ಸೌಭಾಗ್ಯ ಯೋಜನೆ(Sahaj Bijli Har Ghar Yojana)
ಇಲ್ಲಿಯ ತನಕ ವಿದ್ಯುತ್ ಸಂಪರ್ಕ ಪಡೆಯದ ದೇಶದ ಎಲ್ಲಾ ಬಡತನ ರೇಖೆಗಿಂತ ಕೆಳಗಿನ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಲು ಕೇಂದ್ರ ಸರ್ಕಾರ ಸೌಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ ಒಟ್ಟು 16320 ಕೋಟಿ ರೂಪಾಯಿ ಮೊತ್ತದ ಈ ಯೋಜನೆಯ ಮೂಲಕ 2018 ಡಿಸೆಂಬರ್ 31ರೊಳಗಾಗಿ ದೇಶದ ನಾಲ್ಕು ಕೋಟಿ ವಿದ್ಯುತ್ ಸಂಪರ್ಕವಿಲ್ಲದ ಗ್ರಾಮೀಣ ಮತ್ತು ನಗರ ಪ್ರದೇಶದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ ಬಿ.ಪಿ.ಎಲ್ ಕುಟುಂಬಗಳಿಗೆ ಉಚಿತವಾಗಿ ಸಂಪರ್ಕ ನೀಡುತ್ತಿದ್ದು ಎ.ಪಿ.ಎಲ್ ಕುಟುಂಬಗಳಿಗೆ ಕಡಿಮೆ ಬೆಲೆಗೆ 500 ರೂಪಾಯಿ ವೆಚ್ಚದಲ್ಲಿ ಸಂಪರ್ಕ ನೀಡಲಾಗುತ್ತಿದೆ. 500 ಶುಲ್ಕವನ್ನು 10 ಕಂತುಗಳಲ್ಲಿ ಪಾವತಿಸಬಹುದು. ಈ ಯೋಜನೆಯ ಒಟ್ಟು ವೆಚ್ಚದ ಶೇಕಡ 60 ರಷ್ಟು ಹಣವನ್ನು ಕೇಂದ್ರ ಸರ್ಕಾರ ಬರಿಸಿದರೆ ರಾಜ್ಯ ಸರ್ಕಾರವು 10%ರಷ್ಟು ಬರಿಸ ಬೇಕಾಗುತ್ತದೆ ಉಳಿದ ಹಣವನ್ನು ಸಾಲದ ರೂಪದಲ್ಲಿ ಸಂಗ್ರಹಿಸಲಾಗುತ್ತದೆ ದೇಶದಾದ್ಯಂತ ಈ ಯೋಜನೆಯ ನಿರ್ವಹಣೆಯ ಹೊಣೆಯನ್ನು ಗ್ರಾಮೀಣ ವಿದ್ಯುದ್ಧೀಕರಣ ನಿಗಮ ಲಿಮಿಟೆಡ್(REC) ವಹಿಸಲಾಗಿದೆ. ಫಲಾನುಭವಿಗಳನ್ನು 2011ರ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ಮಾಹಿತಿಯ ಆಧಾರದ ಮೇಲೆ ಗುರುತಿಸ ಲಾಗುತ್ತದೆ .
ಪ್ರಾರಂಭ:
25-09-2017