ಸಂವಿಧಾನ

 

ಸಂವಿಧಾನದ ಅರ್ಥ :-


ಸಂವಿಧಾನ ಎಂಬ ಪದವು ‘ಕಾನ್‍ಸ್ಟಿಟೂಷನ್’ ಎಂಬ ಆಂಗ್ಲ ಪದದ ಕನ್ನಡ ರೂಪಾಂತರವಾಗಿದೆ. ‘ಕಾನ್‍ಸ್ಟಿಟೂಷನ್’ ಎಂಬ ಪದವು ‘ಕಾನ್‍ಸ್ಟಿಟೂಟ್’ ಎಂಬ ಪದದಿಂದ ಬಂದಿದೆ. ‘ಕಾನ್‍ಸ್ಟಿಟೂಟ್’ ಎಂದರೆ ರಚಿಸು, ಸಂಯೋಜಿಸು ಎಂದರ್ಥ.

• ಜಗತ್ತಿನ ಪ್ರತಿಯೊಂದು ರಾಷ್ಟ್ರವು ತನ್ನದೇ ಆದ ಸಂವಿಧಾನವನ್ನು ಹೊಂದಿರುತ್ತದೆ. ಸಂವಿಧಾನವಿಲ್ಲದ ರಾಷ್ಟ್ರ ಜಗತ್ತಿನಲ್ಲಿ ಯಾವುದು ಇಲ್ಲವೆನ್ನಬಹುದು.
• ಸಂವಿಧಾನದ ಆರಂಭವನ್ನು ಮೊದಲಿಗೆ ಗ್ರೀಕ್ ದೇಶದಲ್ಲಿ ಕಾಣಬಹುದು. ರಾಜ್ಯಶಾಸ್ತ್ರದ ಪಿತಾಮಹ ಅರಿಸ್ಟಾಟಲ್ 158 ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ತನ್ನ ದೇಶವಾದ ಅಥೆನ್ಸ್‍ಗೆ ಸಂವಿಧಾನವನ್ನುರಚಿಸಿದರು.
• ಅರಿಸ್ಟಾಟಲ್ ತನ್ನ ಗ್ರಂಥವಾದ ‘ಪಾಲಿಟಿಕ್ಸ್’ನಲ್ಲಿ ಸಂವಿಧಾನದ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದ್ದಾನೆ.

ವ್ಯಾಖ್ಯೆಗಳು


ಮೇಕೇವರ್: “ರಾಜ್ಯವನ್ನು ಆಳುವ ಕಾನೂನೇ ಸಂವಿಧಾನ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೆ.ಸಿ.ವ್ಹೀರ್ : “ಒಂದು ರಾಷ್ಟ್ರದ ಸರ್ಕಾರವು ಆಡಳಿತವನ್ನು ನಡೆಸಲು ಅಗತ್ಯವಾದ ಕಾನೂನು ಬದ್ಧ ನಿಯಮಗಳ ಸಂಕಲನವೇ ಸಂವಿಧಾನ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅರಿಸ್ಟಾಟಲ್ “ರಾಜ್ಯಗಳ ಆಡಳಿತ ಹಾಗೂ ಅಧಿಕಾರವನ್ನು ಅದರಲ್ಲಿಯೂ ಪರಮಾಧಿಕಾರವನ್ನು ವ್ಯವಸ್ಥೆಗೊಳಿಸುವುದೇ ಸಂವಿಧಾನ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಅವಶ್ಯಕತೆಯ ಪ್ರಮುಖ ಅಂಶಗಳು


* ಸರ್ಕಾರದ ಮೇಲೆ ನಿಯಂತ್ರಣ ಹೇರುತ್ತದೆ.
*ಕಲ್ಯಾಣ ರಾಜ್ಯಕ್ಕೆ ಮಾರ್ಗದರ್ಶನ ನೀಡುತ್ತದೆ.
* ಸರ್ಕಾರ ಮತ್ತು ಜನರ ನಡುವೆ ಉತ್ತಮ ಸಂಬಂಧ ಬೆಳೆಸುತ್ತದೆ.
* ಮುಂದಿನ ಪೀಳಿಗೆಗೆ ಬುನಾದಿಯಾಗುತ್ತದೆ.
*ಜನರ ನಡವಳಿಕೆಯ ಮೇಲೆ ನಿಯಂತ್ರಣ ಹೇರುತ್ತದೆ.