Loading [Contrib]/a11y/accessibility-menu.js

ಉದಯ್(UDAY- UJWAL DISCOM ASSURANCE YOJANA)

 

ದೇಶದ ಎಲ್ಲಾ ರಾಜ್ಯಗಳಲ್ಲಿ ವಿದ್ಯುತ್ ವಿತರಣಾ ಕಂಪನಿಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಅವುಗಳ ವಿತರಣಾ ಸಾಮಥ್ರ್ಯವನ್ನು ಹೆಚ್ಚಿರುವ ಗುರಿಯೊಂದಿಗೆ ಆರಂಬಿಸಿರುವ ಯೋಜನೆ ಇದು. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರ ಮಹತ್ತರ ಯೋಜನೆಯಾದ ಡಿ.ಡಿ.ಯು.ಜಿ.ಜೆ.ವೈನಲ್ಲಿ 24/7 ನಿರಂತರ ವಿದ್ಯುತ್ ಸರಬರಾಜು ಮಾಡುವ ಗುರಿಯನ್ನು ಸಾಧಿಸುವುದು ಕೇಂದ್ರ ಸರ್ಕಾರದ ಉದ್ದೇಶ ಉದಯ್ ಯೋಜನೆಯಡಿಯಲ್ಲಿ ಸಾಲದಲ್ಲಿರುವ ಡಿಸ್ಕಮ್ ಗಳ ಸಾಲದ ಶೇ75 ರಷ್ಟನ್ನು ಆಯಾ ಸರ್ಕಾರವು ಜವಾಬ್ದಾರಿ ತೆಗೆದುಕೊಂಡು ಬಾಂಡ್‍ಗಳನ್ನು ವಿತರಿಸುವ ಮೂಲಕ ಹಣ ಸಂಗ್ರಹಿಸಿ ಡಿಸ್ಕಮ್‍ಗಳ ಸಾಲ ತೀರಿಸ ಬೇಕಾಗುತ್ತದೆ ಉಳಿದ ಶೇ25 % ರಷ್ಟನ್ನು ಆಯಾ ಡಿಸ್ಕಮ್‍ಗಳು ಬಾಂಡ್ ಗಳನ್ನು ವಿತರಿಸುವ ಮೂಲಕ ಹಣ ಸಂಗ್ರಹಿಸಬಹುದು. ಈ ಯೋಜನೆ ವ್ಯಾಪ್ತಿಗೆ ಸೇರುವುದು ಆಯಾ ರಾಜ್ಯಗಳ ಇಚ್ಛೆಗೆ ಬಿಟ್ಟಿದ್ದು. ಉದಯ್ ಯೋಜನೆಗೆ ಸೇರಿದ ಮೊದಲ ರಾಜ್ಯ ಆಂಧ್ರ ಪ್ರದೇಶ. ನಾಗಲ್ಯಾಂಡ್, ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಇಲ್ಲಿಯ ತನಕ ಉದಯ್ ಯೋಜನೆಗೆ ಸಹಿ ಹಾಕಿಲ್ಲ .

ರಾಜ್ಯ ಡಿಸ್ಕಮ್ ಗಳ ಶೇ97 ರಷ್ಟು ಸಾಲ ಉದಯ್ ವ್ಯಾಪ್ತಿಗೆ :


26 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಡಿಸ್ಕಮ್ ಗಳ 97% ಸಾಲವು ಉದಯ್ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ರಾಜ್ಯಗಳ ಒಡೆತನದಲ್ಲಿರುವ ಎಲ್ಲಾ ವಿತರಣಾ ಕಂಪನಿಗಳ(ಡಿಸ್ಕಮ್) ಸಾಲ 3.95 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಉದಯ್ ಯೋಜನೆಯ ವ್ಯಾಪ್ತಿಯ ಮಿತಿಯಲ್ಲಿ ಸೇರಿರುವ ರಾಜ್ಯಗಳ ಒಟ್ಟು ಸಾಲ 3.82 ಲಕ್ಷ ಕೋಟಿ ಸಾಲ ಇದೆ.