ರೋಗಗಳು(Diseases)
 
1) ಕ್ಷಯ ರೋಗ
• ಇದೊಂದು ಬ್ಯಾಕ್ಟೇರಿಯಾದಿಂದ ಬರುವ ರೋಗವಾಗಿದ್ದು ಪ್ರಮುಖವಾಗಿ ಶ್ವಾಸಕೋಶಕ್ಕೆ ತಲುಪುತ್ತದೆ. 1882 ರಲ್ಲಿ ಜರ್ಮನಿಯ ರಾಬರ್ಟ್ ಕಾರ್ ಇದನ್ನು ಕಂಡುಹಿಡಿದರು.
ರೋಗ ಲಕ್ಷಣ:
• ರಾತ್ರಿ ಜ್ವರ
• ರಾತ್ರಿಯಲ್ಲಿ ಬೆವರಿಕೆ ಹಾಗೂ ಸುಸ್ತು
• ದೇಹದ ತೂಕ ಕಡಿಮೆ
ರೋಗ ಕಂಡು ಹಿಡಿಯಲು ಪರೀಕ್ಷೆ:
• ಟ್ಯೂಬರ್ ಕ್ವಿಲಿನ ಪರೀಕ್ಷೆ
• ಬಯೋಪ್ಸಿ ಹಾಗೂ ಕ್ಷ-ಕಿರಣ
• ಕಫದ ಪರೀಕ್ಷೆ
ಚಿಕಿತ್ಸೆ: ಡಿಓಟಿ ಚಿಕಿತ್ಸೆ, ಸ್ಟ್ರೆಪ್ಸೋಮೈಸಿನ್ ಮುಂತಾದ ಔಷಧಿಗಳು
2) ಮಲೇರಿಯಾ
• ಇದು ಪ್ಲಸ್ಮೋಸಿಯಂ ಎಂಬ ಏಕಜೀವಕೋಶದಿಂದ ಬರುತ್ತದೆ.
• ಇದು ಅನಾಫೆಲಿಸ್ ಹೆಣ್ಣು ಸೊಳ್ಳೆ ಮೂಲಕ ಹರಡುವಿಕೆ
• ಇದು ಯಕೃತ್ ಹಾಗೂ ಆರ.ಬಿ.ಸಿ.ಗಳಲ್ಲಿ ಕಂಡುಬರುತ್ತದೆ.
ರೋಗ ಲಕ್ಷಣ:
• ತೀವ್ರ ಜ್ವರ, ಚಳಿ, ಕೀಲುಗಳ ನೋವು, ವಾಂತಿ, ಬೆವರುವಿಕೆ
• ಚಿಕಿತ್ಸೆ: ಕ್ಲೊಮೊಕ್ವಿನ್ ಮುಂತಾದ ಔಷಧಿಗಳಿಂದ ತಡೆಗಟ್ಟಬಹುದು.
3) ಏಡ್ಸ್
“ಆಕ್ವಯರ್ಡ್ ಇಮ್ಯೂನೊ ಡೆಫಿಸಿಯನ್ಸಿ ಸಿಂಡ್ರೋಮ್” ಈ ರೋಗವು HIV ವೈರಸ್ ನಿಂದ ಬರುತ್ತದೆ. ಈ ವೈರಸ್ ಬಿಳಿ ರಕ್ತ ಕಣಗಳಲ್ಲಿ ಸೇರಿ ಮಾನವನ ರೋಗನಿರೋಧಕ ಶಕ್ತಿಯನ್ನು ಹಾಳುಮಾಡುತ್ತದೆ.
ರೋಗ ಹರಡುವಿಕೆ:
• ಅಸುರಕ್ಷಿತ ಲೈಂಗಿಕ ಸಂಪರ್ಕ
• ರೋಗವಿರುವ ವ್ಯಕ್ತಿಯಿಂದ ರಕ್ತ ಪಡೆಯುವಿಕೆ
• ತಾಯಿಯಿಂದ ಶಿಶುವಿಗೆ
ರೋಗ ಲಕ್ಷಣ
• ಅತಿಯಾದ ಜ್ವರ
• ತೂಕದಲ್ಲಿ ಭಾರಿ ಇಳಿಕೆ
• ಅತಿಸಾರ ಬೇಧಿ, ಇತ್ಯಾದಿ
• ಭಾರತದಲ್ಲಿ 1992 ರಲ್ಲಿ ಹೆಚ್.ಐ.ವಿ. ನಿಯಂತ್ರಣಕ್ಕಾಗಿ ಎನ್.ಏ.ಸಿ.ಪಿ. ಕಾರ್ಯಕ್ರಮ ಜಾರಿಯಲ್ಲಿ ತಂದಿದೆ.
• ಚಿಕಿತ್ಸೆ: ರೋಗವನ್ನು ಗುಣಪಡಿಸಲು ಸಾದ್ಯವಿಲ್ಲ ಆದರೆ ಅಂಟಿ ರೆಟ್ರೋವೈರಲ್ ಥೆರಪಿ ಮೂಲಕ ರೋಗಿಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಎಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಎ.ಆರ್.ಟಿ. ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಉಚಿತ ಔಷಧಿ ನೀಡಲಾಗುತ್ತದೆ.
4) ಸಾರ್ಸ್ : (Severe Accute Respiratory Syndrome)
• ಸಾರ್ಸ್ ಕರೋನು ವೈರಸ್ ನಿಂದ ಬರುತ್ತದೆ. ಗಾಳಿಯ ಮೂಲಕ ಹರಡುವ ಈ ರೋಗ ಶ್ವಾಸಕೋಶಗಳಿಗೆ ಹಾಣಿ ಮಾಡಿ ಒಳರಕ್ತ ಸ್ರಾವಕ್ಕೆ ಕಾರಣವಾಗುತ್ತದೆ.
• ರೋಗ ಲಕ್ಷಣ: ಜ್ವರ, ಆಲಸ್ಯ, ಕೆಮ್ಮು, ಉಸಿರುಗಟ್ಟಿಸುವಿಕೆ
• ರೋಗ ಪತ್ತೆ: ಎದೆಯ ಎಕ್ಸ್-ರೇ ನಿಂದ, ಎಲಿಸ್, ಪಿ.ಎಸ್. ಆರ್.
• ಚಿಕಿತ್ಸೆ: ಅಂಟಿಬಯಾಟಿಕ್ಸ್
5) ಡಿಪ್ತೀರಿಯಾ
• ಕೊರಿನೆಬ್ಯಾಕ್ಟಿರಿಯಂ ಡಿಫ್ತೇರಿಯೆ ಎಂಬ ಬ್ಯಾಕ್ಟೇರಿಯಾದಿಂದ ಬರುವುದು. ಈ ರೋಗ ರೋಗಿಯ ಎಂಜಲು, ಸ್ಪರ್ಶ, ಸೀನಿನ ಮೂಲಕ ಆರೋಗ್ಯವಂತನ ಉಸಿರಾಟದಲ್ಲಿ ಸೇರಿ ಸೋಂಕು ಉಂಟಾಗುತ್ತದೆ.
• ರೋಗ ಲಕ್ಷಣ: ಗಂಟಲು ನೋವು, ವಾಂತಿ, ಜ್ವರ ಉಸಿರಾಟದ ತೊಂದರೆ. ರೋಗ ತಡೆಗಟ್ಟಲು ಡಿಫ್ರೀರಿಯಾ ಟೊಕ್ಸೊಡ್ ಲಸಿಕೆ ಬಳಸಬೇಕು.
• ಚಿಕಿತ್ಸೆ: ಮೆಟ್ರೊನೈಡಝೊಲ್, ಮೈಸಿನ್ ಅಂಟಿಬಾಯಾಟಿಕ್.
6) ನ್ಯೂಮೋನಿಯಾ
• ಡಿಫ್ಲೋಪಾಕಸ ನ್ಯೂಮೋನಿಯಾ ಎಂಬ ಬ್ಯಾಕ್ಟೇರಿಯಾ ದಿಂದ ಬರುವ ರೋಗ. ಮಣ್ಣಿನಿಂದ ಗಾಯಗಳ ಮೂಲಕಹರಡುವ ರೋಗ.
• ರೋಗ ಲಕ್ಷಣ: ಜ್ವರ, ಚಳಿ, ಎದೆನೋವು, ಕೆಮ್ಮು,
• ಚಿಕಿತ್ಸೆ: ಪೆನ್ಸಿಲಿನ್ ಬಳಸಿ ರೋಗ ನಿಯಂತ್ರಿಸಬಹುದು.
7) ಧರ್ನುವಾಯು
ಕ್ಲಾಸ್ಟ್ರೀಡಿಯಂ ಬ್ಯಾಕ್ಟೇರಿಯಾದಿಂದ ಬರುವ ರೋಗ. ಮಣ್ಣಿನಿಂದ ಗಾಯಗಳ ಮೂಲಕ ಹರಡುವ ರೋಗ.
ರೋಗ ಲಕ್ಷಣ: ಸ್ನಾಯು ಸೆಳೆತ, ದವಡೆಗಳ ಕೀಲುವಿಕೆ ಇತ್ಯಾದಿ.
ಚಿಕಿತ್ಸೆ: ಪೆನ್ಸಿಲಿನ್, ಎಂತ್ರೋಮೈಸಿನ್ ನಿಂದ ನಿಯಂತ್ರಿಸಬಹುದು.
ರೋಗ ಪತ್ತೆ: ಎಲಿಸಾಟೆಸ್ಟ್, ಟ್ರೈ ಪೊಟ್ ಟೆಸ್ಟ್, ವೆಸ್ಟರ್ನ್ ಭಾಟ್ ಟೆಸ್ಟ್