Loading [MathJax]/extensions/MathML/content-mathml.js

“ಮಾತೃ ಪೂರ್ಣ” :

 

ಗರ್ಭಿಣಿ ಮತ್ತು ಬಾಣಂತಿಯರಿಗೆ ಸಿದ್ಧಪಡಿಸಿದ ಬಿಸಿಯೂಟ ಪೂರೈಕೆ ಮಾಡುವ ರಾಜ್ಯ ಸರ್ಕಾರದ ಮಾತೃಪೂರ್ಣ ಯೋಜನೆಯನ್ನು ಜುಲೈ ತಿಂಗಳಿನಿಂದ ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೂ ವಿಸ್ತರಿಸಲು ಪ್ರಸ್ತುತ ಬಡ್ಜೆಟ್‍ನಲ್ಲಿ 302 ಕೋಟಿ ನಿಗಧಿ ಮಾಡಲಾಗಿದೆ. ಗರ್ಭಿಣಿ ಮತ್ತು ಬಾಣಂತಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು, ಸಿದ್ಧಪಡಿಸಿದ ಪೌಷ್ಠಿಕಾಂಶ ಭರಿತ ಬಿಸಿಯೂಟ ಪೂರೈಕೆ ಮಾಡುವ ಯೊಜನೆಯನ್ನು ರಾಜ್ಯ ಸರ್ಕಾರ ಮೊದಲು ಪ್ರಾಯೋಗಿಕವಾಗಿ ಮಧುಗಿರಿ, ಜಮಖಂಡಿ, ಮಾನ್ವಿ ಹಾಗೂ ಹೆಚ್.ಡಿ.ಕೋಟೆ ತಾಲ್ಲೋಕುಗಳಲ್ಲಿ ಆರಂಭಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಒಂದು ಮಹಿಳೆಗೆ ದಿನಕ್ಕೆ ಒಂದು ಊಟದಂತೆ ಸುಮಾರು 15 ತಿಂಗಳು ಊಟ ನೀಡಲಾಗುತ್ತದೆ.