Loading [MathJax]/extensions/MathML/mml3.js

“ಬಾಲ ಕಾರ್ಮಿಕತೆ”

 

ಬಾಲಕಾರ್ಮಿಕತೆ ಎಂಬುದು ಮಾನವೀಯತೆಗೊಂದು ಕಳಂಕ. ಇದೀಗ ತಾನೆ ಈ ಬದುಕಿಗೆ ಕಣ್ ಬಿಡುತ್ತಿರುವ ಚಿಣ್ಣರ ರಕ್ತ ಮಾಂಸಗಳನ್ನು ತಮ್ಮ ಅವಶ್ಯಕತೆಗಾಗಿ, ಅನಿವಾರ್ಯತೆಗಾಗಿ, ಲಾಭಕ್ಕಾಗಿ ಬಳಸಿಕೊಳುವದೊಂದು ಪೈಶಾಚಿಕ ಕೃತ್ಯ. ಈ ಕೃತ್ಯದಲ್ಲಿ ತಂದೆ-ತಾಯಿಗಳು ಸೇರಿದಂತೆ ಯಾರೇ ಭಾಗಿಯಾದರೂ ಅವರು ನೈತಿಕವಾಗಿಯಷ್ಟೇ ಅಲ್ಲ, ಮಾನವೀಯತೆಯ ದೃಷ್ಟಿಯಿಂದಲೂ ಅಪರಾಧಿಗಳಾಗುತ್ತಾರೆ. ಇದೊಂದು ನೈತಿಕ ದೌರ್ಜನ್ಯ ಮಾತ್ರವಲ್ಲ, ಮಾನವನ ಘನತೆಗೆ ಆಗುವ ಹೀನಾಯವಾದ ಮುಖಭಂಗ.
ಬಾಲ ಕಾರ್ಮಿಕತೆಯನ್ನು ಎಲ್ಲ ಸಮಾಜಗಳಲ್ಲಿಯೂ ಕಾಣಬಹುದಾಗಿದೆ. ಆದರೆ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಈ ಸಮಸ್ಯೆಯ ತೀರ್ವತೆ ಅತ್ಯಧಿಕ ಮಕ್ಕಳು ಒಂದು ದೇಶದ ಭವಿಷ್ಯ ಮಾತ್ರವಲ್ಲ ಇಡೀ ಮಾನವ ಕುಲದ ಭವಿಷ್ಯ ಎಂದು ಮನವರಿಕೆಯಾದಲ್ಲಿ ಮಾತ್ರ ಈ ಸಮಸ್ಯೆಯ ತೀರ್ವತೆ ಮತ್ತು ನಿರ್ಮೂಲನೆಯ ಅಗತ್ಯ ಅದೆಷ್ಟು ಮುಖ್ಯ ಎಂಬುದರ ಅರಿವುಂಟಾಗುತ್ತದೆ. ಆದುದರಿಂದಲೇ ವಿಶ್ವಮಟ್ಟದಲ್ಲಿ ಪ್ರಸ್ತುತವೂ ಈ ವಿಷಯವು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಬಾಲ ಕಾರ್ಮಿಕತೆ ಎಂಬುದು ಒಂದು ಸಂಕೀರ್ಣವಾದ ಸಮಸ್ಯೆ ಒಂದು ಸಾಮಾನ್ಯ ಕುಟುಂಬದಿಂದ ಹಿಡಿದು ಅಪಾಯಕಾರಿ ದುಡಿಮೆಗಳಲ್ಲಿ ದುಡಿಯುವ ಬಾಲಕರವರೆಗೆ ವಿಸ್ತಾರ ವ್ಯಾಪ್ತಿಯನ್ನು ಪಡೆದುಕೊಂಡಿದೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಾವು ಈ ಸಮಸ್ಯೆಯನ್ನು ಕಾಣುತ್ತೇವೆ. ಇದಕ್ಕಿರುವ ಕಾರಣಗಳೂ ಹತ್ತು ಹಲವು ಹುಡುಕುತ್ತಾ ಹೋದಂತೆ ಬೆಳೆಯುತ್ತಾ ಹೋಗುವ ಗುಣವುಳ್ಳದ್ದು. ಆದ್ದರಿಂದ ಈ ಬಗ್ಗೆ ಇಲ್ಲಿಯವರೆಗೆ ಎಷ್ಟೇ ಯೋಜನೆಗಳನ್ನು ಕಾನೂನು ನಿಯಮಗಳನ್ನು ರೂಪಿಸಿದರೂ, ನಿಷೇಧಿಸಿದರೂ ಪ್ರಸ್ತುತವೂ ಇದರ ತೀರ್ವತೆ ಹೆಚ್ಚುತ್ತಲೇ ಇದೆ.

ಅರ್ಥ:


ಆರ್ಥಿಕ ಅಥವಾ ಇತರ ಯಾವುದೇ ಲಾಭಕ್ಕಾಗಿ ಮಕ್ಕಳನ್ನು ದುಡಿಸಿಕೊಳ್ಳುವುದು ಬಾಲಕಾರ್ಮಿಕತೆ ಎನಿಸುತ್ತದೆ.

ಪರಿಣಾಮ:


ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎನ್ನುವುದಾದರೆ ಬಾಲ ಕಾರ್ಮಿಕತೆಯಿಂದ ಮಕ್ಕಳು ಮತ್ತು ಅವರ ಭವಿಷ್ಯ ಮಾತ್ರವೇ ಕಮರಿ ಹೋಗುವುದಿಲ್ಲ ಆ ಮೂಲಕ ಇಡೀ ಮಾನವ ಕುಲದ ಭವಿಷ್ಯವೇ ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ. ಮುಂದಿನ ಭವಿಷ್ಯಕ್ಕೆ ಎದೆಯೇರಿಸಿ ನಿಲ್ಲಬೇಕಾದ ಮಕ್ಕಳು ಯಾವುದೇ ಜೀವಿಯ ಮೂಲಭೂತ ಹಕ್ಕಾದ ಸರ್ವತೋಮುಖ ಬೆಳವಣಿಗೆಯನ್ನು ಕಳೆದುಕೊಳ್ಳುತ್ತಾರೆ. ಬೆಲೆಕಟ್ಟಲಾದ ಅವರ ಸೃಜನಶೀಲ ಪ್ರತಿಭೆಗಳು ಬೆಲೆಕಟ್ಟಲಾಗದ
ಅವರ ಸೃಜನಶೀಲ ಪ್ರತಿಭೆಗಳು ಬೆಳೆವಣಿಗೆ ಕಾಣದೇ ನಾಶವಾಗಿ ಹೋಗುತ್ತವೆ.ಬಾಲಕಾರ್ಮಿಕತೆಗೀಡಾದ ಮಕ್ಕಳು ದೈಹಿಕ, ಮಾನಸಿಕ, ಲೈಗಿಂಕ ಮತ್ತು ಸಾಮಾಜಿಕ ದೌರ್ಜನ್ಯಗಳಾಗುತ್ತಾರೆ. ಮಾನವನ ಮೂಲ ಭೂತ ಅವಶ್ಯಗಳಾದ ಪೌಷ್ಟಿಕ ಆಹಾರ, ಬಟ್ಟೆ ಪರಿಸರ,ಅಕ್ಕರೆ, ಮೇಲ್ವಿಚಾರಣೆ, ಮಾನಸಿಕ, ದೈಹಿಕ ರಕ್ಷಣೆ ಮುಂತಾದವುಗಳಿಂದ ವಂಚಿತರಾಗುತ್ತಾರೆ. ಪ್ರೀತಿ,ಮಮತೆ, ಬಾಂಧವ್ಯ ಮುಂತಾದ ಎಲ್ಲವುಗಳಿಂದ ವಂಚಿತರಾದ ಮಕ್ಕಳು ಒಂಟಿತನ, ಅಸಹಾಯಕತೆ,
ಚಿತ್ರಹಿಂಸೆ ಮುಂತಾದವುಗಳಿಂದ ಬೆಂದು ದಿಕ್ಕಟ್ಟು ಹೋಗುತ್ತಾರೆ. ಕೆಲವರು ಅಪರಾಧಿ ಕೃತ್ಯಗಳಿಗೆ ಆಕರ್ಷಿತರಾದರೆ ಕೆಲವರು ತೀರ್ವತರವಾದ ಮಾನಸಿಕ, ದೈಹಿಕ ಒತ್ತಡ ಮತ್ತು ಬಳಲಿಕೆಯಿಂದ ಬಸವಳಿದು ದೋಷಪೂರಿತ ಬೆಳವಣಿಗೆಯನ್ನು ವ್ಯಕ್ತಿತ್ವಕ್ಕೆ ಅಳವಡಿಸಿಕೊಳ್ಳುತ್ತಾರೆ. ಇಂತಹ ಪ್ರಜೆಗಳಿಂದ ಆರೋಗ್ಯ ಪೂರ್ಣವಾದ ಮತ್ತು ಅಭಿವೃದ್ಧಿ ಪರ ಸಮಾಜದ ನಿರ್ಮಾಣ ಅಸಾಧ್ಯವಾಗುತ್ತದೆ. ಒಂದು ದೇಶವು ಯಾವ ಪ್ರಮಾಣದಲ್ಲಿ ಬಾಲ ಕಾರ್ಮಿಕತೆಯನ್ನು ಹೊಂದಿದೆ ಎಂಬ ವಿಷಯವು ಆಯಾ ರಾಷ್ಟ್ರಗಳ ಭವಿಷ್ಯ ಸೂಚಕವೂ ಆಗುತ್ತದೆ, ಪ್ರಸ್ತುತ ಭಾರತವು ತೀರ್ವ ಮಟ್ಟದ ಬಾಲಕಾರ್ಮಿಕತೆಯನ್ನು ಹೊಂದಿರುವುದು ಆತಂಕದ ವಿಷಯವಾಗಿದೆ.

ಭಾರತದಲ್ಲಿ ಇದರ ಗುಣಲಕ್ಷಣ


ಭಾರತವು ಗ್ರಾಮಗಳ ರಾಷ್ಟ್ರವಾದ್ದರಿಂದ ಬಹುತೇಕ ಜನರು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದು ವ್ಯವಸಾಯವನ್ನು ಅವಲಂಬಿಸಿದ್ದಾರೆ ಆದುದರಿಂದ ಈ ಪ್ರದೇಶಗಳಲ್ಲಿ ತೀರ್ವತರವಾದ ಬಾಲ ಕಾರ್ಮಿಕತೆಯನ್ನು ಕಾಣುತ್ತೇವೆ. ಇವರಲ್ಲಿ ಶೇ.60 ಕ್ಕಿಂತ ಹೆಚ್ಚು ಪ್ರಮಾಣದ ಮಕ್ಕಳು 10 ವರ್ಷಕ್ಕಿಂತಲೂ ಕಡಿಮೆ ವಯಸ್ಸನ್ನು ಹೊಂದಿದವರಾಗಿದ್ದಾರೆ, ಒಟ್ಟು ಬಾಲ ಕಾರ್ಮಿಕರಲ್ಲಿ ಶೇ.36ರಷ್ಟು ಮಕ್ಕಳು ಗೃಹ ಸಂಬಂಧಿ ಕಾರ್ಮಿಕರಾಗಿದ್ದಾರೆ. ಶೇ.23 ಮಂದಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ನಗರಗಳಲ್ಲಿನ ಹೊಟೇಲ್, ಕ್ಯಾಂಟೀನ್, ಟೀ ಅಂಗಡಿಗಳು,ವಾಹನ ಗ್ಯಾರೇಜ್, ಚಿಂದಿ ಆಯುವ ಮುಂತಾದವುಗಳ ಜೊತೆಗೆ ಫುಟ್‍ಪಾತಿನ ಮೇಲೆ ನಡೆಯುವ ಚಪ್ಪಲಿ ರಿಪೇರಿ, ಶೂಪಾಲಿಶ್ ಮುಂತಾದವುಗಳಲ್ಲಿ ತೊಡಗಿಕೊಂಡಿರುವ ಬಾಲ ಕಾರ್ಮಿಕರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆಯಾದರೂ ಈವರೆಗೆ ಈ ಬಗ್ಗೆ ಯಾವುದೇ ನಿಖರ ಮಾಹಿತಿಗಳನ್ನು ಕಲೆ ಹಾಕಲಾಗಿಲ್ಲ.
ಎಲ್ಲದಕ್ಕಿಂತ ವಿಷಾದಕರ ಸಂಗತಿಯೆಂದರೆ ಮಕ್ಕಳು ಅಪಾಯಕಾರಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವುದು, ಸಿಡಿಮದ್ದು ಕಾರ್ಖಾನೆ ಬೆಂಕಿಪೊಟ್ಟಣ ಕಾರ್ಖಾನೆ, ಗಣಿಗಾರಿಕೆ ಅನೇಕ ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕರ ಪ್ರಮಾಣ ತೀರ್ವ ಮಟ್ಟದಲ್ಲಿದೆ. ತಮಿಳುನಾಡಿನ ಶಿವಕಾಶಿ ಪಟಾಕಿ ಕಾರ್ಖಾನೆ ಮತ್ತು ಬೆಂಕಿಕಡ್ಡಿ ಕಾರ್ಖಾನೆಗಳಲ್ಲಿ ಸುಮಾರು 45000 ಮಕ್ಕಳು ದುಡಿಯುತ್ತಿದ್ದಾರೆ. ಮಧ್ಯಪ್ರದೇಶದ ಸ್ಲೇಟ್ ಮತ್ತು ಪೆನ್ಸಿಲ್ ಕಾರ್ಖಾನೆಗಳಲ್ಲಿ ದುಡಿಯುತ್ತಿರುವವರ ಸಂಖ್ಯೆ ಒಟ್ಟು ಕಾರ್ಮಿಕರ ಶೇ. 9 ರಷ್ಟು ಉತ್ತರ ಪ್ರದೇಶದಲ್ಲಿನ ಬೀಗ ತಯಾರಿಕಾ ಉದ್ಯಮವು 14 ವರ್ಷ ವಯಸ್ಸಿನೊಳಗಿನ ಸುಮಾರು 10,000 ಬಾಲ ಕಾರ್ಮಿಕರನ್ನು ಹೊಂದಿದ್ದು ಒಟ್ಟು ಕಾರ್ಮಿಕ ಪ್ರಕರಣದಲ್ಲಿ ಶೇ.11ರಷ್ಟಿದೆ. ಉತ್ತರ ಪ್ರದೇಶದ ಹಿತ್ತಾಳೆ ಲೋಹ ಉದ್ಯಮದಲ್ಲಿ ಸುಮಾರು ದಷ್ಟು ಮಕ್ಕಳು ತೊಡಗಿಕೊಂಡಿದ್ದು ಒಟ್ಟು ಕಾರ್ಮಿಕ ಪ್ರಮಾಣದ ಶೇ.30 ರಷ್ಟು ಪ್ರತಿನಿಧಿಸುತ್ತಾರೆ. ಉತ್ತರ ಪ್ರದೇಶದ ಗಾಜು ಕಾರ್ಖಾನೆಯಲ್ಲಿರುವ ಒಟ್ಟು ಬಾಲಕಾರ್ಮಿಕರ ಸಂಖ್ಯೆ
ಸುಮಾರು 50,000 ಇದು ಒಟ್ಟು ಕಾರ್ಮಿಕ ಪ್ರಮೇಣದ ಒಟ್ಟು ಶೇ.1/3 ರಷ್ಟನ್ನು ಪ್ರತಿನಿಧಿಸುತ್ತದೆ. ಉತ್ತರ ಪ್ರದೇಶದ ಒಂದು ಅಧ್ಯಯನದಂತೆ ಶೇ.34ರಷ್ಟು 6ರಿಂದ 11 ವರ್ಷ ವಯಸ್ಸಿನೊಳಗಿನ ಹೇಣ್ಣು ಮಕ್ಕಳು ಯಾವುದಾದರೊಂದು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 11 ರಿಂದ ರ ವಯಸ್ಸಿನಲ್ಲಿರುವ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ಪ್ರಮಾಣ ಸುಮಾರು ಶೇ.52, ಉತ್ತರ ಪ್ರದೇಶ, ಕಾಶ್ಮೀರ ಮುಂತಾದ ರಾಜ್ಯಗಳಲ್ಲಿನ ಕಾರ್ಪೆಟ್ನೇಯ್ಗೆ ಉದ್ಯಮದಲ್ಲಿ ಬಹು
ಪ್ರಮಾಣದ ಬಾಲ ಕಾರ್ಮಿಕರು ದುಡಿಯುತ್ತಿದ್ದಾರೆ.
ದೇಶದ ವಾಣಿಜ್ಯ ರಾಜಧಾನಿ ಮುಂಬೈ ಅತ್ಯಂತ ಹೆಚ್ಚಿನ ಬಾಲಕಾರ್ಮಿಕರನ್ನು ಹೊಂದಿದ ಕುಖ್ಯಾತಿಯ ನಗರವಾಗಿದೆ. ಮರಗೆಲಸ, ರೇಷ್ಮೆ ನೇಯ್ಗೆ ಕಾರ್ಖಾನೆಗಳು, ಢಾಬಾಗಳು, ಹೋಟೇಲ್, ರೆಸ್ಟೋರೆಂಟ್ ಮತ್ತು ಟೀ ಅಂಗಡಿಗಳಲ್ಲಿ ಅಪಾರ ಪ್ರಮಾಣದ ಬಾಲ ಕಾರ್ಮಿಕರು ತೊಡಗಿ ಕೊಂಡಿದ್ದಾರೆ. ದಿನಕ್ಕೆ 14 ಗಂಟೆಗೂ ಅಧಿಕ ಕಾಲ ದುಡಿಸಿಕೊಳ್ಳುವ ಕಾರ್ಖಾನೆಗಳು ಇವರಿಗೆ ಕೊಡುವ ಕೂಲಿ ಮಾತ್ರ 8ರಿಂದ 10 ರೂಪಾಯಿಗಳು, ಕೆಲವು ಪಾಪಿಷ್ಟ ಗುಂಪುಗಳು ಏನೂ ಅರಿಯದ ಮಕ್ಕಳನ್ನು ಅಪಹರಿಸಿ ಅವರ ಅಂಗಗಳನ್ನು ವಿರೂಪಗೊಳಿಸಿ ಭಿಕ್ಷೆಗೆ ನೇಮಿಸುವ ದಂಧೆಗಳೂ ಇವೆ. ಮಕ್ಕಳಿಗೆ ಮಧ್ಯ ಗಾಂಜಾ, ಅಫೀಮು ಮುಂತಾದ ಮಾದಕ ದುಷ್ಚಟಗಳಿಗೆ ಒಳಪಡಿಸುವ ಮೂಲಕ ಅವರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಕರ್ನಾಟಕ, ಆಂಧ್ರ ಮುಂತಾದ ರಾಜ್ಯಗಳಲ್ಲಿ ಬಾಲ ಕಾರ್ಮಿಕತೆಯು ಜೀತ ಪದ್ಧತಿಯ ಸ್ವರೂಪವನ್ನು ಪಡೆದುಕೊಂಡಿದೆ. ತಂದೆ – ತಾಯಿ ಅಥವಾ ಪೋಷಕರು ಒಂದು ಕನಿಷ್ಟ ಪ್ರಮಾಣದ ಹಣಕ್ಕೋಸ್ಕರ ಮಕ್ಕಳನ್ನು ಜೀತಕ್ಕಿಡುತ್ತಾರೆ. ಆ ಸಾಲ ತೀರುವವರೆವಿಗೂ ಆ ಮಕ್ಕಳು ಹಗಲು ರಾತ್ರಿ ಹೊಲಗೆದ್ದೆಗಳಲ್ಲಿ ದನ-ಕುರಿಗಳ ಕೊಟ್ಟಿಗೆಗಳಲ್ಲಿ ದುಡಿಯಬೇಕಾಗುತ್ತದೆ. ಆ ಸಾಲ ತೀರದ ನಂತರ ಮತ್ತೊಂದು ಸಾಲ ಹೀಗೆ ಅವರ ಜೀವನವು ಮುಗಿದು ಹೋಗುತ್ತದೆ, ಇಂತಹ ರಿವಾಜು ಕೇವಲ ಗ್ರಾಮಗಳಲ್ಲದೆ ಅಲ್ಲ ನಗರದ ಪ್ರತಿಷ್ಠತ, ಗಣ್ಯ ವ್ಯಕ್ತಿಗಳ ಮನೆಗಳಲ್ಲೂ ನಡೆಯುತ್ತದೆ. ಅಲ್ಪ ಮೊತ್ತಕ್ಕೆ ಸುಲಭವಾಗಿ ಸಿಗುತ್ತಾರೆ ಅವರನ್ನು ಹೇಗೆ ಬೇಕಾದರೂ ದುಡಿಸಿಕೊಳ್ಳಬಹುದು ಎಂಬ ಒಂದೇ ಕಾರಣದಿಂದ ಮಕ್ಕಳನ್ನು ಅವರ ಮನೆಗೆಲಸ ಮಾಡಲು ಅವರ ಮಕ್ಕಳ ಪುಸ್ತಕಗಳ ಹೊರೆಯನ್ನು ಇವರು ಹೊತ್ತುಕೊಂಡು ಶಾಲೆಗೆ ಹೋಗಿ ಅವರನ್ನು ಬಿಟ್ಟು ಬರುವುದರಿಂದ ಹಿಡಿದು ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಕಸ ಹೊಡೆಯುವುದು, ಬಚ್ಚಲು ಬಾಚುವುದು ಸೇರಿದಂತೆ ತರಕಾರಿ ತರುವುದು, ದಿನಸಿ ಅಂಗಡಿ ಹೀಗೆ ಸರ್ವ ಮಾರ್ಗಗಳಲ್ಲೂ ಅವರನ್ನು ಬಳಸಿಕೊಳ್ಳಲಾಗುತ್ತದೆ. ಬೆಳೆಯುವ ಮಕ್ಕಳಿಗಿರುವ ಅವಶ್ಯಕತೆಗಳು, ಪರಿಸರ, ವಿದ್ಯಾಭ್ಯಾಸ, ಭವಿಷ್ಯ ಯಾವುದರ ಬಗ್ಗೆಯೂ ಚಿಂತಿಸುವುದಿಲ್ಲ. “ಅದಕ್ಕೆಲ್ಲ ಬೆಲೆತೆತ್ತಿದ್ದೇವೆ ಇವೆಲ್ಲದರ ಚಿಂತೆಯಲ್ಲವೂ ಅವರ ತಂದೆ ತಾಯಿಗಳಿಗೆ ಸೇರಿದ್ದು” ಎಂದು ಸುಲಭವಾಗಿ ತಪ್ಪಿಸಿಕೊಳ್ಳೂತ್ತಾರೆ. ಅವರ ಗುರಿಯೊಂದೇ ಅವರನ್ನು ಎಷ್ಟೇಲ್ಲಾ ಮಾರ್ಗಗಳಿಂದ ಸಾಧ್ಯವೋ ಅಷ್ಟೇಲ್ಲ ಮಾರ್ಗಗಳಿಂದಲೂ ಸಂಪೂರ್ಣವಾಗಿ ದುಡಿಸಿಕೊಳ್ಳುವುದು, ನಿಜಕ್ಕೂ ಅವರು ತೆತ್ತಿರುವ ಹಣವಾದರೂ ಎಷ್ಟು? ಅದು ಅವರ ಜೀವದ ಸಾರ ಸರ್ವಸ್ವವನ್ನೆ ಬಳಸಿಕೊಳ್ಳುವುದಕ್ಕೆ ಸಮವೇ, ಇವರ ಭವಿಷ್ಯದ ಬಗ್ಗೆ ಚಿಂತಿಸುವ ಜವಾಬ್ದಾರಿಯಿಲ್ಲವೇ? ಒಟ್ಟಾರೆಯಾಗಿ ಈ ರೀತಿ ಮಕ್ಕಳನ್ನು ಬಳಸಿಕೊಳ್ಳುವ ಕಠುಕರು ಮತ್ತು ತಮ್ಮ ಅನಿವಾರ್ಯತೆಗಾಗಿ, ಅಜ್ಞಾನಕ್ಕಾಗಿ, ದುಶ್ಚಟಗಳಿಗಾಗಿ ತಮ್ಮ ಮಕ್ಕಳನ್ನು ಜೀತಕ್ಕಿಡುವ ತಂದೆ-ತಾಯಿಗಳು ಕ್ಷಮೆಗೆ ಅರ್ಹರಲ್ಲ.

ಬಾಲ ಕಾರ್ಮಿಕತೆಗೆ ಸಂಕೀರ್ಣವಾದ ಕಾರಣಗಳಿವೆ. ಪರಸ್ಪರ ಹೊಂದಿಕೊಂಡಂತೆ,ಹೆಣೆದುಕೊಂಡಂತೆ ಅನೇಕ ಕಾರಣಗಳನ್ನು ಗುರ್ತಿಸಲಾಗಿದೆ. ಬಡತನ, ಅನಕ್ಷರತೆ, ದುಷಟ್ಚ ಗಳು, ಜಾತಿ ವ್ಯವಸ್ಥೆ ಧರ್ಮ ಮುಂತಾದವು ಬಾಲ ಕಾರ್ಮಿಕತೆಗೆ ಪ್ರಮುಖ ಕಾರಣಗಳಾಗಿವೆ, ಅತ್ಯಂತ ಕಡಿಮೆ ಆರ್ಥಿಕ ವರಮಾನವನ್ನು ಹೊಂದಿರುವ ಕುಟುಂಬಗಳು ತಮ್ಮ ಮಕ್ಕಳನ್ನು ಕೂಲಿಗೆ ಕಳುಹಿಸುವ ಒತ್ತಡಕ್ಕೆ ಸಿಲುಕುತ್ತವೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಕುಟುಂಬಗಳು ಅವರಿಗೆ ಭವಿಷ್ಯ ರೂಪಿಸುವ ಸಾಮಥ್ರ್ಯವಿಲ್ಲದೆ ತನ್ನ ಉಳಿವಿಗಾಗಿ ಅವರ ಕೂಲಿಯನ್ನು ನೆಚ್ಚಿಕೊಳ್ಳುತ್ತವೆ. ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಇತ್ಯಾದಿ ಅವಶ್ಯಕತೆಗಳನ್ನು ಪೂರೈಸುವ ಅರಿವನ್ನೇ ಹೊಂದಿರುವುದಿಲ್ಲ. ಅನಕ್ಷರತೆ ಅಂಧಾನುಕರಣೆ, ಅಜ್ಞಾನ, ಜಾತಿ ಮುಂತಾದವುಗಳು ಅವರನ್ನು ಮುತ್ತಿಕೊಂಡು ಮಕ್ಕಳನ್ನು ಆಸ್ತಿಯಾಗಿ ಭಾವಿಸುವಂತೆ ಮಾಡುತ್ತವೆ. ಇದರಿಂದ ಮಕ್ಕಳು ಹೆಚ್ಚಾಗಿ ಬಾಲಕಾರ್ಮಿಕರೂ ಹೆಚ್ಚಾಗುತ್ತಾರೆ.
ಮಕ್ಕಳಿಗೆ ಹಸಿವನ್ನು ಮರೆಸುವ ಸಲುವಾಗಿ ಮತ್ತು ಅವರನ್ನು ದುಷ್ಚಟಗಳಿಂದ ದೂರವಿಡುವ ಸಲುವಾಗಿಯೂ ಬಾಲಕಾರ್ಮಿಕ ವಿಷ ವರ್ತಲಕ್ಕೆ ದೂಡಲಾಗುತ್ತದೆ. ಹದಗೆಟ್ಟ ಸರ್ಕಾರಿ ಶಾಲೆಗಳು,ವಿದ್ಯಾವಂತ ನಿರುದ್ಯೋಗಿಗಳ ಹೆಚ್ಚಳ ಮುಂತಾದ ವಿಷಯಗಳು ಬಡಜನರಲ್ಲಿ ತಪ್ಪು ಭಾವನೆಯನ್ನು ಮೂಡಿಸುತ್ತವೆ. ಓದಿ ನಿರುದ್ಯೋಗಿಯಾಗುವ ಬದಲು ಈಗಿನಿಂದಲೇ ಯಾವುದಾದರೊಂದು ಕಸುಬನ್ನು ಕಲಿತರೆ ಉತ್ತಮ ಎಂಬ ಒಣ ಲಾಜಿಕ್‍ಗಳು ಅವರನ್ನು ಅಂಧಕಾರದಲ್ಲಿಯೇ ಉಳಿಸುತ್ತವೆ.
ಇನ್ನು ಲಾಭದ ಲಾಲಸೆಯಿಂದ ಕಾರ್ಖಾನೆಗಳ ಮಾಲೀಕರು ಅವರಿಗೆ ಅನೇಕ ರೀತಿಯ ಆಸೆ ಆಮಿಷಗಳನ್ನು ಒಡ್ಡುವ ಮೂಲಕ ಅವರ ಮೇಲೆ ಒತ್ತಡ ಹೇರಿ ಅವರನ್ನು ಸೆಳೆಯುತ್ತಿರುವುದೂ ಕೂಡ ಬಾಲಕಾರ್ಮಿಕತೆಗೆ ಒಂದು ಪ್ರಮುಖ ಕಾರಣವಾಗಿದೆ.

ಬಾಲಕಾರ್ಮಿಕರ ಪರಿಸ್ಥಿತಿ


ಬಾಲಕಾರ್ಮಿಕರು ಸಾಮಾನ್ಯವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.ಗಾಳಿ, ಬೆಳಕು ಕಾಣದ ಹೊಗೆ, ಧೂಳು, ಅಪಾಯಕಾರಿ ಅನಿಲ ಮುಂತಾದ ಅತಿರೇಖದ ಮಾಲಿನ್ಯದಿಂದ ರಾಡಿಯಿದ್ದು ಹೋಗಿರುವ ಪರಿಸ್ಥಿತಿಗಳಲ್ಲಿ ರಾತ್ರಿ, ಹಗಲು ಎನ್ನದೆ ನಿರಂತರ ದುಡಿಯಬೇಕಾಗುತ್ತದೆ. ಇದಕ್ಕೆ ಅವರಿಗೆ ಸಿಗುವ ಪ್ರತಿಫಲ ಅತ್ಯಲ್ಪವಾಗಿದ್ದು ಅವರ ದೈಹಿಕ ಮಾನಸಿಕ ಬೆಳವಣಿಗೆಯನ್ನು ಕಮರಿಸಿ ಬಿಡುತ್ತದೆ.
ಅತ್ಯಧಿಕ ಉಷ್ಣತೆಯಿಂದ ಉರಿಯುವ ಕುಲುಮೆಗಳಲ್ಲಿ ಗಣಿಗಾರಿಕೆಯಲ್ಲಿ ಆರ್ಗನಿಕ್ ಪೊಟ್ಯಾಶಿಯಂ ಮುಂತಾದ ಅಪಾಯಕಾರಿ ರಾಸಾಯನಿಕಗಳೊಂದಿಗೆ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವ ಮಕ್ಕಳು ದೈಹಿಕ ಮಾನಸಿಕವಾಗಿ ಅನೇಕ ರೋಗಗಳಿಗೆ ಒತ್ತಡಗಳಿಗೆ ಒಳಗಾಗುತ್ತಾರೆ.ಗಾಜು, ಹತ್ತಿ, ನೇಯ್ದ ಮುಂತಾದ ಕಾರ್ಖಾನೆಗಳಲ್ಲಿನ ಮಕ್ಕಳು ಕ್ಷಯ ಸೇರಿದಂತೆ ಶ್ವಾಸಕೋಶದ ಅನೇಕ ತೊಂದರೆಗಳೀಡಾಗುತ್ತಾರೆ. ಬತ್ತಿ ಹೋದ ಎದೆ, ಹೊರಚಾಚಿಕೊಂಡಿರುವ ಎಲುಬುಗಳು,ಮಾಸಿದ ಮೂತಿಗಳು, ಕಜ್ಜಿ-ತುರಿಕೆಗಳಿಂದ ಕಳೆಗುಂದಿದ ಚರ್ಮ, ಕೊಳಕು ನಾರುವ ಮಾಸಿದ ಬಟ್ಟೆ ಕೆದರಿದ ಕೂದಲು ಮುಂತಾದವುಗಳಿಂದ ಜರ್ಜರಿತರಾಗಿರುವ ಮಕ್ಕಳು ಅಸ್ತಮಾ, ಕಣ್ಣಿನ ಖಾಯಿಲೆಗಳು, ಗಂಟಲು ರೋಗ, ಗೂರಲು, ಶ್ವಾಸನಾಳಗಳ ಊತ ಮುಂತಾದ ಅನೇಕ ಖಾಯಿಲೆಗಳಿಂದ ಬಳಲುತ್ತಿರುವುದನ್ನು ಕಾಣುತ್ತೇವೆ.
ಇನ್ನು ಹೊಲಗದ್ದೆಗಳಲ್ಲಿ ಗೊಬ್ಬರ ಗುಂಡಿಗಳಲ್ಲಿ, ಪಶುಗಳ ಕೊಟ್ಟಿಗೆಗಳಲ್ಲಿ ಉಳ್ಳವರ ಬಚ್ಚಲುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಮಕ್ಕಳು ಅಷ್ಟ ಕಷ್ಟಗಳಿಗೀಡಾಗುತ್ತಿರುವುದನ್ನು ದಿನಬೆಳಗಾದರೆ ನಾವು ದಿನಪತ್ರಿಕೆಗಳಲ್ಲಿ ಇತರೆ ಮಾಧ್ಯಮಗಳಲ್ಲಿ ಕಾಣುತ್ತಲೇ ಇರುತ್ತೇವೆ.

ನಿರ್ಮೂಲನಗೆ ಪ್ರಯತ್ನ


ಬಾಲ ಕಾರ್ಮಿಕತೆ ಎಂಬುದು ಅತ್ಯಂತ ಸಂಕೀರ್ಣ ಕಾರಣಗಳನ್ನು ಹೊಂದಿರುವುದರಿಂದ ಏಕ ಕಾಲದಲ್ಲಿ ಅನೇಕ ವಿಧಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಲಾಗುತ್ತಿದೆ. ಪ್ರಾದೇಶಿಕ,ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸುವ ಸಮನ್ವಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯತ್ನಿಸಲಾಗುತ್ತಿದೆ. ಕುಟುಂಬದ ಆದಾಯ ಹೆಚ್ಚಿಸುವುದು, ಕಡ್ಡಾಯ ಮತ್ತು ಸಾರ್ವತ್ರಿಕ ಶಿಕ್ಷಣ, ಮಹಿಳಾ ಸಬಲೀಕರಣ, ಕನಿಷ್ಟ ವೇತನ ಕಾನೂನು, ಬಾಲ ಕಾರ್ಮಿಕ ವಿರೋಧಿ ಕಾನೂನು ಕಾಯ್ದೆಗಳನ್ನು ಕಟುನ್ಟಿಟ್ಟಾಗಿ ಜಾರಿಗೊಳಿಸುವುದು ಮುಂತಾದವುಗಳ ಜೊತೆಗೆ ಬಡ ಕುಟುಂಬಗಳಿಗೆ ಸಾಮಾಜಿಕ ಸೇವೆಗಳು ದೊರಕುವಂತೆ ಮಾಡುವ ಮತ್ತು ಅರಿವು ಮೂಡಿಸುವ ಮೂಲಕ ಬಾಲಕಾರ್ಮಿಕತೆಯ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಲಾಗುತ್ತಿದೆ.

ಸಾಂವಿಧಾನಿಕ ರಕ್ಷಣೆ


ವಿಧಿ 24: 14 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳನ್ನು ಕಾರ್ಖಾನೆಗಳಲ್ಲಿ ಅಥವಾ ಯಾವುದೇ ಅಪಾಯಕಾರಿ ಕೆಲಸಗಳಿಗೆ ನೇಮಿಸಿಕೊಳ್ಳುವಂತಿಲ್ಲ.
ವಿಧಿ 39 (ಎಫ್): ಮಕ್ಕಳು ಮತ್ತು ಯುವ ಜನತೆಯನ್ನು ದೌರ್ಜನ್ಯದಿಂದ ಮುಕ್ತಗೊಳಿಸುತ್ತದೆ.
ವಿಧಿ 45: 14 ವರ್ಷದೊಳಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ.

ಬಾಲ ಕಾರ್ಮಿಕರ ನಿಷೇಧ ಕಾಯ್ದೆ (1986)


ಈ ಕಾಯ್ದೆಯು 14 ವರ್ಷ ವಯಸ್ಸಿನ ಒಳಗಿರುವ ಮಕ್ಕಳನ್ನು ಅಪಾಯಕಾರಿ ದುಡಿಮೆಗೆ ಹಚ್ಚುವುದನ್ನು ನಿಷೇಧಿಸಿದೆ.

ಸುಪ್ರೀಂಕೋರ್ಟ್ತೀರ್ಪು(1996)


ಅಪಾಯಕಾರಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಮಕ್ಕಳನ್ನು ಮುಕ್ತಗೊಳಿಸಬೇಕು. ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸಬೇಕು. ಬಾಲಕಾರ್ಮಿಕರಿಗಾಗಿ ಕ್ಷೇಮಾಭಿವೃದ್ಧಿ ನಿಧಿಯೊಂದನ್ನು ಸ್ಥಾಪಿಸಬೇಕು ಎಂದು ಆದೇಶ ನೀಡುತ್ತದೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪೊಂನ್ನು ನೀಡಿ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಮಾಲೀಕರು ಇವರ ಶಿಕ್ಷಣಕ್ಕಾಗಿ ಮೀಸಲು ನಿಧಿಗೆ 20 ಸಾವಿರ ರೂಪಾಯಿ ನೀಡಬೇಕು. ಆ ಬಾಲ ಕಾರ್ಮಿಕನ ಮನೆಯ ವಯಸ್ಕರೊಬ್ಬರಿಗೆ ಕೆಲಸ ನೀಡಬೇಕು ಅಥವಾ 5000 ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಮಕ್ಕಳು ದೇಶದ ಆಸ್ತಿ, ಆದರೆ ಆ ಮೊಗ್ಗುಗಳು ಅರಳುವ ಮೊದಲೇ ದುಡಿತನ ಬಂಧನಕ್ಕೆ ಒಳಪಡಿಸುವ ದಾರುಣ ಸ್ಥಿತಿಯನ್ನು ಎಲ್ಲೆಡೆ ಕಾಣುತ್ತಿದ್ದೇವೆ. ಒಂದು ದೇಶದ ನಿರ್ದರಿಸಲ್ಪಡುತ್ತದೆ. ಆದ್ದರಿಂದ ಚಿಕ್ಕ ಮಕ್ಕಳ ಅಮೂಲಾಗ್ರ ವ್ಯಕ್ತಿತ್ವಕ್ಕೆ ಬೇಕಾದ ಸೂಕ್ತ ಬದಲಾವಣೆಯನ್ನು ನಿರ್ಮಾಣ ಮಾಡಬೇಕಾದರೆ ಸರಿಯಾದ ಶಿಕ್ಷಣ & ಮನರಂಜನೆ ಮಕ್ಕಳಿಗೆ ನೀಡಬೇಕು.
ಭಾರತವು ಇಂದು ಅನೇಕ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಿತಿಮೀರಿದ ಜನಸಂಖ್ಯೆ ಬಡತನ,ನಿರುದ್ಯೋಗ ಮುಂತಾದವುಗಳು ತೀವ್ರ ಸಮಸ್ಯೆಗಳಾಗಿ ಮಾನವರನ್ನು ಒಂದೆಡೆ ಕಾಡುತ್ತಿದ್ದರೆ, ಬಂಡವಾಳಶಾಹಿಗಳು ತಮ್ಮ ಅತಿ ಲಾಭ ದೆಸೆಯಿಂದ ಮಕ್ಕಳ ದುರ್ಬಳಕೆ ಅಥವಾ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಪ್ರಸ್ತುತ ಸಮಾಜದ ದುರಂತವೆನ್ನಬಹುದು.

ಮಕ್ಕಳ ದುಡಿತ ಎಂದರೇನು? ಅಥವಾ ಬಾಲಕಾರ್ಮಿಕರೆಂದರೆ ಯಾರು?


1986ರ ಬಾಲದುಡಿಮೆಯ ಕಾಯ್ದೆಯ ಪ್ರಕಾರ “14 ವರ್ಷದೊಳಗಿನ ದುಡಿಯುವ ಮಕ್ಕಳನ್ನು ಬಾಲಕಾರ್ಮಿಕರು” ಎಂದು ಪರಿಗಣಿಸಲಾಗಿದೆ.
ಈ ಕಾನೂನು ತಿಳಿಸುವಂತೆ ಬಾಲಕಾರ್ಮಿಕರು ಮಾಡುವ ಕೆಲಸದ ಅವಧಿ ದಿನವೊಂದಕ್ಕೆ ಆರು ಗಂಟೆಗಿಂತ ಹೆಚ್ಚಿರಬಾರದು & ಸಂಜೆಯ 7ರ ನಂತರ ದುಡಿಸಬಾರದು ಎಂಬ ಸ್ಪಷ್ಟ ವಿವರಣೆ ಇದೆ. ಭಾರತ ಸಂವಿಧಾನದ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವೊಂದು ಸಂಪಾದನೆಯ ದೃಷ್ಟಿಯಿಂದ ದುಡಿಮೆ ಮಾಡುತ್ತಿದ್ದಲ್ಲಿ ಅಂತಹ ಮಗುವನ್ನು ದುಡಿಯುವ ಮಗು ಎನ್ನಬಹುದು.
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್ಓ) ಪ್ರಕಾರ “15 ವರ್ಷ ಕೆಳಗೆ ಇರುವ ಯಾವುದೇ ವ್ಯಕ್ತಿಯು ಜೀವನೋಪಾಯ ವೃತ್ತಿಯಲ್ಲಿ ತೊಡಗಿರುವವರನ್ನು ಬಾಲಕಾರ್ಮಿಕರು ಎಂದು ಕರೆಯುತ್ತಾರೆ” 1989ರ ವಿಶ್ವಸಂಸ್ಥೆಯ ಪ್ರಣಾಳಿಕೆಯಲ್ಲಿ 18 ವರ್ಷ ಕೆಳಗೆ ಇರುವ ವ್ಯಕ್ತಿಯ ಜೀವನೋಪಾಯ ವೃತ್ತಿಯಲ್ಲಿ ತೊಡಗಿದ್ರೆ ಅವರನ್ನು ಬಾಲಕಾರ್ಮಿಕರು ಎನ್ನುವರು.

ಬಾಲಕಾರ್ಮಿಕರ ಬಗೆಗೆ – ಅಂಕಿ ಅಂಶಗಳು:


ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಮಂದಿ 15ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳು ಇರುವರು. ಭಾರತವು ಜಗತ್ತಿನಲ್ಲಿ ಅತೀ ಹೆಚ್ಚು ಬಾಲಕಾರ್ಮಿಕರನ್ನು ಹೊಂದಿದ ದೇಶವಾಗಿದೆ. 1901ರಲ್ಲಿ 15 ವರ್ಷಕ್ಕೂ ಕಡಿಮೆ ವಯಸ್ಸಿನವರ ಸಂಖ್ಯೆ ದೇಶದಲ್ಲಿ ಸುಮಾರು 90.36 ದಶಲಕ್ಷದಷ್ಟು ಏರಿದೆ.
NGO- NON -Government -Organization ಪ್ರಕಾರ 44 ಮಿಲಿಯನ್ದಷ್ಟು ಬಾಲಕಾರ್ಮಿಕರು ಇದ್ದಾರೆ.
ILO – ಅಚಿತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಇಡೀ ಜಗತ್ತಿನಲ್ಲಿ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಾಲಕಾರ್ಮಿಕರ ಸಂಖ್ಯೆ ಫ್ರಾನ್ಸ್ ಅಥವಾ ಬ್ರಿಟನ್ ದೇಶವೊಂದರ ಜನಸಂಖ್ಯೆಯಷ್ಟಿದೆ.
The Hindustan Time ಪತ್ರಿಕೆಯ ಪ್ರಕಾರ 1989ರ ಹೊತ್ತಿಗೆ – ಒಟ್ಟು ಜನಸಂಖ್ಯೆಯ 5-5ರಷ್ಟು ಮಂದಿ ಅಂದರೆ 44 ದಶಲಕ್ಷ ಬಾಲಕಾರ್ಮಿಕರಿದ್ದರೆಂದು ವರದಿ ಮಾಡಿದೆ.

ಬಾಲಕಾರ್ಮಿಕರ ಲಕ್ಷಣಗಳು: (ಭಾರತ ದೇಶದಲ್ಲಿ)


ಬಾಲಕಾರ್ಮಿಕ ಸಮಸ್ಯೆಯು ಬಹಳ ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಗಂಭೀರವಾದ ಸಾಮಾಜಿಕ ಸಮಸ್ಯೆಯಾಗಿದ್ದರಿಂದ ಇದು ಅನೇಕ ಮುಖಗಳನ್ನು ಹೊಂದಿರುತ್ತದೆ. ಬಾಲಕಾರ್ಮಿಕ ಸಮಸ್ಯೆಯು ಸಾರ್ವತ್ರಿಕವಾಗಿದ್ದರೂ ಇದರ ಪ್ರಮಾಣವು ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಲ್ಲಿ ಹೆಚ್ಚಾಗಿದೆ. ಉದಾ: ಪ್ರತಿಶತ 90ರಷ್ಟು ಗ್ರಾಮಾಂತರ ಪ್ರದೇಶಗಳಲ್ಲಿ ಅದರಲ್ಲಿ 60% ಮಕ್ಕಳು 10 ವರ್ಷಕ್ಕೂ ಚಿಕ್ಕ ವಯಸ್ಸಿನವರಾಗಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಕೃಷಿ & ಅದಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿರುತ್ತಾರೆ. ಅಂದರೆ ಕೃಷಿ ಮೀನುಗಾರಿಕೆ, ದನ ಕಾಯುವುದು, ಗಿಡಕಾಯುವುದು ಎಳೆಯ ಪ್ರಾಯದ ಹೆಣ್ಣು ಮಕ್ಕಳನ್ನು ಕೂಡ ಒತ್ತಾಯದ ದುಡಿತಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಉದಾಹರಣೆಗೆ: ದುಡಿಮೆಗೆ ಒಳಪಟ್ಟ 345 ಹೆಣ್ಣುಮಕ್ಕಳಲ್ಲಿ ಸುಮಾರು 83 ಮಂದಿ 6ರಿಂದ 11 ವರ್ಷವರಾಗಿದ್ದಾರೆ. 52.0% ಮಂದಿ 11ರಿಂದ 18 ವರ್ಷದವರಾಗಿದ್ದಾರೆ.

ಮುಖ್ಯ ಕೆಲಸಗಾರರು:


ವರ್ಷದಲ್ಲಿ 183 ದಿನ ಕೆಲಸ ಮಾಡುವವರನ್ನು ಮುಖ್ಯ ಕೆಲಸಗಾರರು ಎನ್ನುವರು. ಇದರಲ್ಲಿ ಶೇ. 83% ರಷ್ಟು ಬಾಲಕರು ಶೇ.45% ರಷ್ಟು ಬಾಲಕಿಯರು ಇದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಬಾಲಕಾರ್ಮಿಕರು ಇರುವ ರಾಜ್ಯ ಆಂಧ್ರಪ್ರದೇಶ ನಂತರ ಬರುವ ರಾಜ್ಯಗಳು ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ.
ಅತಿ ಕಡಿಮೆ ಬಾಲಕಾರ್ಮಿಕರನ್ನು ಹೊಂದಿರುವ ರಾಜ್ಯ ಪಶ್ಚಿಮ ಬಂಗಾಳ.

ಬಾಲದುಡಿಮೆಗೆ ಕಾರಣಗಳು:


ಪ್ರಾಚೀನ ಕಾಲದಿಂದಲೂ ನಮ್ಮ ಸಂಪ್ರದಾಯವನ್ನು ನೋಡಿದಾಗ ಮಕ್ಕಳು ತಮ್ಮ ಪಾಲಕರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ಆಧುನಿಕ ಯುಗದಲ್ಲಿ ಈ ಸಹಾಯವು ಸಾಮಾಜಿಕ ಪಿಡುಗು ಆಗಿ ಬದಲಾವಣೆ ಹೊಂದಿದೆ. ಇದಕ್ಕೆ ಮುಖ್ಯ ಕಾರಣವೆನೆಂದರೆ ಕೈಗಾರಿಕಾ ಕ್ರಾಂತಿ. ಈ ಕ್ರಾಂತಿಯಿಂದ ಕೈಗಾರೀಕರಣ & ನಗರೀಕರಣ ಜಗತ್ತಿನಾದ್ಯಂತ ಬಾಲಕಾರ್ಮಿಕರು ಹೆಚ್ಚಾಗಲು ಕಾರಣವಾಯಿತು.

ಈ ಸಮಸ್ಯೆಯು ಉದ್ಭವವಾಗಲು ಹಲವಾರು ಕಾರಣಗಳಿದ್ದು ಅವು ಈ ಕೆಳಗಿನಂತಿವೆ.

1. ಬಡತನ
ಭಾರತದಲ್ಲಿ ಬಾಲಕರ ದುಡಿತಕ್ಕೆ ಆರ್ಥಿಕ ಅವಶ್ಯಕತೆಯೇ ಪ್ರಧಾನ ಕಾರಣವಾಗಿದೆ. ಬಡತನದ ಬೇಗೆಯಲ್ಲಿ ಸಿಲುಕಿರುವ ಎಷ್ಟೋ ಮಕ್ಕಳು ತಮ್ಮಿಂದ ಕುಟುಂಬದ ಆದಾಯವನ್ನು ಸ್ವಲ್ಪವಾದರೂ ಹೆಚ್ಚಿಸುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.
2. ಆರ್ಥಿಕ ಸೌಲಭ್ಯತೆ
ಕೈಗಾರಿಕೋದ್ಯಮಿಗಳು (ಮಾಲೀಕರು) ಇಂದು ಮಕ್ಕಳನ್ನು ಹೆಚ್ಚು ದುಡಿಸಿಕೊಳ್ಳಲು ಕಾರಣವೇನೆಂದರೆ ಕಡಿಮೆ ವೇತನವನ್ನು ನೀಡಿ ಅಧಿಕ ಲಾಭವನ್ನು ಗಳಿಸುವುದೇ ಮುಖ್ಯ ಉದ್ದೇಶವಾಗಿದೆ.
3. ಋಣಭಾರ
ಕುಟುಂಬದ ಸಾಲ ಹೊರೆಯನ್ನು ತೀರಿಸಲು ಮಕ್ಕಳನ್ನು ಸ್ವಂತ ತಂದೆ-ತಾಯಿಗಳೇ ಉದ್ಯೋಗಕ್ಕೆ ಹೋಗಲು ಪ್ರೇರೆಪಿಸುತ್ತಾರೆ.
4. ಮಕ್ಕಳ ಹಿತಾಸಕ್ತಿಗಳನ್ನು ತಂದೆ-ತಾಯಿಗಲು ಗಮನಿಸಿದಿದ್ದಾಗ ಮಕ್ಕಳು ತಾವೇ ದುಡಿಯಲು ಮುಂದಾಗುವ ಸಾಧ್ಯತೆಗಳು ಹೆಚ್ಚಿವೆ.
5. ದುಷ್ಟ ಪ್ರವೃತ್ತಿ (ಚಟ) ಗಳಿಗೆ ಸಿದದೇ ಇದ್ದಾಗ ಅನೇಕ ತೆರನಾದ ದುಡಿಮೆಗೆ ಒಳಗಾಗಿ ಹಣ ಸಂಪಾದಿಸುವ ಕಾರ್ಯದಲ್ಲಿ ತೊಡಗಬಹುದು.
6. ಕಾನೂನು ಕಾಯ್ದೆಗಳ ವೈಫಲ್ಯವು ಕೂಡಾ ಇಂದು ಈ ಸಮಸ್ಯೆಯು ಬೆಳವಣಿಗೆಯಾಗಲು ಕಾರಣವಾಗಿದೆ.
7. ಸಾಮಾಜಿಕ ರಂಗದಲ್ಲಿ ಇದುವರೆಗೂ ಈ ಸಮಸ್ಯೆಯನ್ನು ಕುರಿತು ಸಂಘಟಿತ ಹೋರಾಟವಾಗಲಿ, ಸಾಮಾಜಿಕ ಜಾಗೃತಿಯಾಗಲಿ ನಡೆದಿಲ್ಲ.
ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯು ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ದುಡಿತಕ್ಕೆ ಒಳಪಟ್ಟಿರುವ ಮಕ್ಕಳ ಕೆಲಸಗಳ ಬಗೆಗೆ ಅನೇಕ ವಿಧಗಳನ್ನು ಮಾಡಿದ್ದು ಅವುಗಳಲ್ಲಿ ಕೆಲವೊಂದನ್ನು ಮಾತ್ರ ವಿವರಿಸಲಾಗಿದೆ.
ಮನೆಕೆಲಸಗಳಿಗೆ ಸಂಬಂಧಿಸಿದ ದುಡಿತ: ಈ ಪ್ರಕಾರದ ದುಡಿಮೆಯನ್ನು ಇಂದು ಗ್ರಾಮೀಣ & ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಕೊಳ್ಳಬಹುದು.
ಉದಾ: ಅಡಿಗೆ ಮಾಡುವ ಕೆಲಸದಲ್ಲಿ ಸಹಾಯ ಮಾಡುವುದು ಸಹೋದರರ - ಸಹೋದರಿಯ ಯೋಗಕ್ಷೇಮ ನೋಡುವುದು.
ಮನೆಯ ಹೊರಗಿನ ಕೆಲಸಗಳು: ಇಂತಹ ಕೆಲಸಗಳಲ್ಲಿ ತೊಡಗಿರುವ ಹೆಚ್ಚಿನ ಮಕ್ಕಳು ಅನೇಕ ಗ್ರಾಮಗಳಲ್ಲಿ ಕಾಣಬಹುದು.
ಉದಾ: ದನ ಕಾಯುವುದು, ಕುರಿಕಾಯುವುದು, ತೋಟ & ಹೊಲಗದ್ದೆ ಕಾಯುವುದು.
ವೇತನಕ್ಕಾಗಿ ದುಡಿಯುವ ಮಕ್ಕಳು : ಈ ತರಹದ ದುಡಿಮೆಯನ್ನು ಗ್ರಾಮೀಣ & ನಗರ ಪ್ರದೇಶಗಳೆರಡರಲ್ಲಿ ಕಾಣಬಹುದು.
ಉದಾ: ಕರಕುಶಲ ಕೆಲಸಗಳಾದ, ಕೆತ್ತನೆ ಲೋಹದ ಕೆಲಸ, ಊದುಬತ್ತಿ ತಯಾರಿಕೆ ಕಸೂತಿ ಬಿಡಿಸುವುದು.
ಜೀತದಾಳುಗಳಾಗಿ ದುಡಿಯುವ ಮಕ್ಕಳು: ದೊಡ್ಡವರಂತೆ ಇಂದು ಎಷ್ಟೋ ಮಕ್ಕಳೂ ಗ್ರಾಮೀಣ & ನಗರ ಪ್ರದೆಶಗಳಲ್ಲಿ ಒಂದು ನಿಗದಿತ ಅವಧಿಗಳ ಅಥವಾ ಕರಾರಿನ ಮೇಲೆ ದುಡಿಯುವ ಪರಿಸ್ಥಿತಿಗಳಿಗೆ ಒಳಗಾಗಿದ್ದಾರೆ.
ಉದಾ: ಕರ್ನಾಟಕದಲ್ಲಿ 10.3% ಮಕ್ಕಳು ಆಂಧ್ರಪ್ರದೇಶ 21% ರಷ್ಟು ತಮಿಳುನಾಡಿನಲ್ಲಿ 8.7% ಮಕ್ಕಳು ಜೀತದಾಳುಗಳಾಗಿ ಕೆಲಸ ಮಾಡುವ ದೃಶ್ಯವನ್ನು ಕಾಣುತ್ತೇವೆ.
ಸಂಘಟಿತ ವಲಯಗಳಿಗಿಂತ ಅಸಂಘಟಿತ ವಲಯಗಳಲ್ಲಿ ದುಡಿಯುವ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.
ಉದಾ: ಜಮಖಾನೆಗಳನ್ನು ತಯಾರಿಸುವ, ಕಂಬಳಿಗಳನ್ನು ಸಿದ್ಧ ಪಡಿಸುವ, ಚರ್ಮ ಹದ ಮಾಡುವ, ಆಭ್ರಕದ ಕಾರ್ಖಾನೆಗಳಲ್ಲಿ ಇಟ್ಟಿಗೆ ತಯಾರಿಕೆ, ಇತ್ಯಾದಿ ಅಸಂಘಟಿತ ವಲಯಗಳಲ್ಲಿ ಇಂದು ಹೆಚ್ಚಾಗಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.
ಬಾಲಕಾರ್ಮಿಕರ ಸ್ಥಿತಿ-ಗತಿಗಳು: ದುಡಿಯುವ ಮಕ್ಕಳು ಇಂದು ಎಲ್ಲೆಡೆ ಆರ್ಥಿಕ ಶೋಷಣೆಗೆ ಒಳಪಟ್ಟಿದ್ದು ಅತ್ಯಂತ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ.
ಉದಾ- ವಾರಣಾಸಿಯ ರೇಷ್ಮನೇಯುವ ಕಾರ್ಯದಲ್ಲಿ ತೊಡಗಿರುವ ಸುಮಾರು 5000 ಮಕ್ಕಳಿಗೆ ದಿನಕ್ಕೆ ಒಂದೆರಡು ರೂಪಾಯಿಗಳನ್ನು ಮಾತ್ರ ಕೊಡಲಾಗುತ್ತಿದೆ.
ಶರಣಪುರದ ಮರಗೆತ್ತುವ ಕೆಲಸದಲ್ಲಿ ತೊಡಗಿರುವ ಮಕ್ಕಳಿಗೆ ದಿನಕ್ಕೆ ಸುಮಾರು 14 ಗಂಟೆ ಕಾಲ ದುಡಿಸಿಕೊಂಡು 1 ಅಥವಾ 2 ರೂಪಾಯಿಗಳನ್ನು ಕೊಡಲಾಗುತ್ತಿದೆ.
ತಮಿಳುನಾಡಿನ ಶಿವಕಾಶಿ ಬೆಂಕಿಪೊಟ್ಟಣ & ಪಟಾಕಿ ಕಾರ್ಖಾನೆಗಳಲ್ಲಿ 45,000 ಕ್ಕೂ ಹೆಚ್ಚು ಮಕ್ಕಳನ್ನು ಉಪಯೋಗಿಸಲಾಗುತ್ತದೆ.
ಜೈಪುರದ – ಕಲ್ಲು ನುಣುಪುಗೊಳಿಸುವ ಉದ್ಯಮದಲ್ಲಿ
ಮೊರಬಾದಿನ - ಹಿತ್ತಾಳೆ ವಸ್ತುಗಳ ತಯಾರಿಕಾ ಘಟಕಗಳಲ್ಲಿ ಕೇರಳದ ಕಾಸರಗೋಡು ಪ್ರದೇಶಗಳಲ್ಲಿ ಬೀಡಿ ಕಟ್ಟುವ ಉದ್ಯಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ.ಉತ್ತರ ಪ್ರದೇಶದ ಫಿರೋಜಾಬಾದನ ಗಾಜಿನ ಕಾರ್ಖಾನೆಗಳಲ್ಲಿ 45,000ಕ್ಕೂ ಅಧಿಕ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಲೈಗಿಂಕ ಕಿರುಕುಳ ಹೆಣ್ಣು ಮಕ್ಕಳಿಗೆ ನೀಡಲಾಗುತ್ತದೆ.
ಈ ಮೇಲೆ ತಿಳಿಸಿದ ಎಲ್ಲಾ ಕೈಗಾರಿಕಾ ಘಟಕಗಳು ಅಪಾಯಕಾರಿ ವಸ್ತುಗಳನ್ನು ತಯಾರಿಸುವ ಕೇಂದ್ರಗಳಾಗಿದ್ದು ಮಕ್ಕಳ ದೇಹದ ಆರೋಗ್ಯದ ಮೇಲೆ ಅಧಿಕ ಪರಿಣಾಮವನ್ನು ಉಂಟು ಮಾಡುತ್ತದೆ.

ಬಾಲ ದುಡಿತದ ದುಷ್ಪರಿಣಾಮಗಳು:


ಬಾಲಕಾರ್ಮಿಕ ಸಮಸ್ಯೆಯು ಇಂದು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು ಅದರ ಪರಿಣಾಮಗಳು ಕೂಡಾ ಅಷ್ಟೇ ಭಯಾನಕವಾಗಿವೆ. ದುಡಿತದಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.
ಹಣದಾಸೆಗಾಗಿ ದುಡಿಯುವ ಮಕ್ಕಳು ಮೊದಮೊದಲು ಲಾಭದ ಭ್ರಮೆಯಲ್ಲಿರುತ್ತಾರೆ. ಬಿಡುವಿಲ್ಲದ ದುಡಿತದಿಂದ ಮಕ್ಕಳ ದೈಹಿಕ ಬೆಳವಣಿಗೆ ಕುಂಠಿತಗೊಂಡು ಅವರು ಕೆಲವೇ ದಿನಗಳಲ್ಲಿ ಶಕ್ತಿಹೀನರಾಗಿ ದುಡಿಯುವ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದುಂಟು. ಅಪಾಯಕಾರಿಯಾದ ಘಟಕಗಳಾದ - ಬೆಂಕಿಕಡ್ಡಿ ತಯಾರಿಕೆ, ಕುಂಬಾರಿಕೆ, ಬಳೆಗಳ ತಯಾರಿಕೆ, ಕೆಲಸ ಮಾಡುವ ಮಕ್ಕಳು ಕ್ಷಯ, ಚರ್ಮದ ರೋಗಗಳು, ಸುಟ್ಟಗಾಯಗಳು, ಸಿಲಿಕೋಸಿಸ್ ಮುಂತಾದ ರೋಗಗಳಿಗೆ ತುತ್ತಾಗುತ್ತಾರೆ.
ಈ ಸಂದರ್ಭದಲ್ಲಿ “ರಿಗೆ ಸಮಿತಿ” Rege commitie Report on Labour Condition ಮಕ್ಕಳ ಸ್ಥಿತಿಗಳ ವರದಿ ಸಲ್ಲಿಸುತ್ತಾ ಹೀಗೆ ಹೇಳಿದೆ.
ಗಾಜಿನ ಕೈಗಾರಿಕಾ ಕೆಲಸಗಳಲ್ಲಿ ತೊಡಗಿರುವ ಮಕ್ಕಳನ್ನು ನೋಡುವಾಗಲೇ ಅವರು ಕ್ಷೀಣರಾಗಿದ್ದು ಕಣ್ಣಿನ ರೋಗ ರಿಕೆಟ್ಸ ಅಥವಾ ಮದುಮೂಳೆ (ರಿಕೆಟ್ಸ್) ರೋಗಗಳಂತಹ ಕಾಯಿಲೆಗಳಿಂದ ನರಳುವದು ತಿಳಿದು ಬರುವುದು ಎಂದು ವಿವರಿಸಲಾಗಿದೆ.
ಶಾಲೆ ಕಲಿಯುವ ಹಂತದಲ್ಲಿ ಕೆಲಸಕ್ಕೆ ಸೇರಿಸುವದರಿಂದ ಅವರು ಜೀವನ ಪರ್ಯಂತ ನಿರಕ್ಷರ ಕುಕ್ಷಿಗಳಾಗಿ ಮುಂದೆ ದೇಶಕ್ಕೆ ಸಮಸ್ಯೆಗಳನ್ನು ಸೃಷ್ಟಿಸುವವರಾಗುತ್ತಾರೆ.

ಬಾಲಕಾರ್ಮಿಕ ಸಮಸ್ಯೆಗೆ ಪರಿಹಾರೋಪಾಯಗಳು:


ಇತ್ತೀಚಿನ ವರ್ಷಗಳಲ್ಲಿ ಬಾಲಕಾರ್ಮಿಕ ಸಮಸ್ಯೆಯ ಬಗೆಗೆ ಸಂಶೋಧಕರ, ಸಮಾಜ ಕಾರ್ಯಕರ್ತರ, ಮಾದ್ಯಮ ತಜ್ಞರ, ನ್ಯಾಯಾಲಯಗಳ ಗಮನವನ್ನು ಸೆಳೆದಿದೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಆಶ್ರಯದಲ್ಲಿ ಅನೇಕ ಸಂಶೋಧನಾ ಅದ್ಯಯನಗಳನ್ನು ಕೈಗೊಳ್ಳಲಾಗಿದೆ. ಸರ್ಕಾರವು ಸಂವಿದಾನಾತ್ಮಕ ಹಾಗೂ ಶಾಸನಾತ್ಮಕ ಕ್ರಮಗಳನ್ನು ಜಾರಿಗೊಳಿಸಿದೆ.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಅಂತರಾಷ್ಟ್ರೀಯ ಒಡಂಬಡಿಕೆ – 1989:
1979ರಲ್ಲಿ ಮಾನವ ಹಕ್ಕುಗಳು (Human Right)) ಆಯೋಗವು ಮಗುವಿನ ಹಕ್ಕುಗಳನ್ನು ಕುರಿತು ಒಡಂಬಡಿಕೆಯೊಂದನ್ನು ಅಂಗೀಕರಿಸಿತು. ಇದು 3 ತತ್ವಗಳನ್ನು ಒಳಗೊಂಡಿದೆ, ಅವುಗಳಲ್ಲಿ
ಒಂದನೆಯದು, ವಯಸ್ಕರಿಗೆ ಒದಗಿಸುವ ಶಿಕ್ಷೆಗಳನ್ನು ಮೀರಿದ ವಿಶೇಷ ಸೌಲಭ್ಯಗಳನ್ನು ಒದಗಿಸುವುದು.
ಎರಡನೇಯದು, ಮಗುವಿನ ಉಳಿವು & ಬೆಳವಣಿಗೆಗೆ ಅತ್ಯುತ್ತಮ ಪರಿಸರ ಒದಗಿಸುವುದು.
ಮೂರನೇಯದು, ಸರ್ಕಾರಗಳು ಹಾಗೂ ವಯಸ್ಕ ಸಮಾಜ ಮಕ್ಕಳ ಹಿತದೃಷ್ಟಿಗೆ ಬದ್ಧವಾಗಿರಬೇಕು.

NGO-Non-Government Organisation:


ಸರ್ಕಾರೇತ ಸಂಘಗಳು ಕೂಡಾ ಬಾಲಕಾರ್ಮಿಕರ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿರುತ್ತದೆ. ಅವು ಬಚಪನ್ ಬವಾವ್ ಆಂದೋಲನ ಪ್ರಯಾಸ್ ಜನಸೇವಾ ಸಮಿತಿ ಬಾಲಕಾರ್ಮಿಕರ ಕಾನೂನುಗಳನ್ನು ಜಾರಿಗೆ ತರುವುದಕ್ಕೆ ಪರಿಶೀಲನಾ ಸಿಬ್ಬಂದಿಯ ನಿಲುವು ಸಹ ಕಾರಣ. ತಮಿಳುನಾಡಿನ ಶಿವಕಾಶಿಯ ಒಬ್ಬ (ಪಿಎಸ್ಐ) (ಸಬ್ ಇನ್ಸಪೆಕ್ಟರ್) ಹೀಗೆ ಹೇಳುತ್ತಾರೆ.“ಆಯೋಗಗಳನ್ನು ನೇಮಿಸಬಹುದು, ಅಧ್ಯಯನಗಳನ್ನು ನಡೆಸಬಹುದು, ನೀತಿ ತಯಾರಿಸಬಹುದು, ಯೋಜನೆ ಮಾಡಬಹುದು, ಮಕ್ಕಳನ್ನು ಕಳಿಸುವ ತಂದೆ-ತಾಯಿಂದಿರು ನಿಲುವುಗಳನ್ನು ಯಾರಾದರೂ ಬದಲಾಯಿಸಲು ಸಾಧ್ಯವೇ?”

National Policy on children:


ಮಕ್ಕಳ ಸರ್ವೋತೋಮುಖ ಅಭಿವೃದ್ದಿಯನ್ನು ಸಾಧಿಸಲು ವಿಶ್ವ ಸಂಸ್ಥೆಯ ಕರೆಯ ಮೆರೆಗೆ ಭಾರತ ಸರ್ಕಾರವು 1974ರ ಆಗಸ್ಟ್ 22 ರಂದು ಮಕ್ಕಾಳ ರಾಷ್ಟ್ರೀಯ ಧೋರಣೆಯೊಂದನ್ನು ರೂಪಿಸಿರುವ. ಈ ದೊರಣೆಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಮಕ್ಕಳು ರಾಷ್ಟ್ರದ ಪ್ರಮುಖ ಆಸ್ತಿಯೆಂದು ಬಣ್ಣಿಸಿದ್ದು ಮಕ್ಕಳ ಭೌತಿಕ ಅಥವಾ ಶಾರೀರಿಕ ಮಾನಸಿಕ, ಶೈಕ್ಷಣಿಕ ಹಾಗೂ ನೈತಿಕ ದೃಷ್ಟಿಯಿಂದ ಅಗತ್ಯವಾದ ಕ್ರಮಕೊಳ್ಳಬೇಕೆಂದು ತಿಳಿಸಲಾಗಿದೆ.
ಸಂವಿಧಾನ ನಿರ್ದೇಶನಗಳು & ಅದರ ಕೆಳಗೆ ಮಾಡಿದ ಕಾನೂನುಗಳ ಮೇರೆಗೆ ಭಾರತ ಸರ್ಕಾರವು 1987ರಲ್ಲಿ National Policy on children: – ರಾಷ್ಟ್ರೀಯ ಬಾಲಕಾರ್ಮಿಕ ನೀತಿಯನ್ನು ರಚಿಸಿತು ಇದು.
ರಾಷ್ಟ್ರೀಯ ಬಾಲಕಾರ್ಮಿಕ ಸಲಹಾ ಸಮಿತಿಯನನು ರಚಿಸಿತು. ಮಕ್ಕಳನ್ನು ಕೈಗೊಳ್ಳಬೇಕೆಂದು ತಿಳಿಸಿದ, ಬಾಲಕಾರ್ಮಿಕರನ್ನು ತೆಗೆದುಹಾಕಲು NCLPS-National Child Labour Programe.
ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಗಳನ್ನು ಜಾರಿಗೆ ತಂದಿತು. ಈ ಯೋಜನೆಯ ಅನ್ವಯ ಪ್ರತ್ಯೇಕ ಶಾಲೆಗಳನ್ನು ಬಾಲಕಾರ್ಮಿಕರಿಗಾಗಿ ಪ್ರಾರಂಭಿಸಲಾಯಿತು. ಇಲ್ಲಿ ವಿದ್ಯಾಭ್ಯಾಸ ಜೊತೆಗೆ ಅವರಿಗೆ ವೃತ್ತಿ ಆಧಾರಿತ ತರಬೇತಿ & ಸಹಾಯಧನ ಕೊಡಲಾಯಿತು. ಮುಂದಿನ ಹತ್ತು ವರ್ಷಗಳವರೆಗೆ ಹೆಚ್ಚಿನ ಪ್ರಗತಿ ಕಾಣಲಿಲ್ಲ.

ಕಾನೂನಿನ ಕ್ರಮಗಳು:


ಸ್ವಾತಂತ್ರ್ಯ ಪೂರ್ವದ ಅವಧಿಯಲ್ಲಿ & ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ಬಾಲಕಾರ್ಮಿಕ ನಿಷೆಧಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಅವು ಈ ಕೆಳಗಿನಂತಿವೆ.
ಕಾರ್ಖಾನೆ ಕಾಯ್ದೆ ಪ್ರಕಾರ 7 ವರ್ಷಕ್ಕೆ ಏರಿಸಿದ್ದು ದುಡಿಮೆಯನ್ನು 7 ಗಂಟೆಗೆ ಮೀರಕೂಡದೆಂದು ತಿಳಿಸಲಾಗಿದೆ. 1923ರ ಭಾರತೀಯ ವ್ಯಾಪಾರಿ ಹಡಗಿನ ಕಾಯ್ದೆ (Indian Mercury Shipping Act –1923) ಈ ಕಾನೂನಿನ ಪ್ರಕಾರ ರೇಲ್ವೆಯಲ್ಲಾಗಲಿ, ಬಂದರುಗಳಲ್ಲಾಗಲಿ ಅಥವಾ ಯಾವುದೇ ಕಾರ್ಖಾನೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು.

1948ರ ಭಾರತೀಯ ಕಾರ್ಖಾನೆಗಳ ಕಾಯ್ದೆ:


14 ವರ್ಷ ವಯಸ್ಸಿನ ಮಕ್ಕಳು ದುಡಿಯುವ ಹಾಗಿಲ್ಲ. ಈ ಕಾಯ್ದೆಯನ್ವಯ ದಿನ ಒಂದಕ್ಕೂ 5 ಗಂಟೆಗಳಿಗೂ ಹೆಚ್ಚಿಗೆ ಇರದೆ ಒಂದು ಪಾಳಿ (ಸರದಿ) ಕೆಲಸವನ್ನು ಮಾತ್ರ ಮಾಡಬೇಕಾಗುತ್ತದೆ. ಇದರ ಜೊತೆಗೆ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 6 ಗಂಟೆಗಳ (ರಾತ್ರಿ ಪಾಳಿಯಲ್ಲಿ)ವರೆಗೆ ಮಕ್ಕಳನ್ನು ದುಡಿಸುವಂತಿಲ್ಲ ಮೇಲೆ ತಿಳಿಸಿರುವ ಕಾಯ್ದೆ ಕಾನೂನುಗಳನ್ನು ಭಾರತ ಸರ್ಕಾರವು ಮರುಪರಿಶೀಲಿಸಿ ಅವುಗಳಲ್ಲಿ ಸೂಕ್ತವಾದ ಮಾರ್ಪಾಡುಗಳನ್ನು ಮಾಡಿ ಅವುಗಳನ್ನು ಜಾರಿಗೆ ತಂದರೂ ಮಕ್ಕಳ ದುಡಿತ ಎಷ್ಟೋ ಕಾರ್ಖಾನೆಗಳಲ್ಲಿ ಮುಂದುವರೆಯುತ್ತಲೇ ಇದೆ.

ಸಂವಿಧಾನಾತ್ಮಕ ಸೌಲಭ್ಯಗಳು:


ಸಂವಿಧಾನದ 24ನೇಯ ಆಧಿಯಲ್ಲಿ 14 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕಾರ್ಖಾನೆ & ಗಣಿಯಲ್ಲಿ ಕೆಲಸಕ್ಕೆ ನೇಮಿಸಬಾರದು ಅಥವಾ ಇನ್ನಾವುದೇ ಅಪಾಯಕಾರಿ ಕೆಲಸದಲ್ಲಿ ತೊಡಗಿಸಬಾರದು.
ಸಂವಿಧಾನದಲ್ಲಿ ಸೂಚಿತವಾಗಿರುವ “ರಾಜ್ಯ ನಿರ್ದೇಶಕ ತತ್ವಗಳು (ಡಿ.ಪಿ.ಎಸ್.ಪಿ) ಕೂಡಾ ಎಳೆಯ ವಯಸ್ಸಿನ ಮಕ್ಕಳಿಗೆ ಕೇಡು ಉಂಟಾಗದಂತೆ ಹಾಗೂ ಪ್ರಜೆಗಳು ಆರ್ಥಿಕ ಪರಿಸ್ಥಿತಿಗಳಿಂದಾಗಿ ತಮ್ಮ ವಯಸ್ಸು ಅಥವಾ ಶಕ್ತಿಗೆ ಮೀರಿದ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಉಂಟಾಗದಂತೆ ರಾಜ್ಯಾಧಿಕಾರ ನೋಡಿಕೊಳ್ಳಬೇಕೆಂದು ಸಂವಿಧಾನ 39 (ಇ) ನೇ ವಿಧಿ ನಿರ್ದೇಶಿಸುತ್ತದೆ. ಸಂವಿಧಾನದ 45ನೇ ವಿಧಿಯು 14 ವರ್ಷ ತುಂಬುವವರೆಗೆ ಎಲ್ಲ ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣ ಒದಗಿಸಬೇಕೆಂದು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡುತ್ತದೆ.
ಮಹಿಳೆ & ಮಕ್ಕಳಿಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ರಾಜ್ಯಾಧಿಕಾರ ಕಲ್ಪಿಸುವದಕ್ಕೆ ಯಾವುದೇ ಅಡ್ಡಿ ಆತಂಕಗಳನ್ನು ಉಂಟು ಮಾಡಬಾರದೆಂದು ಸಂವಿಧಾನದ 15(3)ನೇ ವಿಧಿ ತಿಳಿಸುತ್ತದೆ. ಬಾಲ್ಯ ಹಾಗೂ ಯೌವನವನ್ನು ಶೋಷಣೆಯ ವಿರುದ್ದ ಹಾಗೂ ನೈತಿಕವಾಗಿ & ದೈಹಿಕವಾಗಿ ಕೈಬಿಡುವದರ ವಿರುದ್ಧ ರಕ್ಷಿಸಬೇಕಾದ ಅಗತ್ಯವನ್ನು 39 (ಈ) ವಿಧಿ ಹೇಳಿದೆ.
ಸರ್ಕಾರ & ಸರ್ಕಾರೇತರ ಸಂಘಗಳು ಬಾಲಕಾರ್ಮಿಕರ ಸಮಸ್ಯೆಯನ್ನು ತೆಗೆದುಹಾಕಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ಸಮಸ್ಯೆಯು ಇನ್ನೂ ಕೊನೆಗೊಂಡಿಲ್ಲ. ಇದಕ್ಕೆ ಕಾರಣವನ್ನು ನೋಡಿದಾಗ ಕಾನೂನುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ತಂದಿಲ್ಲ. ಕಾನೂನುಗಳನ್ನು ಜಾರಿಗೆ ತರುವಲ್ಲಿ ಸರ್ಕಾರದ ಭ್ರಷ್ಟಚಾರತನ. ಗ್ರಾಮೀಣ ಭಾಗದ ಬಾಲಕಾರ್ಮಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ನಗರ ಪ್ರದೇಶಗಳಲ್ಲಿ ಬಾಲಕಾರ್ಮಿಕರಿಗೆ ವಿಶೇಷ ಕಾಳಜಿ ನೀಡುತ್ತಾರೆ. ತೀವ್ರವಾದ ಬಡತನವಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ.93ನೇಯ ತಿದ್ದುಪಡಿಯ ಮೂಲಕ ಶಿಕ್ಷಣ ಕಡ್ಡಾಯವಾಗಿದೆ.
“ಇಂದಿನ ಮಕ್ಕಳೆ ನಾಳಿನ ಪ್ರಜೆಗಳು” ಎಂಬ ಮಾತು ಅಕ್ಷರಶಃ ನಿಜವಾಗಬೇಕಾದರೆ ಮಕ್ಕಳ ಬಗೆಗೆ ಪ್ರತಿಯೊಬ್ಬರು ವಿಶೇಷವಾಗಿ ಕಾಳಜಿ ವಹಿಸುವುದು ತುಂಬಾ ಅಗತ್ಯವಾಗಿದೆ. ವೈಜ್ಞಾನಿಕವಾಗಿ & ತಾಂತ್ರಿಕವಾಗಿ ಬಹಳಷ್ಟು ಮುನ್ನಡೆದಿದ್ದೇವೆ ಎನ್ನುವ ನಾವು ಬಾಲಕಾರ್ಮಿಕ ಸಮಸ್ಯೆಯ ನಿವಾರಣೆಯತ್ತ ಸೋತಿದ್ದೇವೆ. ಸಮಸ್ಯೆ ಮುಂದುವರೆದಿದೆ. ಮೊದಲು ನಾವು ಸಮಸ್ಯೆಯ ಮೂಲ ಕಾರಣಗಳನ್ನು ಕಂಡು ಹಿಡಿಯಬೇಕು. ಬಾಲಕಾರ್ಮಿಕರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಕೂಲಂಕುಶವಾಗಿ ವಿಮರ್ಶಿಸಿ ನಿವಾರಣೆಯತ್ತ ನಡೆಯಬೇಕು. ಎಲ್ಲ ಎಳೆಯ ಮಕ್ಕಳು ಶಾಲೆಗಳಿಗೆ ಹೋಗುತ್ತಾರೆ, ಅಲ್ಲಿ ಸಾಮಾಜಿಕ, ಆರ್ಥಿಕ ಸುಧಾರಣೆ ಆಗಿದೆ ಎಂಬ ಅಂಶ ವ್ಯಕ್ತವಾಗುತ್ತದೆ.ಪ್ರತಿಯೊಬ್ಬ ಬಾಲಕನಿಗೆ ಮೂಲ ಅಗತ್ಯಗಳನ್ನು ಅಂದರೆ ಊಟ, ಕಾರ್ಮಿಕರಾಗುವ ಪರಿಸ್ಥಿತಿ ಒದಗದು, ಇವುಗಳ ಜೊತೆಗೆ ಶಿಕ್ಷಣ ತರಬೇತಿ ಸೌಲಭ್ಯಗಳು ಕೂಡ ಲಭ್ಯವಾಗಬೇಕು.
ಬಾಲಕಾರ್ಮಿಕರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ತರುವ ಪ್ರಯತ್ನ ನಡೆಯಬೇಕು. ಭಾರತದಲ್ಲಂತೂ ಕಾನೂನುಗಳಿಗೆ ಕೊರತೆ ಇಲ್ಲ. ಆದರೆ ಅನುಷ್ಟಾನ ಮಾತ್ರ ಸಾಧ್ಯವಾಗಿಲ್ಲ. ಸಮೂಹ ಮಾಧ್ಯಮಗಳ ಮೂಲಕ ಈ ಬಗ್ಗೆ ಪ್ರಚಾರ ಆಂದೋಲನವನ್ನು ಕೈಗೊಳ್ಳಬೇಕು. ಇವೆಲ್ಲಕ್ಕಿಂತ ಮಿಗಿಲಾಗಿ ಬಾಲಕಾರ್ಮಿಕರ ಶೋಷಣೆಯ ಬಗೆಗೆ ಸಾಮಾಜಿಕ ಅರಿವು, ಸಾಮಾಜಿಕ ಜಾಗೃತಿ ಪ್ರತಿಯೊಬ್ಬರಲ್ಲಿ ಮೂಡಿಸಬೇಕು.ಪ್ರತಿಯೊಬ್ಬ ತಂದೆ ತಾಯಿಂದಿರು ತಮ್ಮ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಆದರೆ ಈ ಸಮಸ್ಯೆಯನ್ನು ಕೆಲವೇ ವರ್ಷಗಳಲ್ಲಿ ಬಗೆಹರಿಸಬಹುದು.
1996ರಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ನೀಡಿತು.
ಬಾಲಕಾರ್ಮಿಕರನ್ನು ನೇಮಿಸಿಕೊಂಡ ಮಾಲೀಕರು 20,000 ದಂಡ & 2 ವರ್ಷ ಶಿಕ್ಷೆಯನ್ನು ಅವರಿಗೆ ನೀಡಬೇಕು. ಬಾಲಕಾರ್ಮಿಕ ಕುಟುಂಬದ ಸಮಸ್ಯರೊಬ್ಬರಿಗೆ ಕೆಲಸ ನೀಡಬೇಕು. ಇದರ ಜೊತೆಗೆ 5,000 ರೂಪಾಯಿಯನ್ನು ರಾಜ್ಯ ಸರ್ಕಾರ ಹಣ ನೀಡಬೇಕು.

ಅಂತರಾಷ್ಟ್ರೀಯ ಮಕ್ಕಳ ವರ್ಷ 1979:


ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಗೊತ್ತುವಳಿಯ ಪ್ರಕಾರ 1979ರ ವರ್ಷವನ್ನು ಅಂತರಾಷ್ಟ್ರೀಯ ಮಕ್ಕಳ ವರ್ಷ ಎಂದು ಆಚರಿಸಬೇಕೆಂದು ತಿಳಿಸಿತು.
ಪ್ರತಿಯೊಂದು ದೇಶವು ಮಕ್ಕಳ ಸಮಸ್ಯೆಗಳ ಪರಿಹಾರದ ಅನುಷ್ಟಾನಕ್ಕೆ ಜಾರಿಗೆ ತರಬೇಕೆಂದು ತಿಳಿಸಿದೆ.

ಕಾರಣಗಳು:


• ಪುರುಷ ಪ್ರಧಾನ ಸಮಾಜ
• ಲಿಂಗ ತಾರತಮ್ಯ
• ಆರ್ಥಿಕ ಅವಲಂಬನೆ
• ಸಾಮಾಜಿಕ ಸ್ಥಾನಮಾನದ ಕೊರತೆ
• ಶಿಕ್ಷಣದ ಕೊರತೆ
• ಸಾಮಾಜಿಕ ಅರಿವಿನ ಕೊರತೆ
ವರದಕ್ಷಿಣೆ ಇತ್ಯಾದಿ ಸಾಂಪ್ರಾದಾಯಿಕ, ಧಾರ್ಮಿಕ ಕಾರಣಗಳು, ಆತ್ಮವಿಶ್ವಾಸ & ಧೈರ್ಯದ ಕೊರತೆ, ಅವಕಾಶ ವಂಚಿತರಾಗಿರುವುದು. ಎಲ್ಲ ದೌರ್ಜನ್ಯವನ್ನು ಸಹಿಸಿಕೊಳ್ಳುವ ವಿವೇಚನಾ ರಹಿತ ಮನೋವೃತ್ತಿ ಹೆಚ್ಚಾಗಿ ದೌರ್ಜನ್ಯಕ್ಕೊಳಗಾಗುವರು.
ದೌರ್ಜನ್ಯಕ್ಕೊಳಗಾಗುವ ಮಹಿಳೆಯರಲ್ಲಿ ಬಹುತೇಕರು ಅಮಾಯಕರು, ಖಿನ್ನರು, ಅತ್ಮಗೌರವ, ದೈರ್ಯದ ಕೊರತೆಯಿರುವವರು, ಅವಿದ್ಯಾವಂತರು, ಆರ್ಥಿಕವಾಗಿ ಬೇರೆಯವರ ಮೇಲೆ ಅವಲಂಬಿತರಾದವರು, ಒತ್ತಡಪೂರಿತ ಕುಟುಂಬದಲ್ಲಿರುವವರು, ಕುಡುಕ ಮಾನಸಿಕ ವಿಕೃತಿಯ ಪುರುಷರ ಸಂಬಂಧಗಳಲ್ಲಿರುವವರು ಮುಂತಾದವರು.

ದೌರ್ಜನ್ಯದ ಉದ್ದೇಶಗಳು:


ಹಣಕ್ಕಾಗಿ, ಸ್ವಾರ್ಥ ಸಾದನೆಗಾಗಿ, ಅಧಿಕಾರಕ್ಕಾಗಿ, ವಿಕೃತ ಸುಖಕ್ಕಾಗಿ, ಮಾನಸಿಕ ವ್ಯಾಧಿ, ಕುಟುಂಬದಲ್ಲಿನ ಒತ್ತಡ, ದುಡುಕ ಇತ್ಯಾದಿಗಳೆಂದು ಗುರ್ತಿಸಬಹುದು.
Crime Department ವರದಿಯ ಪ್ರಕಾರ:
ಪ್ರತಿ 7 ನಿಮಿಷಕ್ಕೆ ಒಂದು ಅಪರಾಧ
ಪ್ರತಿ 54 ನಿಮಿಷಕ್ಕೆ ಒಂದು ಬಲಾತ್ಕಾರ
ಪ್ರತಿ 26 ನಿಮಿಷಕ್ಕೆ ಒಂದು ಅಪಹರಣ
ಪ್ರತಿ 42 ನಿಮಿಷಕ್ಕೆ ಒಂದು ವರದಕ್ಷಿಣೆ
ಗೃಹಖಾತೆ, ಪೋಲೀಸ್ ರಿಸರ್ಚ್, ಬ್ಯೂರೋ, ನ್ಯಾಷನಲ್ಸ್ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ರಿಫೆನ್ಸ್
ಅದರಿಂದ ಮಾಹಿತಿಯ ಪ್ರಕಾರ:
ಪ್ರತಿ ವರ್ಷ ಭಾರತದಲ್ಲಿ 11,000 ರೇಪ್ ಪ್ರಕರಣ
21,000 ಮಹಿಳಾ ಪೀಡನೆ ಪ್ರಕರಣ
12,000 ಅಪಹರಣ
20,000 ಚಿತ್ರಹಿಂಸೆ
10,000 ಕೀಟಲೆ ಹಿಂಸೆ
5,000 ವರದಕ್ಷಿಣೆ ಪ್ರಕರಣದಲ್ಲಿ ಸಾವು ಸಂಭವಿಸುತ್ತದೆ.
ಅನೇಕ ಶತಮಾನಗಳ ಹಿಂದಿನಿಂದ ಪುರುಷ ದೌರ್ಜನ್ಯದ ವಿರುದ್ಧ ಪ್ರತಿಭಟನೆಗಳು ನಡದೇ ಇವೆ. ಆದರೆ ಸಂಘಟಿತ ಬೃಹತ್ ಮಹಿಳಾ ಆಂದೋಲನಗಳು ಪ್ರಾರಂಭವಾಗಿದ್ದು ಮಾತ್ರ ಇತ್ತೀಚೆಗೆ ಸಂಪರ್ಕ ಮಾಧ್ಯಮ ಅಭಿವೃದ್ಧಿ, ಸಾರಿಗೆ ಅಭಿವೃದ್ಧಿ ಆಧುನಿಕ ವೈಜ್ಞಾನಿಕ ಶಿಕ್ಷಣ ನಾಗರಿಕತೆಯ ಉನ್ನತ ಮುಂತಾದವುಗಳು ಪ್ರಸ್ತುತ ಮಹಿಳಾ ಆಂದೋಲನಗಳನ್ನು ರಾಷ್ಟ್ರವ್ಯಾಪ್ತಿ ವಿಶ್ವವ್ಯಾಪಿಸಿದೆ.
19ನೇಯ ಶತಮಾನದಲ್ಲಿ ಮತದಾನದ ಹಕ್ಕಿಗಾಗಿ ಹಲವಾರು ಸ್ತ್ರೀ ಆಂದೋಲನಗಳು ನಡೆದವು.
1930 ರಲ್ಲಿ ಬ್ರಿಟನ್ ಸ್ತ್ರೀಯರಿಗೆ ಮತದಾನದ ಹಕ್ಕನ್ನು ನೀಡಿದರು.
1950 ರಲ್ಲಿ ಭಾರತ ಗಣರಾಜ್ಯದ ನಂತರ ಮತದಾನ ಹಕ್ಕು ನೀಡಿತು.