ಡಿಸೆಂಬರ್ 6th, 2017

 

1.ರೈಲ್ವೆ ಇಲಾಖೆಯಲ್ಲಿ ಲಾಟರಿ ಯೋಜನೆ


• ರೈಲ್ವೆ ಟಿಕೆಟ್ ಗಳನ್ನು BHIM APP or UPI ಮೂಲಕ ಕಾಯ್ದಿರಿಸುವುದಕ್ಕೆ ಉತ್ತೇಜನ ನೀಡುವುದಕ್ಕಾಗಿ IRCTC ಈ ಯೋಜನೆ ಜಾರಿಗೆ ತಂದಿದೆ.
• ಅದೃಷ್ಟಶಾಲಿ ವಿಜೇತರಿಗೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಗಲಿದೆ.
• ಪ್ರತಿ ತಿಂಗಳು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
• 6 ತಿಂಗಳಿನ ವರೆಗೆ ಈ ಯೋಜನೆ ಜಾರಿಯಲ್ಲಿರಲಿದೆ.
• Www.irctc.co in ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ಮಾತ್ರ ಪರಿಗಣಿಸಲಾಗುವುದು.
• ಭದ್ರತಾ ಸಿಬ್ಬಂದಿಗೆ S1 ಭೋಗಿಯಲ್ಲಿರುವ ಸಂಖ್ಯೆ->63 ಆಸನವನ್ನು ರೈಲ್ವೆ ಸಚಿವಾಲಯ ನಿಗದಿಪಡಿಸಿದೆ.

2.ರಫ್ತ್ತುಉತ್ತೇಜನಕ್ಕೆ ಕ್ರಮ:


• ಸರಕು ಸೇವೆಗಳ ರಫ್ತು ವಹಿವಾಟ ಹೆಚ್ಚಿಸಲು ಕೇಂದ್ರ ಸರ್ಕಾರ ಉತ್ತೇಜನ ಕ್ರಮಗಳನ್ನು ಪ್ರಕಟಿಸಿದೆ.
• 2015 ರಿಂದ 2020 ವರೆಗಿನ 5 ವರ್ಷಗಳ ವಿದೇಶ ವ್ಯಾಪಾರ ನೀತಿಯ ಮಧ್ಯಂತರ ಪರಾಮರ್ಶೆಯಲ್ಲಿ ಈ ಉತ್ತೇಜನ ಕೊಡುಗೆ ಪ್ರಕಟಿಸಲಾಗಿದೆ.
• ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ [MSME] ಮತ್ತು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕೈಗಾರಿಕೆಗಳ ಉತ್ತೇಜನ ದರವನ್ನು 2% ಕ್ಕೆ ಹೆಚ್ಚಿಸಲಾಗಿದೆ.
• ವಿವಿಧ ವಲಯಗಳಿಗೆ ಘೋಷಿಸಿರುವ ವಾರ್ಷಿಕ ಉತ್ತೇಜನ ಕೊಡುಗೆಯ ಪ್ರಮಾಣವು 34ರಷ್ಟು ಹೆಚ್ಚಳವಾಗಿದೆ.
• ಗರಿಷ್ಠ ಉದ್ಯೋಗ, ರಫ್ತು ನಿಯಮಗಳ ಸರಳೀಕರಣ, GST ಲಾಭದ ವಿಸ್ತರಣೆ, ಸೇವೆಗಳ ರಫ್ತು ಉತ್ತೇಜನ->ಈ ಮಧ್ಯಂತರ ಪರಾಮರ್ಶೆಯ ಉದ್ದೇಶ.
• 2% ರಿಂದ 3.5 %-> ಜಾಗತಿಕ ರಫ್ತಿನಲ್ಲಿ ಭಾರತದ ಕೊಡುಗೆ ಹೆಚ್ಚಳ ನಿರೀಕ್ಷೆ.
• 58.50 ಲಕ್ಷ ಕೋಟಿ -> 2020ಕ್ಕೆ ನಿಗದಿಪಡಿಸಿದ ರಫ್ತು ಗುರಿ

3.ವಲಸೆ ನಿಷೇಧ ನೀತಿ: ಅಮೆರಿಕ


• ಆರು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸುವ ವಲಸೆ ನೀತಿಗೆ ಸುಪ್ರಿಂಕೋರ್ಟ್ ಒಪ್ಪಿಗೆ ಸೂಚಿಸಿದೆ.
• ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದರು.
• ಸುಪ್ರಿಂ ನೀಡಿರುವ ತೀರ್ಪಿನಿಂದಾಗಿ ಇರಾನ್, ಲಿಬಿಯಾ, ಸಿರಿಯಾ, ಯೆಮನ್, ಸೋಮಾಲಿಯಾ ಮತ್ತು ಛಡ್ ದೇಶಗಳ ಪ್ರಜೆಗಳಿಗೆ ಪ್ರವೇಶ ನಿರ್ಬಂಧ ಜಾರಿಯಾಗಲಿದೆ.
• ಈ ವಲಸೆ ನಿಷೇಧ ನೀತಿಯನ್ನು ಪ್ರಶ್ನಿಸಿ ಹವಾಯಿ ಮತ್ತು ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್, ನ್ಯಾಯಾಲಯದ ಮೊರೆ ಹೋಗಿದ್ದವು.
• 9 ನ್ಯಾಯಮೂರ್ತಿಗಳಿದ್ದ ನ್ಯಾಯಪೀಠವು ಇದರ ವಿಚಾರಣೆ ನಡೆಸಿತು. ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಕೆಳಹಂತದ ನ್ಯಾಯಾಲಯಗಳ ತೀರ್ಪನ್ನು ಎತ್ತಿ ಹಿಡಿದರು. ಆದರೆ ತಮ್ಮ ಈ ನಿರ್ಧಾರಕ್ಕೆ ಸೂಕ್ತ ಕಾರಣ ನೀಡಿಲ್ಲ.

Contributed by: Mallikajan.Korbu