ರಾಜ್ಯ ನಿರ್ದೇಶಕ ತತ್ವಗಳು(Directive principles of State Policy)
 
* ರಾಜ್ಯ ನಿರ್ದೇಶಕ ತತ್ವದ ಉದ್ದೇಶ ಕಲ್ಯಾಣ ರಾಜ್ಯದ ಸ್ಥಾಪನೆ.
* ಆರ್ಥಿಕ, ಸಾಮಾಜಿಕ ಪ್ರಗತಿ, ಸುಖೀ ರಾಜ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಸಂವಿಧಾನವು ರಾಜ್ಯಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತದೆ.
* ಭಾರತ ಸಂವಿಧಾನದ 4ನೇ ಭಾಗದಲ್ಲಿ 36 ರಿಂದ 51 ನೇ ವಿಧಿಗಳು ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಪ್ರಸ್ತಾಪಿಸುತ್ತವೆ.
* 37ನೇ ವಿಧಿಯ ಪ್ರಕಾರ ರಾಜ್ಯ ನಿರ್ದೇಶಕ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವುದು ರಾಜ್ಯದ ಆದ್ಯ ಕರ್ತವ್ಯವಾಗಿರುತ್ತದೆ.
* ರಾಜ್ಯ ನಿರ್ದೇಶಕ ತತ್ವಗಳಿಗೆ ಕಾನೂನಿನ ರಕ್ಷಣೆ ಇರುವುದಿಲ್ಲ.
* ರಾಜ್ಯಗಳಿಗೆ ಮಾರ್ಗದರ್ಶನ ನೀಡುವ ನೀತಿ ನಿಯಮಗಳ ರಾಜ್ಯ ನಿರ್ದೇಶಕ ತತ್ವಗಳು
* ಡಾ. ಬಿ.ಆರ್. ಅಂಬೇಡ್ಕರರವರು ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಪ್ರಸ್ತಾಪಿಸುತ್ತ “ಸರ್ಕಾರವು ಹೇಗೆ ಕಾರ್ಯ ನಿರ್ವಹಿಸಬೇಕೆಂಬುದರ ದಿಕ್ಸೂಚಿಗಳಾಗಿವೆ” ಎಂದಿದ್ದಾರೆ.
ರಾಜ್ಯ ನಿರ್ದೇಶಕ ತತ್ವಗಳ ವರ್ಗೀಕರಣ
1. ಉದಾರವಾದಿ ತತ್ವಗಳು (ಸಾಮಾನ್ಯ ತತ್ವಗಳು)
* ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಏಕರೂಪ ನಾಗರೀಕ ಕಾಯ್ದೆಯನ್ನು ಜಾರಿಗೆ ತರುವುದು (44ನೇ ವಿಧಿ).
* 14 ವರ್ಷಗಳವರೆಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ (45 ನೇ ವಿಧಿ) 2002 ರಲ್ಲಿ ಸಂವಿಧಾನಕ್ಕೆ 86 ನೇ ತಿದ್ದುಪಡಿಯನ್ನು ತಂದು ಮಕ್ಕಳಿಗೆ ಆರು ವರ್ಷ ತುಂಬುವವರೆಗೆ ಅವರ ಪಾಲನೆ ಹಾಗೂ ಶಿಕ್ಷಣದ ಜವಾಬ್ದಾರಿ ರಾಜ್ಯಕ್ಕೆ ಸೇರಿದ್ದು.
* ಪರಿಸರ, ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವುದು (48- ಎ ವಿಧಿ)
* ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವೈಜ್ಞಾನಿಕ ಮಾದರಿಗೆ ಅವಕಾಶ (48ನೇ ವಿಧಿ)
* ರಾಷ್ಟ್ರೀಯ ಸ್ಮಾರಕಗಳು ಐತಿಹಾಸಿಕ ಸ್ಥಳಗಳು ಮತ್ತು ವಸ್ತುಗಳ ರಕ್ಷಣೆ ಮಾಡುವುದು (49ನೇ ವಿಧಿ)
* ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸುವುದು (50ನೇ ವಿಧಿ)
* ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು (51ನೇ ವಿಧಿ)
* ರಾಷ್ಟ್ರ- ರಾಜ್ಯಗಳ ನಡುವೆ ಸೌಹಾರ್ದಯುತವಾದ ಸಂಬಂಧವನ್ನು ಉಂಟು ಮಾಡುವುದು.
2. ಸಮಾಜವಾದಿ ತತ್ವಗಳು
*ಸಾಮಾಜಿಕ –ಆರ್ಥಿಕ- ರಾಜಕೀಯ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಅದರ ರಕ್ಷಣೆಗೆ ಆದ್ಯತೆ ನೀಡುವುದು (38ನೇ ವಿಧಿ)
* ಆರ್ಥಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ವಿವರಿಸುವುದು (39ನೇ ವಿಧಿ)
* ದುರ್ಬಲ ಮತ್ತು ಬಡವರಿಗೆ ಉಚಿತ ಕಾನೂನು ನೆರವು ನೀಡುವುದು. (39-ಎ)
* ಅಸಮರ್ಥರು, ದುರ್ಬಲರು, ರೋಗಿಗಳು, ನಿರುದ್ಯೋಗಿಗಳು, ವೃದ್ಧರಿಗೆ ಸಹಾಯಧನ ನೀಡುವುದು (41ನೇ ವಿಧಿ)
* ಜನರ ಜೀವನೋಪಾಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳು ದೊರಕುವಂತೆ ನೋಡಿಕೊಳ್ಳುವುದು (43ನೇ ವಿಧಿ)
* ಕಾರ್ಮಿಕರು ಕೈಗಾರಿಕಾ ನಿರ್ವಹನೆಯಲ್ಲಿ ಬಾಗವಹಿಸಲು ಅವಕಾಶ (43-ಎ ವಿಧಿ)
* ರಾಷ್ಟ್ರದ ಸಂಪತ್ತಿನ ಕೇಂದ್ರೀಕರಣವನ್ನು ತಪ್ಪಿಸುವುದು (43-ಎ ವಿಧಿ)
* ಮಕ್ಕಳ ಆರೋಗ್ಯ ಮತ್ತು ಕಾರ್ಮಿಕರ ಸಂರಕ್ಷಣೆಯ ಜೊತೆಗೆ ಶೋಷಣೆಯಿಂದ ತಪ್ಪಿಸುವುದು (43ನೇ ವಿಧಿ)
* ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಾನವೀಯ ಮೌಲ್ಯಗಳಿಗೆ ಆದ್ಯತೆ, ಹೆರಿಗೆ ಸೌಲಭ್ಯ ನೀಡುವುದು, ಜೊತೆಗೆ ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ, ಸಾಂಸ್ಕೃತಿಕ ಅವಕಾಶಗಳನ್ನು ದೊರಕಿಸುವುದು.
3. ಗಾಂಧಿ ತತ್ವಗಳು
* ಗ್ರಾಮ ಪಂಚಾಯಿತಿಗಳ ಸ್ಥಾಪನೆ (40ನೇ ವಿಧಿ)
* ಗ್ರಾಮೀಣ ಮತ್ತು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹದ ಜೊತೆಗೆ ಸಹಕಾರಿ ತತ್ವಕ್ಕೆ ಆದ್ಯತೆ (43 ನೇ ವಿಧಿ).
* ಕೃಷಿ ಮತ್ತು ಪಶುಸಂಗೋಪನೆಯಲ್ಲಿ ವೈಜ್ಞಾನಿಕ ಪದ್ದತಿಯನ್ನು ಅಳವಡಿಸಿಕೊಂಡು ಅಭಿವೃದ್ದಿಪಡಿಸುವುದು
* ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ ಮತ್ತು ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ, ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಿ ಶೋಷಣೆಯಿಂದ ಮುಕ್ತಗೊಳಿಸುವುದು (46ನೇ ವಿಧಿ)
* ಮಧ್ಯಪಾನ/ ಅಮಲು ತರಿಸುವ ಪದಾರ್ಥಗಳ ನಿಷೇಧ (47 ನೇ ವಿಧಿ)
* ಗೋಹತ್ಯೆ ನಿಷೇಧವನ್ನು ಜಾರಿಗೆ ತರುವುದು (48ನೇ ವಿಧಿ)