ಲಿಂಗಗಳು
 
ಲಿಂಗಗಳು (Lingagalu)
ಒಂದು ನಾಮಪ್ರಕೃತಿ’ ಯಾವ ಜಾತಿಗೆ ಸೇರಿದೆ ಎಂಬುದನ್ನು ಹೇಳುವುದೇ ಲಿಂಗ
ಲಿಂಗಗಳ ವಿಧಗಳು
ಲಿಂಗಗಳಲ್ಲಿ ಮುಖ್ಯವಾಗಿ ಮೂರು ವಿಧಗಳು
1> ಪುಲ್ಲಿಂಗ
2> ಸ್ತ್ರೀಲಿಂಗ
3> ನಪುಂಸಕಲಿಂಗ
1> ಪುಲ್ಲಿಂಗ
ಪುರುಷರನ್ನು ಕುರಿತು ಹೇಳುವ ಶಬ್ದಗಳೇ ಪುಲ್ಲಿಂಗ .ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬರ್ಥವು ಮನಸ್ಸಿಗೆ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು.
ಉದಾ:- ತಂದೆ, ಅರಸ, ಹುಡುಗ, ವಿಷ್ಣು, ಶಿವ, ರಾಜ, …..ಇತ್ಯಾದಿ
2> ಸ್ತ್ರೀಲಿಂಗ
ಸ್ತ್ರೀಯನ್ನು ಕುರಿತು ಹೇಳುವ ಶಬ್ದಗಳೇ ಸ್ತ್ರೀಲಿಂಗ.
ಯಾವ ಶಬ್ದ ಪ್ರಯೋಗ ಮಾಡಿದಾಗ ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥ ಹೊಳೆಯುವುದೋ ಅದೇ ಸ್ತ್ರೀಲಿಂಗ.
ಉದಾ:- ರಾಣಿ, ರಾಧೆ, ತಾಯಿ, ಅಕ್ಕ, ತಂಗಿ, ಚಲುವೆ, ಅರಸಿ, ಚಿಕ್ಕಮ್ಮ,……ಇತ್ಯಾದಿ
3> ನಪುಂಸಕ ಲಿಂಗ
ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು-ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದೇ ನಪುಂಸಕ ಲಿಂಗ ಎನಿಸುವುದು.
ಪುಲ್ಲಿಂಗವೂ ಅಲ್ಲದ, ಸ್ತ್ರೀಲಿಂಗವೂ ಅಲ್ಲದ ಲಿಂಗಗಳು ನಪುಂಸಕ ಲಿಂಗ
ಉದಾ:- ಮನೆ, ನೆಲ, ಬೆಂಕಿ, ಹೊಲ, ಗದ್ದೆ, ತೋಟ, ಮರ, ಆಕಾಶ, ಬಂಗಾರ,…..ಇತ್ಯಾದಿ
ಲಿಂಗಗಳ ಅನ್ಯ/ಇತರೆ ಪ್ರಕಾರಗಳು
ಪುನ್ನಪುಂಸಕ ಲಿಂಗಗಳು
ಎಲ್ಲಾ ಗ್ರಹವಾಚಕ ಶಬ್ದಗಳನ್ನು ಪುಲ್ಲಿಂಗ, ಹಾಗೂ ನಪುಂಸಕ ಲಿಂಗದಂತೆಯೂ ಪ್ರಯೋಗದಲ್ಲಿ ಬಳಸುತ್ತೇವೆ. ಆದ್ದರಿಂದ ಇವನ್ನು ಪುನ್ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.
ಉದಾ:-ಸೂರ್ಯ ಚಂದ್ರ ಶನಿ ಮಂಗಳ……ಇತ್ಯಾದಿ
ಚಂದ್ರ ಮೂಡಿತು.-ನಪುಂಸಕ ಲಿಂಗ
ಚಂದ್ರ ಮೂಡಿದನು.-ಪುಲಿಂಗ
ಶನಿಯು ಕಾಡುತ್ತದ-ನಪುಂಸಕ ಲಿಂಗ
ಶನಿಯು ಕಾಡಿದನು-ಪುಲಿಂಗ
ಸೂರ್ಯ ಉದಯವಾಯಿತು- ನಪುಂಸಕ ಲಿಂಗ
ಸೂರ್ಯ ಉದಯವಾದನು-ಪುಲಿಂಗ
ಸ್ತ್ರೀ ನಪುಂಸಕ ಲಿಂಗಗಳು
ನಾಮಪದಗಳು ಸಂದರ್ಭಕ್ಕನುಗುಣವಾಗಿ ಸ್ತ್ರೀಲಿಂಗ ಹಾಗೂ ನಪುಂಸಕ ಲಿಂಗದಂತೆಯೂ ಬಳಸುತ್ತೇವೆ ಆದುದರಿಂದ ಇದಕ್ಕೆ ಸ್ತ್ರೀ ನಪುಂಸಕ ಲಿಂಗಗಳೆಂದು ಕರೆಯುತ್ತೇವೆ.
ಉದಾ:-
ದೇವತೆ, ಲಕ್ಷ್ಮೀ, - ಸ್ತ್ರೀಲಿಂಗ
ಸರಸ್ವತಿ ದೇವತೆ, ಒಲಿಯಿತು - ನಪುಂಸಕ ಲಿಂಗ
ಲಿಂಗದೇವತೆ ಒಲಿದಳು - ಸ್ತ್ರೀಲಿಂಗ
ಸರಸ್ವತಿ, ಕೃಪೆ ಮಾಡಿತು - ನಪುಂಸಕ ಲಿಂಗ
ಸರಸ್ವತಿ, ಕೃಪ ಮಾಡಿದಳು - ಸ್ತ್ರೀಲಿಂಗ
ಹುಡುಗಿ, ಓಡುತ್ತದೆ - ನಪುಂಸಕ ಲಿಂಗ
ಹುಡುಗಿ ಓಡುವಳು -ಸ್ತ್ರೀಲಿಂಗ
ನಿತ್ಯ ನಪುಂಸಕ ಲಿಂಗಗಳು
ಕೆಲವಾರು ಶಬ್ದಗಳು ಯಾವಾಗಲೂ ನಪುಂಸಕ ಲಿಂಗದಲ್ಲಿಯೇ ಪ್ರಯೋಗಿಸಲ್ಪಡುತ್ತವೆ. ಇವನ್ನು ನಿತ್ಯ ನಪುಂಸಕ ಲಿಂಗಗಳೆಂದು ಕರೆಯುತ್ತಾರೆ.
ಉದಾ: ಶಿಶು, ಮಗು, ಕೂಸು, ದಂಡು, ಜನ
ಶಿಶು = ಜನಿಸಿತು
ಕೂಸು = ಮಲಗಿಸು
ಮಗು = ಅಳುತ್ತದೆ
ಜನ = ಸೇರಿದೆ
ದಂಡು = ಬಂತು
ವಾಚ್ಯ ಲಿಂಗಗಳು
ಸರ್ವನಾಮ, ಗುಣವಾಚಕ ಶಬ್ದಗಳು ಮೂರು ಲಿಂಗಗಳಲ್ಲೂ ಪ್ರಯೋಗವಾಗುತ್ತವೆ.
ಆದುದರಿಂದ ಅವನ್ನು ವಾಚ್ಯ ಲಿಂಗಗಳು ಎಂದು ಕರೆಯುತ್ತಾರೆ.
ಉದಾ: ನಾನು ನೀನು, ತಾನು, ಒಳ್ಳೆಯ, ಕೆಟ್ಟ , ಎಲ್ಲಾ….. ಇತ್ಯಾದಿ ನೀನು ಗಂಡಸು — ಪು
ಕೆಟ್ಟ ಹುಡುಗಿ——ಸ್ತ್ರೀಲಿಂಗ
ಕೆಟ್ಟ ನಾಯಿ—— ನಪುಂಸಕ ಲಿಂಗ
ನಾನು ದೊಡ್ಡವನು——ಪುಲಿಂಗ
ನಾನು ದೊಡ್ಡವಳು—–ಸ್ತ್ರೀಲಿಂಗ
ನನ್ನದು ದೊಡ್ಡದು——ನಪುಂಸಕ ಲಿಂಗ
ಲಿಂಗಗಳ ಪ್ರಯೋಗ