ಡಿಸೆಂಬರ್ 23rd, 2017
 
1. ಇಂದು ರಾಷ್ಟ್ರೀಯ ರೈತ ದಿನ:
• ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ಜಯಂತಿ (ಡಿಸೆಂಬರ್ 23rd) ರಾಷ್ಟ್ರೀಯ ರೈತ ದಿನವಾಗಿ ಆಚರಿಸಲ್ಪಡುತ್ತದೆ.
• ಸ್ವತಃ ಕೃಷಿಕನಾಗಿದ್ದ ಚರಣ್ ಸಿಂಗ್, ಸರಳ ಜೀವನ ಶೈಲಿ ಮೂಲಕ ಆದರ್ಶ ಪ್ರಾಯರೆನಿಸಿದವರು.
a) ಜಮೀನ್ದಾರಿಕೆ ನಿರ್ಮೂಲನೆ ಕಾಯ್ದೆ
b) ಕೃಷಿ ಉತ್ಪನ್ನ ಮಾರುಕಟ್ಟೆ ಮಸೂದೆ etc.
ಯೋಜನೆ ಜಾರಿಗೆ ತಂದಿದ್ದರು
2.ಗುಜರಾತಿನ CM- ರೂಪಾಣಿ
• ಗುಜರಾತ್ ಮುಖ್ಯಮಂತ್ರಿಯಾಗಿ-> ವಿಜಯ್ ರೂಪಾಣಿ
ಉಪ ಮುಖ್ಯಮಂತ್ರಿಯಾಗಿ-> ನಿತಿನ್ ಪಟೇಲ್, ಆಯ್ಕೆಯಾಗಿದ್ದಾರೆ.
• CM ಆಯ್ಕೆ ಪ್ರಕ್ರಿಯೆಯ ವೀಕ್ಷಕರಾದ ಕೇಂದ್ರ ಸಚಿವ-> ಅರುಣ್ ಜೇಟ್ಲಿ,
• ಬಿಜೆಪಿ ಪ್ರಧಾನ ಕಾರ್ಯದರ್ಶಿ-> ಸರೋಜ್ ಪಾಂಡ್ಯ ನೇತೃತ್ವದಲ್ಲಿ ಅಹಮದಾಬಾದ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.
• ವಿಜಯ್ ರೂಪಾಣಿ 1952 ಅಗಸ್ಟ್ 2 ರಂದು ಬರ್ಮಾದ ರಂಗೂನ ನಲ್ಲಿ ಜನಿಸಿದರು.
• 2014 -> ರಾಜಕೋಟ್ ಪಶ್ಚಿಮ ವಿಧಾನಸಭೆಯಿಂದ ಶಾಸಕರಾಗಿ ಆಯ್ಕೆ.
• 2016 -> ಗುಜರಾತ್ ಬಿಜೆಪಿ ಅಧ್ಯಕ್ಷರಾದರು.
ಆನಂದಿಬೆನ್ ಬಳಿಕ ಗುಜರಾತಿನ ಸಿಎಂ ಆಗಿ ನೇಮಕ.
3.ಆದರ್ಶ ಹಗರಣದಲ್ಲಿ ಚವ್ಹಾಣ್ ನಿರಾಳ:
• ಮುಂಬೈನ ಕೊಲಾಬಾದಲ್ಲಿ 31 ಮಹಡಿಗಳ ಆದರ್ಶ ಹೌಸಿಂಗ್ ಸೊಸೈಟಿ ನಿರ್ಮಾಣ ಮಾಡಲಾಗಿತ್ತು.
• ಉದ್ದೇಶ:ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಪತ್ನಿ ಮತ್ತು ರಕ್ಷಣಾ ಸಚಿವಾಲಯದ ಸಿಬ್ಬಂದಿಗಳಿಗಾಗಿ
• ಆದರೆ ಸೊಸೈಟಿ ನಿರ್ಮಾಣದ ಕೆಲಸಮಯದಲ್ಲೇ ಅಪಾರ್ಟಮೆಂಟಗಳಿಗೂ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸೇನೆಯ ಅಧಿಕಾರಿಗಳಿಗೆ, ತೀರ ಕಡಿಮೆ ದರದಲ್ಲಿ ಮಾರಾಟ ಮಾಡಿರುವ ವಿಚಾರ RTI ಅರ್ಜಿ ಒಂದರಿಂದ ಬಹಿರಂಗ.
• 2011ರಲ್ಲಿ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ J.A.ಪಾಟೀಲ್ ನೇತೃತ್ವದ ದ್ವಿಸದಸ್ಯ ನ್ಯಾಯಾಂಗ ಸಮಿತಿಗೆ ರಾಜ್ಯ ಸರಕಾರ ವಹಿಸಿತ್ತು.
• ಈ ಸಮಿತಿ 2 ವರ್ಷಗಳಲ್ಲಿ 182ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿ 2013ರಲ್ಲಿ ವರದಿ ಸಲ್ಲಿಸಿತ್ತು.
• ಈ ವರದಿಯಲ್ಲಿ ಮಹಾರಾಷ್ಟ್ರದ -
1. ಅಶೋಕ್ ಚವ್ಹಾಣ್
2. ವಿಲಾಸರಾವ್ ದೇಶಮುಖ್
3. ಸುಶೀಲ್ ಕುಮಾರ್ ಶಿಂಧೆ
4. ಶಿವಾಜಿರಾವ್ ಪಾಟೀಲ್
ಈ 4 ಮಾಜಿ ಮುಖ್ಯಮಂತ್ರಿಗಳ ಹೆಸರು ಉಲ್ಲೇಖಿಸಿತ್ತು
• 2010 ರಲ್ಲಿ ಅಶೋಕ್ ಚವ್ಹಾಣ್ ಮುಖ್ಯಮಂತ್ರಿಯಾಗಿದ್ದರಿಂದ ರಾಜಿನಾಮೆ ನೀಡಿದರು. ಆಗ ರಾಜ್ಯಪಾಲ K.ಶಂಕರನಾರಾಯಣನ್ ಅವರು ಅಶೋಕರ ವಿಚಾರಣೆಗೆ ಅವಕಾಶ ನೀಡಲಿಲ್ಲ.
• ಈ ಬೆನ್ನಲ್ಲೇ ಆರೋಪಿಗಳ ಪಟ್ಟಿಯಿಂದ ಹೆಸರು ತೆಗೆಯುವಂತೆ ಚವ್ಹಾಣ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿತ್ತು.
• 2015 ರ ಅಕ್ಟೋಬರ್ ನಲ್ಲಿ CBI, ಮಹಾರಾಷ್ಟ್ರ ಗವರ್ನರ್ ವಿದ್ಯಾಸಾಗರ ಅವರಿಗೆ ಹೊಸದಾಗಿ ಸಾಕ್ಷ್ಯಗಳನ್ನು ಸಲ್ಲಿಸಿತು. ಈ ವೇಳೆ ಚವ್ಹಾಣ್ ವಿಚಾರಣೆಗೆ ಗವರ್ನರ್ ಅವಕಾಶ ನೀಡಿದ್ದರು.
• ಇದನ್ನು ಪ್ರಶ್ನಿಸಿ ಚವ್ಹಾಣ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
• ಇದೀಗ ವಿಚಾರಣೆ ನಡೆಸಿದ ಹೈಕೋರ್ಟ್ ಗವರ್ನರ್ ಆದೇಶವನ್ನು ತಳ್ಳಿಹಾಕಿ ವಿಚಾರಣೆಗೆ ಅವಕಾಶವಿಲ್ಲವೆಂದು ಹೇಳಿದೆ.
4. ಜೆರುಸಲೆಂ ಮತದಾನ: ವಿಶ್ವಸಂಸ್ಥೆಯಲ್ಲಿ ನಿರ್ಣಯ
• ಜೆರುಸಲೆಂ ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ ಕ್ರಮವನ್ನು ಅಮಾನ್ಯ ಮತ್ತು ಅನಧಿಕೃತ ಎಂದು ಭಾರತ ಸಹಿತ 128 ದೇಶಗಳು [ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು] ನಿರ್ಣಯ ಮಂಡಿಸಿದೆ.
• ಅಮೆರಿಕದ ಪರವಾಗಿ ಕೆನಡಾ ಸಹಿತ ಒಂಬತ್ತು ರಾಷ್ಟ್ರಗಳು ಮತ ಚಲಾಯಿಸಿವೆ ಉಳಿದ 35 ರಾಷ್ಟ್ರಗಳು ಗೈರಾಗಿ ಉಳಿದಿವೆ.
• ಪ್ಯಾಲೆಸ್ಟೈನ್ - ಇಸ್ರೇಲ್ ನಡುವೆ ಜಟಾಪಟಿಗೆ ಕಾರಣವಾಗಿರುವ ಜೆರುಸಲೆಂ ಅನ್ನು ಡಿಸೆಂಬರ್ 6 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ನ ನೂತನ ರಾಜಧಾನಿ ಎಂದು ಗುರುತಿಸಿದ್ದರು.
• ಈ ಏಕಪಕ್ಷೀಯ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
• ಈ ನಿರ್ಧಾಯ ಹಿಂತೆಗೆತಕ್ಕಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಿತ್ತು.
• ಇದರ ವಿರುದ್ಧ ಅಮೆರಿಕ ವಿಟೋ ಅಧಿಕಾರ ಚಲಾಯಿಸಿತ್ತು.
5. ವಿಶ್ವ ದಾಖಲೆಯ ಶತಕ ಸಿಡಿಸಿದ ರೋಹಿತ್:
• ಇಂದೋರ್ ನಲ್ಲಿ ನಡೆದ ಚೊಚ್ಚಲ T20 ಪಂದ್ಯ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು.
• ರೋಹಿತ್ ಶರ್ಮಾ ಕೇವಲ 35 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಅಂತರಾಷ್ಟ್ರೀಯ T20 ಕ್ರಿಕೆಟ್ ನಲ್ಲಿ ಅತಿ ವೇಗದ ಶತಕ ಸಿಡಿಸಿದರು.
• ಈ ಮೂಲಕ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದರು.
• ಮಿಲ್ಲರ್ ತವರಿನಲ್ಲೇ ಬಾಂಗ್ಲಾ ವಿರುದ್ಧ 35 ಎಸೆತಗಳಲ್ಲಿ ಅತಿ ವೇಗದ ಶತಕ ಬಾರಿಸಿದ್ದರು.
Contributed by: Mallikajan.Korbu