ಓಜೂನ್ ವಲಯದ ನಾಶ
 
• ಯಾವುದೇ ಜೀವಿಯು ವಾಯುವಿಲ್ಲದೆ ಜೀವಿಸಲಾರದು. ಭೂಮಿ ಮತ್ತು ನೀರಿನಂತೆ ವಾಯು ಅತಿಮುಖ್ಯದಾಗಿದೆ.
• ಪೃಥ್ವಿಯ ಮೂರು ಪರಿಮಂಡಲಗಳಾವವುವೆಂದರೆ
1. ಶಿಲಾಮಂಡಲ -ಭೂಭಾಗ-60 ಕಿ.ಮೀ ದಪ್ಪವಾಗಿದೆ. ಶಿಲೆಗಳಿಂದ ಕೂಡಿದೆ.
2. ಜಲಮಂಡಲ ಜಲ ಭಾಗ-ಸಾಗರ, ಸಮುದ್ರ, ನದಿ, ಜಲರಾಶಿಗಳಿಂದ ಕೂಡಿದೆ.
3. ವಾಯುಮಂಡಲ-ವಾಯುಭಾಗ-1600 ಕಿ.ಮೀ ಗಳಿಗಿಂತಲೂ ಹೆಚ್ಚು.
• ವಾಯುಮಂಡಲ ವಿವಿಧ ಸ್ತರಗಳೆಂದರೆ
• ವಾಯುಮಂಡಲದಲ್ಲಿ ನಾಲ್ಕು ಪದರುಗಳಿವೆ. ಎಲ್ಲಕ್ಕಿಂತಲೂ ಕೆಳಗಿನ ಪದರನ್ನು ಪರಿವರ್ತನ ಮಂಡಲ ಎಂದು ಕರೆಯುತ್ತೇವೆ. ಈ ಪದರಿನಲ್ಲಿ ಪ್ರತಿ 165 ಮೀ. ಗಳವರೆಗೆ ಪ್ರತಿ 10ಅ ಉಷ್ಣಾಂಶ ಕಡಿಮೆಯಾಗುತ್ತದೆ.
• ಕ್ಷೋಭವಿರಾಮ ಸೀಮೆ ಸಮಭಾಜಕ ವೃತ್ತದ ಮೇಲೆ 18-20 ಕಿ.ಮೀ. ಎತ್ತರವಾಗಿರುತ್ತದೆ. ಇದರ ಮೇಲೆ ಸ್ತರಮಂಡಲ ಇದೆ. ಇಲ್ಲಿ ಉಷ್ಣಾಂಶ, ಎತ್ತರದ ಜೊತೆಗೆ ನಿಧಾನವಾಗಿ ಹೆಚ್ಚಾಗುತ್ತದೆ. ಏಕೆಂದರೆ ಇದು ನೀಲಲೋಹಿತಾತೀತ ಕಿರಣಗಳನ್ನು ಹೀರಿಕೊಳ್ಳುತ್ತದೆ. ಇಲ್ಲಿ ವಾಯು ಬಹಳ ಶುಷ್ಕವಾಗಿರುತ್ತದೆ ಮತ್ತು ಕ್ಷೋಭಮಂಡಲದಂತೆ ಮೋಡಗಳು ಮತ್ತು ಆರೋಹಿ ಪ್ರವಾಹಗಳು ಇಲ್ಲಿ ಕಂಡುಬರುವುದಿಲ್ಲ. ಕ್ಷೋಭವಿರಾಮ ರೇಖೆಯು ಕ್ಷೋಭಮಂಡಲವನ್ನು ಸ್ತರಮಂಡಲದಿಂದ ಬೇರ್ಪಡಿಸುತ್ತದೆ.
• ಸ್ತರಮಂಡಲದಲ್ಲಿ ಓಜೋನ್ ಅನಿಲದಿಂದ ಕೂಡಿದ ಒಂದು ಉಪಸ್ತರವಿದೆ. ಇದನ್ನು ಓಜೋನ್ ಮಂಡಲವೆಂದು ಕರೆಯುತ್ತಾರೆ. ಇದು ಭೂ ಮೇಲ್ಮೈಯಿಂದ 20-30 ಕಿ.ಮೀ ಎತ್ತರದಲ್ಲಿ ಸರ್ವಾದಿಕವಾಗಿದೆ ಹಾಗೂ ಮೇಲ್ಗಡೆ 50 ಕಿ.ಮೀ ವರೆಗೆ ವಿರಳವಾಗಿ ಹರಡಿದೆ.
• ಓಜೋನ್ ಅನಿಲದ ಸಾಂದ್ರತೆ ಸಮಭಾಜಕವೃತ್ತ ಪ್ರದೇಶದ ಮೇಲ್ಗಡೆ ಕನಿಷ್ಠ ಹಾಗೂ ಧ್ರುವ ಪ್ರದೇಶಗಳ ಮೇಲ್ಗಡೆ ಗರಿಷ್ಠವಾಗಿರುತ್ತದೆ. ಈ ಅನಿಲಪದರವು ಮಾರಕಕಿರಣಗಳನ್ನು ತಡೆಹಿಡಿಯಲ್ಪಡುತ್ತದೆ. ಈ ವಲಯವಿಲ್ಲದಿದ್ದರೆ ಈ ಪೃಥ್ವಿಯ ಮೇಲೆ ಯಾವುದೇ ತರಹದ ಜೀವಮಂಡಲವನ್ನು ನಾವು ಕಾಣಲಾಗುತ್ತಿರಲಿಲ್ಲ.
• ಮೊಟ್ಟಮೊದಲ ಆಮ್ಲಜಕವು ಸಮುದ್ರದಲ್ಲಿ ಉತ್ಪನ್ನವಾಗಿ ವಾಯುಮಂಡಲದಲ್ಲಿ ಸೇರಿಕೊಂಡಿತು ಹಾಗೂ ರಾಸಾಯನಿಕ ಪ್ರಕ್ರಿಯೆ ಮುಖಾಂತರ ಓಜೋನ್ ಅನಿಲವಾಗಿ ಪರಿವರ್ತನೆಗೊಂಡಿತು.
• ಓಜೋನ್ ಪದರವು ಸಂಪೂರ್ಣವಾಗಿ ನೇರಳಾತೀತ ಕಿರಣಗಳನ್ನು ಹೀರಿಕೊಳ್ಳುವಷ್ಟು ಪ್ರಬಲವಾಯಿತು. ಮತ್ತು ಇದರಿಂದ ಪೃಥ್ವಿಯ ಮೇಲೆ ಜೀವವಿಕಾಸಗೊಳ್ಳಲು ಆರಂಭವಾಯಿತು.
ಓಜೋನ್ ವಲಯದ ನಾಶಕ್ಕೆ ಕಾರಣಗಳು
• ಮನುಷ್ಯನು ತನ್ನ ಅವಶ್ಯಕತೆಗಳಿಗಿಂತ ಹೆಚ್ಚಿನ ಬಯಕೆಯನ್ನು ಬಯಸುತ್ತಾನೆ.
• ಅದಕ್ಕೋಸ್ಕರ ಅವನು ಮನೆಯಲ್ಲಿ ರೆಫ್ರಿಜರೇಟರ್ ಏರ್ಕಂಡೀಷನರ್, ಕಾಸ್ಮೊಟಿಕ್ಸ ಇತ್ಯಾದಿಗಳನ್ನು ಬಳಸುತ್ತಾನೆ.
• ಇದರಿಂದ ಕ್ಲೊರೊಫ್ಕೊರೊ ಕಾರ್ಬನ್ ಬಿಡುಗಡೆ ಆಗುತ್ತದೆ. ಇದು ವಾಯುಮಂಡಲದಲ್ಲಿ ಬಹಳ ದಿನಗಳವರೆಗೆ ಉಪಸ್ಥಿತವಿರುತ್ತದೆ. ಇದು ಸ್ತರಮಂಡಲವನ್ನು ತಲುಪಿದಾಗ ಓಜೋನ್ ಅನಿಲವನ್ನು ಆಮ್ಲಜನಕವಾಗಿ ಪರಿವರ್ತಿಸುತ್ತದೆ.
• 1992 ರ ವೇಳೆಗೆ ಓಜೋನ್ ಮಂಡಲವು ಆಕ್ರ್ಟಿಕ್ ಪ್ರದೇಶದ ಮೇಲೂ ತೆಳುವಾಗುವ ಗುರುತು ಸ್ಪಷ್ಟವಾಗಿ ಕಂಡುಬಂದಿತು.
• ಓಜೋನ್ ನಾಶಮಾಡುವ ಇತರೆ ಸಂಯುಕ್ತಗಳು ಹ್ಯಾಲೋನ್, ಮಿಥೈಲ್ ಮ್ರೊಮೈಡ್ ಮಿಥೈಲ್ ಕ್ಲೊರೊಫಾರ್ಮ, ಇಂಗಾಲದ ಟೆಟ್ರಾಕ್ಲೋರೈಡ್ ಮತ್ತು ನೈಟ್ರಸ್ ಆಕ್ಸೈಡ್ಗಳನ್ನು ಒಳಗೊಂಡಿದೆ. ಕ್ಲೋರೋಫ್ಲೋರೋ ಕಾರ್ಬನ್ಗಳು ಮತ್ತು ಕ್ಲೋರಿನ್ಯುಕ್ತ ಸಂಯುಕ್ತಗಳ ಕೆಳವಾಯುಮಂಡಲದಲ್ಲಿ ವಿಸರ್ಜನೆಯಾದ ನಂತರ ನಿಧಾನವಾಗಿ ಮೇಲೇರಿ ಸ್ತರಮಂಡಲದೊಳಗೆ ಸೇರುತ್ತದೆ. ಅಲ್ಲಿ ನೀಲಿ ಲೋಹಿತಾತೀತ ವಿಕಿರಣವು ಅವುಗಳನ್ನು ವಿಭಜಿಸುವುದರಿಂದ ಕ್ಲೋರಿನ್ ವಿಸರ್ಜಿಸುತ್ತದೆ. ಇದರಿಂದ ಓಜೋನ್ ಪದರವು ತೆಳುವಾಗುತ್ತದೆ.
ಓಜೋನ್ ಪದರಿನ ನಾಶದ ಪರಿಣಾಮಗಳು
1. ಮಾನವನ ಆರೋಗ್ಯದ ಮೇಲೆ ಪರಿಣಾಮ : ಓಜೋನ್ ಪದರು ಕ್ಷೀಣಿಸುವುದರಿಂದ ಮನುಷ್ಯನ ಚರ್ಮ, ಕಣ್ಣಿನ ಪೊರೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ.
2. ಜೈವಿಕ ಸಮುದಾಯಗಳ ಮೇಲೆ ಪರಿಣಾಮ : ಓಜೋನ್ ಪದರು ನಾಶಗೊಂಡು ಉಷ್ನಾಂಶ ಹೆಚ್ಚಾದಂತೆ ಅಲ್ಲಿ ನೆಲೆಸಿರುವ ಸಾವರಾರು ಪ್ರಾಣಿ ಪಕ್ಷಿಗಳು ಮರಣ ಹೊಂದುತ್ತವೆ.ಇದರಿಂದಾಗಿ ಪರಿಸರ ಅಸಮತೋಲನ ಉಂಟಾಗುತ್ತದೆ.
3. ವಾಯುಗುಣದ ಮೇಲೆ ಪರಿಣಾಮವನ್ನು ಬೀರುತ್ತದೆ : ಇದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚಲು, ಆಮ್ಲ ಮಳೆಯಾಗಲು ಕಾರಣವಾಗಿದೆ.