ್ಸಿಜನ್ → ಕಾರ್ಬನ್ ಡೈಆಕ್ಸೈಡ್.
• ಹೈಡ್ರೊಜನ್ + ಆಕ್ಸಿಜನ್ → ನೀರು.

2. ರಾಸಾಯನಿಕ ವಿಭಜನೆ(Chemical decomposition):


• ಒಂದು ವಸ್ತುವು ಎರಡು ಅಥವಾ ಹೆಚ್ಚು ವಸ್ತುಗಳಾಗಿ ವಿಭಜನೆ ಹೊಂದುವ ಕ್ರಿಯೆಯನ್ನು ರಾಸಾಯನಿಕ ವಿಭಜನೆ ಎನ್ನುವರು. ಅಂದರೆ ಒಂದು ವಸ್ತುವು ಸರಳ ವಸ್ತುಗಳಾಗಿ ವಿಭಜನೆ ಹೊಂದುವ ಕ್ರಿಯೆಯನ್ನು ರಾಸಾಯನಿಕ ವಿಭಜನೆ ಎನ್ನುವರು
• ರಾಸಾಯನಿಕ ವಿಭಜನೆಯ ಕ್ರಿಯೆಗಳನ್ನು ಉಷ್ಣ, ಬೆಳಕು ಅಥವಾ ವಿದ್ಯುತ್ತನ್ನು ಹಾಯಿಸುವುದರ ಮೂಲಕ ಉಂಟುಮಾಡಬಹುದು.
• ಉದಾ. ಸೋಡಿಯಮ ಕಾರ್ಬೇನೇಟ್(ಬೇಕಿಂಗ್ ಸೋಡಾ) ಕಾಯಿಸಿದಾಗ, ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಬಿಡುಗಡೆಯಾದ ಅನಿಲವನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ, ಅದು ಹಾಲಿನಂತೆ ಬೆಳ್ಳಗಾಗುತ್ತದೆ.

3.ರಾಸಾಯನಿಕ ಸ್ಥಾನಪಲ್ಲಟ (Chemical displacement):


• ಒಂದು ಸಂಯುಕ್ತದಿಂದ ಕಡಿಮೆ ಕ್ರಿಯಾಶೀಲವಾಗಿರುವ ಧಾತುವನ್ನು ಹೆಚ್ಚು ಕ್ರಿಯಾಶೀಲವಾಗಿರುವ ಧಾತುವೊಂದು ಸ್ಥಾನಪಲ್ಲಟಗೊಳಿಸುವ ರಾಸಾಯನಿಕ ಬದಲಾವಣೆಯನ್ನು ರಾಸಾಯನಿಕ ಸ್ಥಾನಪಲ್ಲಟ ಎನ್ನಲಾಗುವುದು. ಈ ಪ್ರಯೋಗಗಳನ್ನು ಪ್ರಯತ್ನಿಸಿ :
• ಉದಾ: ತ್ರಾಮದ ಮೇಲೆ ಬೆಳ್ಳಿಯ ಲೇಪನ

4.ರಾಸಾಯನಿಕ ದ್ವಿವಿಭಜನೆ (chemical Double decomposition):


• ಎರಡು ಸಂಯುಕ್ತಗಳು ದ್ರಾವಣ ಸ್ಥಿತಿಯಲ್ಲಿ ವರ್ತಿಸಿ ಅಯಾನುಗಳ ಪರಸ್ಪರ ವಿನಿಮಯದಿಂದ ಎರಡು ಹೊಸ ಸಂಯುಕ್ತಗಳನ್ನು ಉಂಟುಮಾಡುವ ರಾಸಾಯನಿಕ ಕ್ರಿಯೆಯನ್ನು ರಾಸಾಯನಿಕ ದ್ವಿವಿಭಜನೆ ಎಂದು ಕರೆಯಲಾಗುತ್ತದೆ.
• ಸೋಡಿಯಮ್ ಹೈಡ್ರಾಕ್ಸೈಡ್ + ಹೈಡ್ರೋಕ್ಲೋರಿಕ್ ಆಮ್ಲ = ಸೋಡಿಯಮ್ ಕ್ಲೋರೈಡ್ + ನೀರು