ಅಂತರ್ಜಾಲ (Internet)

 

• ಅಂತರ್ಜಾಲ (Internet) ಎನ್ನುವುದು ಕಂಪ್ಯೂಟರ್ ನೆಟ್ವರ್ಕ್ಗಳ (ಜಾಲಬಂಧಗಳ) ಒಂದು ನೆಟ್ವರ್ಕ್ ಆಗಿದೆ. ಇದು ವಿಶ್ವವ್ಯಾಪಕವಾಗಿದ್ದು ಮಿಲಿಯನ್ಗಟ್ಟಲೆ ಸಂಖ್ಯೆಯ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಂಪ್ಯೂಟರ್ ನೆಟ್ವರ್ಕ್ಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುತ್ತದೆ.
• ಇಂಟರನೇಟ್ ಎಂದರೆ ಇಂಟರನ್ಯಾಷನಲ್ ನೆಟವರ್ಕ ಎಂದರ್ಥ. ಇದೊಂದು ಜಾಗತಿಕ ಮಟ್ಟದ ಜಾಲವಾಗಿದ್ದು ಗಡಿ ರಹಿತ ಸಂಪರ್ಕ ತಂತ್ರಜ್ಞಾನವಾಗಿದೆ.
• ಭಾರತದಲ್ಲಿ ವಿ.ಎಸ್.ಎನ್.ಎಲ್. ಸಂಸ್ಥೆ ಪ್ರಥಮ ಬಾರಿಗೆ ಅಂತರಜಾಲ ಸಂಪರ್ಕ ಒದಗಿಸಿತು.
• TCP/IP (Transfer control protocol/Internet protocol ) ನಿಯಮಾವಳಿಯು ಪ್ರಮುಖವಾಗಿ ಬಳಸಲಾಗುತ್ತದೆ.
• ಯು. ಆರ್. ಎಲ್. ಯುನಿಫಾರ್ಮ ರಿಸೋರ್ಸ ಲೋಕೇಟರ್
• ಮಾಹಿತಿ ಹುಡುಕಲು ಬ್ರೌಜರ್ ಬಳಸಲಾಗುತ್ತದೆ.

ಅಂತರ್ಜಾಲ ಜಾಲಗಳು


1. LAN (local Area Netework)
• ಇದೊಂದು ಸ್ಥಳೀಯ ಜಾಲವಾಗಿದ್ದು ಒಂದು ಕಟ್ಟಡ ಅಥವಾ ನಿರ್ದಿಷ್ಟ ಕ್ಷೇತ್ರದಲ್ಲಿ ಬಳಸಲಾಗುತ್ತದೆ.
2. WAN (Wide area network)
• ಇದಕ್ಕೆ ಯವುದೇ ಪ್ರತಿಭಂದ ವಿರುವುದಿಲ್ಲ. ಹೀಗಾಗಿ ಭೌಗೋಳಿಕವಾಗಿ ಯಾವುದೇ ಸ್ಥಳಗಳನ್ನು ಸಂಪರ್ಕಿಸಬಹುದು.

ಉಪಯೋಗಗಳು


• ಹೆಚ್ಚಾಗಿ, ಅಂತರ್ಜಾಲಗಳನ್ನು ಸಾಧನೋಪಕರಣ ಹಾಗು ಅಳವಡಿಕೆಗಳನ್ನು ವಿತರಿಸಲು ಬಳಸಲಾಗುತ್ತದೆ. ಉದಾಹರಣೆಗೆ: ಸಹಯೋಗ(ಗುಂಪುಗಳಲ್ಲಿ ಹಾಗು ದೂರವಾಣಿ ಮೂಲಕ ಸಮಾಲೋಚನೆ ಮಾಡುವವರಿಗೆ ಅನುಕೂಲ ಒದಗಿಸುವುದು) ಅಥವಾ ಅತ್ಯಾಧುನಿಕ ಕಾರ್ಪೋರೇಟ್ ನಿರ್ದೇಶಿಕೆಗಳು, ಮಾರಾಟಗಾರ ಹಾಗು ಗ್ರಾಹಕ ಸಂಬಂಧಿತ ನಿರ್ವಹಣಾ ಸಾಧನಗಳು, ಯೋಜನಾ ನಿರ್ವಹಣೆ ಮುಂತಾದವುಗಳನ್ನು ಉತ್ಪಾದಕತೆ ಹೆಚ್ಚಿಸಲು ಬಳಸಲಾಗುತ್ತದೆ.
• ಅಂತರ್ಜಾಲಗಳನ್ನು ಕಾರ್ಪೋರೇಟ್ ಕಾರ್ಯ-ಚಟುವಟಿಕೆಯ ಸಂಸ್ಕೃತಿ-ಬದಲಾವಣಾ ವೇದಿಕೆಗಳಾಗಿಯೂ ಸಹ ಬಳಸಲಾಗುತ್ತದೆ. ಉದಾಹರಣೆಗೆ, ಅಂತರ್ಜಾಲ ಚರ್ಚಾವೇದಿಕೆಯನ್ನು ಬಳಸಿಕೊಂಡು ದೊಡ್ಡ ಸಂಖ್ಯೆಯ ನೌಕರವರ್ಗವು ಪ್ರಮುಖ ವಿಷಯಗಳನ್ನು ಚರ್ಚಿಸಿದರೆ; ಇದು ನಿರ್ವಹಣೆ, ಉತ್ಪಾದಕತೆ, ಗುಣಮಟ್ಟ ಹಾಗು ಇತರ ಕಾರ್ಪೋರೇಟ್ ವಿವಾದ-ವಿಷಯಗಳಿಗೆ ಸಂಬಂಧಿಸಿದ ಹೊಸ ಯೋಜನೆಗಳಿಗೆ ದಾರಿ ಮಾಡಿಕೊಡಬಹುದು.
• ದೊಡ್ಡ ಅಂತರ್ಜಾಲಗಳಲ್ಲಿ, ವೆಬ್ಸೈಟ್ ಸೇವಾ ಬಳಕೆಯು ಸಾಮಾನ್ಯವಾಗಿ ಸಾರ್ವಜನಿಕ ವೆಬ್ಸೈಟ್ ಸೇವಾ ಬಳಕೆಗೆ ಸದೃಶವಾಗಿರುತ್ತದೆ. ಅಲ್ಲದೇ ಇದರ ಒಟ್ಟಾರೆ ಚಟುವಟಿಕೆಯನ್ನು ವೆಬ್ ಮೆಟ್ರಿಕ್ ಸಾಫ್ಟ್ ವೇರ್ ಮೂಲಕ ಪತ್ತೆ ಮಾಡಿ ಸೂಕ್ತವಾಗಿ ಅರ್ಥೈಸಬಹುದು. ಅಂತರ್ಜಾಲ ವೆಬ್ಸೈಟ್ ಪರಿಣಾಮಕಾರಿತ್ವವನ್ನು ಬಳಕೆದಾರ ಸಮೀಕ್ಷೆಗಳೂ ಸಹ ಉತ್ತಮಪಡಿಸುತ್ತರೆ.
• ದೊಡ್ಡ ಉದ್ದಿಮೆಗಳು, ತನ್ನ ಬಳಕೆದಾರರಿಗೆ ತನ್ನ ಅಂತರ್ಜಾಲದೊಳಗೆ ಫೈರ್ ವಾಲ್ ಸರ್ವರ್ ಗಳ ಮೂಲಕ ಸಾರ್ವಜನಿಕ ಅಂತರ್ಜಾಲಕ್ಕೆ ಪ್ರವೇಶ ಕಲ್ಪಿಸಿಕೊಡುತ್ತವೆ. ಇವುಗಳಿಗೆ ಸಂಪೂರ್ಣ ಭದ್ರತೆಯೊಂದಿಗೆ ಬರುವ ಹಾಗು ಹೋಗುವ ಸಂದೇಶಗಳನ್ನು ಹಿಡಿದಿಟ್ಟು ಪ್ರದರ್ಶಿಸುವ ಸಾಮರ್ಥ್ಯವಿರುತ್ತದೆ. ಅಂತರ್ಜಾಲದ ಒಂದು ಭಾಗದ ಮಾಹಿತಿಯನ್ನು ಗ್ರಾಹಕರಿಗೆ ಹಾಗು ವ್ಯಾಪಾರಕ್ಕೆ ಸಂಬಂಧಿಸದ ಇತರರಿಗೆ ಲಭ್ಯವಾಗುವಂತೆ ಮಾಡಿದರು.

ಇಂಟರನೆಟ್ ಅಫರಾಧಗಳು


• ಅನಧಿಕೃತವಾಗಿ ಕಂಪ್ಯೂಟರ್ ಪೃವೇಶಿಸಿ ಮಾಹಿತಿ ಪಡೆಯುವುದು.
• ಅಂತರ್ಜಾಲ ಬೆಟ್ಟಿಂಗ್
• ಹಾಕಿಂಗ್
• ವೈರಸ ನುಸುಳುವಿಕೆ
• ಭದ್ರತೆ ಸಂಭಂಧಿತ ಆಪರಾಧ
• ಹಣಕಾಸಿನ ಆಪರಾಧಗಳು
• ಅಂತರ್ಜಾಲ ಗ್ಯಾಂಬ್ಲಿಂಗ್
• ನಿಷೇಧಿತ ವಸ್ತುಗಳ ಮಾರಾಟ ಇತ್ಯಾದಿ.
• ಸೈಬರ ಅಪರಾಧ ನಿಯಂತ್ರಣಕ್ಕಾಗಿ ದೇಶದಲ್ಲಿ ಅನೇಕ ಸೈಬರ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ದೇಶದ ಪ್ರಪ್ರಥಮ ಸೈಬರ್ ಪೊಲೀಸ್ ಸ್ಟೇಷನ್ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.