ಬಾಲ ಸ್ವಚ್ಛತಾ ಅಭಿಯಾನ :-
 
ಪ್ರಸ್ತಾವನೆ :
ಬಾಲ ಸ್ವಚ್ಚತಾ ಅಭಿಯಾನವು ಭಾರತ ಸರ್ಕಾರದಿಂದ ಮಕ್ಕಳಲ್ಲಿ ‘ಸ್ವಚ್ಚತೆ ಮತ್ತು ನೈರ್ಮ್ಯ’ ಜಾಗೃತಿಯನ್ನು ಮೂಡಿಸಲು ಹಮ್ಮಿಕೊಂಡ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಈ ಅಭಿಯಾನವನ್ನು ಮಕ್ಕಳ ಮೇಲೆ ಅಪಾರ ಪ್ರೀತಿ ಹಾಗೂ ಅವರಿಗೆ ದೈವತ್ವದ ಸ್ಥಾನವನ್ನು ನೀಡುತ್ತಿದ್ದ ಭಾರತದ ಮೊದಲನೇ ಪ್ರಧಾನಮಂತ್ರಿ ಜವಾಹರಲಾಲ ನೆಹರೂ ಅವರ ಜನ್ಮದಿನವಾದ ನವೆಂಬರ್ 14 ರಂದು ಆರಂಭಿಸಲಾಯಿತು. ಈ ಕಾರ್ಕ್ರಮದ ಉದ್ದೇಶಗಳನ್ನು ಈಗ ತಿಳಿದುಕೊಳ್ಳೋಣ.
ವಿಷಯ ನಿರೂಪಣೆ :
‚ಸ್ವಚ್ಛ ಭಾರತ ಸುಂದರ ಭಾರತ‛ ಎಂಬ ನಮ್ಮ ಪ್ರಧಾನಮಂತ್ರಿ ಮಾನ್ಯಶ್ರೀ ನರೇಂದ್ರ ಮೋದಿಯವರ ಕನಸಿನಂತೆ ; ‚ತಾವೇ ಸ್ವತ: ಹಾಗೂ ಶಾಲೆ ,ಮನೆ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು‛ ಜೊತೆಗೆ ಸ್ವಚ್ಛಭಾರತ ಶ್ರೇಷ್ಠ ಭಾರತ ಎಂಬುದನ್ನು ಸಾರ್ಥಕಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ನವೆಂಬರ್ 14,2014 ರಿಂದ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಪ್ರತಿವರ್ಷವೂ 5 ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತದೆ. ಮಕ್ಕಳಲ್ಲಿಯೇ ಇದರ ಸಂಪೂರ್ಣ ಅರಿವನ್ನು ಮೂಡಿಸುವ ವಿಶಿಷ್ಟ ಕಾಯಕ್ರಮವಾದ ಇದರ ಮೊದಲದಿನ ಅಂದರೆ ನವೆಂಬರ 14 ರಂದು ಶಾಲೆ ಹಾಗೂ ಸುತ್ತಲಿನ ಪರಿಸರ ಮತ್ತು ಆಟದ ಮೈದಾನಗಳ ಶುಚಿತ್ವಕ್ಕೆ ಗಮನ ಕೊಡುವುದು. ಎರಡನೇ ದಿನ ಆಹಾರದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು. ಮೂರನೆಯ ದಿನ ಸ್ವಂತ ಶುಚಿತ್ವದ ಅರಿವು ಮೂಡಿಸುವುದು. ನಾಲ್ಕನೆಯ ದಿನ ಕುಡಿಯುವ ನೀರಿನ ಬಗ್ಗೆ ಸ್ವಚ್ಛತೆ ಹಾಗೂ ಐದನೆಯ ದಿನ ಶಾಚಾಲಯ ಶುಚಿತ್ವದ ಅರಿವನ್ನು ಮೂಡಿಸುವುದು. ಅಲ್ಲದೇ ಮಕ್ಕಳು ಸ್ವಚ್ಛತೆಯನ್ನು ಒಂದು ಕೆಲಸವನ್ನಾಗಿ ಮಾಡದೇ; ಅದನ್ನು ಮಕ್ಕಳು ತಮ್ಮ ದೈನಂದಿನ ಹವ್ಯಾಸದಂತೆ ರೂಡಿಸಿಕೊಳ್ಳುವುದು. ಇದು ಮಕ್ಕಳಲಲ್ಲಿ ನಾಯಕತ್ವದ ಗುಣ ಬೆಳೆಯಲು ಸಹಾಯಕವಾಗುತ್ತದೆ. ಮಕ್ಕಳು ತಮ್ಮ ಶಿಕ್ಷಕರ ಸಹಾಯವನ್ನು ಪಡೆಯುವ ಮೂಲಕ ಸ್ವಚ್ಛತೆಯ ಬಗ್ಗೆ ಇನ್ನು ಹೆಚ್ಚಿನ ಜ್ಞಾನವನ್ನು ವೃದ್ಧಿಸಿಕೊಂಡು ಈ ಕಾರ್ಯಕ್ರಮದ ಯಶಸ್ಸಿಗೆ ಸಹಾಯಕವಾಗುವುದು.
ಉಪಸಂಹಾರ :
‛ಇಂದಿನ ಮಕ್ಕಳೇ ನಾಳಿನ ನಾಗರಿಕರು‛ ಇದನ್ನು ಅರಿತ ಸರ್ಕಾರವು ವಿದ್ಯಾರ್ಥಿಗಳಲಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸಿದರೆ ಅದರ ಯಶಸ್ಸು ಖಂಡಿತ ಸಾಧ್ಯ. ಎಂದು ಸರ್ಕಾರವು ಈ ಬಾಲ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಆ ಮೂಲಕ ಸ್ವಚ್ಛಭಾರತ ಅಭಿಯಾನ ಕರ್ಯಕ್ರಮವನ್ನು ಸಾಕಾರಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದ ನಾವು ಈ ಕಾರ್ಯಕ್ರಮದಲಲ್ಲಿ ಸಕ್ರೀಯವಾಗಿ ಭಾಗವಹಿಸುವ ಮೂಲಕ ಅದರ ಯಶಸ್ಸಿಗೆ ಕೈ ಜೋಡಿಸೋಣ.