ದ್ರವ್ಯಗಳು (Matters)
 
• ರಾಶಿ ಮತ್ತು ಗಾತ್ರ ಹೊಂದಿರುವ ಎಲ್ಲಾ ವಸ್ತುಗಳಿಗೆ ದ್ರವ್ಯಗಳು ಎಂದು ಕರೆಯಲಾಗುವುದು. ಉದಾಹರಣೆಗೆ ಆಹಾರ, ಗಾಳಿ, ಮಣ್ಣು, ನಕ್ಷತ್ರಗಳು ಇತ್ಯಾದಿ.
• ದ್ರವ್ಯವು ಕಣಗಳಿಂದ ಮಾಡಲ್ಪಟಿವೆ.
• ದ್ರವ್ಯಗಳ ಕಣಗಳ ಮಧ್ಯೆ ಖಾಲಿ ಸ್ಥಳಾವಕಾಶಗಳು ಕಂಡುಬರುತ್ತವೆ.
• ದ್ರವ್ಯದ ಕಣಗಳು ನಿರಂತರವಾಗಿ ಚಲಿಸುತ್ತಿರುತ್ತವೆ. ಅಂದರೆ ಕಣಗಳು ಚಲನಶಕ್ತಿ ಹೊಂದಿರುತ್ತವೆ ಎಂದರ್ಥ
• ದ್ರವ್ಯದ ಕಣಗಳು ಪರಸ್ಪರ ಆಕರ್ಷಿಸುತ್ತವೆ.
• ದ್ರವ್ಯದ ಸ್ಥಿತಿಗಳು ಘನ, ದ್ರವ, ಮತ್ತು ಅನಿಲ ರೂಪದಲ್ಲಿವೆ. ನಾಲ್ಕನೇಯ ಸ್ಥಿತಿಯನ್ನು ಪ್ಲಾಸ್ಮಾ ಎನ್ನುವರು.
• ದ್ರವ್ಯವನ್ನು ರಾಸಾಯನಿಕವಾಗಿ ಮೂಲ ವಸ್ತು,ಸಂಯುಕ್ತ ವಸ್ತು ಮತ್ತು ಮಿಶ್ರಣಗಳಾಗಿ ವಿಂಗಡಿಸಲಾಗಿದೆ.
• ಒಂದೇ ರೀತಿಯ ಪರಮಾಣುಗಳಿಂದಾಗಿರುವ ವಸ್ತುವನ್ನು ಮೂಲ ವಸ್ತು ಎನ್ನುವರು.
• ಉದಾ:O,H,C,N,ಇತ್ಯಾದಿ
• ಎರಡು ಅಥವಾ ಎರಡಕ್ಕಿಂತ ಹೆಚ್ಚು ಧಾತುಗಳ ಪರಮಾಣುಗಳ ಸಂಯೋಜನೆಯಿಂದ ಉಂಟಾದ ವಸ್ತುವನ್ನು ಸಂಯುಕ್ತ ವಸ್ತು ಎನ್ನುವರು.
• ಉದಾ:ಅಡುಗೆ ಉಪ್ಪು,ನೀರು,ಸಕ್ಕರೆ,ಇತ್ಯಾದಿ
• ಧಾತುಗಳು : ಧಾತುಗಳು ಒಂದೆ ರೀತಿಯ ಪರಮಾಣುಗಳೀಂದ ಆಗಿರುತ್ತವೆ. 100ಕ್ಕಿಂತ ಹೆಚ್ಚು ಸಂಖ್ಯೆಯ ಧಾತುಗಳಿದ್ದು 92 ಧಾತುಗಳು ಪ್ರಕೃತಿಯಲ್ಲಿ ದೊರೆಯುತ್ತವೆ
• ಸಂಯುಕ್ತಗಳು: ರಾಸಾಯನಿಕವಾಗಿ ಎರಡು ಅಥವಾ ಹೆಚ್ಚಿನ ಧಾತುಗಳು ಒಂದಕ್ಕೊಂದು ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಗಹೊಂದಿ ಸಂಯುಕ್ತವಸ್ತು ಉಂಟಾಗುತ್ತವೆ.
• ಮಿಶ್ರಣ : ಮಿಶ್ರಣದಲ್ಲಿ ಒಂದಕ್ಕಿಂತ ಹೆಚ್ಚು ವಸ್ತುಗಳು ಭೌತಿಕವಾಗಿ ಸೇರಿಕೊಂಡಿರುತ್ತವೆ.
• ಅಣು: ವಸ್ತುವಿನ ಎಲ್ಲಾ ಗುಣಗಳನ್ನು ಪ್ರದರ್ಶಿಸುವ ಧಾತು ಅಥವಾ ಸಂಯುಕ್ತದ ಅತಿ ಚಿಕ್ಕ ಕಣವೇ ಅಣು
• ಅಯಾನು: ಲೋಹ ಮತ್ತು ಅಲೋಹಗಳಿಂದ ಮಾಡಲ್ಪಟ್ಟ ಸಂಯುಕ್ತಗಳಲ್ಲಿ ವಿದ್ಯುದಾವೇಶಯುಕ್ತ ಕಣಗಳಿರುತ್ತವೆ. ಆ ಕಣಗಳಿಗೆ ಅಯಾನುಗಳು ಎಂದು ಕರೆಯಲಾಗುತ್ತದೆ. ಅಯಾನ್ ಋಣ ಅಥವಾ ಧನ ಆವೇಶವನ್ನು ಹೊಂದಿದ್ದು, ಋಣ ಆವೇಶಯುಕ್ತ ಅಯಾನನ್ನು ಆನಯಾನ್ (anion) ಎಂದೂ ಧನ ಆವೇಶಯುಕ್ತ ಅಯಾನನ್ನು ಕ್ಯಾಟಯಾನ್ (cation) ಎಂದೂ ಕರಯಲಾಗುತ್ತದೆ.
ಪರಮಾಣುವಿನ ರಚನೆ
• • ಜಾನ್ ಡಾಲ್ಟನ್ 1808 ರಲ್ಲಿ ಪರಮಾಣು ತತ್ವವನ್ನು ಪ್ರತಿಪಾದಿಸಿದರು.
• ಪರಮಾಣುವಿನ ಕೇಂದ್ರ ನ್ಯೂಕ್ಲಿಯಸ್ಯಾಗಿದ್ದು ಧನಾವೇಶವನ್ನು ಹೊಂದಿರುತ್ತದೆ.
• ಇಲೆಕ್ಟ್ರಾನ್ಗಳು ನ್ಯೂಕ್ಲಿಯಸ್ನ ಸುತ್ತ ವೃತ್ತಾಕಾರದ ಪಥದಲ್ಲಿ ಚಲಿಸುತ್ತವೆ ಹಾಗು ಇವು ಋಣಾವೇಶವನ್ನು ಹೊಂದಿರುತ್ತವೆ.
• ನ್ಯೂಟ್ರಾನ್ಗಳು : ಜಲಜನಕ ಹೊರತುಪಡಿಸಿ ಎಲ್ಲಾ ಪರಮಾಣುಗಳ ಬೀಜಕೇಂದ್ರಗಳಲ್ಲಿ ನ್ಯೂಟ್ರಾನ್ಗಳು ಇರುತ್ತವೆ. ಹಾಗು ಅದು ಯಾವುದೇ ಆವೇಶವನ್ನು ಹೊಂದಿರುವುದಿಲ್ಲ.
• ಪ್ರೊಟಾನ್ಗಳು : ಪ್ರೊಟಾನ್ಗಳು ಪ್ರತಿ ವಪರಮಾಣುವಿನ ನ್ಯೂಕ್ಲಿಯಸ್ನಲ್ಲಿ ಇರುವುದು ಹಾಗು ಧನಾವೇಶ ಹೊಂದಿರುತ್ತವೆ.
• ಪರಮಾಣು ಸಂಖ್ಯೆ:
• ಪರಮಾಣುವಿನ ಪ್ರೋಟಾನ್ಗಳ ಸಂಖ್ಯೆಯು ಪರಮಾಣುವಿನ ಸಂಖ್ಯೆಯನ್ನು ನಿರ್ಧರಿಸುತ್ತದೆ. ಧಾತುಗಳನ್ನು ಅವು ಹೊಂದಿರುವ ಪ್ರೋಟಾನ್ಗಳ ಸಂಖ್ಯೆಯ ಮೇಲೆ ವ್ಯಾಖ್ಯಾನಿಸಬಹುದು. ಉದಾಹರಣೆಗೆ ಹೈಡ್ರೋಜನ್=1, ಇಂಗಾಲ=6
• ಸಮಸ್ಥಾನಿಗಳು:
• ಒಂದೇ ಪರಮಾಣು ಸಂಖ್ಯೆಯನ್ನು ಆದರೆ ಬೇರೆ ಬೇರೆ ಪರಮಾಣು ರಾಶಿ ಸಂಖ್ಯೆಯನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳನ್ನು ಸಮಸ್ಥಾನಿಗಳು ಎಂದು ವ್ಯಾಖ್ಯಾನಿಸಬಹುದು.
• ಉದಾ: ಹೈಡ್ರೋಜನ್ ಪರಮಾಣುವಿನ ಮೂರು ಸಮಸ್ಥಾನಿಗಳನ್ನು ಹೊಂದಿದ್ದು, ಪ್ರೋಟಿಯಂ, ಡ್ಯುಟೀರಿಯಂ ಮತ್ತು ಟ್ರೀಷಿಯಂಗಳಾಗಿವೆ. ಸಮಸ್ಥಾನಿಗಳ ಭೌತಿಕ ಗುಣಗಳು ಬೇರೆ ಬೇರೆಯಾಗಿದ್ದು, ರಾಸಾಯನಿಕ ಗುಣಗಳು ಒಂದೇ ಆಗಿರುತ್ತವೆ.
• ಐಸೋಬಾರ್ಗಳು : ಒಂದೇ ಪರಮಾಣು ರಾಶಿ ಸಂಖ್ಯೆಯನ್ನು ಹೊಂದಿರುವ ಬೇರೆ ಬೇರೆ ಧಾತುಗಳ ಪರಮಾಣುಗಳನ್ನು ಐಸೋಬಾರ್ಗಳು ಎಓದು ಕರೆಯಲಾಗುವುದು.
ಇಲೆಕ್ಟ್ರಾನ್ಗಳ ಲಕ್ಷಣಗಳು
• ಇಲೆಕ್ಟ್ರಾನ್ಗಳು ಋಣ ಆವೇಶ ಹೊಂದಿರುವ ಕಣಗಳಾಗಿದ್ದು, ಎಲ್ಲಾ ಪರಮಾಣುಗಳಲ್ಲಿ ಇರುತ್ತವೆ.
• ಇಲೆಕ್ಟ್ರಾನ್ನ ರಾಶಿಯು ಹೈಡ್ರೊಜನ್ ಪರಮಾಣುವಿನ ರಾಶಿಯ 1/1840 ರಷ್ಟು ಇರುತ್ತದೆ.
ಪ್ರೋಟಾನ್ ಲಕ್ಷಣಗಳು
• ಪ್ರೊಟಾನ್ಗಳು ಎಲ್ಲಾ ಪರಮಾಣುಗಳಲ್ಲಿ ಕಂಡುಬರುವ ಧನಾವೇಶ ಹೊಂದಿರುವ ಕಣಗಳಾಗಿವೆ.
• ಪ್ರೊಟಾನ್ನ ಸಾಪೇಕ್ಷ ರಾಶಿಯು 1 amu ಆಗಿದೆ.