Loading [Contrib]/a11y/accessibility-menu.js

“ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ”

 

ಕಳೆದ ಮೂರು ವರ್ಷಗಳ ನಿರಂತರ ಹೋರಾಟದ ಫಲವಾಗಿ ಕನ್ನಡಕ್ಕೆ ನವೆಂಬರ್ 1 ರಾಜ್ಯೋತ್ಸವದಂದುಶಾಸ್ತ್ರೀಯ ಭಾಷೆ ಯ ಸ್ಥಾನಮಾನ ಲಭಿಸಿತು. ಈ ಗೌರವ ಪಡೆಯಲು ಕನ್ನಡಿಗರು ನಡೆಸುತ್ತಾ ಬಂದ ಹೋರಾಟಕ್ಕೆ ಜೊತೆನೀಡಿದ ತೆಲುಗರ ಪ್ರಯತ್ನ ಕೂಡ ಯಶಸ್ವಿಯಾಗಿದ್ದು ಆ ಭಾಷೆ ಗೂ ಈಗ ಶಾಸ್ತ್ರೀಯ ಭಾಷೆ ಯ ಸ್ಥಾನಮಾನ ಸಿಕ್ಕಿದೆ.
ಕನ್ನಡಿಗರ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರವು ನ್ಯಾಯಾಲಯದ ತೂಗುಕತ್ತಿಯಡಿಯಲ್ಲಿಯೇ ಈ ನಿರ್ಧಾರವನ್ನು ಪ್ರಕಟಿಸಿತು ನಾಲ್ಕು ವರ್ಷಗಲ ಹಿಂದೆ ರಚನೆಗೊಂಡ ಸಮಿತಿ ಆಗಸ್ಟ್ 8 ರಂದು ಹಿರಿಯ ಭಾಷಾ ತಜ್ಞ ಡಾ. ಬಿ.ಎನ್ ಪಟ್ನಾಯಿಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕನ್ನಡ & ತೆಲುಗು ಭಾಷೆ ಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡಬೇಕೆಂದು ಶಿಫಾರಸ್ಸು ಮಾಡಿತು. ಈ ಅಭಿಪ್ರಾಯವನ್ನು ಸಮಿತಿಯ ಸದಸ್ಯರಲ್ಲೊಬ್ಬರಾದ ಡಾ.ವೈ.ಸಿ.ಕುಳಂದೈಸ್ವಾಮಿ ಮಾತ್ರ ವಿರೋದಿಸಿದ್ದರು. ಇತರ ಸದಸ್ಯರಾದ ಬಿ.ಎಚ್.ಕೃಷ್ಣಮೂರ್ತಿ ಪ್ರೊ. ಉದಯನಾರಾಯಣಸಿಂಗ್ & ಡಾ. ಪಟ್ನಾಯಕ್ ಶಾಸ್ತ್ರೀಯ ಭಾಷೆ ಯ ಸ್ಥಾನಮಾನ ನೀಡುವುದನ್ನು ಸಭೆಯಲ್ಲಿ ಸಮರ್ಥಿಸಿದ್ದರು ಈ ಶಿಫಾರಸ್ಸು ಸಮಿತಿಯ ಸದಸ್ಯರಲ್ಲೊಬ್ಬರಾದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಸರಕಾರಕ್ಕೆ ಸಲ್ಲಿಸಿದ್ದರು. ಅದರ ಭಾಷಾ ತಜ್ಞರ ಸಮಿತಿಯನ್ನೆ ಪುನರರಚಿಸಬೇಕೆಂದು ಕೋರಿ ಚೆನೈ ಹೈಕೋರ್ಟನಲ್ಲಿಗಾಂಧಿ ಎನ್ನುವ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಸಮಿತಿಯ ಶಿಫಾರಸ್ಸನ್ನು ಅಧೀಕೃತವಾಗಿ ಬಹಿರಂಗಪಡಿಸಲು ಕೇಂದ್ರ ಸರಕಾರ ನಿರಾಕರಿಸಿತ್ತು, ಆದರೆ ಮುಖ್ಯ ಮಂತ್ರಿ ಯಡಿಯೂರಪ್ಪನವರು ಶಾಸಕರ ಜೊತೆಗೂಡಿ ರಾಜಘಾಟದಲ್ಲಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು ಧರಣಿ ನಂತರ ಶಾಸ್ತ್ರೀಯ ಸ್ಥಾನಮಾನ ನೀಡಿದರೆ ಅದರ ಫಲ ಬಿಜೆಪಿಗೆ ಸೇರುತ್ತದೆ ಎಂದು ಲಕ್ಕಾಚಾರ ಹಾಕಿದ ಯುಪಿಎ ಕೇಂದ್ರ ಸರಕಾರ ಕಾನೂನು ತಜ್ಞರ ಸಲಹೆ ಪಡೆದುಶಾಸ್ತ್ರೀಯ ಸ್ಥಾನಮಾನ ನೀಡುವ ಘೋಷಣೆ ಮಾಡಿತು. ಈ ಸಂದರ್ಭದಲ್ಲಿ ಶಾಸ್ತ್ರೀಯ ಸ್ಥಾನಮಾನ ನಿರ್ಧಾರ ಪ್ರಕಟಿಸಿದಕೇಂದ್ರ ಪ್ರವಾಸೋದ್ಯಮ & ಸಂಸ್ಕೃತಿ ಖಾತೆ ಸಚಿವ ಅಂಬಿಕಾ ಸೋನಿ ಸರ್ಕಾರದ ನಿರ್ಧಾರ ಚೆನೈ ಹೈಕೋರ್ಟನಲ್ಲಿ ವಿಚಾರಣೆಯಲ್ಲಿರುವ ಅರ್ಜಿಗೆ ಸಂಬಂಧಿಸಿದ ತೀರ್ಪಿಗೆ ಬದ್ಧವಾಗಿದೆ ಎಂದಿದ್ದಾರೆ & ರಿಟ್ ಅರ್ಜಿಯ ಪ್ರತಿಕ್ರಿಯೆ ನೀಡಿದಕೇಂದ್ರ ಸರಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅದನ್ನು ವಜಾಗೊಳಿಸುವಂತೆ ಕೋರಿದೆ.
ಒಟ್ಟಿನಲ್ಲಿ ದ್ರಾವಿಡ ಬಾಷಾ ಬಳಗದ 5 ಭಾಷೆ ಗಳಲ್ಲಿ 3 ಈ ಗೌರವಕ್ಕೆ ಭಾಜನವಾಗಿದೆ. ದೇಶದಲ್ಲಿ ಶಾಸ್ತ್ರೀಯಸ್ಥಾನಮಾನ ಪಡೆದ ಭಾಷೆ ಗಳ ಸಂಖ್ಯೆ ನಾಲ್ಕಕ್ಕೆರಿದೆ. ಸಂಸ್ಕೃತ & ತಮಿಳು ಭಾಷೆ ಗೆ ಈ ಮೊದಲೇ ಶಾಸ್ತ್ರೀಯ ಭಾಷೆ ಯಸ್ಥಾನಮಾನ ನೀಡಲಾಗಿದ್ದು, ಈಗ ಕನ್ನಡ & ತೆಲುಗು ಭಾಷೆ ಗಳು ಶಾಸ್ತ್ರೀಯ ಭಾಷೆ ಯ ಸ್ಥಾನಮಾನದ ಗರಿಯನ್ನುಮುಡಿಗೇರಿಸಿಕೊಂಡಿದೆ.
ಶಾಸ್ತ್ರೀಯ ಎಂದು ಕನ್ನಡ ರೂಪ ಪಡೆದುಕೊಂಡಿರುವ ‘ಕ್ಲಾಸಿಕಲ್’ ಎಂದರೆ ಬಳಕೆಯಲ್ಲಿಲ್ಲದ ಪುರಾತನ ಭಾಷೆ ಎಂದರ್ಥ. ಕೆಲ ಭಾಷಾ ವಿಜ್ಞಾನಿಗಳು ಇದನ್ನು ಮೃತ ಭಾಷೆ ಎಂತಲೂ ಕರೆದಿದ್ದಾರೆ. ನಿಘಂಟುಗಳು ಅರ್ಥೈಸುವಪ್ರಕಾರ ‘ಕ್ಲಾಸಿಕ್’ ಅಂದರೆ ಅತ್ಯಂತ ಶ್ರೇಷ್ಠ & ಪುರಾತನ ಹಾಗೂ ‘ಕ್ಲಾಸಿಕಲ್ (ಅಭಿಜಾತ)’ ಎಂದರೆ ‘ಗ್ರೀಕ್’ & ‘ಲ್ಯಾಟಿನ್’ ಭಾಷೆ ಯ ಪ್ರಚೀನ ಸಾಹಿತ್ಯ ಕಲೆ ಸಂಸ್ಕೃತಿ ಎಂಬ ಅರ್ಥ ನೀಡುತ್ತದೆ. ಕೆಲವರು ಅಭಿಜಾತ ಭಾಷೆ , ಮಾರ್ಗಸಾಹಿತ್ಯ ಎಂದೂ ಕರೆಯುವುದುಂಟು. ಶಾಸ್ತ್ರೀಯ ಭಾಷೆ ಕರೆಸಿಕೊಳ್ಳಲು ವಿಶ್ವಸಂಸ್ಥೆಯ ಯುನೆಸ್ಕೋ ಮಾನ್ಯ ಮಾಡಿರುವ ಕೆಲವು ಅಂಶಗಳನ್ನು ಆ ಭಾಷೆ ಹೊಂದಿರಬೇಕು. ತದನಂತರ ಆಯಾ ದೇಶಗಳು ‘ಕ್ಲಾಸಿಕಲ್’ ಎಂದು ಸ್ಥಾನ ನೀಡುತ್ತದೆ.ಇದುವರೆಗೆ ಗ್ರೀಕ್, ಲ್ಯಾಟಿನ್, ಸಂಸ್ಕೃತ, ಪರ್ಶಿಯನ್, ಅರೇಬಿಕ್, ಹೀಬ್ರು & ಚೀನಿ ಭಾಷೆ ಗಳನ್ನು ಯುಸ್ಕೋ ‘ಕ್ಲಾಸಿಕಲ್’ ಎಂದು ಮಾನ್ಯ ಮಾಡಿದೆ.

• ಭಾಷೆ ಯ ದಾಖಲಾದ ಇತಿಹಾಸ 1000 ವರ್ಷಕ್ಕೂ ಪುರಾತನವಾಗಿರಬೇಕು. (ತಮಿಳರ ಒತ್ತಾಯಕ್ಕೆಮಣಿದು ಈಗ ಒಂದೂವರೆ ಸಾವಿರ ವರ್ಷಗಳೆಂದು ಬದಲಾಗಿಸಲಾಗಿದೆ)
• ಪುರಾತನ ಸಾಹಿತ್ಯ ಕಲೆ ಹಾಗೂ ತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದುಪರಿಗಣಿಸಲಾಗಿದೆ.
• ಸಾಹಿತ್ಯ ಪರಂಪರೆ ಸೋಪಜ್ಞವಾಗಿದ್ದು, ಬೇರೆ ಭಾಷೆ ಸಮುದಾಯದಿಂದ ಕಡ ಪಡೆಯದ್ದಾಗಿರಬಾರದು.
• ಕ್ಲಾಸಿಕಲ್ ಭಾಷೆ & ಅದರ ಸಾಹಿತ್ಯ ಪ್ರಸ್ತುತ ಭಾಷೆ ಸಾಹಿತ್ಯಕ್ಕಿಂತ ಭಿನ್ನವಾಗಿರಬೇಕು
• ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದು ಚಿರಂತನವಾಗಿ ಕಾಲಕಾಲಕ್ಕೆ ಪರಿವರ್ತನೆಯಾಗುತ್ತಿರುವ ಹಾಗೂದೊಡ್ಡ ಸಮುದಾಯ ಬಳಸುತ್ತಿರುವ ಭಾಷೆ ಯಾಗಿರಬೇಕು.ಶಾಸ್ತ್ರೀಯ ಭಾಷೆ ಯ ಕುರಿತಂತೆ ಕೆಲಸ ಮಾಡಿದ ಇಬ್ಬರು ಶ್ರೇಷ್ಠ ವಿದ್ವಾಂಸರಿಗೆ
• ಪ್ರತಿ ವರ್ಷ ಅಂತರಾಷ್ಟ್ರೀಯ ಪ್ರಶಸ್ತಿ.
• ಭಾಷೆ ಯ ಅಧ್ಯಯನಕ್ಕೆ ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆ
• ಕೇಂದ್ರಿಯ ವಿ.ವಿಗಳಲ್ಲಿ ಅಧ್ಯಯನ ಪೀಠಗಳ ಆರಂಭ
• ಕನ್ನಡ ಭಾಷೆ ಯನ್ನು ಕರ್ನಾಟಕ & ಹೊರ ರಾಜ್ಯಗಳಲ್ಲಿ ಅಭಿವೃದ್ಧಿಪಡಿಸುವುದು, ಪ್ರಚಾರ ಮಾಡುವುದು & ಸಂರಕ್ಷಿಸಲು ಕೇಂದ್ರದಿಂದ ಆರ್ಥಿಕ ನೆರವು
• ಭಾರತದ ದ್ವಿಪಕ್ಷಿಯ ಸಂಬಂದವನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಕುಡಾ ಕನ್ನಡದ ಪೀಠ ಸ್ಥಾಪನೆಗೆ ಅವಕಾಶ.ಈ ಮೇಲಿನ ಕಾರ್ಯಕ್ರಮಗಳ ಅನುಷ್ಠನಕ್ಕಾಗಿ ಕನ್ನಡ ಭಾಷಾ ಅಭಿವೃದ್ಧಿ ಮಂಡಳಿಯನ್ನು ಕೇಂದ್ರ ಸರಕಾರ ಸ್ಥಾಪಿಸಲಿದೆ. ಇದರಲ್ಲಿ ಕನ್ನಡ ಸಾಹಿತಿಗಳು & ಭಾಷಾ ತಜ್ಞರ ಜೊತೆ ಅಧಿಕಾರಿಗಳೂ ಕೂಡ ಸದಸ್ಯರಾಗಿರುತ್ತಾರೆ.ತಮಿಳು ಭಾಷೆ ಯ ಅಭಿವೃದ್ದಿಗಾಗಿ ರೂಪಿಸಲಾದ ಎಲ್ಲ ಯೋಜನೆಯನ್ನು ಯಥಾವತ್ತಾಗಿ ಕನ್ನಡ & ತೆಲುಗು ಭಾಷೆ ಗಳು ಅನುಸರಿಸಬೇಕಾಗಿಲ್ಲ. ಅವರವರ ಅವಶ್ಯಕತೆಗೆ ಅನುಗುಣವಾಗಿ ಇದರಲ್ಲಿ ಬದಲಾವಣೆ ಮಾಡಿಕೊಳ್ಳುವಸ್ವಾತಂತ್ರ್ಯವಿದೆ.

ಮೊಟ್ಟಮೊದಲು ಭಾಷಾ ವಿಷಯದಲ್ಲಿ ವಿಪರೀತ ಅಭಿಮಾನ & ಏಕ ಅಭಿಪ್ರಾಯವನ್ನು ಘೋಷಿಸಿಕೊಂಡು ಬರುತ್ತಿರುವ ತಮಿಳಿಗರು 19ನೆ ಶತಮಾನದಲ್ಲಿಯೇ ತಮ್ಮ ಭಾಷೆ ಗೆ ಕ್ಲಾಸಿಕಲ್ ಸ್ಥಾನಮಾನ ನೀಡಲೆಂದು ಎಂಬ ಒತ್ತಾಯವನ್ನು ಆರಂಭಿಸಿದರು. ಪರುತ್ತಿಮಲ್ ಕಲೈಂಗ್ನರ್ ಎಂಬ ತಮಿಳು ವಿದ್ವಾಂಸನಿಂದ ಆರಂಭವಾದ ಒತ್ತಡ ತಂತ್ರ2000ನೇ ಇಸ್ವಿಯಲ್ಲಿ ತೀವ್ರತರಗೊಂಡಿತು ಬಳಿಕ ಈ ವಿಷಯವನ್ನು ಅಲ್ಲಿನ ದ್ರಾವಿಡ ಪಕ್ಷಗಳು ಕೈಗೆತ್ತಿಕೊಂಡವು ಮುಂದೆಡಿಎಮ್ಕೆ ಪಾಲುದಾರ ಪಕ್ಷವಾಗಿ ಸರಕಾರದಲ್ಲಿ ಭಾಗಿಯಾಗಿ ತಮಿಳು ಭಾಷೆ ಗೆ 2004ನೇ ಅಕ್ಟೋಬರ್ನಲ್ಲಿ ಶಾಸ್ತ್ರೀಯಸ್ಥಾನ ಕೊಡಿಸಲು ಸಫಲವಾಯಿತು.
ಇದಾದ ಬಳಿಕವೇ ಕನ್ನಡಿಗರಿಗೆ ಕ್ಲಾಸಿಕಲ್ನ ಜ್ಞಾನೋದಯವಾಯಿತು. ತಮಿಳಿನಷ್ಟೇ ಪ್ರಾಚೀನವಾದ ಹಾಗೂ ಸಾಹಿತ್ಯ ದೃಷ್ಟಿಯಿಂದ ಶ್ರೀಮಂತವಾಗಿದ್ದ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಸಮರ್ಥನಿಯವಾದ ಪುರಾವೆಗಳನ್ನು ಮುಂದಿಟ್ಟುಕೊಂಡು ಸಾಹಿತಿಗಳು & ಹೋರಾಟಗಾರರು ಬೀದಿಗಳಿದರು. ಕನ್ನಡದ ಮನಸ್ಸುಗಳು ಹೀಗೆ ಜಾಗೃತವಾಗುತ್ತಿದ್ದಂತೆಯೇ, ತಮಿಳಿಗರು ಭಾಷಾ ರಾಜಕೀಯಕ್ಕೆ ಇಳಿದರು ತಮಿಳಿನೊಂದಿಗೆ ಬೇರೆ ಯಾವ ಭಾಷೆ ಗೂ ಆ ಸ್ಥಾನಮಾನ ನೀಡಬಾರದು ಎಂಬ ಶರತ್ತನ್ನು ಒಡ್ಡಿ ಒಂದು ವರ್ಷ ಕಾಲ ಬೇರೆ ಯಾವುದೇ ಭಾಷೆ ಗೆ ಕ್ಲಾಸಿಕಲ್ ಮಾನ್ಯತೆ ನೀಡಬಾರದು ಹಾಗೂ ಅದಕ್ಕಾಗಿ ಇರುವ ಮಾನದಂಡಗಳನ್ನು ಬದಲಿಸಬೇಕು ಎಂಬ ಖ್ಯಾತೆ ತೆಗೆದರು. ಇದಕ್ಕೆ ಮಣಿದ ಕೇಂದ್ರ ಸರಕಾರ ಒಂದು ವರ್ಷ ತಡವಾಗಿ ಸಂಸ್ಕೃತವನ್ನು ಕ್ಲಾಸಿಕಲ್ ಎಂದು ಘೋಷಿಸಿತು. (ಆ ವೇಳೆಗಾಗಲೆಯು ನೆಸ್ಕೋ ಸಂಸ್ಕೃತಕ್ಕೆ ಮಾನ್ಯತೆ ನೀಡಿತು).
ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಇರುವಾಗಲೇ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವಪ್ರಸ್ತಾಪವಿದ್ದರೂ, ಈ ಸಂಬಂಧದ ಅಧಿಸೂಚನೆ ಹೊರಬಿದ್ದಿದ್ದು 2004ರ ಅಕ್ಟೋಬರ್ 12 ರಂದು ಇದು ಬಯಲಾದದ್ದುಕಾಂಗ್ರೆಸ್ ನೇತೃತ್ವದ ಕನಿಷ್ಟ ಕಾರ್ಯಸೂಚಿಯಲ್ಲಿ ಇದರ ವಿಚಾರವಾಗಿ ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕ ನಂತರಕನ್ನಡಕ್ಕೂ ಆ ಮಾನ್ಯತೆ ದಕ್ಕಬೇಕೆಂದು ಮೊಟ್ಟ ಮೊದಲು ದನಿ ಎತ್ತಿದವರು ನಾಡೋಜ ದೇವಗೌ ಹಾಗೂ ಸಂಶೋಧಕಡಾ. ಎಂ. ಚಿದಾನಂದ ಮೂರ್ತಿಯವರು.
ಕನ್ನಡಕ್ಕೂ ಈ ಸ್ಥಾನಮಾನ ಸಿಗಲಿದೆ ಎನ್ನುವ ಭರವಸೆ ಕೇಂದ್ರ ಸರಕಾರದಲ್ಲಿರುವ ಕರ್ನಾಟಕದಪ್ರತಿನಿಧಿಗಳಿಂದ ವ್ಯಕ್ತವಾಗುತ್ತಾ ಬಂತು ಈ ಹಾದಿಗೆ ಹೋರಾಟದ ಸ್ವರೂಪ ಬೇಕು ಎಂದು ದೇಜಗೌ ಹೇಳಿದರುಅಲ್ಲದೇ ಐದು ಬಾರಿ ಉಪವಾಸ ಸತ್ಯಾU್ರಹ À ಮಾಡಿದರು ಹೋರಾಟಕ್ಕೆ ಹಲವು ದಾರಿ ಎನ್ನುವಂತೆ ಕರ್ನಾಟಕ ರಕ್ಷಣಾವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಚಳವಳಿ ವಾಟಾಳ ಪಕ್ಷ ಸಹಿತ ನಾಡಿನ ಹಲವಾರು ಸಂಘಟನೆಗಳು ಜೊತೆಗೂಡಿದವು. ಜೊತೆಗೆ ರಾಜ್ಯ ಸರಕಾರವೂ ದನಿ ಗೂಡಿಸಿತು. ಧರ್ಮಸಿಂಗ್ ಬಳಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರದೊಂದಿಗೆ ಮಾತುಕತೆ ನಡೆಸಿದರು. ರಾಜ್ಯದ ಸಂಸತ್ ಸದಸ್ಯರೂ ಚಳವಳಿಗೆ ಧುಮುಕಿದರು. ಮೂರು ವರ್ಷದ ಬಳಿಕ 2008 ಜುಲೈನಲ್ಲಿ ಸಂಸತ್ತಿನ ಮುಂದೆ ಧ್ವನಿ ಎತ್ತಿದರು.

• 2004 ಅಕ್ಟೋಬರ್ 12 ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ಘೋಷಣೆ
• ಕನ್ನಡ ಸಾಹಿತಿಗಳಿಂದಲೂ ಬೇಡಿಕೆ ಮಂಡನೆ
• 2005ರ ಆರಂಭದಲ್ಲಿ ಹಂಪಿ ವಿವಿ ಕುಲಪತಿ ಡಾ. ಬಿ.ವಿ ವಿವೇಕ ಗೈ ಡಾ. ಕೆ.ವಿ ನಾರಾಯಣರವರು ವರದಿಸಿದ್ದಪಡಿಸಿ ಕೇಂದ್ರ ಸಚಿವ ರಾಜಶೇಖರನ್ಗೆ ಸಲ್ಲಿಕೆ.
• 2005 ಮೇ 27 ಡಾ.ಎಂ. ಚಿದಾನಂದ ಮೂರ್ತಿ, ಪ್ರೋ ಎಲ್.ಎಸ್. ಶೇಷಗಿರಿ ರಾವ್, ರಾಜಪುರೋಹಿತ,ಎನ್ಎಸ್ ತಾರಾನಾಥರನ್ನು ಒಳಗೊಂಡ ಸಮಿತಿಯಿಂದ ತಜ್ಞ ವರದಿ ಮತ್ತೆ ರಾಜಶೇಖರನ್ಗೆ ಸಲ್ಲಿಕೆ.
• 2005 ನವೆಂಬರ್ನಿಂದ ದೇಜಗೌ ಐದು ಬಾರಿ ನಿರಶನ
• 2007 ಡಿಸೆಂಬರ್ 4 ಮತ್ತು 5 ರಂದು ದಿಲ್ಲಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ.
• 2008 ಆಗಸ್ಟ್ 8 ರಂದು ಕೇಂದ್ರ ಸರಕಾರದ ಸೂಚನೆಯಂತೆ ಮೈಸೂರಿನ ಕೇಂದ್ರಿಯ ಭಾಷಾ ಸಂಸ್ಥಾನ(ಸಿಐಐಎಲ್)ನ ಸಮಿತಿಯಿಂದ ಕನ್ನಡಕ್ಕೆ ಶಾಸ್ರ್ತೀ ಯ ಸ್ಥಾನಮಾನ ನೀಡುವಂತೆ ವರದಿ ಸಲ್ಲಿಕೆ.
• 2008 ಜುಲೈನಲ್ಲಿ ರಾಜ್ಯದ ಎಲ್ಲಾ ಸಂಸದರಿಂದ ಸಂಸದ ಭವನದ ಎದುರಿಗೆ ಪ್ರತಿಭಟನೆ.

ದೇಜಗೌ ಕರೆಗೆ ಓಗೊಟ್ಟ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯ ಕ್ಷ ನಾರಾಯಣ ಗೌಡ ಹಾಗೂ ಪ್ರವೀಣ ಶೆಟ್ಟಿ ಬಳಗದಿಂದ ಪ್ರತ್ಯೇಕ ಹೋರಾಟ 2007 ನವೆಂಬರ್ 30 ಡಿಸೆಂಬರ್ 1 ರಂದು ಬೆಂಗಳೂರಿನಲ್ಲಿ ದಿನಾಂಕ 4 & 5 ರಂದು ದಿಲ್ಲಿಯಲ್ಲಿ ಪ್ರತಿಭಟನೆ ಜೊತೆಗೆ ರಾಜ್ಯದ ವಿವಿಧ ಮಠಾಧಿಪತಿಗಳೊಂದಿಗೆ ನಾರಾಯಣಗೌಡ ಅವರ ನೇತೃತ್ವದಲ್ಲಿ ಪ್ರಧಾನಿಗೆ ಅಹವಾಲು ಸಲ್ಲಿಕೆ ಕನ್ನಡ ಚಳವಳಿ ನಾಯಕ ವಾಟಾಳ ನಾಗರಾಜ ಅವರಿಂದ ರಾಜ್ಯದ ಹಲವೆಡೆ ಹರತಾಳ ನಡೆದಿತ್ತು.
ಕನ್ನಡ ಭಾಷೆ ತೆಲುಗು ಭಾಷೆ ಯಷ್ಟೇ ಪ್ರಾಚೀನವಾಗಿದೆ. 2000 ವರ್ಷಗಳ ಇತಿಹಾಸವಿರುವ ಬಗ್ಗೆಸಾಕ್ಷ್ಯಾಧಾರಗಳಿವೆ. ಕನ್ನಡದಲ್ಲಿ ಲಕ್ಷಣ ಗ್ರಂಥಗಳು ವಿಫುಲವಾಗಿ ಬಂದಿವೆ. ಇಂಗ್ಲೀಷ್ ಗಿಂತಲೂ ಹಳೆಯ ಭಾಷೆ ಕನ್ನಡವಾಗಿದ್ದು ಇಂಗ್ಲೀಷ್ನ ಪ್ರಥಮ ಗ್ರಂಥ ಬಸರನ್ ಕಾಂಟರ್ ಬೆರ್ರಿ ಟೇಲ್ಗಿಂತಲೂ ಕನ್ನಡದ ಪ್ರಥಮ ಗ್ರಂಥ ವಡ್ಡಾರಾಧನೆ 700 ವರ್ಷಗಳನ್ನು ಹಳೆಯದಾಗಿದೆ. ದಕ್ಷಿಣ ಭಾರತದ ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿಯೇ ಕನ್ನಡ ಪ್ರಾಚೀನ ನವೀನ. ಅದಕ್ಕೆ 1868ರ ಇಂಗ್ಲೀಷ್ ಸರಕಾರದ ದಾಖಲೆಗಳು ‘ಕ್ಲಾಸಿಕಲ್ ಲ್ಯಾಂಗ್ವೇಜ್’ ಎಂದು ಕರೆದು ದಾಖಲಿಸಿ ಅಭಿಜಾತ ಎಂದಿದ್ದಾರೆ. ಮೂರನೇ ಶತಮಾನಕ್ಕೆ ಮುಂಚೆಯೇ ಅಂದಿನ ದಾಖಲೆಗಳೆನಿಸಿದ ತಮಿಳುಶಾಸನಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವ ಲಭ್ಯವಿದೆ. ಇದಲ್ಲದೇ ಕನ್ನಡದ ಮೊತ್ತ ಮೊದಲ ಶಾಸನ ಹಲ್ಮಿಡಿ ಶಾಸನ ಎಂದು ಗುರುತಿಸಲಾಗಿದೆ.
ಮಹಾಕವಿಗಳಾದ ಕಾಳಿದಾಸ, ಪಾಣಿನಿ ಮಹಾಕಾವ್ಯಗಳಾದ ಇಲಿಯಡ್, ರಾಮಾಯಣ, ಶಹನಾಮಗಳು ಎಷ್ಟುಪುರಾತನವೋ ಕನ್ನಡವೋ ಅಷ್ಟೇ ಪುರಾತನವೋ ಕನ್ನಡವೋ ಅಷ್ಟೇ ಪುರಾತನದ್ದಾಗಿದೆ. ಸಂಸ್ಕೃತ ಪ್ರಾಕೃತ ಭಾಷೆ ಗಳನಂತರ ಕನ್ನಡಕ್ಕೆ ಅನಂತರ ತಮಿಳು ಭಾಷೆ ಗೆ ಸ್ಥಾನವಿರುವುದನ್ನು ಕೇಂದ್ರ ಸರ್ಕಾರದ ಪ್ರಕಟಣೆಗಳಲ್ಲಿ ನಾವು ನೋಡಬಹುದು.

• ಹರಪ್ಪ ಮೊಹೆಂಜೊದಾರೋ ನಾಗರಿಕತೆಯಲ್ಲಿ ಕನ್ನಡ ನಾಡಿನ ಸಂಸ್ಕೃತಿ ಹಾಸುಹೊಕ್ಕಾಗಿತ್ತೆಂದು 104ವರ್ಷಗಳ ಹಿಂದೆಯೇ ಪ್ರಾಚ್ಯ ಸಂಶೊಧಕರ ವಿದ್ವಾಂಸ ರಹದಾಸ್ ಗುರುತಿಸಿದ್ದಾರೆ.
• ಎರಡನೇ ಶತಮಾನಗಳಲ್ಲಿಯ ಗ್ರೀಕ್ ಲಾವಣೆಗಳಲ್ಲಿ ಕನ್ನಡ ಪದಗಳು ಅಡಗಿರುವುದರಿಂದ ಆ ಭಾಷೆ ಆವಾಗಲೇ ಪೂರ್ಣ ಮಟ್ಟದ ಭಾಷೆ ಯಾಗಿತ್ತೆಂದು ಡಾ. ಹಲ್ಫ್ ಮತ್ತು ರಾಷ್ಟ್ರಕವಿ ಗೋವಿಂದ ಪೈಅಭಿಪ್ರಾಯಪಟ್ಟಿದ್ದಾರೆ.
• ಸಾಹಿತಿಕ ಸಾಕ್ಷಿ ಕದಂಬ ರಾಜ್ಯ ಕಾಕುತ್ಸ್ಯ ವರ್ಮನ ಹಲ್ಮಿಡಿ ಶಾಸನ ಕ್ರಿ.ಶ.450
• ಅಶೋಕನ ಶಿಲಾಶಾಸನ
• ಇಳಂಗೊಡಿಗಳ್ನ ಶಿಲಪ್ಪದಿಕಾರಮ್
• ಅವ್ವೈಯಾರ್ ಕೃತಿ
• ತಮಟಕಲ್ಲು ಶಾಸನ
• ಶ್ರವಣಬೆಳಗೊಳ ಶಾಸನ, ಬಿ.ಎಲ್.ರೈಸ್ ಸಂಪಾದಿತ ಭಟ್ಟಾಕಳಂಕನ ಶಬ್ಧಾನುಶಾಸನ.
• ರೆವರೆಂಡ್ ಹ್ಯಾಂಡ್ನ ಕನ್ನಡದ ಪ್ರಾಚೀನತೆಯ ಬಗ್ಗೆ ವಿವರವಾಗಿ ತಿಳಿಸುತ್ತದೆ.

ಪಾಣಿನಿಯ ಅಷ್ಟಾಧ್ಯಾಯಿ ಗ್ರೀಕ್ ಇತಿಹಾಸ ಟಾಲಮಿ ಫೆರಿಪ್ಲಸ್, ಗ್ರೀಕ್ ಕಾಮಿಡಿ ಆಕ್ಸಿರಿಕಸ್ ಪಾಪೈರಿ,ಪ್ರಾಕೃತದಲ್ಲಿರುವ ಮಳವಳ್ಳಿ ಶಾಸನ, ಹಾಲನ ಗಾಧಾಸಪ್ತಶತಿ, ಪಲ್ಲವರ ಹಡಗಲಿಯ ಶಾಸನ, ತಮಿಳರಶಿಲಪ್ಪದಿಕಾರಂನ ಕರುವಾಡಗರ್ ಇವೆಲ್ಲ ಕನ್ನಡ ಭಾಷೆ ಯ ‘ಅಭಿಜಾತ ’ ಸ್ಥಾನವನ್ನು ಸಾಬೀತು ಮಾಡಲು ಪೂರಕವಾದ ಮಹತ್ವದ ದಾಖಲೆಗಳು ಕನ್ನಡ ಕ್ರಿ.ಪೂ 6 ರಿಂದಲೇ ತನ್ನ ಅಸ್ತಿತ್ವವನ್ನು ಗುರುತಿಸಿದೆ. ಶ್ರೀ ಸಾಮಾನ್ಯರು ಕ್ರಿ.ಪೂ 3,4ರಲ್ಲಿಯೇ ಆಡುಭಾಷೆ ಯಾಗಿ ಕನ್ನಡ ಬಳಸುತ್ತಿದ್ದರು, ಸಂಸ್ಕೃತ ಮತ್ತು ಪ್ರಾಕೃತದಿಂದಲೇ ಕನ್ನಡ ಪ್ರಭಾವ ಹೊಂದಿದೆ.ರಾಜಕೀಯವಾಗಿ ಆಡಳಿತಾತ್ಮಕವಾಗಿ ಕನ್ನಡ 500 ವರ್ಷಗಳಿಂದ ಸ್ಥಾನ ಗಳಿಸಿಕೊಂಡಿದೆ. ಆಗ ಬನವಾಸಿ ಕದಂಬರುಬಾದಾಮಿ ಚಾಲುಕ್ಯರ ಆಡುಭಾಷೆ ಕನ್ನಡವೇ ಆಗಿತ್ತು ಎಂದು ಸಂಶೋಧಕ ಡಾ. ಹಂಪನಾ ದಾಖಲಿಸಿದ್ದಾರೆ ಇಷ್ಟೇಲ್ಲ ಮಾಹಿತಿ ಆಧಾರದ ಮೇಲೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಯಾವುದೇ ತೊಂದರೆ ಇರಲಿಲ್ಲ ಎಂದು ನಾವು ಅರ್ಥೈಸಿಕೊಳ್ಳಬಹುದು.
ಈ ಸ್ಥಾನಮಾನ ದೊರೆತಿದೆ ಎಂದು ಹರ್ಷಪಟ್ಟು ನಂತರ ಕೈಕಟ್ಟಿ ಕುಳಿತರೆ ಕೆಲಸ ಸಾಗದು ಎಂದು ಪ್ರಸ್ತುತಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ನೇತೃತ್ವದಲ್ಲಿ ಕನ್ನಡಅಭಿವೃದ್ಧಿ ಯೋಜನೆ ಕುರಿತು ಪ್ರಾಥಮಿಕ ಕಾರ್ಯ ಆರಂಭವಾಗಿದೆ. ಜೊತೆಯಲ್ಲಿ ಈ ಕೇಂದ್ರದಲ್ಲಿಯೇ ಕನ್ನಡದ ಒಂದುಕೇಂದ್ರ ಸ್ಥಾಪಿಸಿ, ಕನ್ನಡದ ಹಿರಿಯ ವಿದ್ವಾಂಸರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸಾಹಿತ್ಯ, ಭಾಷಾ , ವಿಜ್ಞಾನ,ಇತಿಹಾಸ, ವಾಸ್ತುಶಿಲ್ಪ ಶಾಸನ ಇವೇ ಮೊದಲಾದ ವಿವಿಧ ಕ್ಷೇತ್ರಗಳ ಗಣ್ಯರನ್ನೊಳಗೊಂಡ 10 ಜನರ ಸಲಹಾ ಸಮಿತಿರಚಿಸುವುದು ಹೀಗೆ ಅಭಿವೃದ್ಧಿ ಯೋಜನೆಗಳ ಕುರಿತು ಎಲ್ಲಾ ಸಮಸ್ತ ಕನ್ನಡಿಗರನ್ನೂ ಹುರಿದುಂಬಿಸುವುದು ಹಾಗೂ ವಿಚಾರ-ವಿನಿಮಯ ನಡೆಸಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.