ವಿದ್ಯುತ್ವಾಹಕಗಳು ಮತ್ತು ನಿರೋಧಕಗಳು (Conductors and Insulators)

 

ವಿದ್ಯುತ್‍ವಾಹಕಗಳು


• ವಿದ್ಯುಚ್ಛಕ್ತಿ ಎನ್ನುವ ಪದವನ್ನು ಮೊಟ್ಟ ಮೊದಲ ಬಾರಿಗೆ ಬಳಸಿದ ವಿಜ್ಞಾನಿ ವಿಲಿಯಮ್ ಗಿಲ್ಬರ್ಟ್.
• ಯಾವ ವಸ್ತುಗಳು ತಮ್ಮ ಮೂಲಕ ವಿದ್ಯುತ್ ಕಣಗಳನ್ನು ಹರಿಯಲು ಬಿಡುತ್ತವೆಯೋ ಅಂತಹ ವಸ್ತುಗಳನ್ನು ವಿದ್ಯುತ್ ವಾಹಕಗಳು ಎನ್ನುವರು.
ಉದಾಹರಣೆ :
1) ಎಲ್ಲ ಲೋಹಗಳು
2) ಗ್ರ್ಯಾಫೈಟ್(ಅಲೋಹ)
3) ಅಯಾನೀಕ ಸಂಯುಕ್ತಗಳ ದ್ರಾವಣಗಳು
4) ದ್ರವಿಸಿದ ಅಯಾನೀಕ ಸಂಯುಕ್ತಗಳು ಇತ್ಯಾದಿ

ನಿರೋಧಕಗಳು


• ಯಾವ ವಸ್ತುಗಳು ತಮ್ಮ ಮೂಲಕ ವಿದ್ಯುತ್ತನ್ನು ಹರಿಯಲು ಬಿಡುವುದಿಲವೋ, ಅಂತಹ ವಸ್ತುಗಳನ್ನು ವಿದ್ಯುತ್ ನಿರೋಧಕಗಳು ಎನ್ನುವರು.
• ಉದಾಹರಣೆ : ರಬ್ಬರ್, ಹತ್ತಿ, ಗಾಜು, ಕಾಗದ ಇತ್ಯಾದಿ

ಅರೆವಾಹಕಗಳು


• ಕೆಲವು ವಸ್ತುಗಳ ವಾಹಕತೆಯು ವಿದ್ಯುತ್ ವಾಹಕ ಮತ್ತು ನಿರೋಧಕಗಳ ನಡುವೆ ಇರುತ್ತದೆ. ಇಂತಹ ವಸ್ತುಗಳನ್ನು ಅರೆವಾಹಕಗಳು ಎನ್ನುವರು.
• ಉದಾಹರಣೆಗೆ ಜರ್ಮೇನಿಯಮ್ ಮತ್ತು ಸಿಲಿಕಾನ್ಗಳು