ಸಿಪಾಯಿ ದಂಗೆಯ ಪ್ರಸಾರ

 

·         ಸಿಪಾಯಿಗಳಲ್ಲಿ ಮೂಡಿದ ಅತೃಪ್ತಿಯ ಕುರುಹು ಮೊದಲು 1857ರ ಮಾರ್ಚ 29 ರಂದು ಬಂಗಾಳದ ಬ್ಯಾರಕ್‍ಪುರದ ಸಿಪಾಯಿಗಳಲ್ಲಿ ಕಾಣಿಸಿಕೊಂಡಿತು. ಅಲ್ಲಿನ ಸೇನಾನಿ ಮಂಗಲ ಪಾಂಡೆ ಬ್ರಿಟಿಷರು ಉಪಯೋಗಿಸಿದ ಕೊಬ್ಬು ಸವರಿದ ತೋಟಾಗಳನ್ನು ಬಳಸಲು ನಿರಾಕರಿಸಿದ್ದಲ್ಲದೆ ಒಬ್ಬ ಬ್ರಿಟಿಷ್ ಸಹಾಯಕ ಸೈನ್ಯಾಧಿಕಾರಿಯನ್ನು ಗುಂಡಿಟ್ಟು ಕೊಂದನು. ಈ ಘಟನೆಯ ಪರಿಣಾಮವಾಗಿ ಮಂಗಲ ಪಾಂಡೆಯನ್ನು 1857ರ ಏಪ್ರಿಲ್ 8 ರಂದು ನೇಣು ಹಾಕಲಾಯಿತು. ಬ್ಯಾರಕ್‍ಪುರದಲ್ಲಿನ ಸ್ಥಳೀಯ ಸೇನಾ ದಳವನ್ನು ಸೇವೆಯಿಂದ ತೆಗೆದುಹಾಕಲಾಯಿತು. ಬ್ರಿಟಿಷರು ಭಾರತೀಯರಿಗೆ ಕೊಬ್ಬು ಸವರಿದ ತೋಟಾಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೇ ಮಾಡಲಿಲ್ಲ. 1857ರ ಸಿಪಾಯಿ ದಂಗೆಯು ದೆಹಲಿ, ಲಕ್ನೋ, ಕಾನ್ಪುರ, ರೋಹಿಲ ಖಂಡ ಹಾಗೂ ಬುಂದೇಲ್ ಖಂಡ (ಮಧ್ಯಭಾರತ) ಈ ಐದು ಮುಖ್ಯ ಪ್ರದೇಶಗಳನ್ನು ಕೇಂದ್ರಿಕರಿಸಿದ್ದಿತು.

·         ಮೀರತ್‍ನಿಂದ ದಂಗೆಕೋರರು ಮರುದಿನವೇ ಅಂದರೆ 1857ರ ಮೇ 11 ರಂದು ದೆಹಲಿಗೆ ಧಾವಿಸಿ, ದೆಹಲಿಯನ್ನು ವಶಪಡಿಸಿಕೊಂಡರು. ಇಲ್ಲಿ ಅನೇಕ ಯುರೋಪಿಯನ್ನರನ್ನು ಕೊಲೆ ಮಾಡಿ, ದೆಹಲಿಯ ಅರಮನೆಯನ್ನು ವಶಪಡಿಸಿಕೊಂಡು ವೃದ್ದ ಮೊಗಲ್ ಸಾಮ್ರಾಟ್ ಬಹು ದ್ದೂರ್ ಷಾನನ್ನು ಹಿಂದೂಸ್ತಾನದ ಸಾಮ್ರಾಟನೆಂದು ಘೋಷಿಸಿದರು.

·         ನಾನಾಸಾಹೇಬ್, ಪೇಶ್ವೆ ಎಂದು ಘೋಷಿಸಿಕೊಂಡು ಬ್ರಿಟಿಷ್‍ರ ವಿರುದ್ದ ಕಾನ್ಪುರದಲ್ಲಿ ಸಿಡಿದೆದ್ದನು. ತ್ಯಾತಟೋಪಿ, ನಾನಾಸಾಹೇಬ್‍ನ ಸಹಾಯಕನಾಗಿ ಕಾರ್ಯನಿರ್ವಹಿಸಿದನು. ನಾನಾ ಸಾಹೇಬ್‍ನ ತಂಡವು ಕಾನ್ಪುರ ಸಮೀಪವಿದ್ದ ಬ್ರಿಟಿಷ್ ಸೇನಾ ರಕ್ಷಣಾ ಕೇಂದ್ರಕ್ಕೆ 3000 ಸೈನಿಕರೊಂದಿಗೆ ಮುತ್ತಿಗೆ ಹಾಕಿದರು. ಒಂದು ತಿಂಗಳು ರಕ್ಷಣೆ ಮಾಡಿಕೊಂಡ ಬ್ರಿಟಿಷರು ಜೀವ ರಕ್ಷಣೆಯ ಒಪ್ಪಂದದ ಮೇರೆಗೆ ಕೋಟೆಯನ್ನು ತೆರವು ಮಾಡಲು ಒಪ್ಪಿದರು. ಒಪ್ಪಂದದ ಪ್ರಕಾರ ಗಂಗಾನದಿಯ ಆಚೆಯ ದಡಕ್ಕೆ ಬ್ರಿಟಿಷ್ ಸೈನ್ಯ ಸುರಕ್ಷಿತವಾಗಿ ಸೇರಲು 40 ದೋಣಿಗಳನ್ನು ಒದಗಿಸಲಾಯಿತು. ಆದರೆ ಬ್ರಿಟಿಷ್ ಸೈನಿಕರು ದೋಣಿಯನ್ನು ಹತ್ತಿದ ತಕ್ಷಣ ಭಾರತೀಯ ಸೈನಿಕರು ಅವರ ಮೇಲೆ ಗುಂಡಿನ ಸುರಿಮಳೆಗೈದರು. 1857ರ ಜೂನ್ 27 ರಂದು ನಡೆದ ಈ ಘಟನೆಯಲ್ಲಿ ಅನೇಕ ಬ್ರಿಟಿಷ್ ಸೈನಿಕರು, ಬ್ರಿಟಿಷ್ ಸ್ತ್ರೀಯರು ಹಾಗೂ ಮಕ್ಕಳು ಹತರಾದರು. ಕಾನ್ಪುರದ ಈ ಘಟನೆಯನ್ನು ‘ಕಾನ್ಪುರದ ಕಗ್ಗೊಲೆ’ ಎಂದು ಬ್ರಿಟಿಷರು ಕರೆದಿದ್ದಾರೆ.

·         1857ರ ಜೂನ್‍ನಲ್ಲಿ ಝಾನ್ಸಿಯ ಸೇನೆ ರಾಣಿ ಲಕ್ಷ್ಮೀಬಾಯಿ ನೇತೃತ್ವದಲ್ಲಿ ದಂಗೆ ಎದ್ದಿತು. ಅಲ್ಲಿಯ ಕೋಟೆಯಲ್ಲಿದ್ದ ಬ್ರಿಟಿಷರನ್ನು ಕೊಲೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾನ್ಪುರವ ನ್ನು ಕಳೆದುಕೊಂಡ ತಾತ್ಯಾಟೋಪೆ, ರಾಣಿ ಲಕ್ಷ್ಮೀಬಾಯಿಯ ಸೇನೆಯನ್ನು ಸೇರಿಕೊಂಡನು. ತಾತ್ಯಾಟೋಪೆಯು 20,000 ಸೈನ್ಯದೊಂದಿಗೆ ಕಾನ್ಪುರವ ನ್ನು 1857ರ ನವೆಂಬರ್‍ನಲ್ಲಿ ವಶಪಡಿಸಿಕೊಂಡನು. ರಾಣಿ ಲಕ್ಷ್ಮೀಬಾಯಿ ಹಾಗೂ ತಾತ್ಯಾಟೋಪೆಯ ಸೈನಿಕ ತಂತ್ರದಿಂದ ಗ್ವಾಲಿಯರ್‍ನ್ನು ವಶಪಡಿಸಿಕೊಂಡರು. 1858ರ ಜೂನ್ 11 ರಂದು ಝಾನ್ಸಿರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ದ ಹೋರಾಡುತ್ತಲೆ ವೀರಮರಣ ಹೊಂದಿದಳು. ಈ ಸಂದರ್ಭದಲ್ಲಿ ಬ್ರಿಟಿಷರು ಗ್ವಾಲಿಯರ್ ಕೋಟೆಯನ್ನು ಮತ್ತೆ ವಶಪಡಿಸಿಕೊಂಡರು.

ದಂಗೆಯ ವಿಫಲತೆ


• 1857 ರ ಸಿಪಾಯಿ ದಂಗೆ ಹಲವಾರು ಕಾರಣಗಳಿಂದ ವಿಫಲವಾಯಿತು. ಅದರಲ್ಲಿ ಪ್ರಮುಖ ಕಾರಣವೆಂದರೆ ಭಾರತೀಯರ ಜನತೆಯಲ್ಲಿ ಭಾವೈಕ್ಯತೆಯ ಕೊರತೆ ಎದ್ದು ಕಾಣುತ್ತಿತ್ತು. ಈ ದಂಗೆಯು ಯೋಗ್ಯ ನಾಯಕರ ಹಾಗೂ ಸಂಘಟನೆಯ ಕೊರತೆಯನ್ನು ಎದುರಿಸಬೇಕಿತ್ತು. ಇಲ್ಲಿನ ನಾಯಕರಿಗೆ ನಿರ್ದಿಷ್ಟ ಗುರಿ ಎಂಬುದು ಇರಲಿಲ್ಲ. ಕ್ರಾಂತಿಯ ಕಿಡಿ ಉತ್ತರ ಭಾರತದ ಕೆಲವೇ ಪ್ರದೇಶಗಳಲ್ಲಿ ಹರಡಿದ್ದುದು ಸಹ ಸೋಲಿಗೆ ಕಾರಣ ಎನ್ನಬಹುದು.
• ದಂಗೆಯಲ್ಲಿ ಆಫ್ಘನ್ ಭಾಗಗಳು ತಟಸ್ಥ ನೀತಿ ಅನುಸರಿಸುತ್ತಿದ್ದರಿಂದ ಸಿಖ್ ಮತ್ತು ಗೂರ್ಖರು ಈ ದಂಗೆ ಸಮಯದಲ್ಲಿ ಬ್ರಿಟಿಷರಿಗೆ ಸಹಾಯ ಹಸ್ತ ನೀಡಿದ್ದರಿಂದಲೂ ದಂಗೆಯ ವಿಫಲತೆಗೆ ಕಾರಣವಾಯಿತು.
• ಇಲ್ಲಿನ ನಾಯಕರು ಸ್ವಾತಂತ್ರ್ಯದ ಉದ್ದೇಶವನ್ನಿಟ್ಟುಕೊಂಡು ಹೋರಾಡಿದವರಾಗಿರಲಿಲ್ಲ. ಸಂಪತ್ತಿನ ವ್ಯಾಮೋಹಕ್ಕಾಗಿ, ಸ್ವಾರ್ಥ ಹಕ್ಕು ಬಾಧ್ಯತೆಗಾಗಿ ಹೋರಾಡಿದರೇ ವಿನಃ ಸ್ವಾತಂತ್ರ್ಯ ಸಾಧಿಸುವ ಮನೋಭಾವದಿಂದಲ್ಲ. ಭಾರತೀಯ ಹೋರಾಟಗಾರರಿಗೆ ಸಂಪನ್ಮೂಲಗಳ ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಇತ್ತು. ದಂಗೆಕೋರ ಸಿಪಾಯಿಗಳು ದೇಶೀಯ ಜನರ ಮೇಲೂ ದರೋಡೆ ಹಾಗೂ ಹಿಂಸಾಚಾರಗಳನ್ನು ಕೈಗೊಂಡಿದ್ದರಿಂದ ದೇಶದ ಬಹುಸಂಖ್ಯಾತ ನಾಗರಿಕರು ದಂಗೆಕೋರರಿಗೆ ಸಹಾಯ ನೀಡುವ ಬದಲು ಅವರಿಂದ ದೂರವುಳಿದರು.

1857ರ ಸಿಪಾಯಿ ದಂಗೆಯ ಪರಿಣಾಮ ಹಾಗೂ ಮಹತ್ವ


• 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯ ಅಡಳಿತದಲ್ಲಿ ಹಲವಾರು ಮೂಲಭೂತ ಬದಲಾವಣೆಗಳಿಗೆ ಕಾರಣವಾಯಿತು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಅಳಿತ ಕೊನೆ ಗೊಂಡು, ಬ್ರಿಟಿಷ್ ರಾಣಿಯ ನೇರ ಅಳ್ವಿಕೆಗೆ ಒಳಪಟ್ಟಿತು. ಭಾರತೀಯ ಸೇನೆ 1857ರ ದಂಗೆಗೆ ಪ್ರಮುಖ ಕಾರಣವಾಯಿತು. ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಕೊನೆಗೊಂಡು, ಬ್ರಿಟಿಷ್ ರಾಣಿಯ ನೇರ ಆಳ್ವಿಕೆಗೆ ಒಳಪಟ್ಟಿತು
• ಬ್ರಿಟಿಷರು ತಮ್ಮ ಜನಾಂಗದ ಶ್ರೇಷ್ಠೆತೆಯನ್ನು ಒತ್ತಿ ಹೇಳುತ್ತಿದ್ದರು. ಇವರು ಒಡೆದು ಆಳುವ ನೀತಿಯನ್ನು ಅನುಸರಿಸಲಾರಂಭಿಸಿದರು. ಸ್ಥಳೀಯರ ವಿರದ್ದ ಎತ್ತಿಕಟ್ಟುವ ನೀತಿ ಇದಾಗಿತ್ತು. 1858ರ ಶಾಸನದ ಪ್ರಕಾರ ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಕ್ಯಾನಿಂಗ್ನು ಪ್ರಥಮ ವೈಸರಾಯ್ ಆಗಿ ಕಾರ್ಯ ನಿರ್ವಹಿಸಲಾರಂಭಿಸಿದನು.
• 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಲು ಈ ದಂಗೆ ಸಹಕಾರಿಯಾಯಿತು. ಈ ಘಟನೆಯಿಂದ ಒಂದು ಅಂಶ ಸ್ಪಷ್ಟವಾಯಿತು. ಭಾರತೀಯ ಸೇನೆಯಲ್ಲಿ ದೇಶಭಕ್ತಿಯ ಮನೋಭಾವವಿದೆ ಎಂದು ಎಲ್ಲೆಡೆ ಸ್ಪಷ್ಟವಾಯಿತು. ದಂಗೆಯನ್ನು ಬ್ರಿಟಿಷರು ಹತ್ತಿಕ್ಕಿದ ರೀತಿಯಿಂದ ಮುಂದೆ ರಾಷ್ಟ್ರೀಯತ ಹೆಚ್ಚಾಗಲು ಕಾರಣವಾಯಿತು.