Loading [Contrib]/a11y/accessibility-menu.js

“ಮಂಗಳನ ಸಾಮೀಪ್ಯಕ್ಕೆ ಮಾನವ”

 

ಮಂಗಳ ಗೃಹದ ಬಗ್ಗೆ ಆಸಕ್ತಿ ಹಿಂದೆಂದಿಗಿಂತಲೂ ಇಮ್ಮಡಿಸಿದ್ದು ಕೆಂಪುಗ್ರಹ ಮಂಗಳನ ಶೋಧನೆಗೆವಿಜ್ಞಾನಿಗಳು ತಮ್ಮ ಜೀವಮಾನವನ್ನು ಸವೆಸಿದ್ದರೂ ಹಲವು ಮಾನವ ನಿರ್ಮಿತ ಕೃತಕ ಉಪಗ್ರಹಗಳು ಮಂಗಳನ ಅಂಗಳಕ್ಕೆ ಹಾರಿವೆ. ಮಂಗಳನ ಕುರಿತಾದ ಅನ್ವೇಷಣೆಗಳಿಗೆ ಈಗ ಮತ್ತೆ ಅದಮ್ಯ ಕುತೂಹಲ ಉಂಟುಮಾಡಿದ್ದುಫೀನಿಕ್ಸ್ ಕೃತಕ ಆಂತರಿಕ್ಷ ಶೋಧಕದ ‘ಲ್ಯಾಂಡ್ರೋವರ್’ ಎಂಬ ರೋಬೊಟ್ ಅನ್ವೇಷಣಾ ಯಂತ್ರವನ್ನು ಮಂಗಳನಮೇಲೆ ಯಶಸ್ವಿಯಾಗಿ ಇಳಿಸಿದಾಗ.
ಮಂಗಳ ಭೂಮಿಯ ಅತಿ ಸಮೀಪದ ಸಹೋದರ ಗ್ರಹ ಇದರ ಮೇಲ್ಮೈ ವಾತಾವರಣ, ಅಕ್ಷದ ಓಲಿಕೆ, ಗಾತ್ರಎಲ್ಲವೂ ಹೆಚ್ಚು ಕಡಿಮೆ ನಮ್ಮ ಭೂಮಿಯನ್ನು ಹೋಲುತ್ತದೆ. ಆದಿ ಕಾಲದಿಂದಲೂ ಮಂಗಳ ಗ್ರಹಕ್ಕೆ ಪಾರಂಪರಿಕದೈವದತ್ತದ ಸ್ಥಾನ ನೀಡಿದ್ದು ಕೂಡ ಇದಕ್ಕೆ ಕಾರಣ, ಸುಮಾರು 50 ವರ್ಷಗಳಿಂದೀಚೆಗೆ ಹೊಸ ಹೊಸ ವೈಜ್ಞಾನಿಕ ಶೋಧನಗಳು ಆವಿಷ್ಕರಿಸಲ್ಪಟ್ಟ ನಂತರ ಮಂಗಳನ ಅಂಗಳದಲ್ಲಿಳಿಯಲು ಸಿದ್ದವಾದ ಮಾನವ.
ಮಂಗಳ ಈಗ ಇಂಗಾಲ ಡೈ ಆಕ್ಸೈಡ್ ತುಂಬಿದ ನಿರ್ಜಿವ ಗ್ರಹ ವಿಜ್ಞಾನಿಗಳು ಹಿಂದೊಮ್ಮೆ ಮಂಗಳ ಜೀವಿಗಳಿರಬಹುದಾದ ಗ್ರಹ ನಮ್ಮಂತೆಯೇ ಜಲ, ವಾಯು, ಸಸ್ಯ, ಜೀವಿಗಳಿರಬಹುದೆಂಬ ವೈಜ್ಞಾನಿಕ ಪುರಾವೆಗಳ ಶೋಧಕ್ಕೆ ಶ್ರಮಿಸುತ್ತಿದ್ದಾರೆ ಮಂಗಳನಲ್ಲಿ ಜೈವಿಕ ಪ್ರಕ್ರಿಯೆಯ ಸಂಶಯ ಮೂಡಿದ್ದು ಮಂಗಳ ಗ್ರಹದಿಂದ ಸಿಡಿದುಬಂದ ಎರಡು ಉಲ್ಕೆಗಳ ಅವಶೇಷಗಳು ಎ.ಎಲ್.ಎಚ್. 1800 & ಇ.ಇ.ಪಿ.ಎ. 79001ಗಳ ಮೇಲೆ ನಡೆಸಿದಅಧ್ಯಯನದಿಂದ ಜೈವಿಕ ಪ್ರಕ್ರಿಯೆ ನಡೆದಿರುವ ನೂತನ ಸುಳಿವುಗಳು ಕಂಡು ಬರುತ್ತದೆಂದು ಖಗೋಳ ವಿಜ್ಞಾನಿಗಳಅಭಿಪ್ರಾಯ ಅದಕ್ಕೆ ಶೋಧ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸಿದರು.
ಕೆಂಪುಗ್ರಹ, ಅಂಗಾರಕ ಎಂದೆ ಖ್ಯಾತವಾದ ಮಂಗಳ ಗ್ರಹಕ್ಕೆ ಪ್ರಥಮ ಲಗ್ಗೆ ಹಾಕಿದ್ದ ರಷ್ಯಾದ ಕೊರಬ್ಲ ಕೃತಕ ವ್ಯೂಮನೌಕೆ ಮುಂದೆ ಅಮೇರಿಕ, ಯುರೋಪ್, ಜಪಾನ್ ಮೊದಲಾದ ರಾಷ್ಟ್ರಗಳು ಡಜನ್ಗಟ್ಟಲೆ ಉಪಗ್ರಹಗಳನ್ನುಮಂಗಳ ಭೂಮಿ ವಾತಾವರಣ ಅರಿಯುವ ಲ್ಯಾಂಡರ್ ರೋವರ್ಗಳನ್ನು ಮಂಗಳನನತ್ತ ನೂಕಿದವು
1960ರಲ್ಲಿ ಮಂಗಳನನತ್ತ ಹಾರಿದ ರಷ್ಯಾದ ಕೊರಬ್ಲ ನೌಕೆ ಅದರ ತಾಂತ್ರಿಕ ಕಾರಣಗಳಿಂದ ಮಂಗಳನ ಪಥದಲ್ಲಿಸೇರಲು ವಿಫಲಗೊಂಡಿತು. ನಾಲ್ಕು ಬಾರಿ ರಾಜ್ಯದ ಯತ್ನಗಳು ವಿಫಲವಾದವು. ಅತ್ತ ಅನ್ವೇಷಣೆ ಮಾಡುತ್ತ ಅಮೇರಿಕಕೈಕಟ್ಟಿ ಕೂರಲಿಲ್ಲ. ‘ನಾಸಾ’ ಖಗೋಳ ಅನ್ವೇಷಣೆ ಸಂಸ್ಥೆಯ ವಿಜ್ಞಾನಿಗಳು ಮೆರಿನರ್ ನೌಕೆಯನ್ನು ಮಂಗಳದಶೋಧಕ್ಕೆಂದೇ ನಿರ್ಮಿಸಿದರು. 1964ರಲ್ಲಿ ಮೆರಿನರ್ ಮರು ಉಡಾವಣೆಗೊಂಡರೂ ಯಶ ದೊರೆಯಲಿಲ್ಲ. 1994ರನವೆಂಬರ್ 28ರಂದು ನಾಸಾ ಕಳುಹಿಸಿದ ಮೆರಿನರ್ ನೌಕೆಯು ಮಂಗಳನ ಹಲವಾರು ಛಾಯಾಚಿತ್ರಗಳನ್ನು ಭೂಮಿಗೆಕಳಿಸಿತು. ಮಂಗಳ ಗ್ರಹದ ವಾತಾವರಣ ತೀವ್ರವಾದ ವಾತಾವರಣದಿಂದ ಕೂಡಿದ್ದು ಇಂಗಾಲದ ಡೈ ಆಕ್ಸೈಡ್ ತುಂಬಿದೆಎಂದು ತಿಳಿದು ಬಂದಿತು. ಮಂಗಳದ ಮೇಲಿನ ಬೃಹತ್ ಕಂದರ (ಮೆರಿನರ್ ಕ್ರೇಟರ್) ದ ಚಿತ್ರನ್ನು ರವಾನಿಸಿತು.ಎರಡು ವರ್ಷಗಳವರೆಗೆ ಭೂಮಿಯೊಡನೆ ಸಂಪರ್ಕ ಸಾಧಿಸಿದ್ದ ಮೆರಿನರ್ 4, 1967ರಲ್ಲಿ ನಿಷ್ಕ್ರೀಯಗೊಂಡಿತು. ಅದರಹಿಂದೆಯೇ ಸಾಗಿದ ಮೆರಿನರ ಸರಣಿಯ 6-7-8 ನೌಕೆಗಳು ಮಂಗಳನ ವಾತಾವರಣದ ಕುರಿತು ವಿವಿಧ ದೃಶ್ಯಗಳನ್ನುಭೂಮಿಗೆ ರವಾನಿಸಿದವು. ವಿಜ್ಞಾನಿಗಳ ಪಾಲಿಗೆ ಮಂಗಳನ ಒಂದೊಂದೆ ಅಂತರಂಗದ ಬಾಗಿಲುಗಳನ್ನು ತೆರೆಯಲು ಸಾಕಷ್ಟು ವಿಫುಲ ಆಕರಗಳು ದೊರೆತಂತಾಯಿತು. ಆರಂಭಿಕ ಯತ್ನ ಮಾಡಿದ್ದ ರಷ್ಯಾದ ಮಾರ್ಸ 2 & ಮಾರ್ಸ್ 3ನೌಕೆಗಳು ತಾಂತ್ರಿಕ ದೋಷಗಳಿಂದಾಗಿ & ಮಂಗಳದಲ್ಲಿಳಿದ ಕೆಲವೇ ಕ್ಷಣಗಳಲ್ಲಿ ಸಂಪರ್ಕವನ್ನು ಕಡಿದುಕೊಂಡಿದ್ದರಿಂದಹೆಚ್ಚಿನ ವಿವರ ದೊರೆಯಲಿಲ್ಲ, ಹೆಚ್ಚು ಕಡಿಮೆ ಇಲ್ಲಿನವರೆಗಿನ ಒಟ್ಟು ಕಳಿಸಿದ ನೌಕೆಗಳಲ್ಲಿ 1/3ರಷ್ಟು ವಿಫಲಗೊಂಡಿವೆ.ಇದಕ್ಕೆ ತಾಂತ್ರಿಕ ಕಾರಣಗಳೂ ಇರಲಿಲ್ಲ.
1974ರಲ್ಲಿ ಅಮೇರಿಕ ಕಳಿಸಿದ ಮ್ಯಾರಿನರ್ ನೌಕೆ ಮಂಗಳ ಕುರಿತ 73299 ಚಿತ್ರಗಳನ್ನು ಭೂಮಿಗೆ ಕಳಿಸಿತ್ತು.1975ರಲ್ಲಿ ‘ನಾಸಾ’ ಯಶಸ್ವಿ ವೈಕಿಂಗ್ ಯೋಜನೆ ಹಾಕಿಕೊಂಡಿತು, ಎರಡು ಭಾಗಗಳನ್ನು ಹೊಂದಿದ್ದ ವೈಕಿಂಗ್ 1 &ವೈಕಿಂಗ್ 2 ವ್ಯೋಮ ನೌಕೆಗಳು ಮಂಗಳ ಗ್ರಹ ಸುತ್ತುವ & ಮಂಗಳನ ಅಂಗಕಳಿಯಲು ಲ್ಯಾಂಡರ್ಉಪಕರಣಗಳನ್ನು ಹೊಂದಿದ್ದವು. ಮಂಗಳ ಗ್ರಹದ ಪ್ಲುಟೇನಿಯಂ ಎಂಬ ಪ್ರದೇಶದಲ್ಲಿ ಜುಲೈ 20, 1976ರಲ್ಲಿ ಇಳಿದ ವೈಕಿಂಗ್ 1ರ ಲ್ಯಾಂಡರ್ ಆ ಪ್ರದೇಶದ ಮಾಹಿತಿಗಳನ್ನು ರವಾನಿಸಿತು. ವೈಕಿಂಗ್ 2 ಸಹ ಕಾರ್ಯಾಚರಣೆಯಲ್ಲಿದ್ದ 1978ರತನಕ ಮಂಗಳದ ಕುರಿತು ವಿವರಗಳನ್ನು ಕಳುಹಿಸಿತು.
1996ರಲ್ಲಿ ಮಂಗಳನತ್ತ ಹಾರಿದ ಮಾರ್ಸ್ ಗ್ಲೋಬಲ್ ಸರ್ವೇಯರ್ ನೌಕೆಯು ಮಂಗಳನ ಮೇಲ್ಮೈಲಕ್ಷಣಗಳನ್ನು ಅಧ್ಯಯನ ಮಾಡಿ ಅದರ ನಕ್ಷೆಯನ್ನು ರಚಿಸಿತು. ಇದು ಮಂಗಳನ ಬಗ್ಗೆ ಇದ್ದ ಕೆಲ ಕುತೂಹಲಕಾರಿ ಅಂಶಗಳ ತಿಳಿಯುವಿಕೆಗೆ ಅನುಕೂಲವಾಯಿತು.
ಸುಮಾರು 40 ವರ್ಷಗಳಿಗಿಂತಲೂ ಕುತೂಹಲದ ಕೇಂದ್ರವಾದ ಮಂಗಳನ ಬಗ್ಗೆ ಅಧ್ಯಯನಕ್ಕೆ ವಿಜ್ಞಾನಿಗಳಿಗೆ ಸಾಕಷ್ಟು ಪುರಾವೆಗಳು ದೊರೆತಿವೆ ಅದು ಕೂಡ ನಮ್ಮಂತೆಯೇ ಎಂಬ ವಿಚಾರಕ್ಕೆ ಬಂದಾಗ ಮಂಗಳ ನಮ್ಮದು ಎಂಬ ಭಾವನೆಗೆ ಮತ್ತಷ್ಟು ಇಂಬು ದೊರೆಯಿತು.
ಪ್ರಥಮ ಯಶಸ್ವಿ ವ್ಯೋಮ ನೌಕೆಯನ್ನು 1971ರಲ್ಲಿ ಕಳುಹಿಸಲಾಯಿತು. ವೈಕಿಂಗ್ 1 ಆರು ವರ್ಷಕಾಲ ಮಂಗಳನ ಮಾಹಿತಿ ಕಳುಹಿಸಿತು. ಇವು ಮಂಗಳ ನಕ್ಷೆ ತೆಗೆದು ಬಣ್ಣದ ಚಿತ್ರಗಳನ್ನು ಕಳುಹಿಸಿದವು. 1988 ರಲ್ಲಿ ಅಂದಿನ ಸೋವಿಯತ್ ರಷ್ಯ ಒಕ್ಕೂಟವು ಪೋಮೊಸ್ 1 & 11 ನೌಕೆಗಳನ್ನು ಕಳುಹಿಸಲು ಅದು ಮಂಗಳ & ಅದರ ಉಪಗ್ರಹ ಫೊಬೊಸ್ ಛಾಯಾಚಿತ್ರಗಳನ್ನು ರವಾನಿಸಿದರೂ ಅದರ ಲ್ಯಾಂಡರ್ ಶೋಧಕಗಳು ಮಂಗಳನ ಮೇಲಿಳಿಯುತ್ತಿದ್ದಂತೆ ಸಂಪರ್ಕ ಕಳೆದುಕೊಳ್ಳಬೇಕಾಯಿತು.
1996ರಲ್ಲಿ ನಾನಾ ಮತ್ತೊಂದು ಹೊಸ ಯೋಜನೆ ಹಾಕಿಕೊಂಡಿತು 1992ರಲ್ಲಿ ವಿಫಲವಾಗಿದ್ದ ಮಾರ್ಸ್ಆಬ್ಸರ್ವರ್ನ ತಾಂತ್ರಿಕತೆಯನ್ನು ವಿಶ್ಲೇಷಣೆ ಮಾಡಿತು. ನಾಸಾ ಕಳುಹಿಸಿದ ‘ಮಾರ್ಸ್ ಗ್ಲೋಬಲ್ ಸರ್ವೇಯರ್’ ಯಶಸ್ವಿ2001ರ ತನಕ ಕಾರ್ಯಾಚರಣೆ ನಡಸಿ ಮಂಗಳ ವಿವಿಧ ಭಾಗಗಳ ನಕ್ಷೆ ರಚಿಸಿತು, ನಂತರ ಅತ್ಯಾಧುನಿಕ ಯಾಂತ್ರಿಕೃತ(ರೊಬೊಟಿಕ್) ಕ್ಕೆ ಹೊಂದಿದ ಲ್ಯಾಂಡರ್ ಶೋಧಕದೊಂದಿಗೆ ಮಾರ್ಸ್ ಪಾಥ್ ಪೈಂಡರ್ ನೌಕೆಯನ್ನು ನಾಸಾರವಾನಿಸಿತ್ತು. ಪಾಥ್ ಫೈಂಡರ್ನೊಂದಿಗೆ ಹೊಸ ಸೋಜರ್ನರ್ ಯಾಂತ್ರಿಕ ಶೋಧಕವು ಮಂಗಳನ ಅರೆಸ್ ವ್ಯಾಲ್ಲಿಸ್ಎಂಬಲ್ಲಿ ಯಶಸ್ವಿಯಾಗಿ ಇಳಿಯಿತು. ಇದು ಹಲವು ಛಾಯಾಚಿತ್ರಗಳನ್ನು ಭೂಮಿಗೆ ಕಳುಹಿಸಿದೆ. ಮಂಗಳ ಮೇಲೆ ಓಡಾಡಿದ ಸೋಜರ್ನರ್ ಬಂಡೆಗಳ ರಚನೆಗಳನ್ನು ಚಿತ್ರಿಸಿ ಅಧ್ಯುನಕ್ಕೆ ಭೂಮಿಗೆ ಕಳುಹಿಸಿದೆ. ಮಂಗಳ ಮೇಲೆ ಓಡಾಡಿದ ಸೋಜರ್ನರ್ ಬಂಡೆಗಳ ರಚನೆಗಳನ್ನು ಚಿತ್ರಿಸಿ ಅಧ್ಯಯನಕ್ಕೆ ಭೂಮಿಗೆ ಕಳುಹಿಸಿತು. ಸೋಜರ್ನರ್ ಕಳುಹಿಸಿದ ಮಾಹಿತಿ ಆಧಾರದಿಂದ ಮಂಗಳನ ಬಂಡೆಗಳು ಭೂಮಿಯನ್ನು ಹೊಲುತ್ತದೆಂಬ ಅಂಶ ತಿಳಿಯಿತು.
ಸದ್ಯ ಕಾರ್ಯಾಚರಣೆಗಳಲ್ಲಿರುವ ಮಾರ್ಸ್ ಓಡಿಸ್ಸಿ ಆರ್ಬಿಟರ್ 2001ರಲ್ಲಿ ನಾಸಾ ಉಡಾಯಿಸಿದ ಶೋಧ ನೌಕೆ.ಇದರ ಕಾರ್ಯಕ್ಷಮತೆ ಸಪ್ಟೆಂಬರ್ 2008ರ ತನಕ. ಇದರ ಪ್ರಮುಖ ಶೋಧವೆಂದರೆ ಮಂಗಳ ಗ್ರಹದಲ್ಲಿರುವ ಹೈಡ್ರೋಜನ್ನ ಪ್ರಮಾಣ ಕಂಡುಡಿಡಿಯುವುದು. ಈ ಹೈಡ್ರೋಜನ್ ಮಂಗಳನಲ್ಲಿ ಹೆಪ್ಪುಗಟ್ಟಿರುವ ನೀರಿನಲ್ಲಿರಬಹುದೆಂದು ತಿಳಿಯಲಾಗಿದೆ. ಶೋಧ ಕಾರ್ಯ ಮುಂದುವರೆದಿದೆ.
2003ರಲ್ಲಿ ಯುರೋಪಿನ ಖಗೋಳ ಅನ್ವೇಷಣಾ ಸಂಸ್ಥೆ ಮಾರ್ಸ್ ಎಕ್ಸ್ ಪ್ರೆಸ್ ಶೋಧಕವು ಒಯ್ದು ಬೀಗಲ್2 ಲ್ಯಾಂಡರ್ ಶೋಧಕ ವಿಫಲವಾಯಿತು. 2004ರ ಫೆಬ್ರುವರಿಯಲ್ಲಿ ಸಂಪರ್ಕವನ್ನೆ ಕಳೆದುಕೊಂಡಿತು. 2004 ರಲ್ಲಿಪ್ಲಾನೆಟರಿ ಸ್ಪೆಕ್ಟ್ರೋಮೀಟರ ಸಂಶೋಧಕ ತಂಡವು ಮಂಗಳನಲ್ಲಿ ಮಿಥೇನ್ ಇರುವ ಅಂಶ ಪತ್ತೆ ಹಚ್ಚಿತು.
ಅಮೇರಿಕಾದ ನಾಸಾ ಮತ್ತಷ್ಟು ಹೆಚ್ಚು ಶೋಧಗಳಿಗಾಗಿ ನೌಕೆಗಳನ್ನು ಸಿದ್ಧಪಡಿಸಿತು. 2003ರಲ್ಲಿ ಎರಡುಜೋಡಿ ನೌಕೆಗಳನ್ನು ಕಳುಹಿಸಿತು. ‘ಸ್ಪಿರಿಟ್ & ಅಪಾರ್ಚುನಿಟಿ’ ಎಂಬ ಈ ನೌಕೆಗಳು ಮಂಗಳ ಮೇಲೆ ಯಶಸ್ವಿಯಾಗಿ2004 ರಲ್ಲಿ ಪಾದಾರ್ಪಿಸಿದವು. ಈ ಕಾರ್ಯವು ತುಂಬ ಮಹತ್ವದ್ದಾಗಿತ್ತು. ಎರಡೂ ನೌಕೆಗಳು ಇಳಿದ ಪ್ರದೇಶದಲ್ಲಿ ದ್ರವಗೊಂಡ ನೀರಿನ ಲಭ್ಯತೆಯ ವಿವರಗಳನ್ನು . ಇದೊಂದು ಮಹತ್ವ ಶೋಧಗಳಲ್ಲಿ ಒಂದಾಯಿತು. ಆದರೆಮಂಗಳದಲ್ಲಿ ಉಂಟಾದ ಬಿರುಗಾಳಿಗಳು ಈ ಎರಡು ನೌಕೆಗಳ ಕಾರ್ಯಾಚರಣೆಗೆ ವ್ಯತ್ಯಯವನ್ನುಂಟು ಮಾಡಿದವು.
ಮಂಗಳ ವಾತಾವರಣ & ಅದರ ಹೆಚ್ಚಿನ ವೈಜ್ಞಾನಿಕ ಅಧ್ಯಯನಕ್ಕಾಗಿ ನಾಸಾ 2005ರ ಆಗಸ್ಟ್ 1 ರಂದುಮಾರ್ಸ್ ರಿಕಾನಿಸೆನ್ಸ್ ಆರ್ಬಿಟರ್ ಶೋಧ ನೌಕೆಯನ್ನು ಕಳುಹಿಸಿತು. 2006ರ ಮಾರ್ಚ್ 10 ರಂದು ಮಂಗಳನ ಪಥಪ್ರದೇಶಿಸಿದ ಇದು ಮುಂಬರುವ ಶೋಧ ನೌಕೆಗಳಿಗಾಗಿ ಇಳಿಯಲು ಸೂಕ್ತ ಭಾಗವನ್ನು ಗುರುತಿಸುವಲ್ಲಿ ನಿರತವಾಯಿತು.ಅಲ್ಲದೇ ಮಂಗಳನ ಮೇಲ್ಮೈಯನ್ನು ಸೂಕ್ತವಾಗಿ ಅಭ್ಯಸಿಸಿದರೂ ಕೂಡ ಭೂಮಿಯೊಂದಿಗಿನ ಸಂಪರ್ಕ ಸಾಧ್ಯತೆಯನ್ನುಇದು ಹೆಚ್ಚು ಸುಧಾರಿಸಿಕೊಂಡಿತ್ತು. ಇದರ ಸಫಲ ಶೋಧನೆಯಿಂದಾಗಿ 2008 ಮಾರ್ಚ್ ವೇಳೆಗೆ ಮಂಗಳನ ಉತ್ತರ ಧ್ರುವದ ಹಲವಾರು ಛಾಯಾಚಿತ್ರಗಳು ಲಭ್ಯವಾಗುವಂತಾಯಿತು.
ನಾಸಾದ ಮಹತ್ವದ ಯೋಜನೆಯಾದ ಫೀನಿಕ್ಸ್ ಲ್ಯಾಂಡರ್ ಶೋಧಕವನ್ನು ಹೊತ್ತ ಉಡ್ಡಯನ ಆಗಸ್ಟ್ 4,2007ರಂದು ಮಂಗಳನತ್ತ ಹಾರಿತು. ಮೇ 25 ರಂದು ಮಂಗಳನ ಧ್ರುವದತ್ತ ತಲುಪಿದ ಇದರ ಯಾಂತ್ರಿಕ ಕೈಬಹುಮತ್ವದ ಶೋಧಕ್ಕೆ ದಾರಿ ಮಾಡಿದೆ. 2.5 ಮೀಟರ್ ಉದ್ದದ ಯಾಂತ್ರಿಕ ಇದರ ಕೈ ಮಂಗಳದ ಅಂಗಳದಲ್ಲಿ ಒಂದು ಮೀಟರನಷ್ಟು ಬಗೆದು ಮಣ್ಣನ್ನು ವಿಶ್ಲೇಷಣೆ ನಡೆಸಬಲ್ಲದು ಅತ್ಯಾಧುನಿಕ ಮೈಕ್ರೋ ಸ್ಕೋಪಿಕ್ ಕ್ಯಾಮೆರಾವು ಅತಿಸೂಕ್ಷ್ಮ ಮಾಹಿತಿಯನ್ನು ಸೆರೆಹಿಡಿಯುವ ಸಾಮಥ್ರ್ಯ ಹೊಂದಿದೆ. ಮಂಗಳನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಒದಗಿಸಿರುವ ಫೀನಿಕ್ಸ್ ಲ್ಯಾಂಡರ್ ಶೋಧಕವು ಮೇ 26ರಂದು ನಡೆಸಿದ ಮಹತ್ವದ ಅನ್ವೇಷಣೆಯಲ್ಲಿ ಇದು ಮಂಗಳನಲ್ಲಿರುವ ಜೈವಿಕ ಪ್ರಕ್ರಿಯೆ ನೀರಿನ ಒರತೆ ಹಾಗೂ ಮಣ್ಣಿನ ಗುಣ ಧರ್ಮಗಳನ್ನು ವಿಶ್ಲೇಷಿಸಲಿದೆ. ಈಗಾಗಲೇಅಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಸ್ಪಿರಿಟ್ & ಅಪಾರ್ಚುನಿಟಿ ಶೋಧಕಗಳೊಂದಿಗೆ 3ನೇ ಶೋಧಕವಾಗಿ ಕಾರ್ಯನಿರ್ವಹಿಸಲಿದೆ. ಇದು 90 ಮಂಗಳ ದಿನಗಳು (92 ಭೂದಿನಗಳು) ಕಾರ್ಯಾಚರಣೆ ಮಾಡುವ ನಿರೀಕ್ಷೆ ಇದೆ. ಫೀನಿಕ್ಸ್ಮುಖ್ಯ ಗುರಿ ಮಂಗಳನಲ್ಲಿರುವ ವಾತಾವರಣವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅಲ್ಲಿ ಮಣ್ಣಿನ ಸೂಕ್ಷ್ಮ ಜೀವಿಗಳಅಸ್ತಿತ್ವದ ಕುರಿತು ವಿಶ್ಲೇಷಿಸುವುದು. ಫೀನಿಕ್ಸ್ ಮಂಗಳನ ಉತ್ತರ ಧ್ರುವದ ಗ್ರೀನ್ ಫ್ಯಾಲಿಯಲ್ಲಿ ಸ್ಥಿತಗೊಂಡಿದೆ. ಇದು250 ಕಿ.ಮೀ ವಿಸ್ತರವಾದ ಪ್ರದೇಶ ಫೀನಿಕ್ಸ್ ತನ್ನೊಂದಿಗೆ ಹಲವಾರು ಅನ್ವೇಷಣಾ ಉಪಕರಣಗಳನ್ನು ಒಯ್ದಿದೆ. ಮಂಗಳಭವಿಷ್ಯತ್ತಿನ ಉಡ್ಡಯನಗಳಿಗೆ ಮಹತ್ವದ ಹೆಜ್ಜೆಯಾಗಲಿದೆ.
ಮಂಗಳ ಗ್ರಹದ ಬಗ್ಗೆ ಅತೀವ ಆಸಕ್ತಿ ಹೊಂದಿರುವ ನಾವು ಸದ್ಯದಲ್ಲಿಯೇ ಅಲ್ಲಿ ವಾಸವಾಗುವ ಮಹತ್ತರಯೋಜನೆಗೂ ಸಿದ್ಧವಾಗುತ್ತಿದ್ದೇವೆ. ಕಳೆದ 5 ದಶಕಗಳಿಂದಲೂ ಮಂಗಳನ ಮೇಲೆ ತಳವೂರುವ ಸಾಧ್ಯತೆಗಳ ಕುರಿತು ರಷ್ಯಾ, ಅಮೇರಿಕಾ, ಯುರೋಪ್ನ ಬಾಹ್ಯಾಕಾಶ ವಿಜ್ಞಾನಿಗಳ ತಂಡೋಪ ತಂಡವೇ ಶ್ರಮಿಸುತ್ತಿದೆ. ನಾಸಾ &ಯುರೋಪಿನ ಬಾಹ್ಯಾಕಾಶ ವಿಜ್ಞಾನಿಗಳಿಂದಲೂ 2030 ವೇಳೆಗೆ ಅಲ್ಲಿ ನೆಲೆಸಲು ಕಾರ್ಯಪ್ರವೃತ್ತರಾಗಿದ್ದಾರೆ. ಫಿಶ್ಮನ್ಮಾದರಿಯ ಕಾದಂಬರಿ & ಕೃತಿಗಳಿಂದ ಪ್ರೇರಿತರಾಗಿರುವ ವಿಜ್ಞಾನಿಗಳು ಮಂಗಳನ ವಾತಾವರಣದಲ್ಲಿನ ಅನಿಲಗಳನ್ನುಮಾನವ ವಾಸಯೋಗ್ಯವಾಗುವಂತೆ ಹೇಗೆ ಪರಿವರ್ತಿಸಬಹುದೆಂಬುದರ ಕುರಿತು ಆಳವಾದ ಸಂಶೋಧನೆಗಳಿದ್ದಿದ್ದಾರೆ.ಮಂಗಳನ ಮೇಲೆ ಮಾನವನ ವಾಸವೇ ಒಂದು ರೋಚಕ ಅಧ್ಯಾಯವಾಗಿದೆ. ಆದರೆ ಅದಕ್ಕೆ ಸಮಸ್ಯೆಗಳೇನೂಇಲ್ಲವೆಂಬುದಲ್ಲವೇ? ಇದೆ. ಮಾನವ ಶರೀರಕ್ಕೆ ಅಲ್ಲಿನ ವಾತಾವರಣ ಒಗ್ಗುವದೇ, ವಿಕಿರಣ, ಕಾಸ್ಮಿಕ್ ಕಿರಣಗಳಿಂದಶರೀರ ಸಮರ್ಥವಾಗಿ ತಡೆದು ನಿಲ್ಲಬಹುದೇ? ಅಲ್ಲಿನ ಗುರುತ್ವಾಕರ್ಷಣೆಗೆ ನಾವು ಪೂರಕವಾಗುವಂತೆಉಪಯೋಗಿಸಲು, ಅಲ್ಲಿನ ಸಂಪನ್ಮೂಲಗಳನ್ನು ಉಪಯೋಗಕ್ಕೆ ಯೋಗ್ಯವಾಗುವಂತೆ ಮಾಡುವ ಹಲವು ಸಮಸ್ಯೆಗಳು ಮಂಗಳನ ವಾಸದಲ್ಲಿ ಅಡಕವಾಗಿದೆ. ಮಾನವನಲ್ಲಿ ವಾಸದ ಸಾಧ್ಯ ತೆ ಕುರಿತು ಪ್ರಥಮವಾಗಿ ಪ್ರಯತ್ನ ಪಟ್ಟವರುವೆರ್ನ್ಹರ್ ವೋನ್ ಬ್ರೌನ್ರಲ್ಲಿ, ಅವರು 1952 ರಲ್ಲಿ ರಚಿಸಿದ ಕೃತಿ ‘ಮಾರ್ಸ್ ಪ್ರೋಜೆಕ್ಟ್ ’ ಬಹುಖ್ಯಾತಿ ಪಡೆಯಿತು.1950-60 ಅಮೇರಿಕದ ನಾಸಾ ಮಂಗಳದಲ್ಲಿ ಅವಾಸದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತದೆ, ನಾಸಾದವಿಜ್ಞಾನಿ ಯುಜಿನ್ ಲಾಲಿ ಮಾನವ ಸಹಿತ ಮಂಗಳ ಯಾತ್ರೆಯ ಯೋಜನೆ ರೂಪಿಸಿ ಅದನ್ನು 1959ರ ಅಮೇರಿಕನ್ರಾಕೆಟ್ ಸೊಸೈಟಿಯ ಸಮಾವೇಶದಲ್ಲಿ ಮಂಡಿಸಿದ ನಂತರ ಹಲವು ವಿಜ್ಞಾನಿಗಳು ಇದಕ್ಕೆ ಯತ್ನಿಸಿದರು 1980ರಲ್ಲಿಅಂದಿನ ಅಮೇರಿಕದ ಅಧ್ಯಕ್ಷ ರಿಬರ್ಟ್ ನಿಕ್ಸನ್ರವರು ವಾರ್ನ್ ಬ್ರೌನ್ರವರ ಪ್ರಯೋಗವನ್ನು ಅಂಗೀಕರಿಸಿದರು.
ರಷ್ಯಾ ಸಹ ಮಿಖಾಯಿಲ್ ಚಿಕೊನ್ರಾವೊವ್ ನೇತೃತ್ವದಲ್ಲಿ ಮಂಗಳನತ್ತ ಮಾನವನನ್ನು ಕಳುಹಿಸುವ ಸಾಧ್ಯತೆ ಬಗ್ಗೆ ಆಸಕ್ತಿ ತೋರಿತು. 1971ರಲ್ಲಿ ಮಾನವ ಸಹಿತ ಮಂಗಳ ಶುಕ್ರಗ್ರಹಕ್ಕೆ ಉಡ್ಡಯನಕ್ಕೆ ನಿರ್ಧರಿಸಿದರೂ ನಂತರ ಕೆಲಕಾರಣಗಳಿಂದಾಗಿ ಆ ಯೋಜನೆ ಅಷ್ಟಕ್ಕೆ ನಿಂತಿತು. 1969ರ ‘ಮಾರ್ಸ್ ಎಕ್ಸ್ಪೆಡಿಷನರಿ ಕಾಂಪ್ಲೇಕ್ಸ್’ ಎಂಬ ಯೋಜನೆಯ ಪ್ರಸ್ತಾವನೆ ವಿಶ್ಲೇಷಿಸಿತು. ಇದು 3 ರಿಂದ 6 ಸಿಬ್ಬಂಧಿಗಳ ಮಂಗಳನ ಯಾತ್ರೆ ಕುರಿತದ್ದಾಗಿತ್ತು. ಮಂಗಳನಲ್ಲಿ 630ದಿನಗಳ ಅಧ್ಯಯನಕ್ಕೆ ಸೂಕ್ತವಾಗುವಂತೆ ಯೋಜನೆಯನ್ನು ಈ ಪ್ರಸ್ತಾವನೆ ರೂಪಿಸಿತ್ತು.
1981-98ರ ಅವಧಿಯಲ್ಲಿ ಮಂಗಳದತ್ತ ಮಾನವವನ್ನು ಕಳಿಸುವ ಸಾಧ್ಯತೆ ಬಗ್ಗೆ ಹೆಚ್ಚು ವ್ಯಾಪಕ ಸಂಶೋಧನೆಗೆ ಎಡೆ ಮಾಡಿತು. ಎಲ್ಲ ಅಂತರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ಸಂಸ್ಥೆಗಲು ಅದಕ್ಕಾಗಿ ವಿಚಾರಸಂಕೀರಣ, ಸಮಾವೇಶಗಳನ್ನು ಏರ್ಪಡಿಸಿ ವಿಜ್ಞಾನಿಗಳೊಂದಿಗೆ ಚರ್ಚಿಸಿದವು. ಇವು (Case fir mars world)ಎಂದೇ ಖ್ಯಾತವಾಗಿದೆ. ಅವುಗಳಲ್ಲಿ ಅಮೇರಿಕ್ನ ಅಸಾನಾಮಿರಲ್ ಸೊಸೈಟಿ & ಕೊಲೆರಾಡೊ ವಿಶ್ವವಿದ್ಯಾಲಗಳಸಮಾವೇಶಗಳು ಪ್ರಮುಖವಾದವುಗಳು, ರಾಬರ್ಟ್ ಜುಬ್ರೌನ್ ಮಾರ್ಸ್ ಡೈರೆಕ್ಟ್, ಜಿಯೊಪ್ರಿ ಲ್ಯಾಂಡಿಸ್ನ ‘ಫುಟ್ಸ್ಪೆಪ್ಸ್ ಟು ಮಾರ್ಸ್’ ನಂತಹ ಪ್ರಸ್ತಾವನೆಗಳು ಮಂಗಳ ಗೃಹ ಮಾತ್ರವಲ್ಲದೆ ಅದರ ಉಪಗ್ರಹಗಳಾದ ಫೊಬೊಸ್ ಮೇಲೂ ಮಾನವನನ್ನು ಕಳುಹಿಸುವಂತಹ ಯೋಜನೆಗಳನ್ನು ಒಳಗೊಂಡಿದ್ದವು. ಲಾರೆನ್ಸ್ ಲಿವರ್ಮೋರ್ನ್ಯಾಶನಲ್ ಲ್ಯಾಬರೋಟರಿ (ಅಮೇರಿಕ) ‘ಗ್ರೇಟ್ ಎಕ್ಸ್ಪ್ಲೋರೇಶ್ನ್’ನಂತಹ ಯೋಜನೆ ರೂಪಿಸಿದ್ದವು, ಇವೆಲ್ಲದರಿಂದ ಸ್ಫೂರ್ತಿಗೊಂಡ ನಾಸಾ 1990ರಲ್ಲಿ (ಡಿ.ಆರ್.ಎಮ್) 3.0 ಎಂಬ ಯೋಜನೆಗೆ ಕೈ ಹಾಕಿತ್ತು. ಪ್ರಸ್ತಾವಿಕ ನೌಕೆಗಳ ರಚನೆ,ಉಡ್ಡಯನ ಮಾಹಿತಿಗಳ ಪ್ರಾಥಮಿಕ ಯತ್ನ ಕೈಗೊಂಡಿತು. ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ನ ವಿಜ್ಞಾನಿಗಳ ತಂಡ ‘ರೆಫೆರೆನ್ಸ್ ಮಿಷನ್’ ಎಂಬ ಹೆಸರಿನಿಂದ ಒಟ್ಟಾಗಿ ಒಂದು ಪ್ರಯತ್ನಕ್ಕೆ ಕೈಹಾಕಿತು. ವಾಸದ ಸಾಧ್ಯಾ ಸಾಧ್ಯತೆ ಬಗ್ಗೆ ಹಳೆಯ ಪ್ರಸ್ತಾವನೆಗಳ ಆಧಾರದ ಮೇಲೆ ತಾಂತ್ರಿಕ ರೂಪರೇಶೆ ಸಿದ್ಧ ಪಡಿಸಸಿದ್ದವು. 2004ರಲ್ಲಿ ಅಮೇರಿಕದ ಅಧ್ಯಕ್ಷ ಜಾರ್ಜ ಬುಷ ವಿಷನ್ ಫಾರ್ ಸ್ಪೇಸ್ ಎಕ್ಸ್ಪ್ಲೋರೇಶನ್ ಎಂಬ ಮಂಗಳನತ್ತ ಮಾನವನನ್ನು ಕಳುಹಿಸುವ ಯೋಜನೆ ಬಗ್ಗೆ ಜನೇವರಿ 14, 2004 ರಂದು ಪ್ರಸ್ತಾಪಿಸಿದರು. ಇದರಲ್ಲಿ ಭೂಮಿಯ ಉಪಗ್ರಹ ಚಂದ್ರನ ಮೇಲೆ ಮಾನವ ವಸಾಹತನ್ನು 2012 ರೊಳಗೆ ಸ್ಥಾಪಿಸುವ ಇಂಗಿರವೂ ಅಡಕವಾಗಿತ್ತು. 2007ರ ಸಪ್ಟೆಂಬರ್ 24ರಂದು ನಾಸಾದ ಅಧ್ಯಕ್ಷ ಮೈಕೆಲ್ ಗ್ರಿಫಿತ್ ಅವರು 2037ರ ವೇಳೆಗೆ ನಾವು ಮಂಗಳನತ್ತ ಮಾನವನನ್ನು ಕಳಿಸುವ ಸಾಮಥ್ರ್ಯ ಹೊಂದಲಿದ್ದೇವೆಎಂದಿದ್ದಾರೆ, ಇದಕ್ಕಾಗಿ ಅಗತ್ಯವಾದ ವೆಚ್ಚ 11 ಮಿಲಿಯನ್ ಡಾಲರು ಗಳಿರಬಹುದೆಂದು ಅಂದಾಜಿಸಿದ್ದಾರೆ. ರಷ್ಯಾ 2016-2020ರ ಅವಧಿಯೊಳಗೆ ಮಂಗಳನತ್ತ ಮಾನವರನ್ನು ಕಳುಹಿಸುವತ್ತ ಯೋಜನೆ ರೂಪಿಸುತ್ತಿದೆ. ನಾಲ್ಕು ಐದು ಗಗನಯಾತ್ರಿಗಳನ್ನು ಕಳುಹಿಸಿ ಎರಡು ವರ್ಷಗಳ ಕಾಲ ಅಂತರಿಕ್ಷದಲ್ಲಿದ್ದು ಸಂಶೋಧನೆ ಮಾಡುವ ಯೋಜನೆ ಇದಾಗಿದೆ.ಅಲ್ಲದೇ ಯುರೋಪಿಯನ್ ಸ್ಪೇಸ್ ಏಜೆನ್ಸಿಯೊಂದಿಗೆ ಜಂಟಿ ಕಾರ್ಯಾಚರಣೆಗಳಿಗೂ ಸಿದ್ಧವಾಗಿದೆ. ಅನ್ವೇಷಣೆಗೆ ಅಗತ್ಯ ಪರಿಹಾರಗಳೊಂದಿಗೆ ಎರಡು ಶೋಧಕ ನೌಕೆಗಳನ್ನು ಕಳುಹಿಸುವ ವಿಸ್ಕತ ಯೋಜನೆ ಸಿದ್ಧಗೊಳಿಸುತ್ತಿದೆ. 3 ಜನಯಾತ್ರಿಗಳು ಮಂಗಳದಲ್ಲಿ ಎರಡು ತಿಂಗಳು ಕಳೆಯುವುದರಿಂದ ಒಟ್ಟು 440 ದಿನಗಳ ಯಾತ್ರೆಯ ರೂಪುರೇಶೆಇದಾಗಿದೆ. ಈ ಯೋಜನೆಗೆ 20 ಬಿಲಿಯನ್ ಡಾಲರ್ ವೆಚ್ಚವಾಗಲಿದ್ದು ರಷ್ಯಾ ಅದರ ಶೇ.30 ರಷ್ಟು ಖರ್ಚನ್ನು ಪಾಲುದಾರಿಕೆಯಲ್ಲಿ ನೀಡಲಿದೆ.
ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇ.ಎಸ್.ಎ) ಯು “ಅರೋರಾ ಪ್ರೋಗ್ರಾಂ” ಎಂಬ ದೀರ್ಘಕಾಲೀನಯೋಜನೆಗಳನ್ನು ಹಾಕಿಕೊಂಡು 2030ರ ವೇಳೆಗೆ ಮಂಗಳನತ್ತ ಮಾನವ ಸಹಿತ ವ್ಯೊಮ ಸಂಶೋಧನಾ ನೌಕೆಕಳುಹಿಸಲು ಸಿದ್ಧವಾಗುತ್ತಿದೆ. ಈ ಎಲ್ಲ ಪ್ರಯತ್ನಗಳಿಂದಾಗಿ ಮಂಗಳನ ಮೇಲೆ ಮಾನವ ಹೆಜ್ಜೆಯನ್ನಿಡುವ ಕಾಲಸನ್ನಿಹಿತವಾದಂತಾಗಿದೆ, ಮತ್ತೊಂದು ಭೂಗ್ರಹ ಅಲ್ಲಿ ರೂಪ ತಳೆಯುವಂತೆ ಮಾಡಲು ಭೂ ಜೀವಿಗಳು ಪ್ರಯತ್ನಿಸಲಿದ್ದಾರೆ.