ಭಾರತದಲ್ಲಿ ಉಪಗ್ರಹಗಳ ಕಾರ್ಯಕ್ರಮ (Satellite program in India)
 
1) ದೂರಸಂವೇದಿ ಉಪಗ್ರಹಗಳು (ಐ.ಆರ್.ಎಸ್.ಸೆಟಲೈಟ್)
• ದೂರಸಂವೇದಿ ಎಂದರೆ ದೂರದಿಂದ ವಿಕ್ಷಿಸಿ ಮಾಹಿತಿ ಸಂಗ್ರಹಣೆ ಮಾಡುವುದು.
• ಭಾರತದ ಪ್ರಥಮ ಕಾರ್ಯನಿರತ ದೂರಸಂವೇದನಾ ಉಪಗ್ರಹ ಐ.ಆರ್.ಎಸ್.-1ಏ 1988 ರಲ್ಲಿ ಉಡಾವಣೆ ಮಾಡಲಾಯಿತು. ಇಂತಹ ಉಪಗ್ರಹಗಳನ್ನು ಭೂಮಿಯಿಂದ 800-1000 ಕಿ.ಮೀ ಅಂತರದ ಕಕ್ಷೆಯಲ್ಲಿ ಬಿಡಲಾಗುತ್ತದೆ. ಇವುಗಳನ್ನು ಸೂರ್ಯಸ್ಥಿರ ಉಪಗ್ರಹಗಳೆಂದು ಕರೆಯಲಾಗುವುದು. ಈ ಉಪಗ್ರಹಗಳಲ್ಲಿ ಸಿ.ಸಿ.ಡಿಗಳನ್ನು ಬಳಸಲಾಗುತ್ತದೆ.
• ಇವುಗಳನ್ನು ಪ್ರಮುಖವಾಗಿ ಮಾಹಿತಿ ಸಂಗ್ರಹಿಸಲು ಬಳಸಲಾಗುತ್ತದೆ.
ಉಪಯೋಗಗಳು
• ಹವಾಮಾನ ಅಧ್ಯಯನ
• ಮುಂಗಾರಿನ ಮುನ್ಸೂಚನೆ
• ಅಂತರ್ಜಲ ವ್ಯಾಪ್ತಿ ನಕ್ಷೆ
• ಮೀನುಗಾರಿಕೆ ವಲಯ ಪತ್ತೆ
• ಅರಣ್ಯ ವ್ಯಾಪ್ತಿ ನಕ್ಷೆ
• ಕಾಳ್ಗಿಚ್ಚು ಪತ್ತೆ ಹಚ್ಚುವಿಕೆ
• ನೀರಾವರಿ ನಿರ್ವಹಣೆ
• ಪ್ರವಾಹ ನಕ್ಷೆ
• ಖನಿಜಗಳ ಪತ್ತೆ
• ಗಣಿಗಾರಿಕೆ ಪತ್ತೆ
• ಬೆಳೆ ಇಳುವರಿ ಅಂದಾಜು
• ತೈಲ ನಿಕ್ಷೆಪಗಳ ಪತ್ತೆ
• ಚಂಡಮಾರುತ ಮುನ್ಸೂಚನೆ
• ಜೀವ ವೈವಿದ್ಯತೆ
• ನಗರ ಪ್ರದೇಶದ ಮಾಹಿತಿ
• ಮುಂತಾದವುಗಳು.
ದೂರಸಂಪರ್ಕ ಉಪಗ್ರಹಗಳು
• ಈ ಉಪಗ್ರಹಗಳನ್ನು ಭೂಮಧ್ಯ ರೇಖೆಯಿಂದ 36000 ಕಿ. ಮೀ ಅಂತರದಲ್ಲಿ ಭೂ ಸಮಾಂತರ ಕಕ್ಷೆಯಲ್ಲಿ ಒಂದು ಬೌಗೋಳಿಕ ಭಾಗಕ್ಕೆ ಸ್ಥಿರವಾಗಿ ಉಡಾಯಿಸಲಾಗುತ್ತದೆ.
• ಉದಾ : ಇನ್ವಾಟ್ ಸರಣಿ ಉಪಗ್ರಹಗಳು.
• ಈ ಉಪಗ್ರಹಗಳಲ್ಲಿ ಎಸ್-ಬ್ಯಾಂಡ್ ಸಿ-ಬ್ಯಾಂಡ್ ಹಾಗೂ ಕ್ಯೂ ಬ್ಯಾಂಡ್ ಟ್ರಾನ್ಸ ಪೌಂಡರ್ಗಳನ್ನು ಬಳಸಲಾಗುತ್ತದೆ.
• ಎಸ್-ಬ್ಯಾಂಡ್ – ರಾಡರ್ಗಳಿಗೆ
• ಸಿ- ಬ್ಯಾಂಡ್ - ಹೆಚ್ಚು ಅಂತರದ ರೆಡಿಯೋ ದೂರಸಂಪರ್ಕಕ್ಕಾಗಿ
• ಕ್ಯೂ- ಬ್ಯಾಂಡ್ – ಉಪಗ್ರಹ ಸಂಪರ್ಕಕ್ಕಾಗಿ ಅಂದರೆ ಡಿ.ಟಿ.ಎಚ್, ವಿಮಾನಗಳು ಇತ್ಯಾದಿಗಳಿಗಾಗಿ ಬಳಸಲಾಗುತ್ತದೆ.
• ಉಳಿದೆಲ್ಲ ಕಕ್ಷೆಗಳಿಗೆ ಹೋಲಿಸಿದಾಗ ಭೂಸ್ಥಿರ ಕಕ್ಷೆ ಅತಿ ಹೆಚ್ಚು ಉಪಗ್ರಹಗಳ ದಟ್ಟಣೆ ಹೊಂದಿದೆ.
ಇನ್ಸಾಟ್ ಸರಣಿ ಉಪಗ್ರಹಗಳು
• ಇನ್ಸಾಟ್ ಅಂದರೆ ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಎಂದರ್ಥ(Indian National Satellite). 1983 ರಲ್ಲಿ ಈ ಸರಣಿ ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ 4 ವಿವಿಧ ಸರಣಿಯ ಉಪಗ್ರಹಗಳಿವೆ.
1) ಇನ್ಸಾಟ್ ಸರಣಿ-1 – ಇನ್ಸಾಟ್ 1, 1ಎ, 1ಬಿ, 1ಸಿ, ಮತ್ತು 1ಡಿ
2) ಇನ್ಸಾಟ್ ಸರಣಿ-2 – ಇವು ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿ ಮತ್ತು ನಿರ್ಮಾಣ ಮಾಡಲಾಗಿದೆ.
3) ಇನ್ಸಾಟ್ 3 ಸರಣಿ – ಡಿ.ಟಿ.ಎಚ್. ಸೇವೆಗಳಿಗಾಗಿ ಬಳಸಲಾಗುತ್ತದೆ.
4) ಇನ್ಸಾಟ್ -4 ಸರಣಿ – ಇವುಗಳಲ್ಲಿ ಕನಿಷ್ಠ 12 ಕ್ಯೂ ಬ್ಯಾಂಡ್ ಹಾಗೂ 12 ಸಿ-ಬ್ಯಾಂಡ್ ಟ್ರಾನ್ಸಪೊಂಡರ್ಗಳನ್ನು ಬಳಸಲಾಗುತ್ತದೆ.
• ಇನ್ಸಾಟ್ ಉಪಗ್ರಹಗಳು ಕೃಷಿ,ನೀರಾವರಿ,ಸಂಪನ್ಮೂಲಗಳ ನಿರ್ವಹಣೆ,ಖನಿಜಗಳ ಪತ್ತೆ,ದೂರ ಸಂಪರ್ಕ ಕ್ಷೇತ್ರಗಳಲ್ಲಿ ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುತ್ತಿವೆ.
ಗ್ಲೋಬಲ್ ಪೋಜಿಷನಿಂಗ್ ವ್ಯವಸ್ಥೆ(ಜಿಪಿಎಸ್)
• ಜಿ.ಪಿ.ಎಸ್. ಎಂದರೆ ಭೂಮಿಯ ಮೇಲೆ ಇರುವ ಸ್ಥಳ, ವಸ್ತು ಅಥವಾ ವ್ಯಕ್ತಿಗಳ ವಿವರವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಸಹಿತ ಗುರುತಿಸುವುದು. ಜಿ.ಪಿ.ಎಸ್. ಉಪಕರಣ ಬಳಸಿ ಉಪಗ್ರಹಗಳ ಮೂಲಕ ಸಂಕೇತಗಳನ್ನು ಪಡೆಯಲಾಗುತ್ತದೆ.
ಉಪಯೋಗಗಳು :-
• ಮಿಲಿಟಿರಿಯಲ್ಲಿ ನ್ಯಾವಿಗೇಶನ್, ಗುರಿ ಭೇದಿಸುವುದು, ಕ್ಷಿಪಣಿಗಳ ಹಾರಾಟ ಹಾಗೂ ವಿರೋಧಿ ಕ್ಷಿಪಣಿ ಭೇದನೆಯಲ್ಲಿ ಬಳಕೆ.
• ಹುಡುಕಾಟ ಮತ್ತು ರಕ್ಷಣೆ : ಉದಾ : ವಿಮಾನ ಪತನವಾದಾಗ ಹುಡುಕಾಟ
• ವಾಹನಗಳಲ್ಲಿ ನಿರ್ದಿಷ್ಟ ಸ್ಥಳ ತಲುಪಲು ನಕ್ಷೆಯೊಂದಿಗೆ ಬಳಕೆ.