ಭಾರತ ಸ್ವಾಭಾವಿಕ ಸಸ್ಯವರ್ಗ ಮತ್ತು ಅರಣ್ಯಗಾರಿಕೆ (Natural Vegetation and Forestry)
 
ಸ್ವಾಭಾವಿಕ ಸಸ್ಯವರ್ಗ
ಭಾರತವು 2009 ರ ಅಂದಾಜಿನಂತೆ 6.9 ಲಕ್ಷ ಚ.ಕಿ.ಮೀ(69.0 ದ.ಲ.ಹೇ) ಅಂದರೆ ಭೌಗೋಳಿಕ ಕ್ಷೇತ್ರದ ಶೇ 21.02 ರಷ್ಟು ಭೂಭಾಗವು ಅರಣ್ಯಗಳಿಂದ ಕೂಡಿರುವುದಾಗಿದೆ.
1) ತೇವಯುತ ನಿತ್ಯ ಹರಿದ್ವರ್ಣದ ಅರಣ್ಯಗಳು : ಭಾರತದಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು 250 ಸೆಂ.ಮೀ.ಗಳಿಗಿಂತ ಹೆಚ್ಚು ಮಳೆ ಪಡೆಯುವ 900 ಮೀ.ಗಳಿಗಿಂತ ಕಡಿಮೆ ಎತ್ತರವನ್ನು ಹೊಂದಿರುವ ಪ್ರದೇಶಗಳಲ್ಲಿ ಕಾಣಬಹುದು. ಈ ಬಗೆಯ ಅರಣ್ಯಗಳು ಪಶ್ಚಿಮ ಘಟ್ಟಗಳು, ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್ ಹಾಗೂ ಅಂಡಮಾನ್ ನಿಕೋಬಾರ್ ಮತ್ತು ಲಕ್ಷದ್ವೀಪಗಳಲ್ಲಿ ಕಂಡು ಬರುತ್ತವೆ. ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೆ ಮೆಸೂಆ,ವೈಟ್ ಸೀಡರ್,ಕಾಲೋಫಿಲಮ್,ತೂನ್,ಧೂಪ,ಹೋಪಿಯಾ,ಜಾಮೂನ್,ಅಗರ್ ಮತ್ತು ಬಿದಿರು ಪ್ರಮುಖವಾದವು.
2) ಎಲೆಯುದುರಿಸುವ ಶುಷ್ಕ ಅರಣ್ಯಗಳು : ಈ ಪ್ರಕಾರದ ಅರಣ್ಯಗಳು ಭಾರತದಲ್ಲಿ ಅತಿಹೆಚ್ಚು ವಿಸ್ತಾರವಾಗಿ ಹರಡಿವೆ. ಇವುಗಳು 100 ರಿಂದ 150 ಸೆಂ.ಮೀ. ಮಳೆ ಪಡೆಯುವ ಪ್ರದೇಶಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ಇದು ಭಾರತದ ಶೇ 65.5 ರಷ್ಟು ಒಟ್ಟು ಅರಣ್ಯದಲ್ಲಿ ಹರಡಿವೆ. ಭಾರತವು ಮಾನ್ಸೂನ್ ವಾಯುಗುಣವನ್ನು ಹೊಂದಿರುವುದರಿಂದ ಈ ಬಗೆಯ ಅರಣ್ಯಗಳು ವ್ಯಾಪಕವಾಗಿ
ಹಂಚಿಕೆಯಾಗಿವೆ. ಇಲ್ಲಿ ಬೆಳೆಯುವ ಮರಗಳೆಂದರೆ ತೇಗ,ತೂಪೆರ್,ಬೀಟೆ,ಪಾಲಾಸ್,ಬೆಲ್,ಲಾರೆಲ್,ಗಂಧದ ಮರ ಇತ್ಯಾದಿ.
3) ಉಷ್ಣವಲಯದ ಹುಲ್ಲುಗಾವಲು ಅರಣ್ಯ : ಭಾರತದಲ್ಲಿ 60 ರಿಂದ 75 ಸೆಂ.ಮೀ ಮಳೆ ಪಡೆಯುವ ಪ್ರದೇಶಗಳಲ್ಲಿ ಹುಲ್ಲುಗಾವಲು ಸಸ್ಯವರ್ಗ ಪ್ರಧಾನವಾಗಿ ಕಂಡುಬರುವುದು. ಬಬೂಲ್, ಶಿಷಮ್, ಸಭಾಯ್ ಹುಲ್ಲು ಇತ್ಯಾದಿ ಇಲ್ಲಿ ಬೆಳೆಯುತ್ತವೆ.
4) ಮ್ಯಾಂಗ್ರೂವ್ ಅರಣ್ಯಗಳು : ತೀರ ಪ್ರದೇಶಗಳ ತಗ್ಗುವಲಯಗಳು ಸಮುದ್ರದ ಉಬ್ಬರದ ಕಾಲದಲ್ಲಿ ನೀರಿನಿಂದ ಆವರಿಸಲ್ಪಡುತ್ತವೆ. ಈ ಕಾಡುಗಳು ಇಂತಹ ನದಿ ಮುಖಜ ಭೂಮಿಗಳು ಮತ್ತು ನದಿ ಅಳಿವೆಗಳ ತಗ್ಗು ಪ್ರದೇಶಗಳಲ್ಲಿ ಕಂಡು ಬರುತ್ತವೆ. ಗಂಗಾ,ಮಹಾನದಿ,ಗೋದಾವರಿ, ಕೃಷ್ಣಾ ನದಿ ಮುಖಜಭೂಮಿಯಲ್ಲಿ ಕಂಡುಬರುತ್ತವೆ. ಗಂಗಾನದಿಯ ಮುಖಜ ಭೂಮಿಯಲ್ಲಿ ಸುಂದರಿ ಮರಗಳು ಹೇರಳವಾಗಿರುವದರಿಂದ ಈ ಪ್ರದೇಶವನ್ನು ಸುಂದರಬನ್ ಎಂದು ಕರೆಯುತ್ತಾರೆ. ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೆ ಬ್ರುಗುಯೆರ,ಸೊಸ್ನಿರಾಟಿಯ,ಅಗರ್,ಬೆಂಡಿ,ಕಿಯೋರ,ಫೈನ್,ಇತ್ಯಾದಿ
5) ಮರುಭೂಮಿ ಅರಣ್ಯಗಳು : ಈ ಅರಣ್ಯಗಳು ಸಾಮಾನ್ಯವಾಗಿ ವಾರ್ಷಿಕ 50 ಸೆ.ಮೀ.ಗಿಂತಲೂ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಕಂಡು ಬರುತ್ತವೆ. ರಾಜಸ್ತಾನದ ಥಾರ್ ಮರುಭೂಮಿ ಅದಕ್ಕೆ ಹೊಂದಿಕೊಂಡ ಪಂಜಾಬ್, ಹರಿಯಾಣ ಮತ್ತು ಗುಜರಾತ್ ರಾಜ್ಯಗಳ ಕೆಲವು ಭಾಗಗಳಲ್ಲಿ ಈ ಅರಣ್ಯಗಳಿವೆ. ಈ ಸಸ್ಯವರ್ಗಗಳು ಆಳವಾಗಿ ಬೇರುಗಳನ್ನು ಹೊಂದಿದ್ದು ಜಾಲಿ ಮರಗಳು,ಖರ್ಜೂರದ ಮರಗಳು,ಕುರುಚಲ ಜಾತಿಯ ಸಸ್ಯವರ್ಗಗಳು ಕಂಡು ಬರುತ್ತವೆ..
6) ಹಿಮಾಲಯದ ಅಲ್ಪೈನ್ ಅರಣ್ಯಗಳು : ಹಿಮಾಲಯ ಪರ್ವತಗಳಲ್ಲಿ ವಿವಿಧ ಬಗೆಯ ಅರಣ್ಯಗಳು ಕಂಡು ಬರುತ್ತವೆ. ಇಲ್ಲಿ ಬೆಳೆಯುವ ಮುಖ್ಯ ಮರಗಳೆಂದರೆ ಸಾಲ್, ಬೈರಾ, ಟೂನ್, ಸಿಲ್ವರ್,ಸ್ಟ್ರೂಸ್, ಲಾರೆಲ್ ಮುಂತಾದ ಎಲೆ ಮೊನಚಾದ ಅರಣ್ಯಗಳು ಪ್ರಧಾನವಾಗಿ ಬೆಳೆದಿರುತ್ತವೆ.
ಅರಣ್ಯಗಾರಿಕೆ
• ಭಾರತವೂ ಪ್ರಪಂಚದ ಒಟ್ಟು ಅರಣ್ಯ ಕ್ಷೇತ್ರದ ಶೇ ೧.೭೨ ರಷ್ಟನ್ನು ಮಾತ್ರ ಒಳಗೊಂಡಿದೆ.ದೇಶದ ಒಟ್ಟು ಭೌಗೋಳಿಕ ಕ್ಷೇತ್ರದ ಶೇ ೨೧.೩೪ ರಷ್ಟು ಭಾಗವೂ ಮಾತ್ರ ಅರಣ್ಯಗಳಿಂದ ಕೂಡಿರುವುದು.
• ಅರಣ್ಯಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
• ೧.ಕಾಯ್ದಿಟ್ಟ ಅರಣ್ಯ:ಭಾರತ ಅರಣ್ಯ ಕಾಯ್ದೆಯ ಅಥವಾ ರಾಜ್ಯಗಳು ರೂಪಿಸಿದ ಅರಣ್ಯ ಕಾಯ್ದೆಯ ಪ್ರಕಾರ ಪೂರ್ಣ ಸಂರಕ್ಷಿತ ಅರಣ್ಯ ಪ್ರದೇಶವೇ ಕಾಯ್ದಿಟ್ಟ ಅರಣ್ಯ.ಭಾರತದ ಒಟ್ಟು ಭೌಗೋಳಿಕ ವಿಸ್ತೀರ್ಣದ ಶೇ ೧೨.೮೮ ಈ ವರ್ಗಕ್ಕೆ ಸೇರಿದೆ.
• ೨.ಸಂರಕ್ಷಿತ ಅರಣ್ಯ :ಈ ವಲಯದಲ್ಲಿ ಮಾನವನ ಚಟುವಟಿಕಗಳಿಗೆ ನಿರ್ಬಂಧಗಳಿಲ್ಲದಿದ್ದಲ್ಲಿ ಅವಕಾಶಗಳು ಮುಕ್ತವಾಗಿರುತ್ತವೆ. ಭಾರತದ ಒಟ್ಟು ಭೂ ಭಾಗದ ಅರಣ್ಯದ ಶೇ ೬.೬ ಈ ವಿದಕ್ಕೆ ಸೇರಿದೆ.
• ೩.ವಿಂಗಡಿಸಲ್ಪಡದ ಅರಣ್ಯ:ಇವುಗಳ ಒಟ್ಟು ವಿಸ್ತಾರ ಶೇ ೩.೮೦ ರಷ್ಟಿದೆ.
ರಾಜ್ಯವಾರು ಹಂಚಿಕೆ
• ಭಾರತದಲ್ಲಿ ರಾಜ್ಯವಾರು ಅರಣ್ಯಗಳ ಹಂಚಿಕೆಯಲ್ಲಿ ಬಹಳ ವ್ಯತ್ಯಾಸ ಕಾಣ ಬಹುದು.
• ಭಾರತದಲ್ಲಿ ಮಧ್ಯ ಪ್ರದೇಶವು ಅತಿ ಹೆಚ್ಚು ಅರಣ್ಯವನ್ನು ಹೊಂದಿರುವ ರಾಜ್ಯವಾಗಿದೆ.ಅರುಣಾಚಲ ಪ್ರದೇಶ ಮತ್ತು ಛತ್ತೀಸ್ ಘರ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
• ಮಿಝೋರಾಂ ಶೇ ೮೮.೯೩ ರಷ್ಟು ಭೂ ವಲಯದಲ್ಲಿ ಅರಣ್ಯಗಳನ್ನು ಹೊಂದಿದೆ.
• ಭಾರತದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ-ಹರಿಯಾಣ.ಇದು ಶೇ ೦.೧ ರಷ್ಟು ಅರಣ್ಯಗಳನ್ನು ಹೊಂದಿದೆ.ನಂತರ ಸ್ಥಾನದಲ್ಲಿ ಪಂಜಾಬಿದೆ.
• ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಅರಣ್ಯವನ್ನು ಲಕ್ಷದ್ವೀಪ ಹೊಂದಿದೆ.
ವನ್ಯಜೀವಿ ಧಾಮಗಳು
ಭಾರತದಲ್ಲಿ ಇಂದು ಸುಮಾರು 523 ವನ್ಯಜೀವಿ ಧಾಮಗಳಿವೆ.
ಅವುಗಳಲ್ಲಿ ಮುಖ್ಯವಾದವುಗಳೆಂದರೆ :
• ತಮಿಳುನಾಡು : ಅಣ್ಣಾಮಲೈ ವನ್ಯ ಜೀವಿಧಾಮ, ಕೊಯಿಮತ್ತೂರು.
• ಪಶ್ಚಿಮ ಬಂಗಾಳ : ಮದಾರಿಹಾತ್, ಜಾಲ್ದಾಪಾರ.
• ರಾಜಸ್ತಾನ : ಭರತಪುರ, ಕಿವೋಲ ಡಿವೋ ಪಕ್ಷಿಧಾಮ.
• ಹರಿಯಾಣ : ಸುಲ್ತಾನಪೂರ, ಗುರೆಗಾಂವ.
• ಪಂಜಾಬ : ಬೀರ್‍ಮೊತಿಬಾಗ್, ಪಟಿಯಾಲ.
• ಆಂಧ್ರಪ್ರದೇಶ : ಗುಂಟೂರು, ನಾಗಾರ್ಜುನ ಸಾಗರ.
ರಾಷ್ಟ್ರೀಯ ಉದ್ಯಾನವನಗಳು
ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನವೆಂದರೆ ಉತ್ತರಾಂಚಲದ ಜಿಮ್ ಕಾರ್ಬೆಟ್(1936). ದೇಶದ ಅತಿಮುಖ್ಯ ರಾಷ್ಟ್ರೀಯ ಉದ್ಯಾನವನಗಳೆಂದರೆ :
1) ಕಾಜಿರಂಗ ನ್ಯಾಷನಲ್ ಪಾರ್ಕ್, ಸಿಬ್‍ಸಾಗರ, ಅಸ್ಸಾಂ.
2) ಸುಂದರಬನ, ಪಶ್ಚಿಮ ಬಂಗಾಳ.
3) ಹಜಾರಿಭಾಗ ನ್ಯಾಷನಲ್ ಪಾರ್ಕ್, ಬಿಹಾರ.
4) ಗಿರ್ ನ್ಯಾಷನಲ್ ಪಾರ್ಕ್, ಜಗನ್ನಾಥ, ಗುಜರಾತ.
5) ಕನ್ಹಾ ರಾಷ್ಟ್ರೀಯ ಉದ್ಯಾನವನ, ಮಾಂಡ್ಯ ಮತ್ತು ಬಾಲಘಾಟ್ ಮಧ್ಯ ಪ್ರದೇಶ.
6) ತಾಂಡೋವಾ ರಾಷ್ಟ್ರೀಯ ಉದ್ಯಾನವನ, ಚಂದ್ರಾಪೂರ, ಮಹಾರಾಷ್ಟ್ರ.