ಅಗ್ನಿ ಕ್ಷಿಪಣಿಗಳು (Agni missiles)

 

ಅಗ್ನಿ -1


●ಅಗ್ನಿ-1ಖಂಡಾಂತರ ಕ್ಷಿಪಣಿಯಾಗಿದ್ದು, ಅಗ್ನಿಕ್ಷಿಪಣಿಗಳ ಸರಣಿಯಲ್ಲಿ ಮೊದಲನೆಯದು.

●ಅಗ್ನಿ-1 ಎರಡು ಹಂತಗಳಲ್ಲಿ ಹಾರುತ್ತದೆ.

●ಇದು ಘನ ಇಂಧನವನ್ನು ಬಳಸುತ್ತದೆ.

●ಇದು 700 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

●ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ್ದು ಈಗಾಗಲೇ ಸೇನೆಯಲ್ಲಿ ಬಳಕೆಯಲ್ಲಿದೆ.

●ನಿಶ್ಚಿತ ಗುರಿಯನ್ನು ನಿಗದಿತ ಸಮಯದಲ್ಲಿ ತಲುಪುವ ಅಗ್ನಿ-1 ಕ್ಷಿಪಣಿ ಕ್ಷಣಮಾತ್ರದಲ್ಲಿ ಶತ್ರು ಸೈನಿಕರನ್ನು ಧ್ವಂಸಗೊಳಿಸುವ ಶಕ್ತಿ ಹೊಂದಿದೆ.

●ಅಗ್ನಿ ಸರಣಿಯ ಅಲ್ಪಾಂತರ ಗಾಮಿ ಕ್ಷಿಪಣಿಗಳ ಸಾಲಿಗೆ ಸೇರಿರುವ ಅಗ್ನಿ-1 ಕ್ಷಿಪಣಿ 700 ಕಿಮೀ ದೂರದ ನಿಖರ ಗುರಿಯನ್ನು ಕ್ರಮಿಸಬಲ್ಲದು.

☀ಅಗ್ನಿ -1 ಕ್ಷಿಪಣಿಯ ವೈಶಿಷ್ಟ್ಯಗಳು:
●ಉದ್ದ: 15 ಮೀಟರ್
●ತೂಕ: 12ಟನ್
●ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 700 ಕಿ.ಮೀ ದೂರದ ಗುರಿಯನ್ನು ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಖಂಡಾಂತರ ಸ್ವದೇಶಿ ನಿರ್ಮಿತ ಅಗ್ನಿ -1 ಕ್ಷಿಪಣಿಯನ್ನು 2002 ಜನವರಿ ನಲ್ಲಿ ಒರಿಸ್ಸಾ ಕರಾವಳಿಯ ಭದ್ರಕ್ ಜಿಲ್ಲೆಯ ಧಮ್ರಾದ ಬಂಗಾಳ ಕೊಲ್ಲಿಯಲ್ಲಿನ ವೀಲರ್ಸ್‌ ದ್ವೀಪದಲ್ಲಿರುವ ಸಮಗ್ರ ಪರೀಕ್ಷಾ ವಲಯದ (ಐಟಿಆರ್) ಉಡಾವಣೆ ಸಂಕಿರ್ಣ 4 ರಲ್ಲಿ ಸಂಚಾರಿ ಉಡಾವಣಾ ವಾಹಕದಿಂದ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಯಿತು.
●ಇದು ಒಂದು 1,000 ಅಥವಾ ಪರಮಾಣು ಶಸ್ತ್ರವನ್ನು ಸಾಗಿಸುವಾ ಸಾಮರ್ಥ್ಯವಿದ."

ಅಗ್ನಿ-2


●ಭಾರತದ ಸೈನಿಕ ಶಕ್ತಿ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡುವಲ್ಲಿ ಹಾಗೂ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲುವಲ್ಲಿ ಇಂಥ ಅಗ್ನಿ ಕ್ಷಿಪಣಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ

●ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಎರಡನೆಯದು

●ಖಂಡಾಂತರಕ್ಕಿಂತ ಕಡಿಮೆ ದೂರದ ಮಧ್ಯಮ ಶ್ರೇಣಿಯ ಸಿಡಿತಲೆಗಳನ್ನು ಹೊತ್ತೊಯ್ಯುವ ಅಗ್ನಿ-2 ಕ್ಷಿಪಣಿ ಈಗಾಗಲೇ ಸೇವೆಗೆ ನಿಯೋಜನೆಗೊಂಡಿದೆ

●ಇದು 2000-2500 ಕಿಮೀ ಹಾರುತ್ತದೆ

●ಇದು ಘನ ಇಂಧನವನ್ನು ಬಳಸುತ್ತದೆ

●ಎರಡು ಹಂತದ ಈ ಸುಸಜ್ಜಿತ ಕ್ಷಿಪಣಿ ರಾಕೆಟ್ ನೋದಕ ವ್ಯವಸ್ಥೆಯನ್ನು ಒಳಗೊಂಡಿದೆ

●ಅಡ್ವಾನ್ಸಡ್ ಸಿಸ್ಟಮ್ ಲ್ಯಾಬೋರೇಟರಿ ಕ್ಷಿಪಣಿ ಅಭಿವೃದ್ಧಿ ಪಡಿಸಿದ್ದು, ಹೈದರಾಬಾದ್ ನ ಭಾರತ್ ಡೈನಮಿಕ್ಸ್ ಲಿ ಸಂಯೋಜನೆ ಮಾಡಿದೆ

●ನೆಲದಿಂದ ನೆಲಕ್ಕೆ ಚಿಮ್ಮುವ ಅಗ್ನಿ-2 ಕ್ಷಿಪಣಿಯನ್ನು 9 ಆಗಸ್ಟ್ 2012 ರಲ್ಲಿ ಒಡಿಶಾ ಪರೀಕ್ಷಾ ನೆಲದ ವ್ಯಾಪ್ತಿಯಲ್ಲಿ ಟೆಸ್ಟ್ ಮಾಡಲಾಯಿತು

☀ಅಗ್ನಿ-2 ರ ವಿಶೇಷತೆಗಳು :

●ಉದ್ದ: 20 ಮೀಟರ್

●ತೂಕ: 18 ಟನ್

●ಇದರ ವ್ಯಾಸ : 1 ಮೀಟರ್

●ಹಾರಾಟ ಸಾಮರ್ಥ್ಯ : 2000-2500 ಕಿಮೀ ದೂರದ ಗುರಿ ತಲುಪಬಲ್ಲದು

●1000 ಕೆಜಿಯ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ

●ಸುಮಾರು 2 ಸಾವಿರ ಕಿಮೀ ದೂರದ ಗುರಿ ತಲುಪಬಲ್ಲ ಪರಮಾಣು ಸಾಮರ್ಥ್ಯದ, ಖಂಡಾಂತರ ಕ್ಷಿಪಣಿಯಾಗಿರುವ ಅಗ್ನಿ-2 ಕ್ಷಿಪಣಿಗೆ ಅತ್ಯಾಧುನಿಕ advanced high-accuracy navigation system ಅನ್ನು ಅಳವಡಿಸಲಾಗಿದ್ದು, ಕ್ಷಿಪಣಿಯ ನಿಖರ ಹಾದಿಯನ್ನು ಈ ವ್ಯವಸ್ಥೆಯ ಮೂಲಕವಾಗಿ ನಿಯಂತ್ರಿಸಬಹುದಾಗಿದೆ"

ಅಗ್ನಿ-3 ಕ್ಷಿಪಣಿ


●ನೆಲದಿಂದ ನೆಲಕ್ಕೆಚಿಮ್ಮುವ ಮೂರು ಸಾವಿರದಿಂದ ಐದು ಸಾವಿರ ಕಿಮೀ ವ್ಯಾಪ್ತಿಗೆ ಅಪ್ಪಳಿಸುವ ಪರಮಾಣು ಸಾಮರ್ಥ್ಯದ ಅಗ್ನಿ-3 ಖಂಡಾಂತರ ಕ್ಷಿಪಣಿಯು ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಮೂರನೆಯದು

●ಅಗ್ನಿ-3 ಎರಡು ಹಂತಗಳಲ್ಲಿ ಹಾರುತ್ತದೆ

●ಇದಕ್ಕೆ ಘನ ಇಂಧನವನ್ನು ಬಳಸಲಾಗುತ್ತದೆ

●ಅಗ್ನಿ-3ನ್ನು ಮೊದಲ ಬಾರಿಗೆ 2006ರ ಜು9ರಂದು ಪರೀಕ್ಷೆ ನಡೆಸಲಾಗಿತ್ತು ಆಗ ಅದು ನಿರೀಕ್ಷಿತ ಫಲ ನೀಡಿರಲಿಲ್ಲ 3,000 ಕಿಮೀ ವ್ಯಾಪ್ತಿಗೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದ್ದರೂ ಕಡಿಮೆ ವ್ಯಾಪ್ತಿಯಲ್ಲಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು

●ಅಗ್ನಿ-3 ಕ್ಷಿಪಣಿಯನ್ನು ಒರಿಸ್ಸಾದ ಭುವನೇಶ್ವರದಲ್ಲಿ ಉಡಾವಣೆ ಮಾಡಲಾಯಿತು ಅದರೆ 12 ಏಪ್ರಿಲ್ 2007 ರಲ್ಲಿ ವೀಲರ್ ದ್ವಿಪದಲ್ಲಿ ಪುನಃ ಟೆಸ್ಟ್ ಮಾಡಿದಾಗ ಯಶಸ್ವಿಯಯಿತು

●ಅಗ್ನಿ-3 ರ ವೃತ್ತಾಕಾರದ ದೋಷ ಸಂಭಾವ್ಯ ಬರಿ 40 ಮೀಟರ್ ಈ ಕಾರಣದಿಂದಾಗಿ ಅಗ್ನಿ-3ರನ್ನು ಅತ್ಯಂತ ನಿಖರವಾದ ಕ್ಷಿಪಣಿ ಎನ್ನಬಹುದು

☀ಅಗ್ನಿ-3 ವಿಶೇಷತೆಗಳು:

●ಉದ್ದ : 17 ಮೀಟರ್,

●ವ್ಯಾಸ : 2 ಮೀಟರ್

●ಒಟ್ಟು ತೂಕ : 50 ಟನ್

●ದೂರಗಾಮಿ ಖಂಡಾಂತರ ಕ್ಷಿಪಣಿ

●ಅಗ್ನಿ-3 ಎರಡು ಹಂತದ ಘನ ಇಂಧನ ಆಧಾರಿತ ವ್ಯವಸ್ಥೆಹೊಂದಿದೆ.

●ಭಾರತ ಸ್ವದೇಶಿ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುವ ಈ ಕ್ಷಿಪಣಿಯು 1.5 ಟನ್ ತೂಕದವರೆಗೂ ಯುದ್ಧ ಅಣು ಅಸ್ತ್ರಗಳನ್ನು ಒಯ್ಯುವ ಸಾಮರ್ಥ್ಯ ಪಡೆದಿದ್ದು, ಭಾರತದಲ್ಲಿ ಯಾವುದೇ ಪ್ರದೇಶದಿಂದ ಉಡಾಯಿಸಲಬಲ್ಲ ಮೊಬೈಲ್ ತಂತ್ರಜ್ನಾನವನ್ನು ಹೊಂದಿರುವುದು ಈಕ್ಷಿಪಣಿಯ ಮತ್ತೊಂದು ವೈಶಿಷ್ಟ್ಯವಾಗಿದೆ."

ಅಗ್ನಿ-4


●ಅಗ್ನಿ-4 ಕ್ಷಿಪಣಿ ಹೆಚ್ಚಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅಣುಶಕ್ತಿ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ಇದು ಹೊಸ ತಲೆಮಾರಿನ ಕ್ಷಿಪಣಿಯಾಗಿದೆ

●ಇದು ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ನಾಲ್ಕನೇಯದು

●ಅಗ್ನಿ-4 ಕ್ಷಿಪಣಿ, ಮಿಲಿಟರಿ ಪ್ರದೇಶದಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ

●4000 ಕಿಮೀ ವ್ಯಾಪ್ತಿಯ ಶತೃ ನೆಲೆಗಳ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿ ಇದಾಗಿದೆ

●ಉಡಾವಣೆಯ ನಂತರ ಡಿಜಿಟಲ್ ನಿಯಂತ್ರಣ ವ್ಯವಸ್ಥೆ ಮೂಲಕ ಅಗ್ನಿ-4ಕ್ಷಿಪಣಿಯನ್ನು ನಿಯಂತ್ರಣಗೊಳಿಸಲಾಗುತ್ತದೆ

●ಅಗ್ನಿ-4, ಡಿಆರ್ಡಿಒ ದಿಂದ ನಿರ್ಮಿತವಾಗಿದೆ

●ಇದಕ್ಕೆ 'ಅಗ್ನಿ-2 ಪ್ರೈಂ' ಯೆಂದು ಕರೆಯಲಾಗಿತ್ತು

●ಇದನ್ನು 19 ಸೆಪ್ಟೆಂಬರ್ 2012 ರಂದು ವೀಲರ್ ದ್ವೀಪದಲ್ಲಿ ಟೆಸ್ಟ್ ಮಾಡಲಾಯಿತು

☀ ಅಗ್ನಿ-4 ಕ್ಷಿಪಣಿಯ ವೈಶಿಷ್ಟ್ಯಗಳು:
●ಉದ್ದ :20 ಮೀಟರ್

●ಭಾರ : 17 ಟನ್

●ಇದರ ಒಟ್ಟು ವ್ಯಾಪ್ತಿ : 4,000 ಕಿಮೀ

●ಘನ ಇಂಧನ ಬಳಕೆ

●1500 ಕೆಜಿ ತೂಕದ ಅಣ್ವಸ್ತ್ರ ಕೊಂಡೊಯ್ಯಬಲ್ಲ ಸಾಮರ್ಥ್ಯ

●ಅತ್ಯಾಧುನಿಕ ಸಮರ ತಂತ್ರಜ್ಞಾನ ಹಾಗೂ ಐದನೇ ತಲೆಮಾರಿನ ಕಂಪ್ಯೂಟರನ್ನು ಈ ಕ್ಷಿಪಣಿಗೆ ಅಳವಡಿಸಲಾಗಿದೆ

●ಇದು ಪಾಕಿಸ್ತಾನದ ಯಾವುದೇ ಭಾಗವನ್ನಾದರೂ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ

●ಅಗ್ನಿ-4 ಗೆ 3000° ಸೆಲ್ಸಿಯಸ್ ರಷ್ಟು ತಾಪಮಾನ ತಡೆದುಕೊಳ್ಳುವ ಸಾಮರ್ಥ್ಯವಿದೆ

●ಇದಕ್ಕೆ ಭಾರತದಲ್ಲಿ ತಯಾರಿಸಿದ ಲೆಸರ್ ಗೈರೊ ಮತ್ತು ಕ್ಷಿಪಣಿ ಮೊಟಾರ್ ಇದೆ

ಅಗ್ನಿ-5


●ಇದು ಖಂಡಾಂತರ ಕ್ಷಿಪಣಿ ಯಾಗಿದ್ದು, ಡಿ ಆರ್ ಡಿ ಓ ಇದನ್ನು ಅಭಿವೃದ್ಧಿಗೊಳಿಸಿದೆ.

●ಅಗ್ನಿ-5 ಕ್ಷಿಪಣಿ ಅಗ್ನಿ ಕ್ಷಿಪಣಿಗಳ ಸರಣಿಯಲ್ಲಿ ಐದನೆಯದು.

●2012ರಲ್ಲಿ ಮೊದಲ ಬಾರಿಗೆ ಅಗ್ನಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು ಬಳಿಕ 2013ರಲ್ಲಿ ಎರಡನೇ ಬಾರಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿತ್ತು ಎರಡೂ ಬಾರಿಯ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿತ್ತು ಇನ್ನೂ ಎರಡು ಬಾರಿ ಅಗ್ನಿ-5ರ ಪ್ರಯೋಗಾರ್ಥ ಪರೀಕ್ಷೆ ನಡೆಯಲಿದ್ದು, ಬಳಿಕ ಸೇನೆಗೆ ಸೇರ್ಪಡೆಯಾಗಲಿದೆ

●ಅನಿಲ ಒತ್ತಡದಿಂದ ಕ್ಷಿಪಣಿಯನ್ನು ಆಕಾಶಕ್ಕೆ ಚುಮ್ಮುವ ನಳಿಕೆಯಾಧರಿತ ಸಂಚಾರಿ ಉಡಾವಣೆ ವ್ಯವಸ್ಥೆ ಈ ಕ್ಷಿಪಣಿಯ ಇನ್ನೊಂದು ವಿಶೇಷ.

●ಕ್ಷಿಪಣಿಯನ್ನು ಒಂದೆಡೆಯಿಂದ ಇನ್ನೊಂದೆಡೆಗೆ ರಹಸ್ಯವಾಗಿ ಸಾಗಿಸಲು ಮತ್ತು ವೈರಿ ದೇಶಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಳಿಕೆಯಾದರಿತ ಉಡ್ಡಯನ ವೇದಿಕೆ ಸಹಾಯಕವಾಗಿದೆ.

●ಸಂಚಾರಿ ಉಡ್ಡಯನ ವೇದಿಕೆಯಿಂದ ಕ್ಷಿಪಣಿಯ ದಾಳಿ ವ್ಯಾಪ್ತಿಯನ್ನು ವಿಸ್ತರಿಸಲು ಸಾಧ್ಯವಿದೆ.

●ರಸ್ತೆ ಅಥವಾ ರೈಲು ಮಾರ್ಗಗಳಲ್ಲಿ ಕ್ಷಿಪಣಿಯನ್ನು ಗಡಿಗೆ ಸಾಗಿಸಿ ಅಲ್ಲಿಂದ ಉಡಾವಣೆ ಮಾಡುವ ಮೂಲಕ ದಾಳಿ ವ್ಯಾಪ್ತಿಯನ್ನು ಹಿಗ್ಗಿಸಬಹುದು.

●ಇದರ ಸರಿಯಾದ ವ್ಯಾಪ್ತಿ ವರ್ಗೀಕರಿಸಲಾಗಿದೆಅದರೆ ಭಾರತ ಸರ್ಕಾರ ಇದರ ವ್ಯಾಪ್ತಿ 5000-5800 ಕಿಮೀ ಯೆಂದು ಘೋಷಿಸಲಾಗಿದೆ.

●ಈ ಕ್ಷಿಪಣಿ 10 ಅಣ್ವಸ್ತ್ರ ಸಿಡಿತೆಲೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಸುಮಾರು ಐದೂವರೆ ಸಾವಿರ ಕಿಲೋ ಮೀಟರ್ ವ್ಯಾಪ್ತಿಯ ಗುರಿಯನ್ನು ತಲುಪುವ ಸಾಮರ್ಥ್ಯ ಈ ಕ್ಷಿಪಣಿಗಿದೆ.

●ಅಗ್ನಿ-5 ಅಗ್ನಿ-3ರ ಮತ್ತೊಂದು ಮಾದರಿಯಾಗಿದೆ.

☀ಅಗ್ನಿ–5 ವಿಶೇಷತೆಗಳು :

●ದೂರಗಾಮಿ ಖಂಡಾಂತರ ಕ್ಷಿಪಣಿ.

●ದೇಶಿಯವಾಗಿ ನಿರ್ಮಿಸಿದ 50 ಟನ್ ಭಾರದ ಅಗ್ನಿ-5 ಕ್ಷಿಪಣಿ.

●8000 ಕಿಮೀ ಸಾಮಥ್ರ್ಯ ಹೊಂದಿರುವ ಕ್ಷಿಪಣಿ.

●56 ಅಡಿ 17 ಮೀಟರ್ ಎತ್ತರ.

●2 ಮೀಟರ್ ಅಗಲವಿರುವ ಕ್ಷಿಪಣಿ.

●5000 ಕಿಮೀ ಗಿಂತಲೂ ಅಧಿಕ ದೂರ ಕ್ರಮಿಸಬಲ್ಲದು.

●ಪರಮಾಣು ಸಿಡಿತಲೆಗಳನ್ನ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ.

●1,000 ಕೆಜಿಗೂ ಅಧಿಕ ತೂಕದ ಅಣು ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ಯುವ ಸಾಮರ್ಥ್ಯ.

●ರಕ್ಷಣಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿ ಹಲವು ಅವಕಾಶಗಳ ಸೃಷ್ಟಿ ಮಾಡಿದ ಕ್ಷಿಪಣಿ.

●ಶತ್ರು ರಾಷ್ಟ್ರ ಭಾರತಕ್ಕೆ ಉಪಗ್ರಹ ಸಂಕೇತ ನೀಡಲು ನಿರಾಕರಿಸಿದರೆ ತುರ್ತು ಸನ್ನಿವೇಶದಲ್ಲಿ ಇದನ್ನು ಕೆಳಸ್ತರದ ಕಕ್ಷೆಗೆ ಉಡಾಯಿಸಬಹುದು.

●ಬಲಿಷ್ಠ ಸಿಡಿತಲೆ ಹೊಂದಿದ ಕ್ಷಿಪಣಿಗಳನ್ನ ಹೊಂದಿರುವ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಭಾರತ ಸೇರ್ಪಡೆ.

●ಈ ಕ್ಷಿಪಣಿ ಚೀನಾ ಹಾಗೂ ಐರೋಪ್ಯ ರಾಷ್ಟ್ರಗಳ ಮೂಲೆಮೂಲೆಯನ್ನು ತಲುಪಬಲ್ಲದು.

●ಈಕ್ಷಿಪಣಿಯ ವಿಶೇಷವೆಂದರೆ ಎಲ್ಲಾ ಸುಧಾರಿತ ಕ್ಷಿಪಣಿ ತಂತ್ರಜ್ಞಾನವನ್ನೂ ಇದರಲ್ಲಿ ಅಡಕಗೊಳಿಸಲಾಗಿದೆ.

●ಅಗ್ನಿ ಸರಣಿಯ ನಾಲ್ಕು ಮಾದರಿ ಕ್ಷಿಪಣಿಗಳನ್ನು ಭಾರತೀಯ ಸಶಸ್ತ್ರಪಡೆಗಳು ಈಗಾಗಲೇ ಹೊಂದಿವೆ ಖಂಡಾಂತರ ಮಾದರಿಯ ಈ ಕ್ಷಿಪಣಿಯನ್ನು ಇನ್ನಷ್ಟು ಪರೀಕ್ಷೆಗಳ ಬಳಿಕ ಸೇನೆಗೆ ನಿಯೋಜಿಸಲಾಗುವುದು.

Contributed by: Spardhaloka