ಜೈವಿಕ ತಂತ್ರಜ್ಞಾನ(Bio-Technology)

 

• ಜೀವಿಗಳು ಅಂದರೆ ಪ್ರಾಣಿ ಹಾಗೂ ಸಸ್ಯಗಳ ಅಂಗ, ಅಂಗಾಂಶ ಅಥವಾ ತಳಿಗಳಲ್ಲಿ ಮಾರ್ಪಾಟು ಮಾಡಿ ಔಷಧಿ, ಔದ್ಯೋಗಿಕ, ಕೃಷಿ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ಲ್ಯಾಬರೋಟರಿ ತಂತ್ರಜ್ಞಾನದೊಂದಿಗೆ ತಳಿಗಳನ್ನು ಸೃಷ್ಠಿಸುವ ತಂತ್ರಜ್ಞಾನವೇ ಜೈವಿಕ ತಂತ್ರಜ್ಞಾನ.
• ಜೈವಿಕ ಕಾರ್ಯವಿಧಾನಗಳನ್ನು ಬಳಸಿಕೊಳ್ಳುವ ವಿಜ್ಞಾನವೇ ಜೈವಿಕ ವಿಜ್ಞಾನ
• ಜೈವಿಕ ತಂತ್ರಜ್ಞಾನ ಎಂಬ ಪದವನ್ನು ಮೊತ್ತ ಮೊದಲು 1920 ರಲ್ಲಿ ಬ್ರಿಟನ್ ದೇಶದ ಲೀಡ್ಸ್ ಎಂಬ ನಗರದಲ್ಲಿ ಬಳಸಲಾಯಿತು.

ಜೈವಿಕ ತಂತ್ರಜ್ಞಾನದ ಚಾರಿತ್ರಿಕ ಹಿನ್ನಲೆ


• ಬ್ರೆಡ್ ತಯಾರಿಸಲು ಹಿಟ್ಟನ್ನು ಹುಳಿ ಬರಿಸುವ ವಿಧಾನ ಸಾವಿರಾರು ವರ್ಷಗಳ ಹಿಂದೆಯೇ ಮಾನವನಿಗೆ ತಿಳಿದಿತ್ತು.
• 1650 ರಲ್ಲಿ ಫ್ರಾನ್ಸ್ ನಲ್ಲಿ ಅಣಬೆಗಳನ್ನು ಕೃತಕವಾಗಿ ಬೆಳೆಸಲಾಗುತ್ತಿತ್ತು.
• 1857 ರಲ್ಲಿ ಲೂಯಿ ಪಾಶ್ಚೆರ್ ಲ್ಯಾಕ್ಟಿಕ್ ಆಮ್ಲದ ಹುದುಗುವಿಕೆಯನ್ನು ವಿವರಿಸಿದನು.
• 1879 ರಲ್ಲಿ ಯೀಸ್ಟ್ ಕೋಶಗಳನ್ನು ಬಳಸದೆ ಆಲ್ಕೋಹಾಲ್ ಹುದುಗುವಿಕೆಯನ್ನು ಉಂಟು ಮಾಡಬಹುದೆಂದು ಎಡ್ವರ್ಡ್ ಬೂಬ್ನರ್ ಎಂಬ ವಿಜ್ಞಾನಿ ಪತ್ತೆ ಮಾಡಿದನು.
• 1915 ರಲ್ಲಿ ಬೇಕರಿಗಳಿಗೆ ಅವಶ್ಯವಾದ ಯೀಸ್ಟ್ ನ್ನು ಭಾರಿ ಪ್ರಮಾಣದಲ್ಲಿ ತಯಾರಿಸಲು ಹೊಸ ವಿಧಾನವನ್ನು ಜರ್ಮನ್ ದೇಶದಲ್ಲಿ ಅಳವಡಿಸಲಾಯಿತು.
• ಮೇಲೆ ವಿವರಿಸಿದ ಘಟನೆಗಳು ಯಾವುವು ಸಹ ನೇರವಾದ ಜೈವಿಕ ತಂತ್ರಜ್ಞಾನ ಎನ್ನಿಸುವುದಿಲ್ಲ. ಆದರೆ ಇವು ಜೈವಿಕ ತಂತ್ರಜ್ಞಾನ ಬೆಳೆಯಲು ಸಾಕಷ್ಟು ಸಹಾಯಕವಾದವು.

ಜೈವಿಕ ತಂತ್ರಜ್ಞಾನದಲ್ಲಿ ಎರಡು ವಿಧಗಳಿವೆ.


1) ವಂಶವಾಹಿ(ಜೀನ್) ರಹಿತ ಜೈವಿಕ ತಂತ್ರಜ್ಞಾನ-ಇದರಲ್ಲಿ ಕೋಶ,ಅಂಗಾಂಶ ಅಥವಾ ಸಂಪೂರ್ಣ ಜೀವಿಯನ್ನು ಬಳಸಲಾಗುತ್ತದೆ.
2) ವಂಶವಾಹಿ ಸಹಿತ ಜೈವಿಕ ತಂತ್ರಜ್ಞಾನ- ಇದರಲ್ಲಿ ಜೀವಿಗಳ ವಂಶಾಹಿಗಳನ್ನು (ಜೀನ್ಸ್) ಮಾತ್ರ ಬಳಸಲಾಗುತ್ತದೆ.
* ಜೈವಿಕ ತಂತ್ರಜ್ಞಾನವು ಜೀವಕೋಶಗಳು ಹಾಗೂ ನಮ್ಮ ಜೀವನ ಸುಧಾರಣೆಗೆ ಅವುಗಳ ಮಾರ್ಪಾಡುಗಳ ಅಧ್ಯಯನವು ಹೊಂದಿರುತ್ತದೆ.
* ಎಲ್ಲಾ ಜೀವಿಗಳು ಜೀವಕೋಶಗಳಿಂದ ಆಗಿರುತ್ತವೆ. ಅವುಗಳು ಮೂಲ ಜೈವಿಕ ವಸ್ತುವಾದ ಡಿ.ಎನ್.ಎ ಮೇಲೆ ಪ್ರಭಾವಿತರಾಗಿರುತ್ತವೆ.
* ವಂಶವಾಹಿ (ಜಿನ್) ಎಂದರೆ ಜೀವಿಗಳ ಅನುವಂಶಿಕ ಲಕ್ಷಣಗಳನ್ನು ಹೊಂದಿರುತ್ತವೆ.

ಜೈವಿಕ ತಂತ್ರಜ್ಞಾನದ ಕಾರ್ಯ ತಂತ್ರಗಳು


ತಳಿ ತಂತ್ರಜ್ಞಾನ


• ಜೀವಿಯೊಂದರ ಜೀನ್ ಸಮುದಾಯಕ್ಕೆ ಉದ್ದೇಶಪೂರ್ವಕ ಸಮಬಂಧವಿಲ್ಲದ ಅಥವಾ ಆಪೇಕ್ಷಿತ ಜೀನಗಳನ್ನು ಸೇರಿಸಿ, ನಿರೀಕ್ಷಿತ ತಳಿಗಳನ್ನು ಪಡೆಯುವ ವಿದ್ಯೆಗೆ ತಳಿಯಂತ್ರ ವಿದ್ಯೆ ಎನ್ನುವರು. ಡಿ.ಎನ್.ಎ ಮಾಲ್ಯುಕ್ಯುಲ್ಗಳಲ್ಲಿ ವಂಶವಾಹಿಗಳನ್ನು ಸೇರಿಸುವ, ತೆಗೆದು ಹಾಕುವ ಪರಿವರ್ತಿಸುವ ಅಥವಾ ಅಭಿವೃದ್ಧಿ ಪಡಿಸುವ ಕಾರ್ಯ ಮಾಡಲಾಗುತ್ತದೆ.
• ವಂಶವಾಹಿನಿಗಳಲ್ಲಿ ಅಗತ್ಯವಾದ ಬದಲಾವಣೆಗಳನ್ನು ಉಂಟು ಮಾಡುವ ತಂತ್ರಜ್ಞಾನವೇ ತಳಿ ತಂತ್ರಜ್ಞಾನ.

ತಳಿ ತಂತ್ರಜ್ಞಾನದ ಅನ್ವಯಗಳು


• E .coli ಎಂಬ ಬ್ಯಾಕ್ಟೀರಿಯಾದಿಂದ ಮಾನವ ಇನ್ಸುಲಿನ್ ತಯಾರಿಕೆ.
• ಮಾನವನ ಬೆಳವಣಿಗೆಯ ಹಾರ್ಮೋನ್ ನ ತಯಾರಿಕೆ.
• ಮಾನೋಕ್ಲೋನಲ್ ಆಂಟಿ ಬಾಡಿಯ ತಯಾರಿಕೆ
• ಲಸಿಕೆಗಳ ತಯಾರಿಕೆ.
• ಮಾಲಿನ್ಯ ತಡೆಗಟ್ಟುತ್ತದೆ.
• ಜೈವಿಕ ಗೊಬ್ಬರಗಳಾಗಿ
• ಜೈವಿಕ ಕೀಟನಾಶಕಗಳಾಗಿ