ಸಂಸತ್ತು
 
* ‘ಪಾರ್ಲಿಮೆಂಟ್’ ಎಂಬ ಇಂಗ್ಲೀಷ ಪದ ‘ಫ್ರೆಂಚ್’ನ ‘ಪಾರ್ಲರ್’ ಎಂಬ ಪದದಿಂದ ಬಂದಿದೆ. ಪಾರ್ಲರ ಎಂದರೆ ಮಾತನಾಡುವುದು ಎಂದರ್ಥ ಕನ್ನಡದಲ್ಲಿ ಸಂಸತ್ತು ಎನ್ನಲಾಗುತ್ತದೆ.
* ಭಾರತ ಸಂವಿಧಾನದ 5ನೇ ಭಾಗದ 2ನೇ ಅಧ್ಯಾಯದಲ್ಲಿ ಸಂಸತ್ತಿನ ಬಗ್ಗೆ ಪ್ರಸ್ತಾಪಿಸಲಾಗಿದೆ.
* ಸಂವಿಧಾನದ 79ನೇ ವಿಧಿ ಪ್ರಕಾರ ಸಂಸತ್ತು, ರಾಷ್ಟ್ರಪತಿ, ರಾಜ್ಯಸಭೆ ಹಾಗೂ ಲೋಕಸಭೆಯನ್ನೊಳಗೊಂಡಿರುತ್ತದೆ.
* ಸಂಸತ್ತು ದ್ವಿ-ಸದನ ವ್ಯವಸ್ಥೆಯನ್ನು ಒಳಗೊಂಡಿದೆ.
* ಸಂಸತ್ತಿನ ಮೇಲ್ಮನೆಯನ್ನು ರಾಜ್ಯಸಭೆ ಎಂತಲೂ ಕೆಳಮನೆಯನ್ನು ಲೋಕಸಭೆ ಎಂತಲೂ ಕರೆಯಲಾಗುತ್ತದೆ.
* ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗ.
ಸಂಸತ್ತಿನ ಶಾಸನ ರಚನೆ:
* ಶಾಸಕಾಂಗದ ಮೊದಲ ಕೆಲಸವೇ ಶಾಸನ ರಚನೆಯಾಗಿರುತ್ತದೆ. ಸಂವಿಧಾನದ 107 ರಿಂದ 122 ವಿಧಿಗಳು ಸಂಸತ್ ಶಾಸನ ಮಾಡುವ ವಿಧಾನವನ್ನು ತಿಳಿಸುತ್ತವೆ.
* ಸಂಸತ್ತು ಕೇಂದ್ರಪಟ್ಟಿ ಮತ್ತು ಸಮವರ್ತಿಪಟ್ಟಿಯಲ್ಲಿರುವ ವಿಷಯಗಳ ಮೇಲೆ ಶಾಸನ ಮಾಡುವ ಅಧಿಕಾರವನ್ನು ಹೊಂದಿದೆ. ಇಷ್ಟೇ ಅಲ್ಲದೆ ಕೆಲವು ವಿಶೇಷ ಸಂದರ್ಭದಲ್ಲಿ ರಾಜ್ಯಪಟ್ಟಿಯ ವಿಷಯಗಳ ಮೇಲೆ ಶಾಸನ ಮಾಡುವ ಅಧಿಕಾರವಿದೆ.
ಸಂಸತ್ತಿನ ಮಸೂದೆಗಳಲ್ಲಿ ಎರಡು ವಿಧ :
* ಸಾರ್ವಜನಿಕ ಮಸೂದೆ : ಸಾರ್ವಜನಿಕ ಮಸೂದೆ ಸಚಿವಾಲಯಗಳಿಂದ ರಚನೆಯಾಗಿ ಸದನದಲ್ಲಿ ಮಂಡಿಸಲಾಗುತ್ತದೆ.
* ಖಾಸಗಿ ಮಸೂದೆ : ಸದನದ ಯಾವುದೇ ಸದಸ್ಯನಿಂದ ರಚನೆಗೊಂಡು ಸದನದಲ್ಲಿ ಮಂಡಿಸಲಾಗುತ್ತದೆ.
ಮಸೂದೆಗಳ ವಿಧಗಳು :
* ಸಾಮಾನ್ಯ ಮಸೂದೆ : ಹಣಕಾಸು ಮಸೂದೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಮಸೂದೆಗಳನ್ನು ಸಾಮಾನ್ಯ ಮಸೂದೆ ಎನ್ನಲಾಗುತ್ತದೆ.
* ಹಣಕಾಸು ಮಸೂದೆ : ರಾಷ್ಟ್ರದ ಹಣಕಾಸು ವಿಷಯಕ್ಕೆ ಸಂಬಂಧಪಟ್ಟ ಮಸೂದೆಯಾಗಿರುತ್ತದೆ.
* ಸಂವಿಧಾನ ತಿದ್ದುಪಡಿ ಮಸೂದೆ : ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡ ಮಸೂದೆಯಾಗಿರುತ್ತದೆ.
* ಯಾವುದೇ ಸದಸ್ಯ ಒಂದು ಅಧಿವೇಶನದಲ್ಲಿ ನಾಲ್ಕು ಮಸೂದೆಯನ್ನು ಮಾತ್ರ ಮಂಡಿಸಲು ಅವಕಾಶವಿರುತ್ತದೆ.