ರಾಷ್ಟ್ರೀಯ ಜೀವ ಔಷದ(BioPharma)ಮಿಷನ್ ಜಾರಿಗೆ
ದೇಶದಲ್ಲಿ ಜೀವ ಔಷದ ವಿಜ್ಞಾನ ಮತ್ತು ಜೀವ ಔಷದ ಕೈಗಾರಿಕೆಯ ಅಭಿವೃದ್ಧಿಯನ್ನು ವೇಗಗೊಳಿಸಲು ಮೊದಲ ಬಾರಿಗೆ ಕೇಂದ್ರ ಸರ್ಕಾರವು ಕೈಗಾರಿಕಾ ಮತ್ತು ಶೈಕ್ಷಣಿಕ ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ರಾಷ್ಟ್ರೀಯ ಜೀವ ಔಷದ(BioPharma) ಮಿಷನ್ ಅಡಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು I3(Innovate In India) ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಇದಕ್ಕಾಗಿ ಒಟ್ಟು 250 ಮಿಲಿಯನ್ ಅಮೇರಿಕನ್ ಡಾಲರ್ ಹೂಡಿಕೆ ಮಾಡಲಾಗಿದ್ದು ಇದರಲ್ಲಿ 125 ಮಿಲಿಯನ್ ಅಮೇರಿಕನ್ ಡಾಲರ್ ಹಣವನ್ನು ವಿಶ್ವ ಬ್ಯಾಂಕ್ ಸಾಲದ ರೂಪದಲ್ಲಿ ನೀಡಿದೆ ಪ್ರಸ್ತುತ ಜಾಗತಿಕ ಜೀವ ಔಷದ ಮಾರುಕಟ್ಟೆಯಲ್ಲಿ ಭಾರತ ಪಾಲು ಕೇವಲ 2.8%ರಷ್ಟಿದ್ದು ಈ ಮಿಷನ್ ಮೂಲಕ ಇದನ್ನು 5% ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ .